ಇವನೇ ನೋಡು ಅನ್ನದಾತ
ಹೊಲದಿ ದುಡಿದೇ ದುಡಿವನು
ನಾಡ ಜನರು ಬದುಕಲೆಂದು
ದವಸ ಧಾನ್ಯ ಬೆಳೆವನು
ಮಳೆಯ ಗುಡುಗು ಚಳಿಯ
ನಡುಗು
ಬಿಸಿಲ ಬೇಗೆಯ ಸಹಿಸುತಾ
ಬೆವರು ಸುರಿಸಿ ಕಷ್ಟ
ಸಹಿಸಿ
ಒಂದೇ ಸಮನೆ ದುಡಿಯುತಾ
ಗಟ್ಟಿ ದೇಹ ದೊಡ್ಡ
ಮನಸು
ದೇವನಿಂದ ಪಡೆವನು
ಯೋಗಿಯಾಗಿ ತ್ಯಾಗಿಯಾಗಿ
ಅನ್ನ ನೀಡುತಿರುವನು
ಎತ್ತು ಎರಡು ಅವನ
ಜೋಡು
ಕೂಡಿ ದುಡಿವ ಗೆಳೆಯರು
ಹಿಗ್ಗು ಕುಗ್ಗು ಏನೇ
ಬರಲಿ
ಹೊಂದಿಕೊಂಡು ನಡೆವರು
No comments:
Post a Comment