ಕಾಗುಣಿತ ಮತ್ತು ಸಂಯುಕ್ತಾಕ್ಷರ

ಗುಣಿತಾಕ್ಷರ ಅಥವಾ ಕಾಗುಣಿತ. 

ವ್ಯಂಜನಕ್ಕೆ ಸ್ವರ ಸೇರಿದಾಗ ಆಗುವ ಅಕ್ಷರವೇ ಗುಣಿತಾಕ್ಷರ ಅಥವಾ ಕಾಗುಣಿತ.
ಉದಾ:         ಕ್ +ಅ = ಕ
                   ಮ್+ಇ = ಮಿ  ಇತ್ಯಾದಿ

 ಪದಗಳ ರಚನೆಗೂ   ಕಾಗುಣಿತಗಳೇ ಆಧಾರ.  ಹೀಗೆ ವ್ಯಂಜನಗಳಿಗೆ ಸ್ವರಗಳನ್ನು   ಸೇರಿಸಿದಾಗ  ಪದಗಳು ರಚನೆಯಾಗುತ್ತವೆ.

ಉದಾ:    ಸ್+ಅ +ರ್+ಅ +ಳ್ +ಅ = ಸರಳ
              ದ್+ಏ+ ಶ್+ಅ =ದೇಶ

ಈ ರೀತಿ ಸ್ವರಾಕ್ಷರಗಳನ್ನು ಸೇರಿಸಿ ಬರೆದರೆ ‘ ದೇಶ ’ಎಂಬ ಪದ ರಚನೆಯಾಗುತ್ತದೆ. ಹೀಗೆ
ಒಂದು ವ್ಯಂಜನಕ್ಕೆ ಅ ದಿಂದ ಅಃ   ವರೆಗೆ ಸ್ವರಗಳು  ಮತ್ತು ಯೋಗವಾಹಗಳನ್ನು   ಸೇರಿಸಿದರೆ   15 ಗುಣಿತಾಕ್ಷರಗಳಾಗುತ್ತವೆ.

ಉದಾ:
ಕ ಕಾ ಕಿ ಕೀ ಕು ಕೂ ಕೃ ಕೆ ಕೇ ಕೈ ಕೊ ಕೋ ಕೌ ಕಂ ಕಃ


 ಸಂಯುಕ್ತಾಕ್ಷರ:
ಎರಡು ಮತ್ತು ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರವೇ ಸಂಯುಕ್ತಾಕ್ಷರ ಅಥವಾ ಒತ್ತಕ್ಷರ ಎನ್ನುವರು.

ಉದಾ: ಅ +ಪ್ +ಪ್ +ಅ = ಅಪ್ಪ
           ಸ್+ವ್ +ಅ +ರ್+ಅ = ಸ್ವರ

ಸಂಯುಕ್ತಾಕ್ಷರಗಳಲ್ಲಿ ಸಜಾತಿಯಸಂಯುಕ್ತಾಕ್ಷರ ಹಾಗೂ ವಿಜಾತೀಯ ಸಂಯುಕ್ತಾಕ್ಷರ ಎಂದು
ಎರಡು ವಿಧಗಳಿವೆ

 ಸಜಾತಿಯಸಂಯುಕ್ತಾಕ್ಷರ :

ಒಂದೇ ಜಾತಿಯ ಎರಡು ವ್ಯಂಜನಗಳುಒಟ್ಟಿಗೆ ಸೇರಿ ಆಗುವ ಸಂಯುಕ್ತಾಕ್ಷರವೇ ಸಜಾತಿಯ ಸಂಯುಕ್ತಾಕ್ಷರ.

ಉದಾ: ಸಕ್ಕರೆ, ಕನ್ನಡ, ಅಕ್ಕ ಇತ್ಯಾದಿ

ವಿಜಾತಿಯ ಸಂಯುಕ್ತಾಕ್ಷರ :

 ಬೇರೆ ಬೇರೆ ಜಾತಿಯ ವ್ಯಂಜನಗಳು ಒಟ್ಟಿಗೆ ಸೇರಿ ಆಗುವ ಸಂಯುಕ್ತಾಕ್ಷರವೇ ವಿಜಾತಿಯ ಸಂಯುಕ್ತಾಕ್ಷರ.

ಉದಾ: ಚಕ್ರ, ಕಷ್ಟ , ವ್ಯಕ್ತಿ, ಸ್ವತಂತ್ರ  ಇತ್ಯಾದಿ


8 comments:

  1. Thank you soo much.
    ಧ‌‌ನ್ಯವಾದಗಳು.

    ReplyDelete
  2. ಧನ್ಯವಾದಗಳು.
    Thank you soo much.

    ReplyDelete
  3. ಸರ್ ಸೌಂದರ್ಯ ಪದವನ್ನು ಬಿಡಿಸಿ ಬರೆದು ಸೆಂಡ್ madi

    ReplyDelete
    Replies
    1. ಸ್+ಔ+ಅಂ+ದ್+ಅ+ರ್+ಯ್+ಅ =ಸೌಂದರ್ಯ

      Delete
  4. ಕಾಗದ,ಮತ್ತು ಹೊಳಪು ಇದರ ಗುಣಿತಾಕ್ಷರ

    ReplyDelete
    Replies
    1. ಕ್+ಆ+ಗ್+ಅ+ದ್+ಅ = ಕಾಗದ
      ಹ್+ಒ+ಳ್+ಅ+ಪ್+ಉ=ಹೊಳಪು

      Delete
  5. ಉತ್ತಮವಾದ, ಬಹುಪಯೋಗಿ ಕಾರ್ಯಕ್ಕೆ ಧನ್ಯವಾದಗಳು

    ReplyDelete
    Replies
    1. ತಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು

      Delete