Showing posts with label ಸಾಮಾನ್ಯ ಜ್ಞಾನ. Show all posts
Showing posts with label ಸಾಮಾನ್ಯ ಜ್ಞಾನ. Show all posts

ವರ್ಷದ ಆರಂಭದಿಂದಲೇ ಪರೀಕ್ಷೆಗೆ ತಯಾರಿ ಹೇಗೆ? ಕೆಲವು ಸರಳ ಸಲಹೆಗಳು

 

ಇನ್ನೇನು ಮತ್ತೊಂದು ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದೆ. ಕೆಲವರು ಹಿಂದಿನ ವರ್ಷ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಮುಂದೆ ಸಾಗಿದರೆ, ಇನ್ನೂ ಕೆಲವರಿಗೆ ಕಳೆದ ವರ್ಷ ಸರಿಯಾಗಿ ಓದಲಿಲ್ಲ ಅಥವಾ ಇನ್ನೂ ಚೆನ್ನಾಗಿ ಮಾಡಬಹುದಿತ್ತೇನೋ ಅಂಬ ಹಳಹಳಿ ಇದೆ. ಉತ್ತಮ ಫಲಿತಾಂಶಕ್ಕಾಗಿ, ಕೊನೆಯ ಕ್ಷಣದಲ್ಲಿ ಓದುವುದಕ್ಕಿಂತ ವರ್ಷದ ಆರಂಭದಿಂದಲೇ ಸರಿಯಾದ ಯೋಜನೆಯೊಂದಿಗೆ ತಯಾರಿ ಮಾಡುವುದು ಅತ್ಯಂತ ಮುಖ್ಯ. ಇದರಿಂದ ಒತ್ತಡ ಕಡಿಮೆ ಆಗುತ್ತದೆ ಮತ್ತು ವಿಷಯಗಳು ಚೆನ್ನಾಗಿ ಅರ್ಥವಾಗುತ್ತವೆ. ಇಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಕೆಲವು  ಮುಖ್ಯ ಸಲಹೆಗಳು ನೀಡಲಾಗಿದೆ.

 

 ಸ್ಪಷ್ಟವಾದ ಅಧ್ಯಯನ ಯೋಜನೆ ರೂಪಿಸಿರಿ

ವರ್ಷದ ಆರಂಭದಲ್ಲೇ ಪ್ರತಿಯೊಂದು ವಿಷಯಕ್ಕೂ ಸಮಯ ಹಂಚಿಕೆ ಮಾಡಿ. ಕಠಿಣವಾದ ವಿಷಯಗಳಿಗೆ ಹೆಚ್ಚಿನ ಸಮಯವನ್ನು ಮೀಸಲಿಡಿ. ದಿನವೂ 2–3 ವಿಷಯಗಳನ್ನು ಓದುವಂತೆ ಯೋಜನೆ ಮಾಡಿಕೊಳ್ಳಿ. ಯೋಜನೆ ಮಾಡುವಾಗ ತುಂಬಾ ಕಠಿಣವಾದ ವೇಳಾಪಟ್ಟಿ ಬೇಡ. ಅದರಲ್ಲಿ ಮನರಂಜನೆಗೆ ಅಥವಾ ಆಟೋಟಗಳಿಗೂ ಸಮಯವಿರಲಿ. ತುಂಬಾ ಕಠಿಣವಾದ ವೇಳಾಪಟ್ಟಿಯನ್ನು ಪಾಲಿಸಲಾಗದೇ ಕೊನೆಗೆ ನಿಮ್ಮ  ಯೋಜನೆ ವಿಫಲವಾಗುವ ಸಾಧ್ಯತೆಯೇ ಹೆಚ್ಚು.  ವಾರದ ಕೊನೆಯಲ್ಲಿ ಓದಿದ ವಿಷಯಗಳನ್ನು ಮರುಪರಿಶೀಲನೆ (revision) ಮಾಡುವುದು ಮುಖ್ಯ.  ಈ ರೀತಿಯ ಯೋಜನೆ ನಿಮಗೆ ನಿಯಮಿತ ಅಭ್ಯಾಸವನ್ನು ನೀಡುತ್ತದೆ.

