ಭಾರತದ ಮೊದಲ ಮಹಿಳೆಯರು


  1. ಪ್ರಧಾನ ಮಂತ್ರಿ  -  ಇಂದಿರಾ ಗಾಂಧಿ
  2. ರಾಷ್ಟ್ರಪತಿ - ಪ್ರತಿಭಾ ಪಾಟೀಲ್
  3. ಸುಪ್ರೀಂ ಕೋರ್ಟ್ ಜಡ್ಜ್ - ಫಾತಿಮಾ ಬೀಬಿ
  4. ಮುಖ್ಯಮಂತ್ರಿ - ಸುಚೇತಾ ಕೃಪಾಲಾನಿ
  5. ಮಂತ್ರಿ - ರಾಜಕುಮಾರಿ ಅಮೃತ್ ಕೌರ್
  6. ಐ ಪಿ ಎಸ್ ಅಧಿಕಾರಿ - ಕಿರಣ್ ಬೇಡಿ
  7. ಐ ಎ ಎಸ್ ಅಧಿಕಾರಿ - ಅನ್ನ ರಾಜಂ ಮಲ್ಹೋತ್ರಾ
  8. ಭಾರತ ರತ್ನ - ಇಂದಿರಾ ಗಾಂಧಿ
  9. ನೋಬೆಲ್ ಪಾರಿತೋಷಕ ಪಡೆದವರು - ಮದರ್ ತೆರೇಸಾ
  10. ಜ್ಞಾನಪೀಠ ಪಡೆದವರು - ಆಶಪೂರ್ಣ ದೇವಿ
  11. ವೈದ್ಯೆ - ಆನಂದಿಬಾಯಿ ಜೋಶಿ
  12. ಎವರೆಸ್ಟ್ ಪರ್ವತಾರೋಹಿ - ಬಚೆಂದ್ರಿ ಪಾಲ್
  13. ಮಿಸ್ ವರ್ಲ್ಡ್ - ರೀಟಾ ಫರಿಯ
  14. ಮಿಸ್ ಯೂನಿವರ್ಸ್ - ಸುಶ್ಮಿತಾ ಸೇನ್
  15. ಕಾಂಗ್ರೆಸ್ ಅಧ್ಯಕ್ಷೆ - ಅನಿ ಬೆಸೆಂಟ್
  16.   ಪೂರ್ಣ ಪ್ರಮಾಣದ ರಕ್ಷಾ ಮಂತ್ರಿ -  ನಿರ್ಮಲಾ ಸೀತಾರಾಮನ್
  17. ಅಂತರಿಕ್ಷ ಯಾನಿ - ಕಲ್ಪನಾ ಚಾವ್ಲಾ
  18. ಒಲಂಪಿಕ್ ಪದಕ ವಿಜೇತೆ - ಕರಣಂ ಮಲ್ಲೇಶ್ವರಿ
  19. ಪೈಲೆಟ್ - ಸರಳ ಠಕರಾಲ್
  20. ಇಂಜಿನಿಯರ್- ರಾಜೇಶ್ವರಿ ಚಟರ್ಜಿ


ಬಸ್ ಬಂತು ಬಸ್






ಬಸ್ ಬಂತು ಬಸ್, ಗೌರ್ನಮೆಂಟ್ ಬಸ್
ಕೆಂಪು ಬಿಳಿ ಬಣ್ಣಾ, ನೋಡು ಬಾರಣ್ಣಾ

ಆರು ಚಕ್ರ ಇರುವುದು, ಎರಡು ಲೈಟ್ ಉರಿವುದು
ನಾ ಕಂಡಕ್ಟರ್ ಆಗುವೆ, ರೈಟ್ ರೈಟ್ ಹೇಳುವೆ
ಸೀಟಿಯನ್ನು ಊದುವೆ!

