SSLC ಕನ್ನಡ ವ್ಯಾಕರಣ - 2

 1. ‘ಮಕ್ಕಳು ಚಿಟಚಿಟನೆ ಚೀರಿದರು’ ಈ ವಾಕ್ಯದಲ್ಲಿ ಗೆರೆ ಎಳೆದ ಪದ – 

a. ಅನುಕರಣಾವ್ಯಯ 

2. ‘ನೋಡಿ ನೋಡಿ’ ಈ ಪದ ಈ ವ್ಯಾಕರಣಾಂಶಕ್ಕೆ ಸೇರಿದೆ –

a. ದ್ವಿರುಕ್ತಿ 

3. ಗುಂಪಿಗೆ ಸೇರದ ಪದ ಯಾವುದು ಆಟಪಾಠ, ನಡೆನಡೆ, ಹೌದು ಹೌದು, ಸಾಕುಸಾಕು –

a. ಆಟಪಾಠ (ಏಕೆಂದರೆ ಆಟಪಾಠ ಜೋಡು ನುಡಿ ಉಳಿದವುಗಳೆಲ್ಲಾ ದ್ವಿರುಕ್ತಿಗಳು) 

4. ‘ಬೇಗ ಬೇಗ’ ಇದು ಈ ವ್ಯಾಕರಣಾಂಶಕ್ಕೆ ಉದಾಹರಣೆ – 

a. ದ್ವಿರುಕ್ತಿ 

5. ‘ಕಪ್ಪಕಾಣಿಕೆ’ ಪದದಲ್ಲಿರುವ ವ್ಯಾಕರಣಾಂಶ – 

a. ಜೋಡುನುಡಿ 

6. ‘ಪಟಪಟ, ಧರಣಿಮಂಡಲ, ನಡೆನಡೆ, ರೀತಿನೀತಿ’ ಪದಗಳಲ್ಲಿ ಅನುಕರಣಾವ್ಯಯ ಪದ ಯಾವುದು – 

a. ಪಟಪಟ 

7. ‘ಬಿಟ್ಟು ಬಿಡದೆ ಪಟಪಟನೆ ಸುರಿಯುವ ಮಳೆಯಲ್ಲಿ ಮಕ್ಕಳು ಹಿಂದೆ ಹಿಂದೆ ನೋಡದೆ ಆಡಿದರು’ ಈ ವ್ಯಾಕರಣ ವಾಕ್ಯದಲ್ಲಿರುವ ಅನುಕರಣಾವ್ಯಯ ಪದ 

a. ಪಟಪಟನೆ 

8. ‘ಕಾಡಿನ ದಾರಿಯಲ್ಲಿ ಹಾವು ಸರಸರನೆ ಹೋಯಿತು’ ಗೆರೆ ಎಳೆದ ಪದ 

a. ಅನುಕರಣಾವ್ಯಯ 

9. ‘ಪ್ರವಾಹದಲ್ಲಿ ಜನ ಮನೆ ಮಠಗಳನ್ನು ಕಳೆದುಕೊಂಡು ಊರೂರು ತಿರುಗಾಡಿದರು’ ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದ -  

a. ಊರೂರು 

10. ‘ಕಾಡಿಗೆ ಮತ್ತೆ ಮತ್ತೆ ಬೆಂಕಿ ಬಿದ್ದು ಧಗಧಗನೆ ಉರಿದು ಮರಗಳೆಲ್ಲ ನಾಶವಾದವು’ ಈ ವಾಕ್ಯದಲ್ಲಿರುವ ಅನುಕರಣಾವ್ಯಯ ಪದ –

a. ಧಗಧಗ 

11. ಅಭಿಪ್ರಾಯದ ವಿವರಣೆ ಇಂತಿದೆ ಎನ್ನುವುದನ್ನು ತಿಳಿಸುವಾಗ ಬಳಸುವ ಚಿಹ್ನೆ –

a. ವಿವರಣಾತ್ಮಕ ಚಿಹ್ನೆ 

12. ಪ್ರಶ್ನೆಗಳನ್ನು ಬರೆಯುವ ಸಂದರ್ಭದಲ್ಲಿ ಪದ ಅಥವಾ ವಾಕ್ಯದ ಅಂತ್ಯದಲ್ಲಿ ಬಳಸುವ ಚಿಹ್ನೆ –

a. ಪ್ರಶ್ನಾರ್ಥಕ ಚಿಹ್ನೆ 

13. ವಾಕ್ಯದ ಪೂರ್ಣಾರ್ಥ ಕ್ರಿಯೆಯನ್ನು ಸೂಚಿಸುವ ಚಿಹ್ನೆ – 

a. ಪೂರ್ಣವಿರಾಮ 

14. ‘ಒಂದು ದಿನ ನರಿಯು ಕೊಕ್ಕರೆ (ನೀರು ಹಕ್ಕಿ) ಯನ್ನು ಊಟಕ್ಕೆ ಕರೆಯಿತು’ ಈ ವಾಕ್ಯದಲ್ಲಿರುವ ವಿವರಣಾತ್ಮಕ ಚಿಹ್ನೆ 

a. ಆವರಣ ಚಿಹ್ನೆ 

15. ಬರವಣಿಗೆಯಲ್ಲಿ ಹರ್ಷ, ಅಚ್ಚರಿ, ದುಃಖ, ಕೋಪ ಇತ್ಯಾದಿ ಭಾವನೆಗಳನ್ನು ವ್ಯಕ್ತಪಡಿಸಲು ಬಳಸುವ ಲೇಖನ ಚಿಹ್ನೆಗಳನ್ನು ಹೀಗೆಂದು ಕರೆಯುತ್ತಾರೆ – 