ದಿನನಿತ್ಯ ಅಭ್ಯಾಸ ಮತ್ತು ಟಿಪ್ಪಣಿಗಳು

ಪ್ರತಿ ಪಾಠವನ್ನು ಓದಿದ ನಂತರ, ಮುಖ್ಯ ಅಂಶಗಳನ್ನು ಒಂದು ಪ್ರತ್ಯೇಕ ಪುಸ್ತಕದಲ್ಲಿ ನಿಮ್ಮದೇ ಪದಗಳಲ್ಲಿ ಟಿಪ್ಪಣಿಯನ್ನು ಬರೆದಿಟ್ಟುಕೊಳ್ಳಿ. ಮುಖ್ಯವಾದ ಗಣಿತ, ವಿಜ್ಞಾನದ ಸೂತ್ರಗಳು, ಇತಿಹಾಸದ ದಿನಾಂಕಗಳು, ಪ್ರಮುಖ ವ್ಯಕ್ತಿಗಳ ಹೆಸರು ಇವುಗಳನ್ನು ಅಚ್ಚುಕಟ್ಟಾಗಿ ಪಟ್ಟಿ ಮಾಡಿಟ್ಟುಕೊಳ್ಳಿ.  ಇದು ಪರೀಕ್ಷೆಯ ಸಮಯದಲ್ಲಿ ಬೇಗನೆ ಮರುಪಠಣ ಮಾಡಲು ಸಹಾಯ ಮಾಡುತ್ತದೆ. ದಿನನಿತ್ಯ 1–2 ಗಂಟೆಗಳ ನಿಯಮಿತ ಓದು ನಿಮ್ಮ ಜ್ಞಾನವನ್ನು ಗಟ್ಟಿಗೊಳಿಸುತ್ತದೆ. ಇಲ್ಲಿ ನಿಯಮಿತತೆ ತುಂಬಾ ಮುಖ್ಯವಾದುದು.

 ಹಿಂದಿನ ಪ್ರಶ್ನೆಪತ್ರಿಕೆಗಳ ಅಭ್ಯಾಸ

ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಪರೀಕ್ಷೆಯ ಮಾದರಿ (pattern) ತಿಳಿಯುತ್ತದೆ. ಯಾವ ವಿಷಯಗಳಿಂದ ಹಾಗೂ ಯಾವ ಮಾದರಿಯ ಪ್ರಶ್ನೆಗಳು ಹೆಚ್ಚು ಬರುತ್ತವೆ ಎಂಬುದು ಸ್ಪಷ್ಟವಾಗುತ್ತದೆ. ವಾರಕ್ಕೆ ಒಂದು ಬಾರಿ ಮಾದರಿ ಪರೀಕ್ಷೆ (mock test) ತೆಗೆದುಕೊಳ್ಳುವುದು ಉತ್ತಮ. ಇದರಿಂದ ಯಾವ ರೀತಿಯ ಪ್ರಶ್ನೆಗಳನ್ನು ಎದುರಿಸುವುದರಲ್ಲಿ ಎಡುವುತ್ತಿದ್ದೇವೆ ಎನ್ನುವುದು ತಿಳಿದು ಆ ರೀತಿಯಾಗಿ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಯಾವುದಾದರೂ ವಿಷಯ ಕಷ್ಟವೆನಿಸಿದರೆ ಅದನ್ನು ಆವಾಗಲೇ ತಿಳಿದುಕೊಳ್ಳಬಹುದು. ಅಂತರ್ಜಾಲದಲ್ಲಿ ಈ ರೀತಿಯ ಮಾದರಿ ಪ್ರಶ್ನೆಪತ್ರಿಕೆಗಳು ಸಿಗುತ್ತವೆ.

