ಸಂಸ್ಕೃತ ವ್ಯಂಜನ ಸಂಧಿಗಳು

ಸಂಸ್ಕೃತ ವ್ಯಂಜನ ಸಂಧಿಗಳು

1. ಜಶ್ತ್ವ ಸಂಧಿ :-
ಸಂಧಿ ಕಾರ್ಯ ನಡೆಯುವಾಗ ಪೂರ್ವ ಪದದ ಕೊನೆಯ ಕ, ಚ, ಟ, ತ, ಪ -ಅಕ್ಷರಗಳಿಗೆ ಬದಲಾಗಿ ಗ, ಜ, ಡ, ದ, ಬ ಅಕ್ಷರಗಳು ಅದೇಶವಾಗಿ ಬರುವುದನ್ನು  ಜಶ್ತ್ವ ಸಂಧಿ ಎನ್ನುವರು.
ಉದಾ:-
1) ವಾಕ್ + ಈಶ = ವಾಗೀಶ (ಕ ಬದಲಿಗೆ ಗ ಅಕ್ಷರ ಆದೇಶವಾಗಿದೆ)
2) ಬೃಹತ್ + ಆಕಾಶ = ಬೃಹದಾಕಾಶ (ತ ಬದಲಿಗೆ ದ ಆದೇಶವಾಗಿದೆ)
3) ದಿಕ್ + ಅಂತ = ದಿಗಂತ (ಕ ಬದಲಿಗೆ ಗ ಆದೇಶವಾಗಿದೆ)
4) ಷಟ್ + ಆನನ = ಷಡಾನನ (ಟ ಬದಲಿಗೆ ಡ ಆದೇಶವಾಗಿದೆ)
5) ವಾಕ್ + ದಾನ = ವಾಗ್ದಾನ (ಕ ಬದಲಿಗೆ ಗ ಆದೇಶವಾಗಿದೆ)

2. ಶ್ಚುತ್ವ ಸಂಧಿ :- 
 'ಶ್ಚು' ಎಂದರೆ 'ಶ' -ಕಾರ ಮತ್ತು 'ಚ' ವರ್ಗಾಕ್ಷರಗಳು. ಸಂಧಿ ಕಾರ್ಯ ನಡೆಯುವಾಗ ಪೂರ್ವ ಪದದ ಕೊನೆಯಲ್ಲಿ 'ಸ' ಅಥವಾ 'ತ' ಅಕ್ಷರಗಳಿರುವಾಗ ಉತ್ತರ ಪದದ ಮೊದಲಿಗೆ 'ಶ' -ಕಾರ ಅಥವಾ 'ಚ' -ವರ್ಗದ ಅಕ್ಷರಗಳು ಬರುತ್ತವೆ. 'ಸ' -ಕಾರವಿದ್ದ ಕಡೆ 'ಶ' -ಕಾರವೂ ಮತ್ತು 'ತ' -ವರ್ಗದ ಅಕ್ಷರಗಳಿದ್ದ ಕಡೆ 'ಚ' -ವರ್ಗದ ಅಕ್ಷರಗಳೂ ಆದೇಶವಾಗಿ ಬರುವುದನ್ನು ಶ್ಚುತ್ವ ಸಂಧಿ ಎನ್ನುತ್ತೇವೆ.

1) ಮನಸ್ + ಶುದ್ಧಿ = ಮನಶ್ಶುದ್ಧಿ
2) ಯಶಸ್ + ಚಾರು = ಯಶಶ್ಚಾರು
3) ಸತ್ + ಚಿತ್ರ = ಸಚ್ಚಿತ್ರ
4) ಸತ್ + ಚಿದಾನಂದ = ಸಚ್ಚಿದಾನಂದ
5) ಯಶಸ್ + ಚಂದ್ರಿಕೆ = ಯಶಶ್ಚಂದ್ರಿಕೆ