a. ಭಾವಸೂಚಕ ಚಿಹ್ನೆ 

16. ‘ನಿನ್ನ ಹೆಸರೇನು?’ ಇಲ್ಲಿ ಬಳಸಿರುವ ಲೇಖನ ಚಿಹ್ನೆ – 

a. ಪ್ರಶ್ನಾರ್ಥಕ ಚಿಹ್ನೆ 

17. ‘ದ. ರಾ. ಬೇಂದ್ರೆ ಅವರ ಭಾವಗೀತೆಗಳನ್ನು ಕೇಳಿ ವಿದ್ಯಾರ್ಥಿಗಳು ಮೈಮರೆಯುವರು’ ಈ ವಾಕ್ಯವು –

a. ಮಿಶ್ರವಾಕ್ಯ

18. ಒಂದೇ ಪೂರ್ಣಕ್ರಿಯಾಪದದೊಡನೆ ಸ್ವತಂತ್ರ ಮತ್ತು ಖಚಿತ ಅರ್ಥ ಕೊಡುವ ವಾಕ್ಯಗಳೇ ಈ ವಾಕ್ಯ –

a. ಸಾಮಾನ್ಯ ವಾಕ್ಯ 

19. ‘ಮಕ್ಕಳು ಹಾಲನ್ನು ಕುಡಿಯುತ್ತಾರೆ ಮತ್ತು ಹಣ್ಣನ್ನು ತಿನ್ನುತ್ತಾರೆ’ ಈ ವಾಕ್ಯವು – 

a. ಸಂಯೋಜಿತವಾಕ್ಯ 

20. ಉಪಮೇಯಕ್ಕಿರುವ ಹೆಸರು – 

a. ವರ್ಣ್ಯ 

21. ಯಾವ ವಸ್ತುವನ್ನು ಆಧಾರವಾಗಿಟ್ಟುಕೊಂಡು ಉಪಮೆಯನ್ನು ವರ್ಣಿಸಲಾಗಿದೆಯೋ ಅದನ್ನು _________ ಎನ್ನುತ್ತಾರೆ – 

a. ಉಪಮಾನ (ವರ್ಣಕ)

22. ‘ಗೌರಿಯ ಮುಖ ಕಮಲದಂತೆ ಅರಳಿತ್ತು’ ಈ ವಾಕ್ಯದಲ್ಲಿರುವ ಸಮಾನಧರ್ಮ – 

a. ಅರಳಿತ್ತು 

23. ‘ಹೂವಿನ ಹಾಗೆ ಸುಂದರ’ ಈ ಉಪಮಾಲಂಕಾರದಲ್ಲಿ ಉಪಮಾನ –

a. ಹೂ 

24. ಉಪಮಾನವೇ ಉಪಮೇಯವೆಂದು ರೂಪಿಸಿ ಅಭೇದತೆಯನ್ನು ಹೇಳುವ ಅಲಂಕಾರ – 

a. ರೂಪಕ 

25. ಪದ್ಯ ರಚನೆಯ ನಿಯಮಗಳನ್ನು ವಿವರಿಸುವ ಶಾಸ್ತ್ರ –

a. ಛಂದಸ್ಸು 

26. ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಆದಿ ಮದ್ಯ ಅಂತ್ಯದಲ್ಲಿ ನಿಯತವಾಗಿ ಬಂದರೆ ________ ಎನ್ನುತ್ತಾರೆ – 

a. ಪ್ರಾಸ 

27. ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ – 

a. ಯತಿ

28. ಗಣದಲ್ಲಿ ಎಷ್ಟು ವಿಧ – 

a.

29. ಎರಡು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುವವರು – 

a. ಗುರು 

30. ಅಕ್ಷರವನ್ನು ಉಚ್ಚರಿಸಲು ಬೇಕಾಗುವ ಕಾಲವನ್ನು ಹೀಗೆ ಕರೆಯುವರು – 

a. ಮಾತ್ರೆ 

31. ಮೂರು ಸಾಲಿನ ಪದ್ಯಕ್ಕೆ ಹೀಗೆನ್ನುವವರು –

a. ತ್ರಿಪದಿ 

32. ಇದು ಅಚ್ಚ ಕನ್ನಡದ ದೇಶಿ ಛಂದಸ್ಸು – 

a. ತ್ರಿಪದಿ  

33. ಮುಕುತಿ, ಬಕುತಾ, ಜನುಮ, ವ್ಯವಸಾಯ ಈ ಪದಗಳಲ್ಲಿ ತತ್ಸಮ ರೂಪಕ್ಕೆ ಉದಾಹರಣೆಯಾಗಿರುವ ಪದ – 

a. ವ್ಯವಸಾಯ 

34. ‘ವಿದ್ಯೆ’ ಈ ಪದದ ತದ್ಭವ ರೂಪ – 

a. ಬಿಜ್ಜೆ 

35. ‘ಜೀವವೊಂದು’ ಈ ಪದದಲ್ಲಿರುವ ಸಂಧಿ –

a. ಆಗಮ ಸಂಧಿ 

36. ತತ್ತ್ವಪದ, ಕಾವ್ಯವಾಚನ, ಹೆಗ್ಗುರಿ, ಮೈಮರೆತು ಈ ಪದಗಳಲ್ಲಿ ಕರ್ಮಧಾರೆಯ ಸಮಾಸಕ್ಕೆ ಉದಾಹರಣೆಯಾಗಿರುವ ಪದ – 

a. ಹೆಗ್ಗುರಿ 

37. ಪ್ರಧಾನ ವಾಕ್ಯದಲ್ಲಿಯ ಅನೇಕ ಉಪವಾಕ್ಯಗಳು ಅಂತ್ಯದಲ್ಲಿ ಬಳಸುವ ಲೇಖನ ಚಿಹ್ನೆ – 

a. ಅರ್ಧವಿರಾಮ 

38. ‘ಅಬ್ಬಾ! ಈ ವನ ಎಷ್ಟು ಸುಂದರವಾಗಿದೆ’ ಈ ವಾಕ್ಯದಲ್ಲಿ ಬಳಸಿರುವ ಲೇಖನ ಚಿಹ್ನೆ – 

a. ಭಾವಸೂಚಕ 

39. ‘ಬ್ರಹ್ಮ’ ಈ ಪದದ ತದ್ಭವ ರೂಪ – 

a. ಬೊಮ್ಮ 

40. ಎರಡೂ ಮಾತ್ರ ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ______ ಎಂದು ಕರೆಯುತ್ತಾರೆ – 

