100 ಸಮಾನಾರ್ಥಕ ಪದಗಳು

 ಒಂದೇ ಅರ್ಥವನ್ನು ಹೊಂದಿರುವ ಪದಗಳನ್ನು 'ಸಮಾನಾರ್ಥಕ ಪದಗಳು' ಎಂದು ಕರೆಯಲಾಗುತ್ತದೆ. ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯವೆಂದರೆ, ಈ ಪದಗಳಲ್ಲಿ ಅರ್ಥದ ಸಾಮ್ಯತೆಯ ಹೊರತಾಗಿಯೂ, ಅವುಗಳ ಬಳಕೆಯಲ್ಲಿ ವ್ಯತ್ಯಾಸವಿರುವ ಸಾಧ್ಯತೆ ಇದೆ. ಪ್ರತಿಯೊಂದು ಪದದ ಬಳಕೆಯು ಸಂದರ್ಭ ಮತ್ತು ಸ್ಥಳಕ್ಕೆ ಅನುಗುಣವಾಗಿ ಬದಲಾಗುತ್ತದೆ.

ಕೆಲವು ನಿರ್ದಿಷ್ಟ ಸಮಾನಾರ್ಥಕ ಪದಗಳನ್ನು ಕೆಳಗೆ ನೀಡಲಾಗಿದೆ.

 

