ನಾವೇಕೆ ಬದಲಾಗಬಾರದು?


Facebook ನಲ್ಲಿ  ಶ್ರೀಯುತ ಸುರೇಶ ದೇಶಪಾಂಡೆ ಎಂಬ ಸಹೃದಯಿಯೊಬ್ಬರ ಪರಿಚಯವಾಯಿತು. ಅವರ post ಒಂದು ನಮ್ಮ ಮಕ್ಕಳಿಗೆ ತುಂಬಾ ಅಗತ್ಯವಾಗಿದೆ ಎನ್ನಿಸಿತು, ಅದನ್ನು ಅವರ ಅಪ್ಪಣೆಯೊಂದಿಗೆ ನಿಮ್ಮ ಮುಂದೆ ಇಡುತ್ತಿದ್ದೇನೆ.

ನಾವೇಕೆ ಬದಲಾಗಬಾರದು?
ನಮ್ಮ ಮಕ್ಕಳಿಗೆ ನಾವೇಕೆ ಸರಿಯಾದ ಶಿಕ್ಷಣ ನೀಡ ಬಾರದು?
ಹಿಂದೂ ಕಾಲಮಾನದಲ್ಲಿ ಪಂಚಾಂಗದ ಕಲ್ಪನೆ ಹೇಗಿರುತ್ತದೆ? ಇದು ಅತೀ ನಿಖರವಾದ ಕಾಲಗಣನೆ. ಇದನ್ನು ಶಿಕ್ಷಣದಿಂದ ಹೊರಗಿಡಲಾಯಿತು. ಏಕೆ? ಅದೆಲ್ಲ ಬೇಡ.
ಎರಡು ಪಕ್ಷಗಳಿರುತ್ತವೆ. ಶುಕ್ಲ ಪಕ್ಷ ಹಾಗೂ ಕೃಷ್ಣ ಪಕ್ಷ. ಪೂರ್ಣಿಮೆಯೊಂದಿಗೆ ಶುಕ್ಲ ಪಕ್ಷದ ಮುಕ್ತಾಯ. ಅಮಾವಾಸ್ಯೆಯೊಂದಿಗೆ ಕೃಷ್ಣ ಪಕ್ಷದ ಮುಕ್ತಾಯ. ಇವನ್ನೇ ಶುದ್ಧ ಹಾಗೂ ವದ್ಯಗಳೆಂದೂ ಕರೆಯುತ್ತಾರೆ. 
1.      ಪ್ರತಿಪದಾ
2.      ದ್ವಿತಿಯಾ
3.      ತೃತಿಯಾ 
4.      ಚತುರ್ಥಿ 
5.      ಪಂಚಮಿ
6.      ಷಷ್ಠಿ
7.      ಸಪ್ತಮಿ
8.      ಅಷ್ಟಮಿ
9.      ನವಮಿ 
10.  ದಶಮಿ
11.  ಏಕಾದಶಿ
12.  ದ್ವಾದಶಿ
13.  ತ್ರಯೋದಶಿ
14.  ಚತುರ್ದಶಿ 
15.  ಪೂರ್ಣಿಮೆ ಇಲ್ಲ ಅಮಾವಾಸ್ಯೆ
 ಹೀಗೆ ದಿನಗಣನೆಯಾಗುತ್ತದೆ.

ಒಂದು ದಿನಮಾನದಲ್ಲಿ ಐದು ವಿಭಾಗಗಳು.  ವಾರ, ತಿಥಿ, ನಕ್ಷತ್ರ, ಯೋಗ ಹಾಗೂ ಕರಣ. ಇದೇ ಪಂಚ ಅಂಗಗಳು ಅಥವಾ ಪಂಚಾಂಗ
ಇದರ ಕಲ್ಪನೆ ಮರೆಯಾಗಿದೆ. ಮಕ್ಕಳಿಗೆ ವಿಷಯಗಳನ್ನು ನಾವೇ ಕಲಿಸೋಣ. ಇಪ್ಪತ್ತೇಳು ನಕ್ಷತ್ರಗಳಿವೆ. ಹನ್ನೆರಡು ರಾಶಿಗಳಿವೆ. ಹನ್ನೆರಡು ಮಾಸಗಳಿವೆ ಹನ್ನೆರಡು ಹುಣ್ಣಿಮೆಗಳೂ ಹನ್ನೆರಡು ಅಮಾವಾಸ್ಯೆಗಳೂ ಇವೆ.
ಮುಂದೆ ಒಂದೊಂದಾಗಿ ನೋಡೋಣ.