3. ಅನುನಾಸಿಕ ಸಂಧಿ :- 
 ಸಂಧಿ ಕಾರ್ಯ ನಡೆಯುವಾಗ ಪೂರ್ವ ಪದದ ಕೊನೆಯಲ್ಲಿ ಕ್, ಚ್, ಟ್, ತ್, ಪ್ ಅಕ್ಷರಗಳಿರುತ್ತವೆ ಉತ್ತರ ಪದದ ಮೊದಲಿಗೆ ಅನುನಾಸಿಕ ಅಕ್ಷರಗಳಿರುತ್ತವೆ. ವರ್ಗದ ಕ, ಚ, ಟ, ತ, ಪ ವ್ಯಂಜನಗಳಿಗೆ ಅದೇ ವರ್ಗದ ಅನುನಾಸಿಕ ಅಕ್ಷರಗಳು (ಙ, ಞ, ಣ, ನ, ಮ) ಆದೇಶವಾಗಿ ಬರುವುದನ್ನು ಅನುನಾಸಿಕ ಸಂಧಿ ಎನ್ನುವರು.

1) ವಾಕ್ + ಮಯ = ವಾಙ್ಮಯ( ಕ  ಅಕ್ಷರದ ಬದಲಿಗೆ ಙ ಆದೇಶವಾಗಿದೆ)
2) ಷಟ್ + ಮುಖ = ಷಣ್ಮುಖ (ಟ ಅಕ್ಷರದ ಬದಲಿಗೆ ಣ ಆದೇಶವಾಗಿದೆ)
3) ಸತ್ + ಮಾನ = ಸನ್ಮಾನ (ತ ಅಕ್ಷರದ ಬದಲಿಗೆ ನ ಆದೇಶವಾಗಿದೆ)
4) ಚಿತ್ + ಮಯಿ = ಚಿನ್ಮಯಿ (ತ ಅಕ್ಷರದ ಬದಲಿಗೆ ನ ಆದೇಶವಾಗಿದೆ)

ಸಂಸ್ಕೃತ ಸ್ವರ ಸಂಧಿಗಳು


ಪೂರ್ವ ಹಾಗೂ ಉತ್ತರ ಪದಗಳಲ್ಲಿ ಎರಡೂ ಸಂಸ್ಕೃತ ಪದಗಳು ಪರಸ್ಪರ ಪರವಾದಾಗ ಆಗುವ ಸಂಧಿಗಳಿಗೆ ಸಂಸ್ಕೃತ ಸಂಧಿಗಳು ಎನ್ನುವರು.  
ಸಂಸ್ಕೃತ ಸಂಧಿಯಲ್ಲಿ  ಎರಡು ಪ್ರಕಾರಗಳು 
ಸಂಸ್ಕೃತ ಸ್ವರ ಸಂಧಿಗಳು
ಸಂಸ್ಕೃತ ವ್ಯಂಜನ ಸಂಧಿಗಳು.

1.   ಸವರ್ಣ ದೀರ್ಘ ಸಂಧಿ :- 

ಪೂರ್ವ ಪದದ ಕೊನೆಯ ಅಕ್ಷರ ಹಾಗೂ ಉತ್ತರ ಪದದ ಮೊದಲನೆಯ ಅಕ್ಷರಗಳು ಒಂದೇ ಜಾತಿಯ ಸ್ವರಾಕ್ಷರಗಳಾಗಿದ್ದು ಪರಸ್ಪರ ಸೇರಿ ದೀರ್ಘರೂಪ ಪಡೆಯುವುದಕ್ಕೆ ಸವರ್ಣ ದೀರ್ಘ ಸಂಧಿ ಎನ್ನುವರು.
ಪೂರ್ವ ಪದದ ಕೊನೆಯ ಅಕ್ಷರ ಅಥವಾ ಉತ್ತರ ಪದದ ಮೊದಲ ಅಕ್ಷರ ದೀರ್ಘವಾಗಿದ್ದರೂ ಸಂಧಿ ಕಾರ್ಯ ನಡೆಯಬಹುದು. ಆದರೆ ಎರಡೂ ಪದಗಳು ಸಂಸ್ಕೃತ ಪದಗಳಾಗಿರಬೇಕು. 
ಉದಾ:- 
1) ಮಹಾ + ಆತ್ಮ = ಮಹಾತ್ಮ (ಆ+ಆ=ಆ)
2) ದೇವ + ಆಲಯ = ದೇವಾಲಯ (ಅ+ಆ=ಆ)
3) ಗಿರಿ + ಈಶ = ಗಿರೀಶ (ಇ+ಈ= ಈ)
4) ಗುರು + ಉಪದೇಶ = ಗುರೂಪದೇಶ (ಉ+ಉ=ಊ)
5) ರವಿ + ಇಂದ್ರ = ರವೀಂದ್ರ (ಇ+ಇ=ಈ)

