ಅರಣ್ಯ ಸಂರಕ್ಷಣೆ


  
PC: Kirti Sharma
ಭೂಮಿ ದಿನವನ್ನು ಇದೇ 2021 ಏಪ್ರಿಲ್ 22 ರಂದು ವಿಶ್ವಾದ್ಯಂತ ಆಚರಿಸಲಾಗುತ್ತಿ
ದೆ. 
1970 ರಲ್ಲಿ ಮೊದಲ ಭೂಮಿ ದಿನ ಆಚರಿಸಲಾಯಿತು. 193 ರಾಷ್ಟ್ರಗಳಲ್ಲಿ  ಈ ದಿನ ಆಚರಿಸಲಾಗುತ್ತದೆ. ಈ ವರ್ಷದ ಭೂ ದಿನದ ಥೀಮ್ "ಭೂಮಿಯ ಮರುಸ್ಥಾಪನೆ" ಅಥವಾ "Restore The Earth" ಆಗಿದೆ. ಅರಣ್ಯಗಳು ಭೂಮಿಯನ್ನು  ಮತ್ತೆ ಆರೋಗ್ಯಕರವಾಗಿ ಉಸಿರಾಡುವಂತೆ ಮಾಡಬಲ್ಲವು.  ಏಕೆಂದರೆ ಅರಣ್ಯಗಳು ಭೂಮಿಯ  ಶ್ವಾಸಕೋಶಗಳು. ಇವುಗಳು ಊನವಾದರೆ ಜನರ ಜೀವನ ದುಸ್ಸಾಹಸವೇ ಸರಿ. ಆದುದರಿಂದ ಅವುಗಳ ರಕ್ಷಣೆ ಪ್ರತಿಯೊಬ್ಬನ ಆದ್ಯ ಕರ್ತವ್ಯವಾಗಿದೆ. ಅರಣ್ಯಗಳು ಭೂಭಾಗದೆಲ್ಲೆಡೆ ಸಮಾನವಾಗಿ ರೂಪಿತವಾಗಿರದಿದ್ದರೂ ಲಾಭ ಮಾತ್ರ ಎಲ್ಲರಿಗೂ ಸಮಾನವಾಗಿದೆ.

ಅರಣ್ಯಗಳು ಮಾನವನಿಗೆ ಶುದ್ಧ ಹವೆಯನ್ನು ನೀಡುವುದಷ್ಟೇ ಅಲ್ಲ, ಮಳೆಯ ಮಾರುತಗಳನ್ನು ಮಳೆಯನ್ನಾಗಿ ಪರಿವರ್ತಿಸುವ ಮಾಧ್ಯಮಗಳೆಂದರೆ ತಪ್ಪಾಗಲಾರದು. ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ ತನ್ನ ಅಗತ್ಯಗಳ ಪೂರೈಕೆಗಾಗಿ ಕಾಡುಗಳನ್ನು ಬರಿದು ಮಾಡುತ್ತಿದೆ.

ದುಷ್ಪರಿಣಾಮಗಳು: ಅರಣ್ಯನಾಶದಿಂದ ಪ್ರಾಣಿಜಗತ್ತಿಗೆ ಅತ್ಯವಶ್ಯಕವಾಗಿ ಬೇಕಾದ ಶುದ್ಧ ಹವೆ ಅಪೇಕ್ಷಿತ ಪ್ರಮಾಣದಲ್ಲಿ ಲಭಿಸುವುದಿಲ್ಲ. ವಾಯುವಿನಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣವು ಕ್ರಮೇಣ ಜಾಸ್ತಿಯಾಗಿ ಜನರ ಉಸಿರಾಟಕ್ಕೆ ತೊಂದರೆಯಾಗುವುದು. ಮಾನವನ ಉಸಿರಾಟಕ್ಕೆ ಧಕ್ಕೆ ಉಂಟಾದರೆ ಇನ್ನು ಬದುಕು ಹೇಗೆ ಹಸನಾದೀತು? ಇಂಗಾಲದ ಡೈ ಆಕ್ಸಡ್‌ನ ಪ್ರಮಾಣ ವಾತಾವರಣದಲ್ಲಿ ಹೆಚ್ಚಿದಂತೆ ಉಷ್ಣಾಂಶವೂ ಹೆಚ್ಚುತ್ತದೆ. ತತ್ಪಲವಾಗಿ ವಾತಾವರಣದಲ್ಲಿನ ಉಷ್ಣತೆಯೂ ಹೆಚ್ಚಾಗುತ್ತದೆ. ಇದರಿಂದಾಗಿ ಧ್ರುವ ಪ್ರದೇಶಗಳಲ್ಲಿ ಸಂಗ್ರಹವಾಗಿರುವ ಹಿಮರಾಶಿ ಕರಗಿ ನೀರಾಗಿ ಹರಿದು ಸಾಗರಗಳ ಮಟ್ಟವು ಏರಿ ಕರಾವಳಿ ಪುದೇಶಗಳಲ್ಲಿ ವಾಸಿಸುತ್ತಿರುವ ಜನ-ಜಾನುವಾರುಗಳು ನೀರು ಪಾಲಾಗುತ್ತವೆ.