ಇಪ್ಪತ್ತೇಳು ನಕ್ಷತ್ರಗಳು.

. ಆಶ್ವಿನಿ
೧೦. ಮಘಾ
೧೯ ಮೂಲಾ
. ಭರಣಿ

 ೧೧. ಪೂರ್ವಾ
೨೦. ಪೂರ್ವಾಷಾಢಾ
. ಕೃತ್ತಿಕಾ

೧೨. ಉತ್ತರಾ
೨೧. ಉತ್ತರಾಷಾಢ.
. ರೋಹಿಣಿ

೧೩. ಹಸ್ತಾ
 ೨೨.  ಶ್ರವಣಾ
ಮೃಗಶಿರಾ

೧೪ . ಚಿತ್ತಾ
೨೩. ಧನಿಷ್ಠಾ
. ಆರಿದ್ರಾ

 ೧೫. ಸ್ವಾತಿ
೨೪ ಶತತಾರಾ
. ಪುನರ್ವಸು
೧೬.  ವಿಶಾಖಾ
೨೫ ಫೂರ್ವಾ ಭಾದ್ರಪದ
  . ಪುಷ್ಯ
೧೭. ಅನುರಾಧಾ
೨೬ ಉತ್ತರಾ ಭಾದ್ರಪದ
ಆಶ್ಲೇಷಾ
 ೧೮. ಜ್ಯೇಷ್ಠಾ
೨೭ ರೇವತಿ

ಇವು ಇಪ್ಪತ್ತೇಳು ನಕ್ಷತ್ರಗಳು. ಒಂದು ನಕ್ಷತ್ರಕಕ್ಕೆ ನಾಲ್ಕು ಪಾದಗಳು ಅಥವಾ ಚರಣಗಳು
ಒಟ್ಟಾರೆ ೧೦೮ ಚರಣಗಳು ಹನ್ನೆರಡು ರಾಸದಿಗಳಲ್ಲಿ ವಿಭಾಗವಾಗುತ್ತವೆ.
ಮೂರು ವರ್ಷದ ಮಕ್ಕಳಿಗೆ ಐದೈದು ನಕ್ಷತ್ರಗಳನ್ನು ಹೇಳತಾ ಹೋದರೆ ಹತ್ತು ಹದಿನೈದು ದಿನಗಳಲ್ಲಿ ತಯಾರಾಗುತ್ತಾರೆ.
ಮುಂದಿನ ದಿನಗಳಲ್ಲಿ ಶೈಕ್ಷಣಿಕ ವಿವರಗಳನ್ನು ಹೇಗೆ ನೆನಪಿನಲ್ಲಿ ಇಟ್ಟುಕೊಳ್ಳುವದು ಎಂಬುದಕ್ಕೆ ಇದು ಅಪರೋಕ್ಷವಾಗಿ ಹಾದಿ ಮಾಡಿ ಕೊಡುತ್ತದೆ.
ಹನ್ನೆರಡು ರಾಶಿಗಳು ಯಾವವು?

1.    ಮೇಷ ( ಕುರಿ) Aries
2.    ವೃಷಭ ( ಎತ್ತು) Taurus
3.    ಮಿಥುನ ( Gemini)
4.    ಕರ್ಕ ( Cancer)
5.    ಸಿಂಹ ( Leo)
6.    ಕನ್ಯಾ ( Virgo)
7.    ತುಲಾ ( Libra)
8.    ವೃಶ್ಚಿಕ. ( Scorpion)
9.    ಧನು ( Sagittarius)
10. ಮಕರ ( Capricorn)
11. ಕುಂಭ. ( Aquarius)
12. ಮೀನ. ( Pices)