2. ಗುಣ ಸಂಧಿ :- 

ಪೂರ್ವ ಪದದ ಕೊನೆಯಲ್ಲಿ 'ಅ' ಅಥವಾ 'ಆ' -ಕಾರಗಳ ಮುಂದೆ ಉತ್ತರ ಪದದ ಮೊದಲಿಗೆ 'ಇ' ಕಾರವು ಬಂದಾಗ 'ಏ' -ಕಾರವು, 
ಹಾಗೆಯೇ 'ಉ' ಅಥವಾ 'ಊ' -ಕಾರವು ಬಂದಾಗ 'ಓ' -ಕಾರವು ಮತ್ತು 'ಋ' -ಕಾರವು ಬಂದಾಗ 'ಅರ್' -ಕಾರವು ಸೇರಿದರೆ ಗುಣಸಂಧಿ ಎನ್ನುವರು.
ಉದಾ:-
1) ಮಹಾ + ಈಶ = ಮಹೇಶ (ಆ+ಈ=ಏ)
2) ಸೂರ್ಯ + ಉದಯ = ಸೂರ್ಯೋದಯ (ಅ+ಉ=ಓ)
3) ಬ್ರಹ್ಮ + ಋಷಿ = ಬ್ರಹ್ಮರ್ಷಿ (ಅ+ಋ=ಅರ್)
4) ಮಹಾ + ಉನ್ನತಿ = ಮಹೋನ್ನತಿ (ಆ+ಉ=ಓ)
5) ಸುರ + ಇಂದ್ರ = ಸುರೇಂದ್ರ (ಅ+ಇ=ಏ)

3. ವೃದ್ಧಿ ಸಂಧಿ :

ಪೂರ್ವ ಪದದ ಕೊನೆಯಲ್ಲಿ 'ಅ' 'ಆ' -ಕಾರದ ಮುಂದೆ ಉತ್ತರ ಪದದ 'ಏ' 'ಐ' -ಕಾರವು ಪರವಾದರೆ ಅವೆರಡರ ಸ್ಥಾನದಲ್ಲಿ 'ಐ' -ಕಾರವೂ
 ಹಾಗೆಯೇ 'ಓ' 'ಔ' -ಕಾರಗಳು ಪರವಾದರೆ 'ಔ' -ಕಾರವೂ ಅದೇಶವಾಗಿ ಬಂದರೆ ಅಂತಹ ಸಂಧಿಯನ್ನು ವೃದ್ಧಿ ಸಂಧಿ ಎನ್ನುವರು.
ಉದಾ:-
1) ಏಕ + ಏಕ = ಏಕೈಕ (ಅ+ಏ=ಐ)
2) ಶಿವ +  ಐಕ್ಯ = ಶಿವೈಕ್ಯ (ಅ+ಐ=ಐ)
3) ಮಹಾ + ಔಚಿತ್ಯ = ಮಹೌಚಿತ್ಯ (ಅ+ಔ=ಔ)
4) ವನ + ಔಷಧ = ವನೌಷಧ (ಅ+ಔ=ಔ)