a. ದೀರ್ಘಸ್ವರ 

41. ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಗಳ ಸಂಖ್ಯೆ –

a. 34 

42. ಬರವಣಿಗೆಯಲ್ಲಿ ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ತಿಳಿಸಲು ಬಳಚು ಬಳಸುವ ಚಿಹ್ನೆ – 

a. ಉದ್ಧರಣ 

43. ‘ಅವನು’ ಈ ಪದವು ಈ ಸರ್ವನಾಮಕ್ಕೆ ಉದಾಹರಣೆಯಾಗಿದೆ – 

a. ಪ್ರಥಮ ಪುರುಷ 

44. ‘ಗೌರಿಯ ಮುಖ ಕಮಲದಂತೆ ಅರಳಿತ್ತು’ ಈ ವಾಕ್ಯದಲ್ಲಿ ಬಂದಿರುವ ಉಪಮೇಯ – 

a. ಕಮಲ 

45. ತಂದೆ ತಾಯಿ ಹಿರಿಯರಿಗೆ ಪತ್ರ ಬರೆಯುವಾಗ ಬಳಸುವ ಮುಕ್ತಾಯದ ಗೌರವ ಸಂಬೋಧನೆ – 

a. ನಮಸ್ಕಾರಗಳು 

46. ‘ಸತ್ಪುರುಷರ ಸಹವಾಸದಲ್ಲಿ ಶರೀಫರು ಬಾಳಿಬದುಕಿದರು’ ಇಲ್ಲಿ ಸಪ್ತಮೀ ವಿಭಕ್ತಿಪ್ರತ್ಯಯದಿಂದ ಕೂಡಿರುವ ಪದ – 

a. ಸಹವಾಸದಲ್ಲಿ 

47. ‘ಕಲಶ’ ಈ ಪದದ ತದ್ಭವ ರೂಪ – 

a. ಕಳಸ 

48. ‘ಅರಮನೆ’ ಪದವು ಈ ಸಮಾಸಕ್ಕೆ ಉದಾಹರಣೆ – 

a. ತತ್ಪುರುಷ 

49. ರೋಗರುಜಿನ, ಕಣಕಣ, ಧಮನಿ ಧಮನಿ, ಕಿಡಿಕಿಡಿ ಈ ಪದಗಳಲ್ಲಿ ಜೋಡುನುಡಿಗೆ ಉದಾಹರಣೆಯಾಗಿರುವ ಪದ – 

a. ರೋಗರುಜಿನ 

50. ‘ಹಿಮಾಲಯ’ ಇದು ಈ ನಾಮಪದಕ್ಕೆ ಉದಾಹರಣೆಯಾಗಿದೆ –

a. ಅಂಕಿತನಾಮ 

51. ‘ಕೈಮುಗಿ’ ಈ ಪದದಲ್ಲಿರುವ ಸಮಾಸ – 

a. ಕ್ರಿಯಾಸಮಾಸ 

52. ನೀನು, ತಾನು, ನಾನು, ಇವನು ಈ ಪದಗಳಲ್ಲಿ ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ – 

a. ತಾನು 

53. ‘ಭಾಗವತರು ಬಯಲಾಟಗಳಲ್ಲಿ ಪಾತ್ರ ವಹಿಸಿ ಪ್ರೇಕ್ಷಕರ ಕಣ್ಮನಗಳನ್ನು ತಣಿಸುತ್ತಿದ್ದರು’ ಇಲ್ಲಿ ದ್ವಿತೀಯ ವಿಭಕ್ತಿಯಿಂದ ಕೂಡಿರುವ ಪದ – 

a. ಕಣ್ಮನಗಳನ್ನು 

54. ‘ಚೆನ್ನಮ್ಮನು ಮಹಿಳೆ ಮತ್ತು ಮಕ್ಕಳನ್ನು ಅಕ್ಕರೆಯಿಂದ ಕಂಡ ಕರುಣಾಮಯಿ’ ಇದು _____ ವಾಕ್ಯಕ್ಕೆ ಉದಾಹರಣೆ– 

a. ಸಂಯೋಜಿತ ವಾಕ್ಯ 

55. ರಕ್ತಗಾಲಿನ, ಗೋಳಿಲ್ಲದ, ಕುಲವೆನ್ನದ, ಗುಂಡಿಲ್ಲದ ಈ ಪದಗಳಲ್ಲಿ _______ ಆದೇಶಸಂಧಿಗೆ ಉದಾಹರಣೆ – 

a. ರಕ್ತಗಾಲಿನ 

56. ‘ಕಾವ್ಯ’ ಪದದ ತದ್ಭವ ರೂಪ –

a. ಕಬ್ಬ 

57. ಆಕ್ಸಿಜನ್ ಇದು ಈ ಭಾಷೆಯಿಂದ ಬಂದ ಪದವಾಗಿದೆ –

a. ಇಂಗ್ಲೀಷ್ 

58. ________ ಇದು ಪ್ರಧಾನ ವಾಕ್ಯಗಳಲ್ಲಿನ ಉಪವಾಕ್ಯಗಳ ಅಂತ್ಯದಲ್ಲಿ ಬಳಕೆಯಾಗುತ್ತದೆ – 

a. ಅರ್ಧವಿರಾಮ ಚಿಹ್ನೆ (;)

59. ವಿಷಯಕ್ಕೆ ವಿವರಣೆ ನೀಡಲು _______ ವಿರಾಮ ಬಳಕೆಯಾಗುತ್ತದೆ – 

a. ವಿವರಣ ವಿರಾಮ (:) 