ಕರುನಾಡಿನ ಕೆಲವು ಸ್ಥಳಗಳ ವಿಶೇಷತೆಗಳು


  1. ಬೀದರ್ - ಬಿದರಿ ಕಲೆ
  2. ಶಹಾಬಾದ - ಕಲ್ಲುಗಳು
  3. ಕೊಡಗು  - ಕಿತ್ತಳೆ
  4. ಹಾವೇರಿ - ಏಲಕ್ಕಿ ಹಾರ
  5. ಮೈಸೂರು - ಚಿಗುರೆಲೆ
  6. ಮುಧೋಳ - ನಾಯಿಗಳು
  7. ಕಿನ್ನಾಳ - ಕಲಾತ್ಮಕ ಗೊಂಬೆಗಳು
  8. ಇಳಕಲ್ - ಸೀರೆ
  9. ಗುಳೇದಗುಡ್ಡ - ಖಣ
  10. ಧಾರವಾಡ - ಪೇಡಾ
  11. ದೇವನಹಳ್ಳಿ- ಚಕ್ಕೋತ
  12. ನಂಜನಗೂಡು- ಬಾಳೆಹಣ್ಣು
  13. ಸವಣೂರು - ಖಾರಾ
  14. ಮೊಳಕಾಲ್ಮುರು- ಸೀರೆಗಳು
  15. ಮಂಗಳೂರು- ಹೆಂಚುಗಳು
  16. ಗೋಕಾಕ್ - ಕರದಂಟು
  17. ಹಡಗಲಿ - ಮಲ್ಲಿಗೆ ಹೂ
  18. ಕಲಘಟಗಿ - ಮರದ ತೊಟ್ಟಿಲು
  19. ಚನ್ನಪಟ್ಟಣದ ಗೊಂಬೆಗಳು
  20. ಬೆಳಗಾವಿ - ಕುಂದಾ
  21. ಅಮೀನಗಡ - ಕರದಂಟು
  22. ಬ್ಯಾಡಗೀ - ಮೆಣಸಿನಕಾಯಿ
  23. ಕೊಡಗು - ಹಸಿರು ಏಲಕ್ಕಿ
  24. ಬನ್ನೂರು - ಕುರಿಗಳು
  25. ದಾವಣಗೇರೆ - ಬೆಣ್ಣೆ ದೋಸೆ
  26. ಚಿಕ್ಕಮಂಗಳೂರು - ಕಾಫಿ
  27. ಮೈಸೂರು- ಮಲ್ಲಿಗೆ

ಕನ್ನಡ ಸಂಧಿಗಳು

ಕನ್ನಡ ಸಂಧಿಗಳಲ್ಲಿ ಮೂರು ವಿಧಗಳಿವೆ

೧. ಲೋಪ ಸಂಧಿ
೨. ಆಗಮ ಸಂಧಿ
೩. ಆದೇಶ ಸಂಧಿ

೧. ಲೋಪ ಸಂಧಿ:-
ಪೂರ್ವ ಪದದ ಕೊನೆಯ ಸ್ವರದ ಮುಂದೆ ಉತ್ತರ ಪದದ ಮೊದಲ ಸ್ವರ ಬಂದು ಸಂಧಿಕಾರ್ಯ ನಡೆದಾಗ ಪೂರ್ವ ಪದದ ಒಂದಕ್ಷರ ಲೋಪವಾಗುವುದಕ್ಕೆ "ಲೋಪಸಂಧಿ" ಎನ್ನುವರು.

ಉದಾಹರಣೆಗೆ:- 
೧. ಮೇಲೆ+ಇಟ್ಟು = ಮೇಲಿಟ್ಟು
ಮೇಲಿನ ಸಂಧಿಕಾರ್ಯದಲ್ಲಿ ಮೇಲೆ ಎಂಬ ಪೂರ್ವಪದದ ಕೊನೆಯ ಸ್ವರ ಎ ಎಂಬುದು ಇಲ್ಲಿ ಲೋಪವಾಗಿದೆ.

೨. ಮಾತು+ಇಲ್ಲ = ಮಾತಿಲ್ಲ
ಇಲ್ಲಿ ಮಾತು ಎಂಬ ಪೂರ್ವಪದದ ಕೊನೆಯ ಸ್ವರ ಉ ಎಂಬುದು ಲೋಪವಾಗಿದೆ. 