ಅಶ್ವಿನಿ, ಭರಣಿ ಯ ಎಂಟು ಚರಣಗಳು + ಕೃತ್ತಿಕೆಯ ಒಂದು ಚರಣ ಸೇರಿ ........ ಮೇಷರಾಶಿ
ಕೃತ್ತಿಕಾ ಮೂರು ಚರಣ+ ರೋಹಿಣಿಯ ೪ + ಮೃಗಶಿರಾದ ೨ ಚರಣಗಳು ಸೇರಿ ವೃಷಭ ರಾಶಿ
ಹೀಗೆಯೇ ಎಲ್ಲಾ ೧೨ ರಾಶಿಗಳು ಮುಗಿಯುವವರೆಗೆ ನೂರಾ ಎಂಟು ಚರಣಗಳು ಮುಗಿಯುತ್ತವೆ.ಮಕ್ಕಳಿಗೆ ರಾಶಿಗಳ ಹೆಸರು ಕಲಿಸಿರಿ
ಇಂಗ್ಲೀಷ್ ನಲ್ಲೂ ಬರೆದಿದ್ದೇನೆ. ಚರಣ ವಿವರಗಳು ಬೇಕಾಗಿಲ್ಲ. ಮುಂದೆ ಆಸಕ್ತಿಯನ್ನು ಹೊಂದಿದರೆ ಕಲಿತಾರು.

ದಶ ದಿಕ್ಕುಗಳು

1.    ಪೂರ್ವ
2.    ಪಶ್ಚಿಮ
3.    ದಕ್ಷಿಣ
4.    ಉತ್ತರ
5.    ಪೂರ್ವ ದಕ್ಷಿಣ ನಡುವೆ ಆಗ್ನೇಯ
6.    ದಕ್ಷಿಣ ಪಶ್ಚಿಮ ನಡುವೆ ನೈರುತ್ಯ
7.    ಪಶ್ಚಿಮ ಉತ್ತರ ನಡುವೆ ವಾಯವ್ಯ
8.    ಉತ್ತರ ಪೂರ್ವ ನಡುವೆ ಈಶಾನ್ಯ
9.    ಊರ್ಧ್ವ ಮೇಲೆ
10. ಅಧೋ ಕೆಳಗೆ

ಇವು ಹತ್ತು ದಿಶೆಗಳು

ಶುಭ ಅಭ್ಯಾಸ

  --   ಸುರೇಶ ದೇಶಪಾಂಡೆ





100 ವಿರುದ್ಧ ಶಬ್ದಗಳ ಸಂಗ್ರಹ (Opposite Words)