ಅರಣ್ಯದ ಉತ್ಪನ್ನಗಳು ಸಾಕಷ್ಟು ಪ್ರಮಾಣದಲ್ಲಿ ಲಭಿಸದೆ ಜನಜೀವನ ಅಸ್ತವ್ಯಸ್ತವಾಗುವುದು. ಮರಮುಟ್ಟು, ಉರುವಲು ಇತ್ಯಾದಿಗಳಿಗೆ ಬಳಸಲಾಗುವ ಮರಗಳು ಇಲ್ಲದಾಗುತ್ತವೆ. ಅದನ್ನಾಶ್ರಯಿಸಿದ ಕೈಗಾರಿಕೆಗಳು ಸ್ಥಗಿತಗೊಳ್ಳುತ್ತವೆ. ಅವುಗಳನ್ನೇ ಅವಲಂಬಿಸಿದ ಕುಟುಂಬಗಳು ಬೀದಿಗೆ ಬೀಳುತ್ತದೆ. ವನ್ಯಪ್ರದೇಶವಿಲ್ಲದ ಮೇಲೆ ವನ್ಯಜೀವಿಗಳಿಗೆ ತಾವೆಲ್ಲಿಯದು? ವನ್ಯಜೀವಿಗಳು ಜನಜೀವನದ ಮೇಲೆ ಧಾಳಿ ಮಾಡುತ್ತವೆ. ತಮ್ಮ ಉಳಿವಿಗಾಗಿ ಹೋರಾಟ ಹಾಗೂ ಬೆಳೆಗಳ ಮೇಲೆ ಕಾಡು ಪ್ರಾಣಿಗಳು ದಾಳಿ ಮಾಡಿ ಮಾನವನ ಜೀವನವನ್ನು ನರಕಸದೃಶಗೊಳಿಸುವುದಿಲ್ಲವೇ?

ಅರಣ್ಯ ರಕ್ಷಣೆ: ಮಾನವನು ಸೃಷ್ಟಿಯಲ್ಲಿ ಕಿರೀಟಪ್ರಾಯನಾದವನು (Man is the Crown of Creation). ಆದುದರಿಂದ ಅರಣ್ಯ ರಕ್ಷಣೆಯು ಬುದ್ಧಿವಂತನಾದ ಮಾನವನ ಮೂಲಭೂತ ಕರ್ತವ್ಯವಾಗಿದೆ. ಅರಣ್ಯ ರಕ್ಷಣೆ ಮಾಡಿ ಇಡೀ ಜಗತ್ತನ್ನು ಅಪಾಯದಿಂದ ಪಾರು ಮಾಡಬೇಕಾದ ಜವಾಬ್ದಾರಿ ನಮ್ಮ ಕೈಯಲ್ಲಿದೆ. ಇದಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು.

100 ಸಮಾನಾರ್ಥಕ ಪದಗಳು

 ಒಂದೇ ಅರ್ಥವನ್ನು ಹೊಂದಿರುವ ಪದಗಳನ್ನು 'ಸಮಾನಾರ್ಥಕ ಪದಗಳು' ಎಂದು ಕರೆಯಲಾಗುತ್ತದೆ. ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯವೆಂದರೆ, ಈ ಪದಗಳಲ್ಲಿ ಅರ್ಥದ ಸಾಮ್ಯತೆಯ ಹೊರತಾಗಿಯೂ, ಅವುಗಳ ಬಳಕೆಯಲ್ಲಿ ವ್ಯತ್ಯಾಸವಿರುವ ಸಾಧ್ಯತೆ ಇದೆ. ಪ್ರತಿಯೊಂದು ಪದದ ಬಳಕೆಯು ಸಂದರ್ಭ ಮತ್ತು ಸ್ಥಳಕ್ಕೆ ಅನುಗುಣವಾಗಿ ಬದಲಾಗುತ್ತದೆ.