4. ಯಣ್ ಸಂಧಿ :-

 ಪೂರ್ವ ಪದದ ಕೊನೆಯಲ್ಲಿ  ಇ, ಈ, ಉ, ಊ, ಋ -ಕಾರಗಳಿಗೆ ಉತ್ತರ ಪದದ ಮೊದಲಿಗೆ ಸವರ್ಣವಲ್ಲದ ಸ್ವರ ಪರವಾದರೆ, 'ಇ' 'ಈ' -ಕಾರಗಳಿಗೆ 'ಯ್' -ಕಾರವು 
ಹಾಗೆಯೇ 'ಉ' 'ಊ' -ಕಾರಗಳಿಗೆ 'ವ್' -ಕಾರವು ಮತ್ತು 'ಋ' -ಕಾರಕ್ಕೆ 'ರ್' -ಕಾರವೂ ಆದೇಶಗಳಾಗಿ ಬಂದರೆ ಅಂತಹ ಸಂಧಿಗಳಿಗೆ ಯಣ್ ಸಂಧಿಗಳು ಎನ್ನುತ್ತಾರೆ.
ಉದಾ:-
1) ಪ್ರತಿ + ಉಪಕಾರ = ಪ್ರತ್ಯುಪಕಾರ (ಇ+ಉ=ಯ)
2) ಇತಿ + ಆದಿ = ಇತ್ಯಾದಿ (ಇ+ಆ=ಯ)
3) ಮನು + ಅಂತರ = ಮನ್ವಂತರ (ಉ+ಅ=ವ)
4) ಗುರು + ಆಜ್ಞೆ = ಗುರ್ವಾಜ್ಞೆ (ಉ+ಆ=ವ)
5) ಪಿತೃ + ಆರ್ಜಿತ = ಪಿತ್ರಾರ್ಜಿತ (ಋ+ಆ=ರ)





ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚಣೆಗಳು

ಜನವರಿ
01 – ವಿಶ್ವ ಶಾಂತಿ ದಿನ.
02 – ವಿಶ್ವ ನಗುವಿನ ದಿನ.
10 - ವಿಶ್ವ ಹಿಂದಿ ದಿವಸ
12 – ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ)
15 – ಭೂ ಸೇನಾ ದಿನಾಚರಣೆ.
25 – ಅಂತರರಾಷ್ಟ್ರೀಯ ತೆರಿಗೆ ದಿನ.
26 - ಭಾರತದ ಗಣರಾಜ್ಯೋತ್ಸವ.
28 – ಸರ್ವೋಚ್ಛ ನ್ಯಾಯಾಲಯ ದಿನ.
30 – ಹುತಾತ್ಮರ ದಿನ(ಗಾಂಧಿಜೀ ಪುಣ್ಯತಿಥಿ)
ಜನೆವರಿ ಕೊನೆಯ ರವಿವಾರ - ಕುಷ್ಟರೋಗ ನಿವಾರಣಾ ದಿನ

ಫೆಬ್ರುವರಿ
4 - ವಿಶ್ವ ಕ್ಯಾನ್ಸರ್ ದಿನ.
14 - ವ್ಯಾಲೆಂಟೈನ್ ದಿನ.
20 — ಅಂತರಾಷ್ಟ್ರೀಯ.  ಸಾಮಾಜಿಕ ನ್ಯಾಯ ದಿನ
21- ವಿಶ್ವ ಮಾತೃಭಾಷಾ ದಿನ.
22 – ಸ್ಕೌಟ್ & ಗೈಡ್ಸ್ ದಿನ.
23 – ವಿಶ್ವ ಹವಾಮಾನ ದಿನ.
24 - ಕೇಂದ್ರ ಅಬಕಾರಿ ದಿನ.
28 – ರಾಷ್ಟ್ರೀಯ ವಿಜ್ಞಾನ ದಿನಾಚರಣೆ.

ಮಾರ್ಚ
03 - ವಿಶ್ವ ವನ್ಯಜೀವಿ ದಿನ.
04 - ರಾಷ್ಟ್ರೀಯ ಸುರಕ್ಷಾ ದಿವಸ.
08 – ಅಂತರಾಷ್ಟ್ರೀಯ ಮಹಿಳಾ ದಿನ.
12 – ದಂಡಿ ಸತ್ಯಾಗ್ರಹ ದಿನ.
13 - ವಿಶ್ವ ಧೂಮಪಾನ ರಹಿತ ದಿನ
15 – ವಿಶ್ವ ಬಳಕೆದಾರರ ದಿನ.
20 - ವಿಶ್ವ ಗುಬ್ಬಚ್ಚಿಗಳ ದಿನ
21 – ವಿಶ್ವ ಅರಣ್ಯ ದಿನ.
22 – ವಿಶ್ವ ಜಲ ದಿನ.