1

ನೀರು

ಜಲ, ಅಂಬು, ಪಯ, ಉದಕ 

2

ಸಮುದ್ರ

ಜಲಧಿ, ಅಂಬುಧಿಶರಧಿ, ಕಡಲು, ವಾರಿಧಿ, ರತ್ನಾಕರ , ಅಬ್ದಿ

3

ಮೋಡ

ಮೇಘ, ಅಂಬುದ, ಮುಗಿಲು, ವಾರಿದ, ಘನ, ಅಬ್ದ   

4

ಕಮಲ

ಜಲಜ, ಅಂಬುಜ, ನೀರಜ, ಪಂಕಜ, ವಾರಿಜ, ತಾವರೆ, ಅರವಿಂದ, ಪದ್ಮ, ನಳಿನ, ಇಂದಿವರ, ರಾಜೀವ, ಪುಷ್ಕರ  

5

ಕೈ

ಹಸ್ತ, ಕರ, ಪಾಣಿ

6

ಆನೆ

ಹಸ್ತಿ , ಕರಿ , ಗಜ, ಕುಂಜರ

7

ದುಂಬಿ

ಮಿಲಿಂದ, ಭ್ರಮರ, ಮಧುಪ, ಮಧುಕರ, ಭೃಂಗ  

8

ಕಣ್ಣು

ನಯನ, ಅಕ್ಷಿ , ಚಕ್ಷು, ಲೋಚನ, ನೇತ್ರ

9

ಗೆಳೆಯ

ಮಿತ್ರ, ಸಖ, ಸ್ನೇಹಿತ,ಸಹಪಾಠಿ, ಸಹಚರ

10

ಸೂರ್ಯ

ನೇಸರ , ರವಿ, ದಿನಕರ, ಭಾನು, ಭಾಸ್ಕರ, ಪ್ರಭಾಕರ, ದೀನೇಶ, ಮಾರ್ತಾಂಡ, ಅರ್ಕ, ಛಾಯಾಪತಿ, ದಿವಾಕರ   

11

ರಾಜ

ಅರಸ, ದೊರೆ, ಭೂಪತಿ , ಮಹಿಮತಿ , ನರೇಶ, ನೃಪತಿ, ಭೂಪಾಲ, ಅಧಿಪತಿ

12

ದೇವರು

ಭಗವಂತ, ಈಶ್ವರ, ಪರಮಾತ್ಮ, ಪ್ರಭ, ದೈವ, ಪರಮೇಶ್ವರ, ವಿಧಾತಾ 

13

ಮನೆ

ಆಲಯ, ಗೃಹ, ನಿಕೇತನ, ಸದನ

14

ಗಣೇಶ

ಗಜಾನನ, ಲಂಬೋದರ, ವಿನಾಯಕ, ಏಕದಂತ, ಗೌರಿಸುತ,  ಗಣಪತಿ, ಕಪಿಲ, ಭಾಲಚಂದ್ರ, ಹೇರಂಭ 

15

ಮಗ

ಪುತ್ರ, ಕುವರ, ಸುತ, ಅತ್ಮಜ, ತನಯ, ತನುಜ, ಸೂನು

16

ಮಗಳು

ಪುತ್ರಿ, ಸುತೆ, ಕುಮಾರಿ, ಅತ್ಮಜೆ, ತನಯೇ, ತನುಜೆ  

17

ತಂದೆ

ಪಿತ, ಅಪ್ಪ , ಅಯ್ಯ , ಜನಕ

18

ತಾಯಿ

ಅಮ್ಮ, ಅಬ್ಬೆ, ಜನನಿ, ಮಾತೆ, ಅವ್ವ

19

ಆಕಾಶ

ಆಗಸ, ಗಗನ, ಬಾನು, ಅಂತರಿಕ್ಷ , ನಭ, ವ್ಯೋಮ, ಮಹಾನೀಲ, ಅಂಬರ, ಖಗೋಳ, ನಭಮಂಡಲ   

20

ಭೂಮಿ

ಮಹಿ, ಪೃಥ್ವಿ, ಭೂ, ನೆಲ, ಧರಣಿ, ಧರೆ, ಧರಿತ್ರಿ, ವಸುಂಧರೆ, ಇಳೆ, ವಸುಧೆ

21

ಚಂದ್ರ

ಚಂದಿರ, ಹಿಮಕರ, ಶಶಿ, ಹಿಮಾಂಶು, ರಾಕೇಶ, ತಿಂಗಳು, ನಿಶಾಕರ, ರಜನೀಶ, ಮಾಯಾಂಕ, ಮೃಗಾಂಕ

22

ರಾತ್ರಿ

ನಿಶಾ, ರಜನಿ, ಶರ್ವರಿ, ಯಾಮಿನಿ 