ಸಮಯ ನಿರ್ವಹಣೆ ಮತ್ತು ಆರೋಗ್ಯದ ಗಮನ

ಪಾಠಗಳ ಜೊತೆಗೆ ಸರಿಯಾದ ಸಮಯಕ್ಕೆ ವಿಶ್ರಾಂತಿ ಮತ್ತು ಆರೋಗ್ಯದ ಮೇಲೆ ಗಮನ ಕೊಡುವುದು ಅಷ್ಟೇ ಗಮನಾರ್ಹವಾಗಿದೆ . ಪ್ರತಿದಿನ ಸರಿಯಾದ ನಿದ್ರೆ, ಪೌಷ್ಟಿಕ ಆಹಾರ ಮತ್ತು ಸ್ವಲ್ಪ ವ್ಯಾಯಾಮ ಮಾಡುವುದು ಗ್ರಹಣಶಕ್ತಿ ಮತ್ತು ಏಕಾಗ್ರತೆಯನ್ನು  ಹೆಚ್ಚಿಸುತ್ತದೆ. ಓದುವ ಸಮಯವನ್ನು ಸರಿಯಾಗಿ ಹಂಚಿಕೊಳ್ಳುವುದು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ.

ವರ್ಷದ ಆರಂಭದಿಂದಲೇ ಸರಿಯಾದ ತಯಾರಿ ಮಾಡಿದರೆ ಪರೀಕ್ಷೆ ಸುಲಭವಾಗುತ್ತದೆ. ಈ ಮೇಲೆ ನೀಡಿದ ಸರಳ ಸಲಹೆಗಳನ್ನು ಅನುಸರಿಸಿ, ನಿಮ್ಮ ಗುರಿಯನ್ನು ಸಾಧಿಸಬಹುದು. ನಿಯಮಿತ ಅಭ್ಯಾಸ ಮತ್ತು ಧೈರ್ಯವೇ ಯಶಸ್ಸಿನ ಕೀಲಿಕೈ.

100 ಸಮಾನಾರ್ಥಕ ಪದಗಳು

 ಒಂದೇ ಅರ್ಥವನ್ನು ಹೊಂದಿರುವ ಪದಗಳನ್ನು 'ಸಮಾನಾರ್ಥಕ ಪದಗಳು' ಎಂದು ಕರೆಯಲಾಗುತ್ತದೆ. ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯವೆಂದರೆ, ಈ ಪದಗಳಲ್ಲಿ ಅರ್ಥದ ಸಾಮ್ಯತೆಯ ಹೊರತಾಗಿಯೂ, ಅವುಗಳ ಬಳಕೆಯಲ್ಲಿ ವ್ಯತ್ಯಾಸವಿರುವ ಸಾಧ್ಯತೆ ಇದೆ. ಪ್ರತಿಯೊಂದು ಪದದ ಬಳಕೆಯು ಸಂದರ್ಭ ಮತ್ತು ಸ್ಥಳಕ್ಕೆ ಅನುಗುಣವಾಗಿ ಬದಲಾಗುತ್ತದೆ.

ಕೆಲವು ನಿರ್ದಿಷ್ಟ ಸಮಾನಾರ್ಥಕ ಪದಗಳನ್ನು ಕೆಳಗೆ ನೀಡಲಾಗಿದೆ.

 