ಏಪ್ರಿಲ್
02 – ವಿಶ್ವ ಆಟಿಸಂ ಜಾಗೃತಿ ದಿನ.
07 – ವಿಶ್ವ ಆರೋಗ್ಯ ದಿನ.
10 - ವಿಶ್ವ ಹೋಮಿಯೋಪಥಿ ದಿನ.
14 – ಡಾ. ಅಂಬೇಡ್ಕರ್ ಜಯಂತಿ.
22 – ವಿಶ್ವ ಭೂದಿನ.
23 – ವಿಶ್ವ ಪುಸ್ತಕ ದಿನ.
24 -   ರಾಷ್ಟ್ರೀಯ ಪಂಚಾಯತ್ ರಾಜ್ ದಿನ
30 - ಆಯುಷ್ಮಾಮಾನ್ ಭಾರತ ದಿನ

ಮೇ
01 – ಕಾರ್ಮಿಕರ ದಿನ.
02 – ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ.
05 – ರಾಷ್ಟ್ರೀಯ ಶ್ರಮಿಕರ ದಿನ.
ಮೊದಲನೇ ರವಿವಾರ - ವಿಶ್ವ ನಗುವಿನ ದಿನ
ಮೊದಲನೇ ಮಂಗಳವಾರ - ವಿಶ್ವ ಅಸ್ತಮಾ ದಿನ
08 – ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ
15 – ಅಂತರಾಷ್ಟ್ರೀಯ ಕುಟುಂಬ ದಿನ.
ಎರಡನೇ ರವಿವಾರ - ವಿಶ್ವ ಅಮ್ಮಂದಿರ ದಿನ
21 - ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ದಿನ.
24 - ಕಾಮನ್ವೆಲ್ತ್ ದಿನ.
31 - ವಿಶ್ವ ತಂಬಾಕು ರಹಿತ ದಿನ.

ಜೂನ್ 
02 - ವಿಶ್ವ ಹಾಲು ದಿನ.
03 - ವಿಶ್ವ ಸೈಕಲ್ ದಿನ
05 – ವಿಶ್ವ ಪರಿಸರ ದಿನ.
08 - ವಿಶ್ವ ಸಾಗರ ದಿನ.
12 - ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನ
14 – ವಿಶ್ವ ರಕ್ತ ದಾನಿಗಳ ದಿನ
ಮೂರನೇ ರವಿವಾರ - ವಿಶ್ವ ಅಪ್ಪಂದಿರ ದಿನ
20 - ವಿಶ್ವ ನಿರಾಶ್ರಿತರ ದಿನ
21 - ಅಂತಾರಾಷ್ಟ್ರೀಯ ಯೋಗ ದಿವಸ.
26 – ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ.

ಜುಲೈ
01 – ರಾಷ್ಟ್ರೀಯ ವೈದ್ಯರ ದಿನ.
11 – ವಿಶ್ವ ಜನಸಂಖ್ಯಾ ದಿನ.
19 - ಬ್ಯಾಂಕ್ ರಾಷ್ಟ್ರೀಕರಣ ದಿನ.
28 - ವಿಶ್ವ ಹೆಪಟೈಟಿಸ್ ದಿನ.

ಅಗಷ್ಟ್ 
ಮೊದಲನೇ ರವಿವಾರ — ಸ್ನೇಹಿತರ ದಿನಾಚರಣೆ
06 – ಹಿರೋಶಿಮಾ ದಿನ.
09 – ನಾಗಾಸಾಕಿ ದಿನ/ಕ್ವಿಟ್ ಇಂಡಿಯಾ ದಿನಾಚರಣೆ. 
12 — ಅಂತಾರಾಷ್ಟ್ರೀಯ ಯುವ ದಿನ.
15 – ಭಾರತದ ಸ್ವಾತಂತ್ರ್ಯ ದಿನಾಚರಣೆ.
19 — ವಿಶ್ವ ಛಾಯಾಗ್ರಾಹಣ ದಿನಾಚರಣೆ.
29 – ರಾಷ್ಟ್ರೀಯ ಕ್ರೀಡಾ ದಿನಾಚರಣೆ.