ಕೆಲವು ನಿರ್ದಿಷ್ಟ ಸಮಾನಾರ್ಥಕ ಪದಗಳನ್ನು ಕೆಳಗೆ ನೀಡಲಾಗಿದೆ.

 

1

ನೀರು

ಜಲ, ಅಂಬು, ಪಯ, ಉದಕ 

2

ಸಮುದ್ರ

ಜಲಧಿ, ಅಂಬುಧಿಶರಧಿ, ಕಡಲು, ವಾರಿಧಿ, ರತ್ನಾಕರ , ಅಬ್ದಿ

3

ಮೋಡ

ಮೇಘ, ಅಂಬುದ, ಮುಗಿಲು, ವಾರಿದ, ಘನ, ಅಬ್ದ   

4

ಕಮಲ

ಜಲಜ, ಅಂಬುಜ, ನೀರಜ, ಪಂಕಜ, ವಾರಿಜ, ತಾವರೆ, ಅರವಿಂದ, ಪದ್ಮ, ನಳಿನ, ಇಂದಿವರ, ರಾಜೀವ, ಪುಷ್ಕರ  

5

ಕೈ

ಹಸ್ತ, ಕರ, ಪಾಣಿ

6

ಆನೆ

ಹಸ್ತಿ , ಕರಿ , ಗಜ, ಕುಂಜರ

7

ದುಂಬಿ

ಮಿಲಿಂದ, ಭ್ರಮರ, ಮಧುಪ, ಮಧುಕರ, ಭೃಂಗ  

8

ಕಣ್ಣು

ನಯನ, ಅಕ್ಷಿ , ಚಕ್ಷು, ಲೋಚನ, ನೇತ್ರ

9

ಗೆಳೆಯ

ಮಿತ್ರ, ಸಖ, ಸ್ನೇಹಿತ,ಸಹಪಾಠಿ, ಸಹಚರ

10

ಸೂರ್ಯ

ನೇಸರ , ರವಿ, ದಿನಕರ, ಭಾನು, ಭಾಸ್ಕರ, ಪ್ರಭಾಕರ, ದೀನೇಶ, ಮಾರ್ತಾಂಡ, ಅರ್ಕ, ಛಾಯಾಪತಿ, ದಿವಾಕರ   

11

ರಾಜ

ಅರಸ, ದೊರೆ, ಭೂಪತಿ , ಮಹಿಮತಿ , ನರೇಶ, ನೃಪತಿ, ಭೂಪಾಲ, ಅಧಿಪತಿ

12

ದೇವರು

ಭಗವಂತ, ಈಶ್ವರ, ಪರಮಾತ್ಮ, ಪ್ರಭ, ದೈವ, ಪರಮೇಶ್ವರ, ವಿಧಾತಾ 

13

ಮನೆ

ಆಲಯ, ಗೃಹ, ನಿಕೇತನ, ಸದನ

14

ಗಣೇಶ

ಗಜಾನನ, ಲಂಬೋದರ, ವಿನಾಯಕ, ಏಕದಂತ, ಗೌರಿಸುತ,  ಗಣಪತಿ, ಕಪಿಲ, ಭಾಲಚಂದ್ರ, ಹೇರಂಭ 

15

ಮಗ

ಪುತ್ರ, ಕುವರ, ಸುತ, ಅತ್ಮಜ, ತನಯ, ತನುಜ, ಸೂನು

16

ಮಗಳು

ಪುತ್ರಿ, ಸುತೆ, ಕುಮಾರಿ, ಅತ್ಮಜೆ, ತನಯೇ, ತನುಜೆ  

17

ತಂದೆ

ಪಿತ, ಅಪ್ಪ , ಅಯ್ಯ , ಜನಕ

18

ತಾಯಿ

ಅಮ್ಮ, ಅಬ್ಬೆ, ಜನನಿ, ಮಾತೆ, ಅವ್ವ

19

ಆಕಾಶ

ಆಗಸ, ಗಗನ, ಬಾನು, ಅಂತರಿಕ್ಷ , ನಭ, ವ್ಯೋಮ, ಮಹಾನೀಲ, ಅಂಬರ, ಖಗೋಳ, ನಭಮಂಡಲ   

20

ಭೂಮಿ

ಮಹಿ, ಪೃಥ್ವಿ, ಭೂ, ನೆಲ, ಧರಣಿ, ಧರೆ, ಧರಿತ್ರಿ, ವಸುಂಧರೆ, ಇಳೆ, ವಸುಧೆ