1

ನೀರು

ಜಲ, ಅಂಬು, ಪಯ, ಉದಕ 

2

ಸಮುದ್ರ

ಜಲಧಿ, ಅಂಬುಧಿಶರಧಿ, ಕಡಲು, ವಾರಿಧಿ, ರತ್ನಾಕರ , ಅಬ್ದಿ

3

ಮೋಡ

ಮೇಘ, ಅಂಬುದ, ಮುಗಿಲು, ವಾರಿದ, ಘನ, ಅಬ್ದ   

4

ಕಮಲ

ಜಲಜ, ಅಂಬುಜ, ನೀರಜ, ಪಂಕಜ, ವಾರಿಜ, ತಾವರೆ, ಅರವಿಂದ, ಪದ್ಮ, ನಳಿನ, ಇಂದಿವರ, ರಾಜೀವ, ಪುಷ್ಕರ  

5

ಕೈ

ಹಸ್ತ, ಕರ, ಪಾಣಿ

6

ಆನೆ

ಹಸ್ತಿ , ಕರಿ , ಗಜ, ಕುಂಜರ

7

ದುಂಬಿ

ಮಿಲಿಂದ, ಭ್ರಮರ, ಮಧುಪ, ಮಧುಕರ, ಭೃಂಗ  

8

ಕಣ್ಣು

ನಯನ, ಅಕ್ಷಿ , ಚಕ್ಷು, ಲೋಚನ, ನೇತ್ರ

9

ಗೆಳೆಯ

ಮಿತ್ರ, ಸಖ, ಸ್ನೇಹಿತ,ಸಹಪಾಠಿ, ಸಹಚರ

10

ಸೂರ್ಯ

ನೇಸರ , ರವಿ, ದಿನಕರ, ಭಾನು, ಭಾಸ್ಕರ, ಪ್ರಭಾಕರ, ದೀನೇಶ, ಮಾರ್ತಾಂಡ, ಅರ್ಕ, ಛಾಯಾಪತಿ, ದಿವಾಕರ   

11

ರಾಜ

ಅರಸ, ದೊರೆ, ಭೂಪತಿ , ಮಹಿಮತಿ , ನರೇಶ, ನೃಪತಿ, ಭೂಪಾಲ, ಅಧಿಪತಿ

12

ದೇವರು

ಭಗವಂತ, ಈಶ್ವರ, ಪರಮಾತ್ಮ, ಪ್ರಭ, ದೈವ, ಪರಮೇಶ್ವರ, ವಿಧಾತಾ 

13

ಮನೆ

ಆಲಯ, ಗೃಹ, ನಿಕೇತನ, ಸದನ

14

ಗಣೇಶ

ಗಜಾನನ, ಲಂಬೋದರ, ವಿನಾಯಕ, ಏಕದಂತ, ಗೌರಿಸುತ,  ಗಣಪತಿ, ಕಪಿಲ, ಭಾಲಚಂದ್ರ, ಹೇರಂಭ 

15

ಮಗ

ಪುತ್ರ, ಕುವರ, ಸುತ, ಅತ್ಮಜ, ತನಯ, ತನುಜ, ಸೂನು

16

ಮಗಳು

ಪುತ್ರಿ, ಸುತೆ, ಕುಮಾರಿ, ಅತ್ಮಜೆ, ತನಯೇ, ತನುಜೆ  

17

ತಂದೆ

ಪಿತ, ಅಪ್ಪ , ಅಯ್ಯ , ಜನಕ

18

ತಾಯಿ

ಅಮ್ಮ, ಅಬ್ಬೆ, ಜನನಿ, ಮಾತೆ, ಅವ್ವ

19

ಆಕಾಶ

ಆಗಸ, ಗಗನ, ಬಾನು, ಅಂತರಿಕ್ಷ , ನಭ, ವ್ಯೋಮ, ಮಹಾನೀಲ, ಅಂಬರ, ಖಗೋಳ, ನಭಮಂಡಲ   

20

ಭೂಮಿ

ಮಹಿ, ಪೃಥ್ವಿ, ಭೂ, ನೆಲ, ಧರಣಿ, ಧರೆ, ಧರಿತ್ರಿ, ವಸುಂಧರೆ, ಇಳೆ, ವಸುಧೆ

21

ಚಂದ್ರ

ಚಂದಿರ, ಹಿಮಕರ, ಶಶಿ, ಹಿಮಾಂಶು, ರಾಕೇಶ, ತಿಂಗಳು, ನಿಶಾಕರ, ರಜನೀಶ, ಮಾಯಾಂಕ, ಮೃಗಾಂಕ

22

ರಾತ್ರಿ

ನಿಶಾ, ರಜನಿ, ಶರ್ವರಿ, ಯಾಮಿನಿ 