ಸೆಪ್ಟೆಂಬರ್
05 – ಶಿಕ್ಷಕರ ದಿನಾಚರಣೆ(ರಾಧಾಕೃಷ್ಣನ್ ಜನ್ಮ ದಿನ)
08 – ವಿಶ್ವ ಸಾಕ್ಷರತಾ ದಿನ
14 – ಹಿಂದಿ ದಿನ(ಹಿಂದಿ ದಿವಸ್)
15 – ಇಂಜಿನಿಯರ್ ದಿನ, (ಸರ್ ಎಮ್ ವಿಶ್ವೇಶ್ವರಯ್ಯ ಜನ್ಮ ದಿನ).
16 – ವಿಶ್ವ ಓಝೋನ್ ದಿನ.
21— ಅಲ್ಜಮೈರ್ ದಿನ
26 — ವಿಶ್ವ ಕಿವುಡರ ದಿನ
27 — ವಿಶ್ವ ಪ್ರವಾಸೋದ್ಯಮ ದಿನ
28 – ವಿಶ್ವ ಹೃದಯ ದಿನ.

ಅಕ್ಟೋಬರ್
01 — ವಿಶ್ವ ಹಿರಿಯ ನಾಗರಿಕರ ದಿನ
02 – ವಿಶ್ವ ಅಹಿಂಸಾ ದಿನ/ಗಾಂಧೀ ಜಯಂತಿ/ಲಾಲ್ ಬಹದ್ದೂರ್ ಜಯಂತಿ
04 — ವಿಶ್ವ ಪ್ರಾಣಿ ಸಂರಕ್ಷಣಾ ದಿನ
05 – ವಿಶ್ವ ಶಿಕ್ಷಕರ ದಿನ.
08 – ವಾಯು ಸೇನಾ ದಿನ
09 – ವಿಶ್ವ ಅಂಚೆ ದಿನ.
10 – ವಿಶ್ವ ಮಾನಸಿಕ ಆರೋಗ್ಯ ದಿನ.
11 — ವಿಶ್ವ ಹೆಣ್ಣು ಮಗುವಿನ ದಿನ
16 – ವಿಶ್ವ ಆಹಾರ ದಿನ.
24 – ವಿಶ್ವ ಸಂಸ್ಥೆಯ ದಿನ.
31 – ರಾಷ್ಟ್ರೀಯ ಏಕತಾ ದಿನ(ಸರ್ದಾರ್ ವಲ್ಲಭಭಾಯಿ ಪಟೇಲ ಜನ್ಮ ದಿನ)

ನವೆಂಬರ್
01 – ಕನ್ನಡ ರಾಜ್ಯೋತ್ಸವ ದಿನ
07 — ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ
14 – ಮಕ್ಕಳ ದಿನಾಚರಣೆ/ಜವಾಹರ್ ಲಾಲ್ ನೆಹರೂ ಜನ್ಮ ದಿನ/ ವಿಶ್ವ ಮಧುಮೇಹ ದಿನಾಚರಣೆ.
21 — ವಿಶ್ವ ದೂರದರ್ಶನ ದಿನ
29 – ಅಂತರರಾಷ್ಟ್ರೀಯ ಸಾಮರಸ್ಯ ದಿನ.

ಡಿಸೆಂಬರ್
01 – ವಿಶ್ವ ಏಡ್ಸ್ ದಿನ.
02- ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ.
03 – ವಿಶ್ವ ಅಂಗವಿಕಲರ ದಿನ.
04 – ನೌಕಾ ಸೇನಾ ದಿನ.
07 – ಧ್ವಜ ದಿನಾಚರಣೆ.
10 – ವಿಶ್ವ  ಮಾನವ ಹಕ್ಕುಗಳ ದಿನ
11 — ಅಂತಾರಾಷ್ಟ್ರೀಯ ಪರ್ವತಗಳ ದಿನ
16 — ವಿಜಯ ದಿವಸ
22 — ರಾಷ್ಟ್ರೀಯ ಗಣಿತ ದಿನ ( ಶ್ರೀನಿವಾಸ್ ರಾಮಾನುಜನ್ ಜನ್ಮದಿನ)
23 – ರೈತರ ದಿನ (ಚರಣಸಿಂಗ್ ಜನ್ಮ ದಿನ)
25 — ಕ್ರಿಸ್ಮಸ್

ಬೇಸಿಗೆ ರಜೆಯ ಸದ್ವಿನಿಯೋಗ

     