60. ಬರವಣಿಗೆಯಲ್ಲಿ ಯಾವುದಾದರೂ ಭಾಗವೊಂದನ್ನು ಅಳವಡಿಸಿದಾಗ ಅದರ ಪ್ರತ್ಯೇಕತೆ ಸೂಚಿಸಲು ಆ ಭಾಗವನ್ನು _______ ಚಿಹ್ನೆಯೊಳಗೆ ಬರೆಯಬೇಕು –

a. ವಾಕ್ಯವೇಷ್ಟನ (ಒಂಟಿ ಉದ್ಧರಣ)

SSLC ವಿಜ್ಞಾನ ವಸ್ತುನಿಷ್ಠ ಪ್ರಶ್ನೆಗಳು -2

 ಈ ವರ್ಷ 2021 ರ SSLC ಪರೀಕ್ಷೆಯನ್ನು MCQ ಮಾದರಿಯಲ್ಲಿ ನಡೆಸಲು ಸರಕಾರವು ನಿರ್ಧರಿಸಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಸ್ತುನಿಷ್ಠ ಪ್ರಶ್ನೋತ್ತರಗಳನ್ನು ನೀಡಲಾಗಿದೆ. 


1.       ಅರಿಶಿಣ ನೀರಿಗೆ ___________ ದ್ರಾವಣವನ್ನು ಬೆರಸಿದಾಗ ಅದು ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ.

a.       ಸೋಡಿಯಂ ಹೈಡ್ರಾಕ್ಸೈಡ್ 

2.       ಮಾನವನ ದೇಹದಲ್ಲಿರುವ ಎಲ್ಲ ಗ್ರಂಥಿಗಳ ನಾಯಕ ಗ್ರಂಥಿ

a.       ಪಿಟ್ಯುಟರಿ

3.       ದೈತ್ಯತೆ ಮತ್ತು ಕುಬ್ಜತೆ ___________ಗ್ರಂಥಿಯ ಅಸಮತೋಲಿತ ಸ್ರವಿಕೆಯಿಂದ ಉಂಟಾಗುತ್ತದೆ

a.       ಪಿಟ್ಯುಟರಿ

4.       ಆಮ್ಲ ಮಳೆಯ pH ಮೌಲ್ಯ___________

a.       5.6 ಕಿಂತ ಕಡಿಮೆ

5.       ಹಣ್ಣಾಗಿ ಬೆಳೆಯುವ ಹೂವಿನ ಭಾಗ ____________

a.       ಅಂಡಾಶಯ

6.      ____________ ತುರಿಕೆ ಗಿಡದ ಎಳೆಗಳ ಮುಳ್ಳುಗಳಲ್ಲಿ ಇರುವ ಆಮ್ಲ

a.       ಮೆಥನಯಿಕ್ ಆಮ್ಲ

7.       ವಿದ್ಯುದಾವೇಶದ ಏಕಮಾನ __________

a.       ಆಮ್ ಮೀಟರ್

8.       ವೋಲ್ಟ್  _______ ಯ ಏಕಮಾನ

a.       ವಿದ್ಯುತ್ ಶಕ್ತಿ

9.       ಹೊಳಪನ್ನು ಹೊಂದಿರುವ ಅಲೋಹ _______

a.       ಅಯೋಡಿನ್

10.   ಮುಟ್ಟಿದರೆ ಮುನಿ ಸಸ್ಯ ತೋರುವ ಅನುವರ್ತನಾ ಚಲನೆ ___________

a.       ಸ್ಪರ್ಶ ಅನುವರ್ತನೆ

11.   ಬೆಳ್ಳಿಯ ಪಾತ್ರೆಗಳನ್ನು ಗಾಳಿಗೆ ತೆರೆದಿಟ್ಟ ಸ್ವಲ್ಪ ಕಾಲದ ನಂತರ ಕಪ್ಪಗಾಗುತ್ತವೆ ಕಾರಣ _________ ನ ಪದರ ಉಂಟಾಗುತ್ತದೆ

a.       ಬೆಳ್ಳಿಯ ಆಕ್ಸೈಡ್

12.   ಹೃದಯದಲ್ಲಿ ರಕ್ತದ ಹಿಮ್ಮುಖ ಹರಿವನ್ನು ತಡೆಯುವ ರಚನೆ ___________

a.       ಕವಾಟಗಳು

13.   ಬೆಳವಣಿಗೆಯನ್ನು ಉತ್ತೇಜಿಸುವ ಸಸ್ಯ ಹಾರ್ಮೋನ್‍ಗಳಿಗೆ ಒಂದು ಉದಾಹರಣೆ

a.       ಆಕ್ಸಿನ್

14.   ಎಲ್ಲ ವಿದ್ಯುತ್ ಉಪಕರಣ ಸ್ವಿಚ್ಗಳಿಗೆ   ಸಂಪರ್ಕಿಸುವ ತಂತಿ

a.       ಸಜೀವ ತಂತಿ

15.   ಉದ್ಯಾನ ಮತ್ತು ಪೈರುಗದ್ದೆಗಳು ___________ ಪರಿಸರ ವ್ಯವಸ್ಥೆಗಳು

a.       ಮಾನವ ನಿರ್ಮಿತ

16.   ದ್ವಿಬಂಧವಿರುವ ಹೈಡ್ರೋಕಾರ್ಬನ್ ___________ ಕುಟುಂಬದ ಮೊದಲ ಸದಸ್ಯ

a.       ಈಥಿನ್

17.   ರಾತ್ರಿಯ ಸಮಯದಲ್ಲಿ ಸಸ್ಯಗಳಲ್ಲಿ ನೀರಿನ ಸಾಗಾಣಿಕೆಗೆ ಕಾರಣ

a.       ವಸ್ತು ಸ್ಥಾನಾಂತರಣ

18.   ಮೂತ್ರಪಿಂಡಗಳಿಗೆ ರಕ್ತವನ್ನು ಶುದ್ಧೀಕರಣಕ್ಕಾಗಿ ಕೊಂಡೊಯ್ಯುವ ರಕ್ತನಾಳ

a.       ರೀನಲ್ ಅಭಿದಮನಿ

19.   ಪ್ರೋಪೇನ್ ನಲ್ಲಿರುವ ಕ್ರಿಯಾಗುಂಪು

a.       ಕೀಟೋನ್

20.   ಅರಣ್ಯ ಕೆರೆಗಳು ___________ ಪರಿಸರ ವ್ಯವಸ್ಥೆಗಳಾಗಿವೆ

a.       ನೈಸರ್ಗಿಕ

21.   ಸಸ್ಯದ ಬೇರುಗಳು ___________ ಕ್ರಿಯೆಯ ಮೂಲಕ ಮಣ್ಣಿನಿಂದ ನೀರನ್ನು ಹೀರಿಕೊಳ್ಳುತ್ತವೆ.