ಇನ್ನು ಕೆಲವು ಉದಾಹರಣೆಗಳು
ನಾನು+ಒಬ್ಬ = ನಾನೊಬ್ಬ.             : ಉ ಸ್ವರ ಲೋಪವಾಗಿದೆ.
ಹುಡುಗರು+ಎಲ್ಲ = ಹುಡುಗರೆಲ್ಲ.   : ಉ ಸ್ವರ ಲೋಪವಾಗಿದೆ.
ನಿನಗೆ +ಅಲ್ಲದೆ = ನಿನಗಲ್ಲದೆ.         : ಎ ಸ್ವರ ಲೋಪವಾಗಿದೆ.

೨. ಆಗಮ ಸಂಧಿ:-
ಸ್ವರದ ಮುಂದೆ ಸ್ವರವು ಬಂದು ಸಂಧಿಕಾರ್ಯಾ ನಡೆಯುವಾಗ ಒಂದು ಅಕ್ಷರ ಆಗಮವಾದರೆ ಅದನ್ನು ಆಗಮ ಸಂಧಿ ಎನ್ನುವರು. ಸಾಮಾನ್ಯವಾಗಿ ವ (ವ್+ಅ) ಇಲ್ಲವೇ ಯ (+ಅ) ಅಕ್ಷರಗಳು ಆಗಮವಾಗಿ ಬರುತ್ತವೆ.

ಉದಾಹರಣೆಗೆ:-
೧. ಮನೆ+ಅನ್ನು = ಮನೆಯನ್ನು
ಈ ಪದದಲ್ಲಿ ಉತ್ತರ ಪದದ ಅ ಸ್ವರದ ಬದಲು ಸಂಧಿಕಾರ್ಯದ ನಂತರ ಯ ಎಂಬ ಅಕ್ಷರ ಸೇರಿಕೊಂಡಿದೆ.
೨. ಪತ್ರ+ಅನ್ನು = ಪತ್ರವನ್ನು
ಈ ಪದದಲ್ಲಿ ಅ ಸ್ವರದ ಬದಲು ವ ಎಂಬ ಅಕ್ಷರ ಬಂದು ಸೇರಿಕೊಂಡಿದೆ.

ಇನ್ನು ಕೆಲವು ಉದಾಹರಣೆಗಳು
ಮಗು+ಅನ್ನು = ಮಗುವನ್ನು      : ವ ಆಗಮವಾಗಿದೆ.
ಮಳೆ+ಅಲ್ಲಿ = ಮಳೆಯಲ್ಲಿ         : ಯ ಆಗಮವಾಗಿದೆ.

೩. ಆದೇಶ ಸಂಧಿ:-
ಇಲ್ಲಿ ಸಂಧಿ ಕಾರ್ಯ ನಡೆದಾಗ ಉತ್ತರ ಪದದ ಮೊದಲನೆಯ ಅಕ್ಷರವು ಬದಲಾಗುತ್ತದೆ. ಸಾಮಾನ್ಯವಾಗಿ ಕ, ತ,ಪ ವ್ಯಂಜನಾಕ್ಷರಗಳಿಗೆ ಬದಲಾಗಿ ಕ್ರಮವಾಗಿ ಗ,ದ,ಬ ವ್ಯಂಜನಾಕ್ಷರಗಳು ಆದೇಶವಾಗಿ ಬರುವುದಕ್ಕೆ "ಆದೇಶ ಸಂಧಿ" ಎನ್ನುವರು.

ಉದಾಹರಣೆಗೆ:-
೧. ಕೋಪ+ಕೊಂಡು = ಕೋಪಗೊಂಡು
ಮೇಲಿನ ಸಂಧಿ ಕಾರ್ಯದಲ್ಲಿ ಕೊಂಡು ಎಂಬ ಕ (ಕೊ) ಅಕ್ಷರದ ಬದಲಿಗೆ ಕೋಪಗೊಂಡು ಎಂಬ ಪದದಲ್ಲಿ ಗ(ಗೊ) ಎಂಬ ಅಕ್ಷರ ಬಂದಿದೆ.
೨. ಬೆಟ್ಟ+ತಾವರೆ = ಬೆಟ್ಟದಾವರೆ
ಇಲ್ಲಿ ಸಂಧಿ ಕಾರ್ಯ ನಡೆಯುವಾಗ ತ(ತಾ) ಅಕ್ಷರದ ಬದಲಿಗೆ ದ(ದಾ) ಅಕ್ಷರ ಬಂದಿದೆ.