21

ಚಂದ್ರ

ಚಂದಿರ, ಹಿಮಕರ, ಶಶಿ, ಹಿಮಾಂಶು, ರಾಕೇಶ, ತಿಂಗಳು, ನಿಶಾಕರ, ರಜನೀಶ, ಮಾಯಾಂಕ, ಮೃಗಾಂಕ

22

ರಾತ್ರಿ

ನಿಶಾ, ರಜನಿ, ಶರ್ವರಿ, ಯಾಮಿನಿ 

23

ನದಿ

ಹೊಳೆ, ಸರಿತಾ, ಹೊನಲು, ವಾಹಿನಿ, ತರಂಗಿಣಿ, ಪ್ರವಾಹಿನಿ

24

ಪರ್ವತ

ಗಿರಿ, ಗುಡ್ಡ, ಬೆಟ್ಟ, ಅಚಲ, ಶೈಲ, ತುಂಗ, ಮಲೆ

25

ಬೆಂಕಿ

ಅಗ್ನಿ, ಅನಲ, ಜ್ವಾಲಾ, ಪಾವಕ

26

ಕಲ್ಲು

ಶಿಲೆ, ಪಾಷಾಣ, ಶೈಲ, ಶಿಲ್ಪ

27

ಕಾಡು

ಅರಣ್ಯ, ಅಡವಿ, ವನ, ಕಾನನ, ಅಟವಿ

28

ಹಾಲು

ಕ್ಷೀರ, ಪಯ, ದುಗ್ಧ

29

ಸ್ಮಶಾನ

ಮಸಣ, ರುದ್ರಭೂಮಿ

30

ಪಾರ್ವತಿ

ಶೈಲಜಾ, ಗೌರಿ, ಗಿರಿಜಾ, ದಾಕ್ಷಾಯಿಣಿ 

31

ಅಮೃತ

ಅಮರ್ದು, ಸುಧೆ, ಪಿಯೂಷ, ಸೋಮ

32

ರಾಕ್ಷಸ

ಅಸುರ, ದಾನವ, ರಕ್ಕಸ, ನಿಶಾಚರ

33

ಕತ್ತಲು

ತಮ, ಅಂಧಕಾರ, ತಿಮಿರ, ತಮಸ್

34

ಪಂಡಿತ

ಕೋವಿದ, ಜ್ಞಾನಿ, ಬಲ್ಲವ, ಪ್ರಾಜ್ಞ, ವಿದ್ವಾನ

35

ಪರೋಪಕಾರ

ಹಿತ, ಉಪಕಾರ, ಸಹಾಯ, ಪರಹಿತ

36

ಬ್ರಾಹ್ಮಣ

ಹಾರವ, ದ್ವಿಜ, ವಿಪ್ರ

37

ಕೊಳಲು

ವೇಣು, ವಂಶಿ , ಮುರಳಿ

38

ಗಂಗೆ  

ಭಾಗೀರಥಿ, ಜಾಹ್ನವಿ, ಮಂದಾಕಿನಿ, ಸುರನದಿ, ದೇವನದಿ, ತ್ರಿಪಥಗಾ, ವಿಶ್ನುಪಗಾ  

39

ಯಮುನೆ

ಕಾಲಿಂದಿನಿ,  ಸುರ್ಯಸುತೆ, ತರಣಿಜಾ, ಅರ್ಕಜಾ , ಜಮುನಾ  ನೀಲಂಬರಾ

40

ಶಿವ

ಶಂಕರ, ಅಶುತೋಶ, ಈಶಾನ, ವಾಮದೇವ, ಹರ, ನೀಲಕಂಠ, ಚಂದ್ರಮೌಳಿ, ರುದ್ರ, ನಟರಾಜ, ಮಹೇಶ, ಗಂಗಾಧರ 

41

ಲಕ್ಷ್ಮೀ

ಶ್ರೀ, ಲಕುಮಿ, ರಮಾ, ಇಂದಿರಾ, ಹರಿಪ್ರಿಯಾ, ಪದ್ಮಜಾ,

42

ವಿಷ್ಣು

ಹರಿ, ನಾರಾಯಣ, ಜನಾರ್ದನ , ಲಕ್ಷ್ಮಿಕಾಂತ, ಪದ್ಮನಾಭ, ಮುಕುಂದ, ಲಕ್ಷ್ಮೀಶ , ಶ್ರೀಕಾಂತ, ರಮಾಕಾಂತ, ಅನಂತ, ಅಚ್ಯುತ, ವನಮಾಲಿ