        ಬೇಸಿಗೆ ರಜೆ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಅವರಿಗೆ ಪರೀಕ್ಷೆ ಮುಗಿದು ರಜೆ ಬಂತೆಂದರೆ ಸಾಕು ಬಿಸಿಲಿನ ಬೇಗೆ ಸೆಕೆ ಇದ್ಯಾವುದೂ ಲೆಕ್ಕಕ್ಕಿಲ್ಲ. ಓದಬೇಕು ಹೋಂವರ್ಕ್ ಮಾಡಬೇಕು, ಅಥವಾ ಶಾಲೆಗೆ ಹೋಗಬೇಕು ಅನ್ನುವ ಒತ್ತಡ ಇರುದಿಲ್ಲ ಅಲ್ಲವೇ? ಅವರು ಬೇಸಿಗೆ ರಜೆಗೆ ಅಂತಲೇ ತಮ್ಮ ಕಾರ್ಯಕ್ರಮ ಗಳ ಪಟ್ಟಿ ಮಾಡಿ ಇಟ್ಟುಕೊಂಡಿರುತ್ತಾರೆ. ವರ್ಷ ಪೂರ್ತಿ ಕಷ್ಟಪಟ್ಟು ಓದಿದ ಎಳೆಯ ಮಕ್ಕಳ   ಮಾನಸಿಕ ಹಾಗೂ ದೈಹಿಕ ವಿಕಸನಕ್ಕೆ ಬೇಸಿಗೆಯ ಈ ವಿರಾಮ ಅಗತ್ಯವೂ ಹೌದು.

ಮಕ್ಕಳ ಕಲಿಕೆಗೆ ಪೂರಕ. ಐತಿಹಾಸಿಕ ಸ್ಥಳಗಳ ಭೇಟಿ
   ಈ ರಜೆಯಲ್ಲಿ ಸಾಮಾನ್ಯವಾಗಿ ದೊಡ್ಡ ನಗರಗಳಲ್ಲಿ ವಾಸಿಸುವ  ಕುಟುಂಬಗಳು ತಮ್ಮ ಪಟ್ಟಣ ಹಳ್ಳಿಗಳಿಗೆ ಹೋಗುವುದು ಇದೆ. ಅಲ್ಲಿ ಮಕ್ಕಳು ತಮ್ಮ ತಂದೆ ಅಥವಾ ತಾಯಿಯ ಮನೆ ಅವರು ಕಲಿತ ಶಾಲೆ ಇದನ್ನೆಲ್ಲ ನೋಡಿ ನಲಿವುವುದು ಉಂಟು. ಬಂಧು ಬಳಗ ಅಜ್ಜಿ ಅಜ್ಜನ ಸಾನಿಧ್ಯದಲ್ಲಿ ಮಕ್ಕಳು ಶಾಲೆಯಲ್ಲಿ ಕಲಿಯುವ ಪಾಠಗಳನ್ನು ಕಲಿಯುತ್ತಾರೆ. ಪರಸ್ಪರ ಹೊಂದಾಣಿಕೆ, ಹಂಚಿಕೊಳ್ಳುವ ಗುಣ ಮತ್ತು  ಹಿರಿ ಕಿರಿಯರ ಜೊತೆ ನಡುವಳಿಕೆ ಮುಂತಾದ ಗುಣಗಳನ್ನು ಮಕ್ಕಳು ನೋಡಿಯೇ ಕಲಿಯುತ್ತಾರೆ.