ಇನ್ನು ಕೆಲವು ಉದಾಹರಣೆಗಳು
ಕಣ್+ಪನಿ = ಕಂಬನಿ    : ಪ ಬದಲು ಬ ಆದೇಶವಾಗಿ ಬಂದಿದೆ.
ಹೂ+ತೋಟ = ಹೂದೋಟ : ತ ಬದಲು ದ ಆದೇಶವಾಗಿ ಬಂದಿದೆ.

ಸಂಧಿಗಳು


     ನಾವು ಮಾತನಾಡುವಾಗ ಕೆಲವು ಶಬ್ದಗಳನ್ನು ಬಿಡಿ ಬಿಡಿಯಾಗಿ ಹೇಳುವುದಿಲ್ಲ. ಉದಾಹರಣೆಗೆ ಅವಳು+ಅಲ್ಲಿ ಎಂಬ ಎರಡು ಶಬ್ದಗಳನ್ನು ಕೂಡಿಸಿ "ಅವಳಲ್ಲಿ" ಎಂದು ಹೇಳುತ್ತೇವೆ. ಹೀಗೆ ಎರಡು ಅಕ್ಷರಗಳು ಯಾವ ಕಾಲ ವಿಳಂಬವಿಲ್ಲದೆ ಪರಸ್ಪರ ಸೇರುವುದಕ್ಕೆ ಸಂಧಿ ಎನ್ನುತ್ತೇವೆ.

ಉದಾಹರಣೆಗೆ:-
ಮಳೆ+ಕಾಲ = ಮಳೆಗಾಲ
ಪರ+ಉಪಕಾರಿ = ಪರೋಪಕಾರಿ
ಬಿಲ್ವ+ಪತ್ರೆ = ಬಿಲ್ಪತ್ರೆ

ಹೀಗೆ ಒಂದು ಪದ ಇನ್ನೊಂದು ಪದದೊಡನೆ ಸೇರಿದಾಗ ಪೂರ್ವಪದ ದ ಅಂತ್ಯದಲ್ಲಿ ಉತ್ತರ ಪದದ ಆದಿಯಲ್ಲಿ ಮೂರು ಬಗೆಯ ಕಾರ್ಯಗಳು ನಡೆಯಬಹುದು. ಅಕ್ಷರವೊಂದು ಲೋಪವಾಗಬಹುದು, ಇನ್ನೊಂದು ಆಗಮಿಸಬಹುದು, ಒಂದು ಅಕ್ಷರ ಹೋಗಿ ಇನ್ನೊಂದು ಅದರ ಸ್ಥಾನದಲ್ಲಿ ಬೇರೆಯೇ ಬರಬಹುದು. ಇದನ್ನು ಸಂಧಿಕಾರ್ಯ ಎನ್ನುತ್ತಾರೆ.

ಸಂಧಿಗಳಲ್ಲಿ ಎರಡು ವಿಧಗಳಿವೆ.
೧. ಕನ್ನಡ ಸಂಧಿ
೨. ಸಂಸ್ಕೃತ ಸಂಧಿ

೧. ಕನ್ನಡ ಸಂಧಿಗಳು:-

ಕನ್ನಡ ಸಂಧಿಗಳಲ್ಲಿ ಮೂರು ವಿಧಗಳಿವೆ
೧. ಲೋಪ ಸಂಧಿ
೨. ಆಗಮ ಸಂಧಿ
೩. ಆದೇಶ ಸಂಧಿ

ಸಂಧಿಗಳ ಬಗ್ಗೆ ಮುಂದಿನ ಪಾಠಕ್ಕಾಗಿ ಈ ಮುಂದಿನ ಲಿಂಕಗಳನ್ನು ಕ್ಲಿಕ್ ಮಾಡಿ