23

ನದಿ

ಹೊಳೆ, ಸರಿತಾ, ಹೊನಲು, ವಾಹಿನಿ, ತರಂಗಿಣಿ, ಪ್ರವಾಹಿನಿ

24

ಪರ್ವತ

ಗಿರಿ, ಗುಡ್ಡ, ಬೆಟ್ಟ, ಅಚಲ, ಶೈಲ, ತುಂಗ, ಮಲೆ

25

ಬೆಂಕಿ

ಅಗ್ನಿ, ಅನಲ, ಜ್ವಾಲಾ, ಪಾವಕ

26

ಕಲ್ಲು

ಶಿಲೆ, ಪಾಷಾಣ, ಶೈಲ, ಶಿಲ್ಪ

27

ಕಾಡು

ಅರಣ್ಯ, ಅಡವಿ, ವನ, ಕಾನನ, ಅಟವಿ

28

ಹಾಲು

ಕ್ಷೀರ, ಪಯ, ದುಗ್ಧ

29

ಸ್ಮಶಾನ

ಮಸಣ, ರುದ್ರಭೂಮಿ

30

ಪಾರ್ವತಿ

ಶೈಲಜಾ, ಗೌರಿ, ಗಿರಿಜಾ, ದಾಕ್ಷಾಯಿಣಿ 

31

ಅಮೃತ

ಅಮರ್ದು, ಸುಧೆ, ಪಿಯೂಷ, ಸೋಮ

32

ರಾಕ್ಷಸ

ಅಸುರ, ದಾನವ, ರಕ್ಕಸ, ನಿಶಾಚರ

33

ಕತ್ತಲು

ತಮ, ಅಂಧಕಾರ, ತಿಮಿರ, ತಮಸ್

34

ಪಂಡಿತ

ಕೋವಿದ, ಜ್ಞಾನಿ, ಬಲ್ಲವ, ಪ್ರಾಜ್ಞ, ವಿದ್ವಾನ

35

ಪರೋಪಕಾರ

ಹಿತ, ಉಪಕಾರ, ಸಹಾಯ, ಪರಹಿತ

36

ಬ್ರಾಹ್ಮಣ

ಹಾರವ, ದ್ವಿಜ, ವಿಪ್ರ

37

ಕೊಳಲು

ವೇಣು, ವಂಶಿ , ಮುರಳಿ

38

ಗಂಗೆ  

ಭಾಗೀರಥಿ, ಜಾಹ್ನವಿ, ಮಂದಾಕಿನಿ, ಸುರನದಿ, ದೇವನದಿ, ತ್ರಿಪಥಗಾ, ವಿಶ್ನುಪಗಾ  

39

ಯಮುನೆ

ಕಾಲಿಂದಿನಿ,  ಸುರ್ಯಸುತೆ, ತರಣಿಜಾ, ಅರ್ಕಜಾ , ಜಮುನಾ  ನೀಲಂಬರಾ

40

ಶಿವ

ಶಂಕರ, ಅಶುತೋಶ, ಈಶಾನ, ವಾಮದೇವ, ಹರ, ನೀಲಕಂಠ, ಚಂದ್ರಮೌಳಿ, ರುದ್ರ, ನಟರಾಜ, ಮಹೇಶ, ಗಂಗಾಧರ 

41

ಲಕ್ಷ್ಮೀ

ಶ್ರೀ, ಲಕುಮಿ, ರಮಾ, ಇಂದಿರಾ, ಹರಿಪ್ರಿಯಾ, ಪದ್ಮಜಾ,

42

ವಿಷ್ಣು

ಹರಿ, ನಾರಾಯಣ, ಜನಾರ್ದನ , ಲಕ್ಷ್ಮಿಕಾಂತ, ಪದ್ಮನಾಭ, ಮುಕುಂದ, ಲಕ್ಷ್ಮೀಶ , ಶ್ರೀಕಾಂತ, ರಮಾಕಾಂತ, ಅನಂತ, ಅಚ್ಯುತ, ವನಮಾಲಿ

43

ಹಕ್ಕಿ

ಪಕ್ಷಿ, ಖಗ, ವಿಹಂಗ, ನಭಚರ  

44

ಮಳೆ

ವರ್ಷಾ, ವೃಷ್ಟಿ

45

ಗಾಳಿ

ವಾಯು, ಸಮೀರ, ಅನಿಲ, ಪವನ, ಪವಮಾನ

46

ಕೃಷ್ಣ

ಮುರಾರಿ, ಗೋಪಾಲ, ಗೋವಿಂದ, ಪಾರ್ಥಸಾರಥಿ, ಮುರಳಿಧರ, ಮಧುಸೂದನ, ಮೋಹನ, ಗೋಪಿವಲ್ಲಭ, ಗಿರಿಧರ, ಚಕ್ರಪಾಣಿ