   ಹೊಸ ಜಾಗಗಳಿಗೆ ಪ್ರವಾಸ ಹೋಗುವುದು ಈ ನಡುವೆ ಜಾಸ್ತಿಯಾಗಿದೆ. ದೇಶ ಸುತ್ತು ಅಥವಾ ಕೋಶ ಓಡು ಎನ್ನುವಂತೆ ಮಕ್ಕಳ ಸಮಗ್ರ. ಬೆಳವಣಿಗೆಗೆ ಇಂತಹ ಪ್ರವಾಸಗಳು ತುಂಬಾ ಸಹಕಾರಿ. ಸಾಮಾನ್ಯವಾಗಿ ಜನರು ಮಕ್ಕಳ ಜೊತೆ  ಐತಿಹಾಸಿಕ ತಾಣಗಳು,  ಗಿರಿಧಾಮಗಳು , ಸಮುದ್ರ ತೀರಗಳು ಅಥವಾ ಅಭಯಾರಣ್ಯ ಗಳಿಗೆ ಭೇಟಿ ಕೊಡುತ್ತಾರೆ.   ನಮ್ಮ ಇತಿಹಾಸ, ಪ್ರಾಕೃತಿಕ ಹಾಗೂ ಜೈವಿಕ  ವೈವಧ್ಯತೆಯನ್ನು ತಿಳಿಸಿಕೊಡಲು ಇದಕ್ಕಿಂತ ಬೇರೆ ಪ್ರಯೋಗಶಾಲೆ ಬೇಕೆ?

    ಬೇಸಿಗೆ ರಜೆ ಮಕ್ಕಳ ಕೌಶಲಾಭಿವೃದ್ಧಿಪಡಿಸಲು ಒಂದು ಅವಕಾಶವಾಗಿದೆ. ಶಾಲಾ ದಿನಗಳ ಒತ್ತಡದಲ್ಲಿ ಮಕ್ಕಳಲ್ಲಿ ಇರುವ ಆಸಕ್ತಿ ಹವ್ಯಾಸಗಳಿಗೆ ಸಮಯ ಸಿಗಲಿಕ್ಕಿಲ್ಲ. ಈ ಸಮಯದಲ್ಲಿ ಈಜು ಮುಂತಾದ ಅವರ ನೆಚ್ಚಿನ ಆಟೋಟ ಗಳಲ್ಲಿ ತೊಡಗಿಸಿಕೊಳ್ಳಬಹುದು. ಇದರಿಂದ ಅವರಲ್ಲಿ ಅಡಗಿರುವ ಕೌಶಲ್ಯ ಬೆಳಕಿಗೆ ಬರಲು ಅವಕಾಶ ಸಿಗುತ್ತದೆ. ಇನ್ನೂ,  ಮಕ್ಕಳು ಕಲಿಕೆ ಯಾವುದಾದರೂ ವಿಷಯದಲ್ಲಿ ಕಷ್ಟ ಅನುಭವಿಸುತ್ತಿದ್ದರೆ ಅದನ್ನು ಪರಿಹರಿಸಿ ಅವರ ಮುಂದಿನ ವರ್ಷದ ಓದನ್ನು ಸರಳವಾಗಿಸಬಹುದು.

    ಹೀಗೆ ಮಕ್ಕಳನ್ನು ಮೊಬೈಲ್ ಅಥವಾ ಟೀವಿ ಆಧಿನ ಮಾಡದಂತೆ ಮಾಲ್ ಮಿಲ್ಟಿಪ್ಲೆಕ್ಸ್ ಗಳ ಆಮಿಷಗಳಿಗೆ ಬೀಳದಂತೆ ಬೇಸಿಗೆಯ ಕಾಲಾವಕಾಶ ವನ್ನು ಸದ್ವಿನಿಯೋಗ ಮಾಡಿಕೊಳ್ಳುವುದು ತಂದೆ ತಾಯಿಯರ ಕೈಲಿಯಲ್ಲಿದೆ

ಕರಡಿ ಬೆಟ್ಟಕೆ ಹೋಯಿತು

ಕರಡಿ ಬೆಟ್ಟಕೆ ಹೋಯಿತು
ಕರಡಿ ಬೆಟ್ಟಕೆ ಹೋಯಿತು
ಕರಡಿ ಬೆಟ್ಟಕೆ ಹೋಯಿತೂ
ನೋಟ ನೋಡಲು

ನೋಡಿತೇನದು ನೋಡಿತೇನದು
ಬೆಟ್ಟದ ಇನ್ನೊಂದು ಭಾಗಾ
ಬೆಟ್ಟದ ಇನ್ನೊಂದು ಭಾಗ
ಕರಡಿ ನೋಡಿತು

ಹಲಸು ತಂದಿತು...ಜೇನ ಕಲಸಿತು
ಮರಿಗಳಿಗೆ ತಿನ್ನಿಸಿ
ತಾನು ತಿಂದು ತೇಗಿತು!