ನಾಮಪದಗಳ ಮುಖ್ಯವಾದ ಪ್ರಕಾರಗಳು ಈ ಕೆಳಗಿನಂತಿವೆ.
ಗುಣವಾಚಕಗಳು : ವ್ಯಕ್ತಿ ಅಥವಾ ವಸ್ತುಗಳ ಗುಣ, ಸ್ವಭಾವಗಳನ್ನು ತಿಳಿಸುವ ಪದಗಳನ್ನು ಗುಣವಾಚಕಗಳೆನ್ನುವರು.
ಸಂಖ್ಯಾವಾಚಕಗಳು : ಸಂಖ್ಯೆಯನ್ನು ಸೂಚಿಸುವ ಪದಗಳನ್ನು ಸಂಖ್ಯಾವಾಚಕಗಳ ಎಂದು ಕರೆಯುತ್ತಾರೆ.
ಸಂಖ್ಯೇಯವಾಚಕಗಳು : ಸಂಖ್ಯೆಗಳಿಂದ ಕೂಡಿದ ಶಬ್ದಗಳನ್ನು ಸಂಖ್ಯೇಯವಾಚಕಗಳು ಎನ್ನುವರು.
ಭಾವನಾಮಗಳು : ಭಾವನೆಗಳನ್ನು ವ್ಯಕ್ತ ಪಡಿಸುವ ಪದಗಳನ್ನು ಭಾವನಾಮಗಳು ಎನ್ನುವರು.
ಪರಿಮಾಣವಾಚಕಗಳು : ಯಾವುದೇ ವಸ್ತುವಿನ ಪರಿಮಾಣಗಳಾದ ಗಾತ್ರ, ಅಳತೆ ಮುಂತಾದವುಗಳನ್ನು ಹೇಳುವ ಶಬ್ದಗಳನ್ನು ಪರಿಣಾಮವಾಚಕಗಳು ಎನ್ನುವರು .
ಪ್ರಕಾರವಾಚಕಗಳು : ವಸ್ತುಗಳ ರೀತಿ ಅಥವಾ ಸ್ಥಿತಿಯನ್ನು ವಿವರಿಸುವ ಪದಗಳನ್ನು ಪ್ರಕಾರವಾಚಕಗಳು ಎನ್ನುವರು.
ದಿಗ್ವಾಚಕಗಳು : ದಿಕ್ಕುಗಳನ್ನು ಸೂಚಿಸುವ ಪದಗಳು ದಿಗ್ವಾಚಕಗಳಾಗಿವೆ.
ಸರ್ವನಾಮಗಳು : ನಾಮಪದಗಳ ಬದಲು ಬಳಸಲ್ಪಡುವ ಶಬ್ದಗಳಿಗೆ ಸರ್ವನಾಮಗಳೆನ್ನುವರು.
- ವಸ್ತುವಾಚಕಗಳು
- ಗುಣವಾಚಕಗಳು
- ಸಂಖ್ಯಾವಾಚಕಗಳು
- ಸಂಖ್ಯೇಯವಾಚಕಗಳು
- ಭಾವನಾಮಗಳು
- ಪರಿಮಾಣವಾಚಕಗಳು
- ಪ್ರಕಾರವಾಚಕಗಳು
- ದಿಗ್ವಾಚಕಗಳು
- ಸರ್ವನಾಮಗಳು
ವಸ್ತುವಾಚಕಗಳು :
ವಸ್ತುಗಳ ಹೆಸರುಗಳನ್ನು ಸೂಚಿಸುವ ಪದಗಳನ್ನು ವಸ್ತುವಾಚಕ ನಾಮಪದಗಳೆನ್ನುತ್ತಾರೆ. ಇವುಗಳಲ್ಲಿ ಮೂರು ಪ್ರಕಾರಗಳು ಅವು ರೂಢನಾಮ, ಅಂಕಿತನಾಮ ಮತ್ತು ಅನ್ವರ್ಥನಾಮ.
ರೂಢನಾಮ : ರೂಢಿಯಿಂದ ಬಂದ ಹೆಸರುಗಳನ್ನು ರೂಢನಾಮ ಎನ್ನುವರು.
ಉದಾ : ಹೂವು, ಮನೆ, ಊರು, ರಸ್ತೆ, ಸಮುದ್ರ, ಪಕ್ಷಿ, ಶಾಲೆ ಇತ್ಯಾದಿ.
ಅಂಕಿತನಾಮ : ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡ ಹೆಸರುಗಳನ್ನೆಲ್ಲ ಅಂಕಿತನಾಮಗಳು ಎನ್ನುತ್ತಾರೆ.