47

ರಾಮ

ಪುರುಷೋತ್ತಮ , ರಾಘವ, ಸೀತಾಪತಿ, ರಘುಪತಿ, ರಘುನಾಥ

48

ಸೀತೆ

ವೈದೇಹಿ, ಜಾನಕಿ, ಮೈಥಿಲಿ

49

ಕುದುರೆ

ಅಶ್ವ , ತುರುಗ, ಹಯ

50

ಅಧ್ಯಾಪಕ

ಶಿಕ್ಷಕ, ಗುರು, ಆಚಾರ್ಯ, ಉಪಾಧ್ಯಾಯ

51

ಕವನ

 ಪದ್ಯ, ಕಾವ್ಯ , ಹಾಡು, ಕವಿತೆ

52

ಹೂವು

ಪುಷ್ಪ, ಕುಸುಮ, ಸುಮನ, ಪ್ರಸೂನ  

53

ಗುಡಿ

ದೇವಾಲಯ, ಮಂದಿರ, ಧಾಮ

54

ಕತ್ತಿ

ಖಡ್ಗ, ಅಲಗು, ಅಸಿ

55

ಅಣ್ಣ

ಅಗ್ರಜ, ಭ್ರಾತೃ , ಹಿರಿಯಣ್ಣ

56

ಅಕ್ಕ

ಅಗ್ರಜೆ, ಹಿರಿಯಕ್ಕ

57

ಸ್ತ್ರೀ

ಮಾನಿನಿ, ಮಹಿಳೆ, ಹೆಣ್ಣು, ಅಂಗನೆ, ಲಲನೆ

58

ಹಾವು

ಸರ್ಪ, ಭುಜಂಗ, ನಾಗ, ಪನ್ನಗ, ಶೇಷ, ಅಹಿ, ಉರಗ , ಫಣಿ

59

ಮದುವೆ

ಲಗ್ನ , ವಿವಾಹ, ಕಲ್ಯಾಣ

60

ಮಂಗ

ಕೋತಿ, ಕಪಿ, ವಾನರ, ಮರ್ಕಟ, ಕೋಡಗ 

61

ಗಂಡ

ರಮಣ , ಪತಿ, ವಲ್ಲಭ , ಕಾಂತ, ಪ್ರಿಯ

62

ಹೆಂಡತಿ

ಪತ್ನಿ , ವಲ್ಲಭೆ , ಕಾಂತೆ , ಭಾರ್ಯ, ಅರ್ಧಾಂಗಿನಿ, ಪ್ರಿಯೆ

63

ಧನ

ಹಣ, ನಗದು,  ಕಾಂಚಾಣ , ಸಿರಿ, ದುಡ್ಡು , ಕಾಸು

64

ಧನಿಕ

ಶ್ರೀಮಂತ, ಬಲ್ಲಿದ , ಸಿರಿವಂತ

65

ಕಾಮ

ಮಾರ, ಮನ್ಮಥ , ಮದನ , ಅನಂಗ, ಕಂದರ್ಪ, ರತಿಪತಿ, ಮನಸಿಜ  

66

ದಾರಿ

ಪಥ , ಮಾರ್ಗ

67

ಮರ

ವೃಕ್ಷ , ತರು , ಪಾದಪ

68

ಸುವಾಸನೆ

ಪರಿಮಳ, ಸಂಪದ , ಸುಗಂಧ, ಕಂಪು, ಸೌರಭ      

69

ಮಗು

ಕೂಸು, ಕಂದ, ಪಾಪ, ಶಿಶು, ಹಸುಳೆ

70

ಬಂಗಾರ

ಚಿನ್ನ , ಹೇಮ, ಸುವರ್ಣ

71

ಬಾಯಾರಿಕೆ

ತೃಷೆ, ತೃಷ್ಣಾ, ದಾಹ

72

ನಕ್ಷತ್ರ

ತಾರೆ , ಚುಕ್ಕೆ

73

ಯುದ್ಧ 

ಸಮರ, ಕದನ, ಕಾಳಗ, ರಣ, ಧುರ

74

ದ್ರೌಪದಿ

ಪಾಂಚಾಲಿ, ಕೃಷ್ಣೆ, ಯಾಜ್ಞಸೇನಿ

75

ಅರ್ಜುನ

ಪಾರ್ಥ, ಕಿರೀಟಿ, ಸವ್ಯಸಾಚಿ, ಗಾಂಢೀವಿ, ಧನಂಜಯ 

76

ಬಾವುಟ

ಧ್ವಜ, ಕೇತನ, ಗುಡಿ, ಪತಾಕ

77

ಹುಲಿ

ವ್ಯಾಘ್ರ, ಪುಲಿ, ಪುಂಡರೀಕ

78

ಸಿಂಹ

ವನರಾಜ. ಕೇಸರಿ, ಮೃಗರಾಜ

79

ಆಕಳು

ಗೋವು, ದನ, ತುರು , ರಾಸು, ಧೇನು 

80

ಹಣೆ

ಲಲಾಟ , ನೊಸಲು, ಭಾಲ, ಪಾಲ, ನಿಟಿಲ

81

ತಲೆ

ಮಂಡೆ , ಮಸ್ತಕ, ಶಿರ, ಕಪಾಲ 

82

ಮುಖ