a.       ಕ್ರಿಯಾತ್ಮಕ ಸಾಗಾಣಿಕೆ

22.   ಪ್ಲಾಸ್ಟಿಕ್ ________________ ತ್ಯಾಜ್ಯ

a.       ಜೈವಿಕ ವಿಘಟಗೊಳ್ಳದ

23.   ಆಧುನಿಕ ಆವರ್ತ ಕೋಷ್ಟಕದಲ್ಲಿ ಏಕ ಅಲ್ಯುಮಿನಿಯಂ ಅನ್ನು ಈ ಗುಂಪಿಲ್ಲಿರಿಸಬಹುದು

a.       14

24.   ಪರಾಗಕೊಶಗಳು_________ ಗಳನ್ನು ಒಳಗೊಂಡಿರುವುದು

a.       ಪರಾಗ ಕಣ  

25.   ಪೋಷಣಾ ಸ್ಥರದ ಮೊದಲ ಹಂತದ ಜೀವಿಗಳು _________

a.       ಉತ್ಪಾದಕರು  

26.    ಹಿಮೊಗ್ಲೋಬಿನ್ ಹೊಂದಿರುವ ರಕ್ತದ ಘಟಕ _________

a.       ಕೆಂಪು ರಕ್ತ ಕಣ

27.   ಟರ್ಬೈನನ್ನು ತಿರುಗಿಸಲು  ನೇರವಾಗಿ ನೈಸರ್ಗಿಕ ಶಕ್ತಿಮೂಲವನ್ನು ಉಪಯೋಗಿಸುವ ವಿದ್ಯುದಾಗಾರ

a.       ಜಲ ವಿದ್ಯುತ್ ಸ್ಥಾವರ

28.   ಪರ್ಯಾಯ ವಿದ್ಯುತನ್ನು ನೇರ ವಿದ್ಯುತ್ತಾಗಿ ಪರಿವರ್ತಿಸಲು ಉಪಯೋಗಿಸುವ ಸಾಧನ

a.       ಡಯೋಡ್

29.   ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಸಾಧನ ________

a.       ಸೌರಕೋಶ

30.   ಎರಡು ನರಕೋಶಗಳ ನಡುವಿನ ಅಂತರವನ್ನು _______ ಎಂದು ಕರೆಯುತ್ತಾರೆ

a.       ಇಂಪಲ್ಸ್

SSLC ಕನ್ನಡ ವ್ಯಾಕರಣ - 1

1. ಕನ್ನಡ ವರ್ಣಮಾಲೆಯ ಒಟ್ಟು ಅಕ್ಷರಗಳು ___________
a. 49

2. ಕನ್ನಡ ವರ್ಣಮಾಲೆಯಲ್ಲಿರುವಅನುನಾಸಿಕಗಳ ಸಂಖ್ಯೆ _________ 
a. 5

3. ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ _______
a. 10

4. ಎರಡು ಮಾತ್ರಾ ಕಾಲಾವಧಿಗಿಂತ ಹೆಚ್ಚು ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವ ಸ್ವರಗಳು
a. ಪ್ಲುತಸ್ವರ

5. ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಆಗುವ ಅಕ್ಷರ 
a. ಗುಣಿತಾಕ್ಷರ

6. ಅಸ್ತ್ರ, ಸರ್ಕಾರ, ದೇವಸ್ಥಾನ, ಸಿಬ್ಬಂದಿ ಇವುಗಳಲ್ಲಿ ಸಜಾತೀಯ ಸಂಯುಕ್ತಾಕ್ಷರ ಪದ ಯಾವುದು?
ಸಿಬ್ಬಂದಿ 

7. ಅಂತಃಪುರ, ಕುಂಕುಮ, ಲೆಕ್ಕಾಚಾರ, ಶಿಕ್ಷಣ ಇವುಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರ ಪದ ಯಾವುದು – 
a. ಶಿಕ್ಷಣ 

8. ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಾಕ್ಷರಗಳಿಗೆ ಒಂದು ಸ್ವರಾಕ್ಷರ  ಸೇರುವುದು
a. ಸಂಯುಕ್ತಾಕ್ಷರ 

9. ಭೂಮಿ, ಮೈಲು, ರಸ್ತೆ, ಮೇಜು ಇವುಗಳಲ್ಲಿ ಪೋರ್ಚುಗೀಸ್ ಭಾಷೆಯಿಂದ ಕನ್ನಡಕ್ಕೆ ಬಂದ ಶಬ್ದ
a. ಮೇಜು 