ಉದಾ: ವಿಧಾನಸೌಧ, ಕಾವೇರಿ, ಹಿಮಾಲಯ ಪರ್ವತ, ಅರಬ್ಬೀ ಸಮುದ್ರ ಇತ್ಯಾದಿ.
ಅನ್ವರ್ಥ ನಾಮಗಳು : ಅರ್ಥಕ್ಕೆ ಅನುಗುಣವಾದ ಹೆಸರುಗಳನ್ನು ಅನ್ವರ್ಥನಾಮ ಎನ್ನುವರು.
ಉದಾ: ರೈತ, ವ್ಯಾಪಾರಿ , ಕಮ್ಮಾರ, ಜಾಣ ಇತ್ಯಾದಿ.
ಗುಣವಾಚಕಗಳು : ವ್ಯಕ್ತಿ ಅಥವಾ ವಸ್ತುಗಳ ಗುಣ, ಸ್ವಭಾವಗಳನ್ನು ತಿಳಿಸುವ ಪದಗಳನ್ನು ಗುಣವಾಚಕಗಳೆನ್ನುವರು.
ಉದಾ: ಒಳ್ಳೆಯ, ಬಿಳಿಯ, ಹಳೆಯ , ಹೊಸದಾದ ಇತ್ಯಾದಿ.
ಸಂಖ್ಯಾವಾಚಕಗಳು : ಸಂಖ್ಯೆಯನ್ನು ಸೂಚಿಸುವ ಪದಗಳನ್ನು ಸಂಖ್ಯಾವಾಚಕಗಳ ಎಂದು ಕರೆಯುತ್ತಾರೆ.
ಉದಾ : ಒಂದು , ಹತ್ತು, ಸಾವಿರ, ಇಪ್ಪತ್ತು , ಒಂದು ಕೋಟಿ ಇತ್ಯಾದಿ.
ಸಂಖ್ಯೇಯವಾಚಕಗಳು : ಸಂಖ್ಯೆಗಳಿಂದ ಕೂಡಿದ ಶಬ್ದಗಳನ್ನು ಸಂಖ್ಯೇಯವಾಚಕಗಳು ಎನ್ನುವರು.
ಉದಾ : ಮೂರನೆಯ, ದುಪ್ಪಟ್ಟು ಇತ್ಯಾದಿ.
ಭಾವನಾಮಗಳು : ಭಾವನೆಗಳನ್ನು ವ್ಯಕ್ತ ಪಡಿಸುವ ಪದಗಳನ್ನು ಭಾವನಾಮಗಳು ಎನ್ನುವರು.
ಉದಾ : ಅರೆ, ಅಬ್ಬ , ಆಹಾ ಇತ್ಯಾದಿ.
ಪರಿಮಾಣವಾಚಕಗಳು : ಯಾವುದೇ ವಸ್ತುವಿನ ಪರಿಮಾಣಗಳಾದ ಗಾತ್ರ, ಅಳತೆ ಮುಂತಾದವುಗಳನ್ನು ಹೇಳುವ ಶಬ್ದಗಳನ್ನು ಪರಿಣಾಮವಾಚಕಗಳು ಎನ್ನುವರು .
ಉದಾ: ಇನ್ನಷ್ಟು, ಅಷ್ಟು, ಕೆಲವು, ಹಲವಾರು ಇತ್ಯಾದಿ
ಪ್ರಕಾರವಾಚಕಗಳು : ವಸ್ತುಗಳ ರೀತಿ ಅಥವಾ ಸ್ಥಿತಿಯನ್ನು ವಿವರಿಸುವ ಪದಗಳನ್ನು ಪ್ರಕಾರವಾಚಕಗಳು ಎನ್ನುವರು.
ಉದಾ: ಇಂತಹ , ಅಂತಹ ಇತ್ಯಾದಿ
ದಿಗ್ವಾಚಕಗಳು : ದಿಕ್ಕುಗಳನ್ನು ಸೂಚಿಸುವ ಪದಗಳು ದಿಗ್ವಾಚಕಗಳಾಗಿವೆ.
ಉದಾ : ಉತ್ತರ , ದಕ್ಷಿಣ, ಪೂರ್ವ, ಪಶ್ಚಿಮ, ನೈಋತ್ಯ, ಈಶಾನ್ಯ ಇತ್ಯಾದಿ.
ಸರ್ವನಾಮಗಳು : ನಾಮಪದಗಳ ಬದಲು ಬಳಸಲ್ಪಡುವ ಶಬ್ದಗಳಿಗೆ ಸರ್ವನಾಮಗಳೆನ್ನುವರು.
ಉದಾ : ಅವನು, ಅವಳು, ನಾನು, ನೀನು ಇತ್ಯಾದಿ.
Good information ..Thanks
ReplyDeletevery good
ReplyDelete