ವದನ, ಮೊಗ, ವಕ್ತ್ರ, ಮೋರೆ, ಆನನ

83

ರಕ್ತ

ರುಧಿರ, ನೆತ್ತರು

84

ದೇಹ

ಶರೀರ, ಕಾಯ , ತನು, ಒಡಲು

85

ಸಾವು

ಮರಣ, ಜವ , ನಿಧನ , ಮಡಿ ,

86

ತೊಂದರೆ

ಉಪಟಳ ,ಉಪದ್ರವ, ಪೀಡನೆ

87

ವಿನಂತಿ

ಬಿನ್ನಹ , ವಿಜ್ಞಾಪನೆ, ಪ್ರಾರ್ಥನೆ

88

ಬುದ್ಧಿ

ಚಿತ್ತ, ಮನಸ್ಸು ,ಮನ, ಅಂತರಂಗ

89

ಚೆಂದ

ಸೊಗಸು, ಸುಂದರ, ಚೆನ್ನ

90

ಸಂತೋಷ

ಸಂತಸ , ಆನಂದ, ಖುಷಿ, ಪ್ರಮೋದ, ಹರ್ಷ, ಮೋದ   

91

ಅನುಪಮ

ಅನನ್ಯ , ಅಪೂರ್ವ

92

ಅವಮಾನ

ಅಪಮಾನ, ತಿರಸ್ಕಾರ,ನಿರಾದರ

93

ಅಪ್ಸರೆ

ದೇವಾಂಗನೆ , ಸುರಾಂಗನೆ, ದೇವಕನ್ಯೆ

94

ಕಣ್ಣೀರು

ಕಂಬನಿ, ಅಶ್ರು

95

ಆತ್ಮ

ಚೇತನ, ಚೈತನ್ಯ, ಜೀವ, ವಿಭು

96

ಮೊದಲು

ಆರಂಭ , ಶುರು, ಆದಿ, ಪ್ರಥಮ, ಮುಂಚೂಣಿ

97

ಇಂದ್ರ

ಸುರೇಶ, ದೇವರಾಜ, ಪುರಂಧರ, ವಜ್ರಿ, ದೇವೇಶ, ಸುರಪತಿ, ಶಚಿಪತಿ, ಸಹಸ್ರಾಕ್ಷ

98

ಆಸೆ

ಅಭಿಲಾಷೆ, ಇಷ್ಟ, ಇಚ್ಛೆ, ಆಕಾಂಕ್ಷೆ, ಕಾಮನೆ, ಮನೋರಥ, ವಾಂಛೆ

99

ಪುರಸ್ಕಾರ

ಬಹುಮಾನ , ಪಾರಿತೋಷಕ, ಇನಾಮು, ಕಾಣಿಕೆ

100

ಹಬ್ಬ

ಉತ್ಸವ, ಪರ್ವ, ಸಮಾರೋಹ, ಪರ್ಬ 

 

 

47 comments:

  1. ಸರ್ವಾಂಗೀಣ ಪದದ ಸಮಾನಾರ್ಥಕ ಪದ

    ReplyDelete
    Replies
    1. ಬಹುಮುಖಿ, ಸುತ್ತುಮುತ್ತು, ಎಲ್ಲವೂ ಎಂಬ ಅರ್ಥಗಳು ಬರುತ್ತವೆ

      Delete
    2. ಸರ್ವತೋಮುಖ

      Delete
  2. ಉದಾತ್ತ ಪದದ ಸಮಾನಾರ್ಥಕ ಪದ ಯಾವುದು

    ReplyDelete
  3. ಹೊಗೆ ಪದದ ಸಮನಾದ ಪದ

    ReplyDelete
  4. ನಿರ್ವಹಣೆ ಸಮನಾರ್ಥಕ ಪದ

    ReplyDelete
    Replies
    1. ವ್ಯವಸ್ಥಾಪನೆ, ಮೇಲ್ವಿಚಾರಣೆ ಮಾಡು, ನಿಭಾಯಿಸು

      Delete
  5. ಚರಟ ಪದದ ಸಮಾನಾರ್ಥಕ ಪದಗಳು

    ReplyDelete
  6. ಪರಿಸರದ ಸಮಾನಾರ್ಥಕ
    ಪದ

    ReplyDelete
  7. ಪರಿಸರ ಸಮಾನಾರ್ಥಕ ಪದ.ಪ್ರಕೃತಿಯನ್ನು ಹೊರತು ಪಡಿಸಿ

    ReplyDelete
  8. ಪರಿಸರಕ್ಕೆ ವಾತಾವರಣ, ಸುತ್ತು-ಮುತ್ತು, ಆವರಣ ಎನ್ನಬಹುದು.
    ಪ್ರಕೃತಿಗೆ ನಿಸರ್ಗ ಸಮಾನಾರ್ಥಕ ಪದವಾಗಿದೆ.