  1. ನಿಜ x  ಸುಳ್ಳು 
  2. ಸ್ವರ  x  ಅಪಸ್ವರ 
  3. ಗುಣ  x  ಅವಗುಣ ( ದುರ್ಗುಣ) 
  4. ಆದಿ x ಅಂತ್ಯ 
  5. ತುದಿ x ಮೊದಲು 
  6. ಎಡ  x  ಬಲ 
  7. ಸ್ವದೇಶ  x  ವಿದೇಶ 
  8. ಆಕಾರ x ನಿರಾಕಾರ 
  9. ಕನಸು  x  ನನಸು 
  10. ಕಪ್ಪು x  ಬಿಳುಪು 
  11. ಹಗಲು x ರಾತ್ರಿ 
  12. ಮುಂಜಾನೆ  x ಸಂಜೆ 
  13. ಕತ್ತಲು   x  ಬೆಳಕು 
  14. ಸರಿ x ತಪ್ಪು 
  15. ವ್ಯಕ್ತ x ಅವ್ಯಕ್ತ  
  16. ತಲೆ x ಬುಡ 
  17. ತೇಲು x ಮುಳುಗು 
  18. ಜನನ x ಮರಣ 
  19. ಪಂಡಿತ x ಮೂರ್ಖ (ಪಾಮರ) 
  20. ಶಕ್ತ x ನಿಶಕ್ತ 
  21. ಸೋಲು x ಗೆಲುವು 
  22. ಜಯ  x ಅಪಜಯ 
  23. ಪಾಪ x ಪುಣ್ಯ 
  24. ಶುಭ  x  ಅಶುಭ 
  25. ನ್ಯಾಯ x ಅನ್ಯಾಯ 
  26. ಗಟ್ಟಿ x ಟೊಳ್ಳು 
  27. ಗೌರವ x ಅಗೌರವ 
  28. ಜನ x ನಿರ್ಜನ 
  29. ಪೂರ್ಣ x ಅಪೂರ್ಣ 
  30. ಧೈರ್ಯ  x ಅಧೈರ್ಯ 
  31. ಹುಟ್ಟು x ಸಾವು 
  32. ಪೂರ್ವ x ಪಶ್ಚಿಮ 
  33. ಉತ್ತರ x ದಕ್ಷಿಣ 
  34. ಬಡಗಣ x ತೆಂಕಣ 
  35. ಮೂಡಣ x ಪಡುವಣ 
  36. ನಗು x ಅಳು 
  37. ಆರೋಗ್ಯ x ಅನಾರೋಗ್ಯ 
  38. ಆಸೆ  x ನಿರಾಸೆ 
  39. ನಂಬಿಕೆ x ಅಪನಂಬಿಕೆ 
  40. ಜಂಗಮ x ಸ್ಥಾವರ 
  41. ಜ್ಞಾನ x ಅಜ್ಞಾನ 
  42. ಜಲ x ನಿರ್ಜಲ 
  43. ಅತಿವೃಷ್ಟಿ x ಅನಾವೃಷ್ಟಿ 
  44. ಉಪಯೋಗ x ದುರುಪಯೊಗ 
  45. ಕೃತಜ್ಞ x ಕೃತಘ್ನ 
  46. ಉಪಕಾರ x ಅಪಕಾರ 
  47. ನಿಶ್ಚಿತ x ಅನಿಶ್ಚಿತ 
  48. ಸರಳ x  ವಕ್ರ (ಸಂಕೀರ್ಣ )
  49. ಅಭಿಷಿಕ್ತ x  ಅನಭಿಷಿಕ್ತ 
  50. ಚಲ  x ನಿಶ್ಚಲ 
  51. ಸ್ಥಿರ x ಅಸ್ಥಿರ 
  52. ಉತ್ತೀರ್ಣ x ಅನುತ್ತೀರ್ಣ 
  53. ಉಚಿತ x ಅನುಚಿತ 
  54. ಉದ್ಯೋಗ x ನಿರುದ್ಯೋಗ 
  55. ಉದಯ x ಅಸ್ತ 
  56. ಆಧಾರ x ನಿರಾಧಾರ 
  57. ಆಶ್ರಿತ x ನಿರಾಶ್ರಿತ 
  58. ಸುವಾಸನೆ x  ದುರ್ವಾಸನೆ 
  59. ಸ್ವತಂತ್ರ x ಪರತಂತ್ರ 
  60. ಕೊನರು x ಕಮರು
  61. ಜ್ಞಾನಿ x ಅಜ್ಞಾನಿ  
  62. ಲಕ್ಷ್ಯ x ಅಲಕ್ಷ 
  63. ಸಜ್ಜನ x ದುರ್ಜನ 
  64. ಸನ್ಮಾರ್ಗ x ದುರ್ಮಾರ್ಗ 
  65. ಸದ್ಗತಿ x ದುರ್ಗತಿ 
  66. ಸನ್ಮಾನ  x  ಅಪಮಾನ 
  67.  ತ್ಯಾಗ x ಭೋಗ  
  68. ಅನಿರೀಕ್ಷಿತ  x  ನಿರೀಕ್ಷಿತ 
  69. ಪರಿಚಿತ  x  ಅಪರಿಚಿತ 
  70. ಪೂರ್ಣ  x  ಅಪೂರ್ಣ 
  71. ಲೌಕಿಕ  x  ಅಲೌಕಿಕ 
  72. ಆಡಂಬರ  x  ನಿರಾಡಂಬರ 
  73. ಮಾನವ  x  ದಾನವ 
  74. ಜೀವ  x  ನಿರ್ಜೀವ 
  75. ಉದಾರಿ  x  ಜಿಪುಣ 
  76. ಪರಾಕ್ರಮಿ x  ಹೇಡಿ 
  77. ಬಡವ  x  ಬಲ್ಲಿದ (ಶ್ರೀಮಂತ) 
  78. ದಾಕ್ಷಿಣ್ಯ x  ನಿರ್ದಾಕ್ಷಿಣ್ಯ  
  79. ಕಾಯು  x  ಕೊಲ್ಲು 
  80. ಜಡ  x  ಚೇತನ 
  81. ಪುರಸ್ಕಾರ  x  ತಿರಸ್ಕಾರ 
  82. ಕೀರ್ತಿ x  ಅಪಕೀರ್ತಿ 
  83. ಸ್ವರ್ಗ x  ನರಕ 
  84. ನಾಕ  x  ನರಕ 
  85. ತಂತು x  ನಿಸ್ತಂತು 
  86. ಶಾಂತಿ x  ಅಶಾಂತಿ 
  87. ಬಿಸಿ x  ತಂಪು 
  88. ಜಾತ x ಅಜಾತ 
  89. ಏಕ x ಅನೇಕ 
  90. ಕ್ಷಯ x  ಅಕ್ಷಯ 
  91. ಸಬಲ x  ದುರ್ಬಲ 
  92. ಅಬಲೆ x  ಸಬಲೆ 
  93. ವ್ಯವಸ್ಥೆ x  ಅವ್ಯವಸ್ಥೆ 
  94. ಚಾತುರ್ಯ x ಅಚಾತುರ್ಯ 
  95. ಸಂಗತ x  ಅಸಂಗತ 
  96. ಲಾಭ x  ಹಾನಿ  (ನಷ್ಟ)
  97. ಸಹಜ x  ಅಸಹಜ 
  98. ಶಕುನ x  ಅಪಶಕುನ 
  99. ಪ್ರಧಾನ x  ಗೌಣ 
  100. ಚಿಂತೆ x  ನಿಶ್ಚಿಂತೆ 