23

ನದಿ

ಹೊಳೆ, ಸರಿತಾ, ಹೊನಲು, ವಾಹಿನಿ, ತರಂಗಿಣಿ, ಪ್ರವಾಹಿನಿ

24

ಪರ್ವತ

ಗಿರಿ, ಗುಡ್ಡ, ಬೆಟ್ಟ, ಅಚಲ, ಶೈಲ, ತುಂಗ, ಮಲೆ

25

ಬೆಂಕಿ

ಅಗ್ನಿ, ಅನಲ, ಜ್ವಾಲಾ, ಪಾವಕ

26

ಕಲ್ಲು

ಶಿಲೆ, ಪಾಷಾಣ, ಶೈಲ, ಶಿಲ್ಪ

27

ಕಾಡು

ಅರಣ್ಯ, ಅಡವಿ, ವನ, ಕಾನನ, ಅಟವಿ

28

ಹಾಲು

ಕ್ಷೀರ, ಪಯ, ದುಗ್ಧ

29

ಸ್ಮಶಾನ

ಮಸಣ, ರುದ್ರಭೂಮಿ

30

ಪಾರ್ವತಿ

ಶೈಲಜಾ, ಗೌರಿ, ಗಿರಿಜಾ, ದಾಕ್ಷಾಯಿಣಿ 

31

ಅಮೃತ

ಅಮರ್ದು, ಸುಧೆ, ಪಿಯೂಷ, ಸೋಮ

32

ರಾಕ್ಷಸ

ಅಸುರ, ದಾನವ, ರಕ್ಕಸ, ನಿಶಾಚರ

33

ಕತ್ತಲು

ತಮ, ಅಂಧಕಾರ, ತಿಮಿರ, ತಮಸ್

34

ಪಂಡಿತ

ಕೋವಿದ, ಜ್ಞಾನಿ, ಬಲ್ಲವ, ಪ್ರಾಜ್ಞ, ವಿದ್ವಾನ

35

ಪರೋಪಕಾರ

ಹಿತ, ಉಪಕಾರ, ಸಹಾಯ, ಪರಹಿತ

36

ಬ್ರಾಹ್ಮಣ

ಹಾರವ, ದ್ವಿಜ, ವಿಪ್ರ

37

ಕೊಳಲು

ವೇಣು, ವಂಶಿ , ಮುರಳಿ

38

ಗಂಗೆ  

ಭಾಗೀರಥಿ, ಜಾಹ್ನವಿ, ಮಂದಾಕಿನಿ, ಸುರನದಿ, ದೇವನದಿ, ತ್ರಿಪಥಗಾ, ವಿಶ್ನುಪಗಾ  

39

ಯಮುನೆ

ಕಾಲಿಂದಿನಿ,  ಸುರ್ಯಸುತೆ, ತರಣಿಜಾ, ಅರ್ಕಜಾ , ಜಮುನಾ  ನೀಲಂಬರಾ

40

ಶಿವ

ಶಂಕರ, ಅಶುತೋಶ, ಈಶಾನ, ವಾಮದೇವ, ಹರ, ನೀಲಕಂಠ, ಚಂದ್ರಮೌಳಿ, ರುದ್ರ, ನಟರಾಜ, ಮಹೇಶ, ಗಂಗಾಧರ 

41

ಲಕ್ಷ್ಮೀ

ಶ್ರೀ, ಲಕುಮಿ, ರಮಾ, ಇಂದಿರಾ, ಹರಿಪ್ರಿಯಾ, ಪದ್ಮಜಾ,

42

ವಿಷ್ಣು

ಹರಿ, ನಾರಾಯಣ, ಜನಾರ್ದನ , ಲಕ್ಷ್ಮಿಕಾಂತ, ಪದ್ಮನಾಭ, ಮುಕುಂದ, ಲಕ್ಷ್ಮೀಶ , ಶ್ರೀಕಾಂತ, ರಮಾಕಾಂತ, ಅನಂತ, ಅಚ್ಯುತ, ವನಮಾಲಿ

43

ಹಕ್ಕಿ

ಪಕ್ಷಿ, ಖಗ, ವಿಹಂಗ, ನಭಚರ  

44

ಮಳೆ

ವರ್ಷಾ, ವೃಷ್ಟಿ

45

ಗಾಳಿ

ವಾಯು, ಸಮೀರ, ಅನಿಲ, ಪವನ, ಪವಮಾನ

46

ಕೃಷ್ಣ

ಮುರಾರಿ, ಗೋಪಾಲ, ಗೋವಿಂದ, ಪಾರ್ಥಸಾರಥಿ, ಮುರಳಿಧರ, ಮಧುಸೂದನ, ಮೋಹನ, ಗೋಪಿವಲ್ಲಭ, ಗಿರಿಧರ, ಚಕ್ರಪಾಣಿ

