ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು
ಎತ್ತಿಕೊಳಲು
ಹೋದರದಕೆ ಕೋಪ ಬರುವುದು
ಕೋಪ ಬರಲು ಗಟ್ಟಿಯಾಗಿ ಕಿರಿಚಿಕೊಳುವುದು
ಕಿರಿಚಿಕೊಂಡು
ತನ್ನ ಮೈಯ ಪರಚಿಕೊಳುವುದು
ಮೈಯ ಪರಚಿಕೊಂಡು ಪಾಪ ಅತ್ತು ಕರೆವುದು
ಅಳಲು ಕಣ್ಣಿನಿಂದ ಸಣ್ಣ ಮುತ್ತು ಸುರಿವುದು
ಪಾಪ ಅತ್ತರಮ್ಮ ತಾನೂ ಅತ್ತುಬಿಡುವಳು
“ಅಯ್ಯೋ
ಪಾಪ” ಎಂದುಕೊಂಡು ಮುತ್ತು ಕೊಡುವಳು
ಪಾಪ ಪಟ್ಟು ಹಿಡಿದ ಹಟವು
ಸಾರ್ಥಕವಾಯಿತು
ಕಿರಿಚಿ
ಪರಚಿ ಅಳುವುದೆಲ್ಲ ಅರ್ಥವಾಯಿತು
No comments:
Post a Comment