ನಾಗರ ಪಂಚಮಿಯು
ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬವಾಗಿದೆ . ಇದನ್ನು ಅಣ್ಣ ತಂಗಿಯರ ಹಬ್ಬ ಎಂದೂ , ಹೆಣ್ಣು ಮಕ್ಕಳ ಹಬ್ಬ ಎಂದೂ ಕರೆಯಲಾಗುತ್ತದೆ. ಇದನ್ನು
ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ಮಜನರು ತಮ್ಮ ಮನೆಗಳಲ್ಲಿ ಅಥವಾ ದೇವಸ್ಥಾನಗಳಲ್ಲಿ ನಾಗ ಪೂಜೆಯನ್ನು ಮಾಡಿ, ಹಾಲೆರೆಯುತ್ತಾರೆ. ಹುತ್ತಗಳಿಗೂ ಸಹ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಅರ್ಪಿಸುವ ಪದ್ಧತಿಯೂ ಇದೆ.
ಕೆಲವು ಭಾಗಗಳಲ್ಲಿ
ನಾಗರ ಚೌತಿ
ಹಾಗೂ ನಾಗರ
ಪಂಚಮಿ ಎಂದು
ಎರಡು ದಿನ
ಹಬ್ಬ ಮಾಡುತ್ತಾರೆ.
ಬಗೆಬಗೆಯ ಉಂಡೆಗಳು
ಈ ಹಬ್ಬದ
ವಿಶೇಷವಾಗಿದೆ. ಪಂಚಮಿ
ಹಬ್ಬಕ್ಕೆ ಹೆಣ್ಣು
ಮಕ್ಕಳನ್ನು ತವರು
ಮನೆಗೆ ಕರೆಸಲಾಗುತ್ತದೆ
ಹಾಗೂ ಅವರಿಗೆ
ಉಡುಗೊರೆ ಕೊಡಲಾಗುತ್ತದೆ.
ಮಹಿಳೆಯರು ನಾಗರ
ಪಂಚಮಿಯಂದು ಮದರಂಗಿ ಹಚ್ಚಿಕೊಳ್ಳುತ್ತಾರೆ. ಗೆಳತಿಯರೆಲ್ಲ
ಸೇರಿ ಉಯ್ಯಾಲೆ
ಆಡುತ್ತಾರೆ. ಕೆಲವು
ಭಾಗಗಳಲ್ಲಿ ಉಯ್ಯಾಲೆಯ
ಸ್ಪರ್ಧೆಗಳು ನಡೆಯುತ್ತವೆ. ನಗರ ಪ್ರದೇಶದಲ್ಲಿ
ನಾಗರ ಪಂಚಮಿಯ ಸಡಗರ
ಕಡಿಮೆಯಾಗಿದೆಯಾಗಲಿ, ಜನರು
ತಮ್ಮ ತಮ್ಮ
ಮನೆಗಳಲ್ಲಿ ಆಚರಿಸಿಕೊಳ್ಳುತ್ತಾರೆ
ಈ ಹಬ್ಬಕ್ಕೆ
ಸಂಬಂಧಿಸಿದಂತೆ ಪುರಾಣಗಳಲ್ಲಿ
ಕಥೆ ಇದೆ. ಜನಮೇಜಯ ರಾಜ ತನ್ನ
ತಂದೆ ಪರೀಕ್ಷಿತ
ರಾಜನ ಸಾವಿಗೆ
ಸರ್ಪವೊಂದು ಕಾರಣವೆಂದು
ತಿಳಿದು, ಭೂಲೋಕದಲ್ಲಿ
ಸರ್ಪಸಂಕುಲವನ್ನು ನಿರ್ನಾಮ
ಮಾಡಲು 'ಸರ್ಪಯಜ್ಞ'ವನ್ನು ಆರಂಭಿಸುತ್ತಾನೆ. ಆ
ಸಂದರ್ಭದಲ್ಲಿ ಸರ್ಪಗಳ
ದೂರದ ಬಂಧುವಾದ
ಆಸ್ತಿಕ ಋಷಿಯು
ಸರ್ಪಯಜ್ಞ ಮಾಡುವ
ಜನಮೇಜಯ ರಾಜನನ್ನು
ಪ್ರಸನ್ನಗೊಳಿಸಿಕೊಂಡನು. ಜನಮೇಜಯ
ರಾಜನು ‘ವರವನ್ನು
ಕೇಳು’ ಎಂದು
ಹೇಳಿದಾಗ, ಆಸ್ತಿಕನು
ಪ್ರಾಣಿಹಿಂಸೆ ಮಹಾಪಾಪ,
ನೀನು ಈಗಾಗಲೇ
ಮಾಡುತ್ತಿರುವ ಸರ್ಪಯಜ್ಞವನ್ನು
ನಿಲ್ಲಿಸಬೇಕು ಎಂಬ
ವರವನ್ನು ಕೇಳಿಕೊಂಡನು.
ಜನಮೇಜಯನು ಆಸ್ತಿಕನ
ಮಾತಿಗೆ ಬೆಲೆಕೊಟ್ಟು
ಸರ್ಪಯಜ್ಞವನ್ನು ನಿಲ್ಲಿಸಿದ
ದಿನ ಪಂಚಮಿಯಾಗಿತ್ತು
ಎಂಬ ಪ್ರತಿತಿ
ಇದೆ.
ನಾಗರ ಪಂಚಮಿ ಹಬ್ಬ
ನಾಡಿಗೆಲ್ಲ ದೊಡ್ಡದು
ಎಂಬಂತೆ ಶ್ರಾವಣ ಮಾಸದ
ಈ ಮೊದಲ
ಹಬ್ಬದ ಸಂಭ್ರಮಕ್ಕೆ
ಭಾವನಾತ್ಮಕ ಬೆಸುಗೆಯೂ
ಇದೆ.
No comments:
Post a Comment