10. ಸಾಬೂನು ಪದವು _________ ಭಾಷೆಯಿಂದ ಬಂದ ಶಬ್ದ ವಾಗಿದೆ – 
a. ಪೋರ್ಚುಗೀಸ್  

11. ನೇಸರ, ಹಾಲು, ತೆಂಕಣ, ಸ್ಟೇಷನ್ ಈ ಪದಗಳಲ್ಲಿ ಅನ್ಯದೇಶೀಯ ಪದ ಯಾವುದು –
a. ಸ್ಟೇಷನ್ 

12. ಟ್ರಾಫಿಕ್, ಶಾಲೆ, ವಾಹನ, ಯೋಧ ಇವುಗಳಲ್ಲಿ ಅನ್ಯದೇಶೀಯ ಪದ ಯಾವುದು – 
a. ಟ್ರಾಫಿಕ್  

13. ಮನೆ, ಶಿಕ್ಷಣ, ಲಸಿಕೆ, ಲಾಕಪ್ ಇವುಗಳಲ್ಲಿ ಅನ್ಯದೇಶೀಯ ಪದ ಯಾವುದು – 
a. ಲಾಕಪ್ 

14. ಕಾಗದ ಪದವು ಯಾವ ಭಾಷೆಯ ಪದವಾಗಿದೆ – 
a. ಹಿಂದೂಸ್ತಾನಿ 

15. ಅಲಮಾರು ಪದವು__________ ಭಾಷೆಯ ಪದ –
a. ಪೋರ್ಚುಗೀಸ್ 

16. ಕವಿ ಪದದ ಅನ್ಯಲಿಂಗ ರೂಪ – 
a. ಕವಿಯಿತ್ರಿ
 
17. ಗಂಗೆ, ನಾಯಿ, ರಾಮ, ಅಧ್ಯಾಪಕ ಇವುಗಳಲ್ಲಿ ನಪುಂಸಕಲಿಂಗಕ್ಕೆ ಉದಾಹರಣೆ – 
a. ನಾಯಿ 

18. ಮಗ ಪದದ ಬಹುವಚನ ರೂಪ – 
a. ಮಕ್ಕಳು 

19. ಅಣ್ಣ ಪದದ ಬಹುವಚನ ರೂಪ – 
a. ಅಣ್ಣಂದಿರು 

20. ಪ್ರಾಣಿ ಪದದ ಬಹುವಚನ ರೂಪ – 
a. ಪ್ರಾಣಿಗಳು 

21. ಕುಡಿಗಳೆಂದು ಪದವನ್ನು ಬಿಡಿಸಿದಾಗ ಆಗುವ ರೂಪ –
a. ಕುಡಿಗಳು+ಎಂದು 

22. ಸುರೇಂದ್ರ ಇದು ಈ ಸಂಧಿಗೆ ಉದಾಹರಣೆ – 
a. ಗುಣಸಂಧಿ 

23. ಅತ್ಯಂತ, ಮನೆಯನ್ನು, ಮನಶ್ಯಾಂತಿ, ಊರನ್ನು ಈ ಪದಗಳಲ್ಲಿ ಯಣ್ ಸಂಧಿಗೆ ಉದಾಹರಣೆ ಯಾವುದು – 
a. ಅತ್ಯಂತ 

24. ಪೂರ್ವೋತ್ತರ ________ ಸಂಧಿಗೆ ಉದಾಹರಣೆ –
a. ಗುಣಸಂಧಿ 

25. ರಕ್ತಗಾಲಿನ ___________ ಸಂಧಿಗೆ ಉದಾಹರಣೆ –
a. ಆದೇಶ ಸಂಧಿ

26. ಮನ್ವಂತರ, ಹಾಲನ್ನು, ಬೇಕಷ್ಟೇ, ಶಾಲೆಯಿಂದ ಈ ಪದಗಳಲ್ಲಿ ಲೋಪಸಂಧಿಗೆ ಉದಾಹರಣೆ
a. ಬೇಕಷ್ಟೇ 

27. ನವೋದಯ ಈ ಸಂಧಿಗೆ ಉದಾಹರಣೆ – 
a. ಗುಣಸಂಧಿ 

28. ಏಕೈಕ ಪದವು ಈ ಸಂಧಿಗೆ ಉದಾಹರಣೆ – 
a. ವೃದ್ಧಿಸಂಧಿ 

29. ಮನ್ವಂತರ ಪದವು ಈ ಸಂಧಿಗೆ ಉದಾಹರಣೆ – 
a. ಯಣ್ ಸಂಧಿ 

30. ಉತ್ತರಪದದ ಅರ್ಥವು ಪ್ರಧಾನವಾಗಿರುವ ಸಮಾಸ ಯಾವುದು –
a. ತತ್ಪುರುಷ  

31. ‘ಹಳಗನ್ನಡ’  ಪದವು ಈ ಸಮಾಸಕ್ಕೆ ಉದಾಹರಣೆ – 
a. ಕರ್ಮಧಾರಯ

32. ‘ಹೆಮ್ಮರ’ ಪದವು ಈ ಸಮಾಸಕ್ಕೆ ಉದಾಹರಣೆ 
a. ಕರ್ಮಧಾರಯ

33. ‘ಮುಮ್ಮಡಿ’ ಈ ಸಮಾಸಕ್ಕೆ ಉದಾಹರಣೆ – 
a. ದ್ವಿಗು 

34. ‘ಮೈದಡವಿ’ ಎಂಬುದು ಈ ಸಮಾಸಕ್ಕೆ ಉದಾಹರಣೆ - 
a. ಕ್ರಿಯಾ 

35. ‘ಹಿಂದೆಲೆ’ ಪದವು ಈ ಸಮಾಸಕ್ಕೆ ಉದಾಹರಣೆ – 
a. ಅಂಶಿ 

36. ‘ಈ ಹುಡುಗಿ’ ಪದವು ಈ ಸಮಾಸಕ್ಕೆ ಉದಾಹರಣೆ –
a. ಗಮಕ 

37. ರೂಢಿಯಿಂದ ಬಂದ ಸಾಮಾನ್ಯ ವಾಚಕಗಳು – 
a. ರೂಢನಾಮ 

38. ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳು – 
a. ಅನ್ವರ್ಥಕ ನಾಮ 

39. ‘ಗೌರಿ ಒಳ್ಳೆಯ ಹುಡುಗಿ’ ಇಲ್ಲಿರುವ ಗುಣವಾಚಕ ಪದ – 
a. ಒಳ್ಳೆಯ 

40. ಸಂಖ್ಯೆಯಿಂದ ಕೂಡಿದ ಶಬ್ದಗಳು – 
a. ಸಂಖ್ಯಾವಾಚಕಗಳು
 
41. ‘ವಿಜ್ಞಾನಿ’ ಇದು ಈ ನಾಮಪದಕ್ಕೆ ಉದಾಹರಣೆ – 
a. ಅನ್ವರ್ಥಕನಾಮ 

42. ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡ ಹೆಸರುಗಳು 
a. ಅಂಕಿತನಾಮ 

43. ‘ಗೌರಿಯು ಶಾಲೆಯಲ್ಲಿ ಪದ್ಯವನ್ನು ವಾಚನ ಮಾಡಿದಳು’ ಈ ವಾಕ್ಯದಲ್ಲಿ ದ್ವಿತೀಯ ವಿಭಕ್ತಿ ಪ್ರತ್ಯಯದಿಂದ ಕೂಡಿದ ಪದ – 
a. ಪದ್ಯವನ್ನು 