    ReplyDelete
  9. ಪರಿಸರಕ್ಕೆ ವಾತಾವರಣ, ಸುತ್ತು-ಮುತ್ತು ಅಥವಾ ಆವರಣ ಎನ್ನಬಹುದು.
    ಪ್ರಕೃತಿಗೆ ನಿಸರ್ಗ ಸಮಾನಾರ್ಥಕ ಪದವಾಗಿದೆ.

    ReplyDelete
  10. ಔದಾರ್ಯ ಪದದ ಸಮನಾರ್ಥಕ ಪದ ಯಾವುದು

    ReplyDelete
    Replies
    1. ಔದಾರ್ಯ, ಉಪಕಾರ, ಹೃದಯ ವೈಶಾಲ್ಯ, ಉದಾರ ಪ್ರಕೃತಿ

      Delete
  11. ಹ್ರದಯ ಪದದ ಸಮಾನಾರ್ಥಕ ಪದ ಯಾವುದು

    ReplyDelete
  12. ತತ್ತಿ ಪದದ ಸಮಾನಾರ್ಥಕ ಪದ

    ReplyDelete
  13. ಕಂಪನಿ ಪದದ ಸಮಾನಾರ್ಥಕ ಪದ

    ReplyDelete
  14. ವಾಹನ ಪದದ ಸಮಾನಾರ್ಥಕ ಪದ

    ReplyDelete
    Replies
    1. ಯಾನ, ಸವಾರಿ, ಗಾಡಿ, ಬಂಡಿ

      Delete
  15. ಕತ್ತಲು ಪದದ ಸಮಾನಾರ್ಥಕ ಪದ

    ReplyDelete
  16. ಮದುವೆ ಮನೆ ಪದದ ಸಮಾನಾರ್ಥಕ ಪದ

    ReplyDelete
    Replies
    1. ಕಲ್ಯಾಣ ಮಂಟಪ, ಛತ್ರ, ಮಂಗಳ ಕಾರ್ಯಾಲಯ

      Delete
  17. ದಿನಕರ ಪದದ ಸಮಾನಾರ್ಥಕ ಪದ

    ReplyDelete
    Replies
    1. ಸೂರ್ಯ, ರವಿ, ಭಾಸ್ಕರ, ನೇಸರ, ಭಾನು

      Delete
  18. ಹೀನಸ್ಥಿತಿ ಸಮಾನಾರ್ಥಕ ಪದ

    ReplyDelete
  19. ಗಿಡ ಸಮಾನಾರ್ಥಕ ಪದ ಯಾವುದು?

    ReplyDelete
    Replies
    1. ಸಸ್ಯ, ಮೂಲಿಕೆ

      Delete
  20. ಹಸು ಪದದ ಸಮಾನಾರ್ಥಕ ಪದ?

    ReplyDelete
    Replies
    1. ಗೋವು, ಆಕಳು, ಧೇನು

      Delete
  21. ದುಡ್ಡು ಪದದ ಸಮಾನಾರ್ಥಕ ಪದ?

    ReplyDelete
    Replies
    1. ಹಣ, ರೊಕ್ಕ, ನಗದು, ಪೈಸಾ

      Delete
  22. ಶೇಷಲೋಕ ಪದದ ಸಮಾನಾರ್ಥಕ ಪದ?

    ReplyDelete
  23. ರಾಜರಿಗೆ ಗಾಳಿ ಬೀಸುವ ಸಾಧನ

    ReplyDelete
  24. ಅಂತರಂಗ ಈ ಪದದ ಅರ್ಥ

    ReplyDelete
  25. Sri padada samanarthakka pada yavudu

    ReplyDelete
  26. ನಕ್ರ ಪದದ ಸಮಾನಾರ್ಥಕ ಪದ ಯಾವುದು?

    ReplyDelete
  27. ನದಿ ಸಮಾನಾರ್ತಕ ಪದಗಳು

    ReplyDelete