47

ರಾಮ

ಪುರುಷೋತ್ತಮ , ರಾಘವ, ಸೀತಾಪತಿ, ರಘುಪತಿ, ರಘುನಾಥ

48

ಸೀತೆ

ವೈದೇಹಿ, ಜಾನಕಿ, ಮೈಥಿಲಿ

49

ಕುದುರೆ

ಅಶ್ವ , ತುರುಗ, ಹಯ

50

ಅಧ್ಯಾಪಕ

ಶಿಕ್ಷಕ, ಗುರು, ಆಚಾರ್ಯ, ಉಪಾಧ್ಯಾಯ

51

ಕವನ

 ಪದ್ಯ, ಕಾವ್ಯ , ಹಾಡು, ಕವಿತೆ

52

ಹೂವು

ಪುಷ್ಪ, ಕುಸುಮ, ಸುಮನ, ಪ್ರಸೂನ  

53

ಗುಡಿ

ದೇವಾಲಯ, ಮಂದಿರ, ಧಾಮ

54

ಕತ್ತಿ

ಖಡ್ಗ, ಅಲಗು, ಅಸಿ

55

ಅಣ್ಣ

ಅಗ್ರಜ, ಭ್ರಾತೃ , ಹಿರಿಯಣ್ಣ

56

ಅಕ್ಕ

ಅಗ್ರಜೆ, ಹಿರಿಯಕ್ಕ

57

ಸ್ತ್ರೀ

ಮಾನಿನಿ, ಮಹಿಳೆ, ಹೆಣ್ಣು, ಅಂಗನೆ, ಲಲನೆ

58

ಹಾವು

ಸರ್ಪ, ಭುಜಂಗ, ನಾಗ, ಪನ್ನಗ, ಶೇಷ, ಅಹಿ, ಉರಗ , ಫಣಿ

59

ಮದುವೆ

ಲಗ್ನ , ವಿವಾಹ, ಕಲ್ಯಾಣ

60

ಮಂಗ

ಕೋತಿ, ಕಪಿ, ವಾನರ, ಮರ್ಕಟ, ಕೋಡಗ 

61

ಗಂಡ

ರಮಣ , ಪತಿ, ವಲ್ಲಭ , ಕಾಂತ, ಪ್ರಿಯ

62

ಹೆಂಡತಿ

ಪತ್ನಿ , ವಲ್ಲಭೆ , ಕಾಂತೆ , ಭಾರ್ಯ, ಅರ್ಧಾಂಗಿನಿ, ಪ್ರಿಯೆ

63

ಧನ

ಹಣ, ನಗದು,  ಕಾಂಚಾಣ , ಸಿರಿ, ದುಡ್ಡು , ಕಾಸು

64

ಧನಿಕ

ಶ್ರೀಮಂತ, ಬಲ್ಲಿದ , ಸಿರಿವಂತ

65

ಕಾಮ

ಮಾರ, ಮನ್ಮಥ , ಮದನ , ಅನಂಗ, ಕಂದರ್ಪ, ರತಿಪತಿ, ಮನಸಿಜ  

66

ದಾರಿ

ಪಥ , ಮಾರ್ಗ

67

ಮರ

ವೃಕ್ಷ , ತರು , ಪಾದಪ

68

ಸುವಾಸನೆ

ಪರಿಮಳ, ಸಂಪದ , ಸುಗಂಧ, ಕಂಪು, ಸೌರಭ      

69

ಮಗು

ಕೂಸು, ಕಂದ, ಪಾಪ, ಶಿಶು, ಹಸುಳೆ

70

ಬಂಗಾರ

ಚಿನ್ನ , ಹೇಮ, ಸುವರ್ಣ

71

ಬಾಯಾರಿಕೆ

ತೃಷೆ, ತೃಷ್ಣಾ, ದಾಹ

72

ನಕ್ಷತ್ರ

ತಾರೆ , ಚುಕ್ಕೆ

73

ಯುದ್ಧ 

ಸಮರ, ಕದನ, ಕಾಳಗ, ರಣ, ಧುರ

74