44. ‘ಆಗಸ’ ಪದವು ನಾಮಪದದ ಈ ಪ್ರಕಾರಕ್ಕೆ ಸೇರಿದೆ – 
a. ರೂಢನಾಮ 

45. ವಸ್ತುಗಳನ್ನು ಸೂಚಿಸುವ ಪದಗಳು – 
a. ವಸ್ತುವಾಚಕ 

46. ಸಾಮಾನ್ಯ ಅಳತೆ, ಪರಿಮಾಣ, ಗಾತ್ರ ಹೇಳುವ ಶಬ್ಧಗಳು – 
a. ಪರಿಮಾಣವಾಚಕ 

47. ನಾಮಪದದ ಮೂಲರೂಪ – 
a. ನಾಮಪ್ರಕೃತಿ 

48. ‘ಸಂಬಂಧದಲ್ಲಿ’ ಈ ಪದದಲ್ಲಿರುವ ವಿಭಕ್ತಿಪ್ರತ್ಯಯ -  
a. ಅಲ್ಲಿ 

49. ‘ವಿದ್ಯಾರ್ಥಿಗಳು ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಿದರು’ ಈ ವಾಕ್ಯದಲ್ಲಿ ದ್ವಿತೀಯ ವಿಭಕ್ತಿಯಿಂದ ಕೂಡಿದ ಪದ – 
a. ದಿನಾಚರಣೆಯನ್ನು 

50. ತೃತೀಯ ವಿಭಕ್ತಿ ಪ್ರತ್ಯಯ – 
a. ಇಂದ 

51. ಚತುರ್ಥಿ ವಿಭಕ್ತಿ ಪ್ರತ್ಯಯ –
a. ಗೆ/ಕೆ/ಇಗೆ/ಕ್ಕೆ 

52. ವಿಭಕ್ತಿಪ್ರತ್ಯಯಗಳು ಎಷ್ಟು?
a.

53. ಕ್ರಿಯಾಪದದ ಮೂಲರೂಪಕ್ಕ _________ ಎನ್ನುವರು –
a. ಧಾತು 

54. ‘ವಿದ್ಯಾರ್ಥಿಗಳು ಶಾಲೆಗೆ ಶಿಸ್ತಿನಿಂದ ಬರುತ್ತಿದ್ದಾರೆ’ ಎಂಬ ವಾಕ್ಯವು ಯಾವ ಕಾಲ ರೂಪದಲ್ಲಿದೆ –
a. ವರ್ತಮಾನಕಾಲ 

55. ಕರ್ತೃವಿನ ಕಾರ್ಯವನ್ನು ಹೇಳುವುದು ಈ ಪದ – 
a. ಕ್ರಿಯಾಪದ 

56. ‘ಕಮಲ ಊಟ ಮಾಡಿದಳು’ ಈ ವಾಕ್ಯದಲ್ಲಿರುವ ಕಾಲ – 
a. ಭೂತಕಾಲ 

57. ‘ಸಲೀಂ ಆಟ ಆಡುತ್ತಾನೆ’  ಗೆರೆ ಎಳೆದ ಪದದ ಭವಿಷ್ಯತ್ಕಾಲ ರೂಪ –
a. ಆಡುವನು 

58. ನಡೆದುಹೋದ ಕಾಲವನ್ನು ತಿಳಿಸುವ ಕ್ರಿಯಾಪದದ ರೂಪ – 
a. ಭೂತಕಾಲ 

59. ಭವಿಷ್ಯತ್ ಕಾಲ ಸೂಚಕ ಪ್ರತ್ಯಯ –
a. ವ (ಉದ)

60. ಮುಂದೆ ನಡೆಯುವ ಕ್ರಿಯೆಯ ಕಾಲಸೂಚಕ ಕ್ರಿಯಾರೂಪ –
a. ಭವಿಷ್ಯತ್ ಕಾಲ

SSLC ವಿಜ್ಞಾನ (ರಸಾಯನಶಾಸ್ತ್ರ) ವಸ್ತುನಿಷ್ಠ ಪ್ರಶ್ನೆಗಳು -1

ಈ ವರ್ಷ 2021 ರ SSLC ಪರೀಕ್ಷೆಯನ್ನು MCQ ಮಾದರಿಯಲ್ಲಿ ನಡೆಸಲು ಸರಕಾರವು ನಿರ್ಧರಿಸಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಸ್ತುನಿಷ್ಠ ಪ್ರಶ್ನೋತ್ತರಗಳನ್ನು ನೀಡಲಾಗಿದೆ. 

