ರಕ್ಷಾ ಬಂಧನ


ರಕ್ಷಾ ಬಂಧನವು ಶ್ರಾವಣ ಮಾಸದ ಹುಣ್ಣಿಮೆಯಂದು ಬರುತ್ತದೆ. ರಕ್ಷಾ ಬಂಧನವು  ಸಹೋದರ ಸಹೋದರಿಯರ ಹಬ್ಬವಾಗಿ ಆಚರಿಸಲ್ಪಡುತ್ತದೆ. ಹಬ್ಬದಂದು ಹೆಣ್ಣುಮಕ್ಕಳು ತಮ್ಮ ಅಣ್ಣ ಅಥವಾ ತಮ್ಮಂದಿರಿಗೆ ರಾಖಿಯನ್ನು ಕಟ್ಟುವ ಮೂಲಕ ಆಚರಿಸುತ್ತಾರೆ. ರಾಖಿ ಎಂದರೆ ರೇಶ್ಮೆಯ ನೂಲು. ಮೊದಲು ಬರೀ ರೇಶ್ಮೆಯ ನೂಲನ್ನೇ ಕಟ್ಟುತ್ತಿದ್ದರು. ಆದರೆ ಈಗ ಬೇರೆ ಬೇರೆ ತರಹದ ರಾಖಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಹಬ್ಬಕ್ಕೆ ಪುರಾಣ ಕಾಲದ ಒಂದು ಆಚರಣೆ ಕಾರಣವಾಗಿದೆ. ಪುರಾಣ ಕಾಲದಲ್ಲಿ ಋಷಿಗಳು ಶ್ರಾವಣ ಮಾಸದಲ್ಲಿ ತಮ್ಮ ಆಶ್ರಯದಲ್ಲಿ ಯಜ್ಞ ಯಾಗಾದಿಗಳನ್ನು ಮಾಡುತ್ತಿದ್ದರು. ಹಾಗೂ ಶ್ರಾವಣದ ಹುಣ್ಣಿಮೆಯಂದು ಅದರ ಪೂರ್ಣಾಹುತಿಯನ್ನು ಮಾಡುತ್ತಿದ್ದರು. ಇದಕ್ಕೆ ಒಬ್ಬ ಋಷಿಯನ್ನು ಯಜಮಾನನನ್ನಾಗಿ ಆರಿಸುತ್ತಿದ್ದರು. ಯಜಮಾನನಿಗೆ ಶ್ರಾವಣದ ಹುಣ್ಣಿಮೆಯಂದು ರಕ್ಷೆಯನ್ನು ಕಟ್ಟುತ್ತಿದ್ದರು. ಇದು ಮುಂದುವರೆದು ರಾಖಿ ಆಯಿತು.

ಹಬ್ಬಕ್ಕಾಗಿ ಹೆಣ್ಣುಮಕ್ಕಳು ಕಾಯುತ್ತಿರುತ್ತಾರೆ.  ಹಬ್ಬದಂದು ಹೆಣ್ಣುಮಕ್ಕಳು ಸಹೋದರರಿಗೆ ದೇವರ ಮುಂದೆ ಕೂಡಿಸಿ, ಹಣೆಗೆ ತಿಲಕವಿಟ್ಟು ಕೈಗೆ ರಕ್ಷಾ ಬಂಧನ ಕಟ್ಟುತ್ತಾರೆ. ತಮ್ಮನ್ನು ಸದಾ ರಕ್ಷಿಸುವ ಹೊಣೆ ನಿಮ್ಮದು ಎಂಬ ಸಂಕೇತ ನೀಡುತ್ತಾರೆ. ಸಂದರ್ಭದಲ್ಲಿ ಗಂಡುಮಕ್ಕಳು ತಮ್ಮ ಸಹೋದರಿಯರಿಗೆ ವಿಶೇಷವಾದ ಕೊಡುಗೆಗಳನ್ನು ಖರೀದಿಸಿರುತ್ತಾರೆ. ಅದನ್ನು ನೀಡಿ ಆನಂದಿಸುತ್ತಾರೆ.

ಹಬ್ಬದಂದು ಸಂಭ್ರಮ ತುಂಬಿದ ವಾತಾವರಣ ಇರುತ್ತದೆ. ದೊಡ್ಡವರು ಚಿಕ್ಕವರು ಎನ್ನದೆ ಎಲ್ಲರೂ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ.  ಬೇರೆ ಬೇರೆ ಕಡೆ ಇರುವವರೆಲ್ಲರೂ ಒಂದೆಡೆ ಸೇರಿ ಹಬ್ಬ ಆಚರಿಸುತ್ತಾರೆ. ಈಗಿನ ಧಾವಂತ ಜೀವನದಲ್ಲಿ ಇಂತಹ ಇಡೀ ಕುಟುಂಬ ಸೇರಿ ಆಚರಿಸುವ ಹಬ್ಬಗಳು ಮಹತ್ವ ಪಡೆಯುತ್ತದೆ. ಒಟ್ಟಿನಲ್ಲಿ ರಾಖಿ ಹಬ್ಬ ಎಲ್ಲರನ್ನು ಒಟ್ಟಾಗಿ ಸೇರಿಸುವ, ಜಾತಿ ಮತ ಭೇದಗಳಿಲ್ಲದ, ಬಡವ ಧನಿಕನೆನ್ನದೆ, ವಯಸ್ಸಿನ ಅಂತರವಿಲ್ಲದೆ ಆಚರಿಸುವ ಸಂಭ್ರಮದ ಹಬ್ಬವಾಗಿದೆ.

ರಚನೆ: ಸೀಮಾ ಕಂಚೀಬೈಲು 

No comments:

Post a Comment