ದ್ರೌಪದಿ

ಪಾಂಚಾಲಿ, ಕೃಷ್ಣೆ, ಯಾಜ್ಞಸೇನಿ

75

ಅರ್ಜುನ

ಪಾರ್ಥ, ಕಿರೀಟಿ, ಸವ್ಯಸಾಚಿ, ಗಾಂಢೀವಿ, ಧನಂಜಯ 

76

ಬಾವುಟ

ಧ್ವಜ, ಕೇತನ, ಗುಡಿ, ಪತಾಕ

77

ಹುಲಿ

ವ್ಯಾಘ್ರ, ಪುಲಿ, ಪುಂಡರೀಕ

78

ಸಿಂಹ

ವನರಾಜ. ಕೇಸರಿ, ಮೃಗರಾಜ

79

ಆಕಳು

ಗೋವು, ದನ, ತುರು , ರಾಸು, ಧೇನು 

80

ಹಣೆ

ಲಲಾಟ , ನೊಸಲು, ಭಾಲ, ಪಾಲ, ನಿಟಿಲ

81

ತಲೆ

ಮಂಡೆ , ಮಸ್ತಕ, ಶಿರ, ಕಪಾಲ 

82

ಮುಖ

ವದನ, ಮೊಗ, ವಕ್ತ್ರ, ಮೋರೆ, ಆನನ

83

ರಕ್ತ

ರುಧಿರ, ನೆತ್ತರು

84

ದೇಹ

ಶರೀರ, ಕಾಯ , ತನು, ಒಡಲು

85

ಸಾವು

ಮರಣ, ಜವ , ನಿಧನ , ಮಡಿ ,

86

ತೊಂದರೆ

ಉಪಟಳ ,ಉಪದ್ರವ, ಪೀಡನೆ

87

ವಿನಂತಿ

ಬಿನ್ನಹ , ವಿಜ್ಞಾಪನೆ, ಪ್ರಾರ್ಥನೆ

88

ಬುದ್ಧಿ

ಚಿತ್ತ, ಮನಸ್ಸು ,ಮನ, ಅಂತರಂಗ

89

ಚೆಂದ

ಸೊಗಸು, ಸುಂದರ, ಚೆನ್ನ

90

ಸಂತೋಷ

ಸಂತಸ , ಆನಂದ, ಖುಷಿ, ಪ್ರಮೋದ, ಹರ್ಷ, ಮೋದ   

91

ಅನುಪಮ

ಅನನ್ಯ , ಅಪೂರ್ವ

92

ಅವಮಾನ

ಅಪಮಾನ, ತಿರಸ್ಕಾರ,ನಿರಾದರ

93

ಅಪ್ಸರೆ

ದೇವಾಂಗನೆ , ಸುರಾಂಗನೆ, ದೇವಕನ್ಯೆ

94

ಕಣ್ಣೀರು

ಕಂಬನಿ, ಅಶ್ರು

95

ಆತ್ಮ

ಚೇತನ, ಚೈತನ್ಯ, ಜೀವ, ವಿಭು

96

ಮೊದಲು

ಆರಂಭ , ಶುರು, ಆದಿ, ಪ್ರಥಮ, ಮುಂಚೂಣಿ

97

ಇಂದ್ರ

ಸುರೇಶ, ದೇವರಾಜ, ಪುರಂಧರ, ವಜ್ರಿ, ದೇವೇಶ, ಸುರಪತಿ, ಶಚಿಪತಿ, ಸಹಸ್ರಾಕ್ಷ

98

ಆಸೆ

ಅಭಿಲಾಷೆ, ಇಷ್ಟ, ಇಚ್ಛೆ, ಆಕಾಂಕ್ಷೆ, ಕಾಮನೆ, ಮನೋರಥ, ವಾಂಛೆ

99

ಪುರಸ್ಕಾರ

ಬಹುಮಾನ , ಪಾರಿತೋಷಕ, ಇನಾಮು, ಕಾಣಿಕೆ

100

ಹಬ್ಬ

ಉತ್ಸವ, ಪರ್ವ, ಸಮಾರೋಹ, ಪರ್ಬ