43

ಹಕ್ಕಿ

ಪಕ್ಷಿ, ಖಗ, ವಿಹಂಗ, ನಭಚರ  

44

ಮಳೆ

ವರ್ಷಾ, ವೃಷ್ಟಿ

45

ಗಾಳಿ

ವಾಯು, ಸಮೀರ, ಅನಿಲ, ಪವನ, ಪವಮಾನ

46

ಕೃಷ್ಣ

ಮುರಾರಿ, ಗೋಪಾಲ, ಗೋವಿಂದ, ಪಾರ್ಥಸಾರಥಿ, ಮುರಳಿಧರ, ಮಧುಸೂದನ, ಮೋಹನ, ಗೋಪಿವಲ್ಲಭ, ಗಿರಿಧರ, ಚಕ್ರಪಾಣಿ

47

ರಾಮ

ಪುರುಷೋತ್ತಮ , ರಾಘವ, ಸೀತಾಪತಿ, ರಘುಪತಿ, ರಘುನಾಥ

48

ಸೀತೆ

ವೈದೇಹಿ, ಜಾನಕಿ, ಮೈಥಿಲಿ

49

ಕುದುರೆ

ಅಶ್ವ , ತುರುಗ, ಹಯ

50

ಅಧ್ಯಾಪಕ

ಶಿಕ್ಷಕ, ಗುರು, ಆಚಾರ್ಯ, ಉಪಾಧ್ಯಾಯ

51

ಕವನ

 ಪದ್ಯ, ಕಾವ್ಯ , ಹಾಡು, ಕವಿತೆ

52

ಹೂವು

ಪುಷ್ಪ, ಕುಸುಮ, ಸುಮನ, ಪ್ರಸೂನ  

53

ಗುಡಿ

ದೇವಾಲಯ, ಮಂದಿರ, ಧಾಮ

54

ಕತ್ತಿ

ಖಡ್ಗ, ಅಲಗು, ಅಸಿ

55

ಅಣ್ಣ

ಅಗ್ರಜ, ಭ್ರಾತೃ , ಹಿರಿಯಣ್ಣ

56

ಅಕ್ಕ

ಅಗ್ರಜೆ, ಹಿರಿಯಕ್ಕ

57

ಸ್ತ್ರೀ

ಮಾನಿನಿ, ಮಹಿಳೆ, ಹೆಣ್ಣು, ಅಂಗನೆ, ಲಲನೆ

58

ಹಾವು

ಸರ್ಪ, ಭುಜಂಗ, ನಾಗ, ಪನ್ನಗ, ಶೇಷ, ಅಹಿ, ಉರಗ , ಫಣಿ

59

ಮದುವೆ

ಲಗ್ನ , ವಿವಾಹ, ಕಲ್ಯಾಣ

60

ಮಂಗ

ಕೋತಿ, ಕಪಿ, ವಾನರ, ಮರ್ಕಟ, ಕೋಡಗ 

61

ಗಂಡ

ರಮಣ , ಪತಿ, ವಲ್ಲಭ , ಕಾಂತ, ಪ್ರಿಯ

62

ಹೆಂಡತಿ

ಪತ್ನಿ , ವಲ್ಲಭೆ , ಕಾಂತೆ , ಭಾರ್ಯ, ಅರ್ಧಾಂಗಿನಿ, ಪ್ರಿಯೆ

63

ಧನ

ಹಣ, ನಗದು,  ಕಾಂಚಾಣ , ಸಿರಿ, ದುಡ್ಡು , ಕಾಸು

64

ಧನಿಕ

ಶ್ರೀಮಂತ, ಬಲ್ಲಿದ , ಸಿರಿವಂತ

65

ಕಾಮ

ಮಾರ, ಮನ್ಮಥ , ಮದನ , ಅನಂಗ, ಕಂದರ್ಪ, ರತಿಪತಿ, ಮನಸಿಜ  

66

ದಾರಿ

ಪಥ , ಮಾರ್ಗ

67

ಮರ

ವೃಕ್ಷ , ತರು , ಪಾದಪ

68

ಸುವಾಸನೆ

ಪರಿಮಳ, ಸಂಪದ , ಸುಗಂಧ, ಕಂಪು, ಸೌರಭ      

69

ಮಗು

ಕೂಸು, ಕಂದ, ಪಾಪ, ಶಿಶು, ಹಸುಳೆ

70

ಬಂಗಾರ

ಚಿನ್ನ , ಹೇಮ, ಸುವರ್ಣ

71