  1. .         ತಟಸ್ಥಿಕರಣ ಕ್ರಿಯೆಯ ಉತ್ಪನ್ನಗಳು ಯಾವವು ?

    a.       ನೀರು ಮತ್ತು ಲವಣ

    2.       ಜೇನು ಹುಳುವಿನ ಮುಳ್ಳಿನಲ್ಲಿರುವ ಆಮ್ಲ ಯಾವುದು ?

    a.       ಮೆಥನೋಯಿಕ್ ಆಮ್ಲ

    3.       ಕ್ರಿಯೆಯಲ್ಲಿ ವಸ್ತುವೊಂದು ಆಕ್ಸಿಜನ್ ಪಡೆದುಕೊಂಡರೆ, ಅದು  __________ ಗೊಂಡಿದೆ  ಎನ್ನುತ್ತಾರೆ.

    a.       ಉತ್ಕರ್ಷಣ

    4.       ಕ್ರಿಯೆಯಲ್ಲಿ ವಸ್ತುವೊಂದು ಆಕ್ಸಿಜನ್ ಕಳೆದುಕೊಂಡರೆ, ಅದು  __________ ಗೊಂಡಿದೆ  ಎನ್ನುತ್ತಾರೆ.

    a.       ಅಪಕರ್ಷಣ

    5.       ಚಿಪ್ಸ್ ತಯಾರಕರು, ಚಿಪ್ಸ್ ಉತ್ಕರ್ಷಣಗೊಳ್ಳುವುದನ್ನು ತಡೆಗಟ್ಟಲು ___________ ಅನಿಲವನ್ನು ಹಾಯಿಸುತ್ತಾರೆ. \

    a.       ನೈಟ್ರೋಜನ್

    6.       ಒಂದು ಧಾತುವು ಸಂಯುಕ್ತದಲ್ಲಿನ ಇನ್ನೊಂದು ಧಾತುವನ್ನು ಪಲ್ಲಟಗೊಳಿಸಿದಾಗ _________ ಕ್ರಿಯೆ ನಡೆಯುತ್ತದೆ.

    a.       ಸ್ಥಾನಪಲ್ಲಟ

    7.       ಉತ್ಪನ್ನಗಳೊಂದಿಗೆ ಉಷ್ಣ  ಬಿಡುಗಡೆಯಾಗುವ ಕ್ರಿಯೆಗಳನ್ನು ___________ ಕ್ರಿಯೆಗಳು ಎನ್ನುವರು.

    a.       ಬಹಿರುಷ್ಣಕ

    8.       ಮೊಸರಿನಲ್ಲಿರುವ ಆಮ್ಲ ಯಾವುದು?

    a.       ಲ್ಯಾಕ್ಟಿಕ್ ಆಮ್ಲ

    9.       ಲೋಹಗಳು ನೀರಿನ ಜೊತೆ ಪ್ರತಿವರ್ತಿಸಿದಾಗ ಲೋಹದ ಆಕ್ಸೈಡ್ ಮತ್ತು __________ ಅನಿಲವನ್ನು ಬಿಡುಗಡೆ ಮಾಡುತ್ತವೆ.

    a.       ಹೈಡ್ರೋಜನ್

    10.   ___________ ವು ಎರಡು ಅಥವಾ ಹೆಚ್ಚು ಲೋಹ ಅಥವಾ ಅಲೋಹಗಳ ಏಕರೂಪದ ಮಿಶ್ರಣವಾಗಿದೆ.

    a.       ಮಿಶ್ರಲೋಹ 

SSLC ಸಮಾಜ ವಿಜ್ಞಾನ ವಸ್ತುನಿಷ್ಠ ಪ್ರಶ್ನೆಗಳು - 2

 

ಈ ವರ್ಷ 2021 ರ SSLC ಪರೀಕ್ಷೆಯನ್ನು MCQ ಮಾದರಿಯಲ್ಲಿ ನಡೆಸಲು ಸರಕಾರವು ನಿರ್ಧರಿಸಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಸ್ತುನಿಷ್ಠ ಪ್ರಶ್ನೋತ್ತರಗಳನ್ನು ನೀಡಲಾಗಿದೆ. 


1.       ಮೊದಲನೇ ಆಂಗ್ಲೋ ಮರಾಠ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?

a.       ಸಾಲ್ ಬಾಯ್ ಒಪ್ಪಂದ

2.       ಪೇಶ್ವೆ ನಾರಾಯಣ್ ರಾವನನ್ನು ಕೊಲೆ ಮಾಡಿದವನು ________

a.       ರಘುನಾಥರಾವ್ ಅಥವಾ ರಘೋಬಾ

3.       ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವರು __________

a.       ಲಾರ್ಡ್ ವೆಲ್ಲೆಸ್ಲಿ

4.       ದತ್ತುಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದವರು _________

a.       ಲಾರ್ಡ್ ಡೌಲ್ ಹೌಸಿ

5.       ಮೈಸೂರು, ಔಧ್, ತಂಜಾವೂರುಗಳು ಬ್ರಿಟಿಷರ ________ ನಿಬಂಧನೆಗೆ ಒಳಪಟ್ಟಿದ್ದವು.  

a.       ಸಹಾಯಕ ಸೈನ್ಯ ಪದ್ದತಿಯ

6.       ಝಾನ್ಸಿ  ಬ್ರಿಟಿಷರ ________ನೀತಿಗೆ ಒಳಪಟ್ಟಿತ್ತು

a.       ದತ್ತುಮಕ್ಕಳಿಗೆ ಹಕ್ಕಿಲ್ಲ

7.       ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು ?

a.       ಲಾರ್ಡ್ ಕಾರ್ನವಾಲಿಸ್

8.       ರೆಗ್ಯುಲೇಟಿಂಗ್ ಕಾಯ್ದೆಯನ್ನು ಜಾರಿಗೆಗೊಳಿಸಿದ ವರ್ಷ ಯಾವುದು ?

a.       1773

9.        ರೆಗ್ಯುಲೇಟಿಂಗ್ ಕಾಯ್ದೆಯ ಅನ್ವಯ ___________ ದಲ್ಲಿ ಸುಪ್ರೀಂ ಕೋರ್ಟ್ ನ್ನು ಸ್ಥಾಪಿಸಲಾಯಿತು.

a.       ಕಲ್ಕತ್ತಾ

10.   ಭಾರತದ ಪ್ರಥಮ ವೈಸ್ ರಾಯ್ ಯಾರು ?

a.       ಲಾರ್ಡ್ ಕ್ಯಾನಿಂಗ್