ಬಣ್ಣದ ತಗಡಿನ ತುತ್ತೂರಿ



ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
-ರಿ-----ನಿ- ಊದಿದನು
-ನಿ-----ರಿ- ಊದಿದನು

ತನಗೇ ತುತ್ತುರಿ ಇದೆಯೆಂದ;
ಬೇರಾರಿಗು ಅದು ಇಲ್ಲೆಂದ
ತುತ್ತೂರಿ ಊದುತ ಕೊಳದ ಬಳಿ;
ಕಸ್ತೂರಿ ನಡೆದನು ಸಂಜೆಯಲಿ;

ಜಂಭದ ಕೋಳಿಯ ರೀತಿಯಲಿ
ಜಾರಿತು ನೀರಿಗೆ ತುತ್ತೂರಿ;
ಗಂಟಲು ಕಟ್ಟಿತು ನೀರೂರಿ

-ರಿ-- ಊದಲು ನೋಡಿದನು;
--- ಸದ್ದನು ಮಾಡಿದನು

ಬಣ್ಣವು ನೀರಿನ ಪಾಲಾಯ್ತು;
ಜಂಭದ ಕೋಳಿಗೆ ಗೋಳಾಯ್ತು
ರಚನೆ: ಜಿ. ಪಿ. ರಾಜರತ್ನಂ (ರತ್ನ)

No comments:

Post a Comment