ಬಾಯಾರಿಕೆ

ತೃಷೆ, ತೃಷ್ಣಾ, ದಾಹ

72

ನಕ್ಷತ್ರ

ತಾರೆ , ಚುಕ್ಕೆ

73

ಯುದ್ಧ 

ಸಮರ, ಕದನ, ಕಾಳಗ, ರಣ, ಧುರ

74

ದ್ರೌಪದಿ

ಪಾಂಚಾಲಿ, ಕೃಷ್ಣೆ, ಯಾಜ್ಞಸೇನಿ

75

ಅರ್ಜುನ

ಪಾರ್ಥ, ಕಿರೀಟಿ, ಸವ್ಯಸಾಚಿ, ಗಾಂಢೀವಿ, ಧನಂಜಯ 

76

ಬಾವುಟ

ಧ್ವಜ, ಕೇತನ, ಗುಡಿ, ಪತಾಕ

77

ಹುಲಿ

ವ್ಯಾಘ್ರ, ಪುಲಿ, ಪುಂಡರೀಕ

78

ಸಿಂಹ

ವನರಾಜ. ಕೇಸರಿ, ಮೃಗರಾಜ

79

ಆಕಳು

ಗೋವು, ದನ, ತುರು , ರಾಸು, ಧೇನು 

80

ಹಣೆ

ಲಲಾಟ , ನೊಸಲು, ಭಾಲ, ಪಾಲ, ನಿಟಿಲ

81

ತಲೆ

ಮಂಡೆ , ಮಸ್ತಕ, ಶಿರ, ಕಪಾಲ 

82

ಮುಖ

ವದನ, ಮೊಗ, ವಕ್ತ್ರ, ಮೋರೆ, ಆನನ

83

ರಕ್ತ

ರುಧಿರ, ನೆತ್ತರು

84

ದೇಹ

ಶರೀರ, ಕಾಯ , ತನು, ಒಡಲು

85

ಸಾವು

ಮರಣ, ಜವ , ನಿಧನ , ಮಡಿ ,

86

ತೊಂದರೆ

ಉಪಟಳ ,ಉಪದ್ರವ, ಪೀಡನೆ

87

ವಿನಂತಿ

ಬಿನ್ನಹ , ವಿಜ್ಞಾಪನೆ, ಪ್ರಾರ್ಥನೆ

88

ಬುದ್ಧಿ

ಚಿತ್ತ, ಮನಸ್ಸು ,ಮನ, ಅಂತರಂಗ

89

ಚೆಂದ

ಸೊಗಸು, ಸುಂದರ, ಚೆನ್ನ

90

ಸಂತೋಷ

ಸಂತಸ , ಆನಂದ, ಖುಷಿ, ಪ್ರಮೋದ, ಹರ್ಷ, ಮೋದ   

91

ಅನುಪಮ

ಅನನ್ಯ , ಅಪೂರ್ವ

92

ಅವಮಾನ

ಅಪಮಾನ, ತಿರಸ್ಕಾರ,ನಿರಾದರ

93

ಅಪ್ಸರೆ

ದೇವಾಂಗನೆ , ಸುರಾಂಗನೆ, ದೇವಕನ್ಯೆ

94

ಕಣ್ಣೀರು

ಕಂಬನಿ, ಅಶ್ರು

95

ಆತ್ಮ

ಚೇತನ, ಚೈತನ್ಯ, ಜೀವ, ವಿಭು

96

ಮೊದಲು

ಆರಂಭ , ಶುರು, ಆದಿ, ಪ್ರಥಮ, ಮುಂಚೂಣಿ

97

ಇಂದ್ರ

ಸುರೇಶ, ದೇವರಾಜ, ಪುರಂಧರ, ವಜ್ರಿ, ದೇವೇಶ, ಸುರಪತಿ, ಶಚಿಪತಿ, ಸಹಸ್ರಾಕ್ಷ

98

ಆಸೆ

ಅಭಿಲಾಷೆ, ಇಷ್ಟ, ಇಚ್ಛೆ, ಆಕಾಂಕ್ಷೆ, ಕಾಮನೆ, ಮನೋರಥ, ವಾಂಛೆ

99

ಪುರಸ್ಕಾರ

ಬಹುಮಾನ , ಪಾರಿತೋಷಕ, ಇನಾಮು, ಕಾಣಿಕೆ

100

ಹಬ್ಬ

ಉತ್ಸವ, ಪರ್ವ, ಸಮಾರೋಹ, ಪರ್ಬ