ತತ್ಸಮ ಹಾಗೂ ತದ್ಭವಗಳ ಪಟ್ಟಿ -2



ಈಗಾಗಲೇ ಒಮ್ಮೆ ತತ್ಸಮ ಹಾಗೂ ತದ್ಭವಗಳ  ಪಟ್ಟಿಯನ್ನು ಕೊಡಲಾಗಿತ್ತು , ಇಲ್ಲಿ ಇನ್ನೂ ಸ್ವಲ್ಪ ಶಬ್ದಗಳನ್ನು ಕೊಡಲಾಗಿದೆ .
ಹಳೆಯ ಪಟ್ಟಿಯ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ ತತ್ಸಮ ಹಾಗೂ ತದ್ಭವ
       
   
      ತತ್ಸಮ -ತದ್ಭವ 
  1. ಯಶ - ಜಸ  
  2. ವಿಧಿ - ಬೀದಿ
  3. ಭಿನ್ನ - ಭಂಗ
  4. ಶ್ರುತಿ - ಸ್ತುತಿ
  5. ಯಾತ್ರೆ - ಜಾತ್ರೆ
  6. ಶಾಲಾ - ಶಾಲೆ
  7. ಧಾರಾ- ಧರೆ
  8. ವಿದ್ಯೆ - ಬಿಜ್ಜೆ
  9. ನಿದ್ರಾ - ನಿದ್ದೆ
  10. ವಸತಿ - ಬಸದಿ
  11. ಘಂಟಾ - ಗಂಟೆ
  12. ಶರ್ಕರ - ಸಕ್ಕರೆ
  13. ಪರ್ವ- ಹಬ್ಬ
  14. ಕೀರ್ತಿ - ಕೀರುತಿ
  15. ಛಲ - ಚಲ
  16. ತ್ಯಾಗ - ಚಾಗ
  17. ಉದ್ಯೋಗ - ಉಜ್ಜುಗ
  18. ಅಮೃತ - ಅಮರ್ದು
  19. ಸಂತೋಷ- ಸಂತಸ
  20. ಸ್ಥಾನ - ತಾಣ
  21. ಶಿಶು - ಸಿಸು
  22. ಸಂಧ್ಯಾ - ಸಂಜೆ
  23. ಪಕ್ಷಿ - ಹಕ್ಕಿ
  24. ಪ್ರಾಣ - ಹರಣ
  25. ವನ - ಬನ
  26. ಭಕ್ತಿ - ಭಕುತಿ
  27. ರಾಜ - ರಾಯ
  28. ಮೃದು - ಮಿದು
  29. ವರ್ತಿ - ಬತ್ತಿ
  30. ಶೃಂಗಾರ - ಸಿಂಗಾರ
  31. ಸಹಸ್ರ - ಸಾವಿರ
  32. ದೃಷ್ಟಿ - ದಿಟ್ಟಿ
  33. ಗಂಗಾ - ಗಂಗೆ
  34. ಮೂರ್ತಿ - ಮೂರುತಿ
  35. ಲಕ್ಷ್ಮೀ - ಲಕುಮಿ
  36. ಪರೀಕ್ಷಿಸು - ಪರಕಿಸು
  37. ಆಜ್ಞೆ - ಅಪ್ಪಣೆ
  38. ಶೃಂಖಲಾ - ಸಂಕೋಲೆ
  39. ವರ್ಣಬಣ್ಣ
  40. ತ್ರಿಪದಿ - ತಿವಟ



ನಾಮಪದಗಳ ಪ್ರಕಾರಗಳು (Types of Nouns)

ನಾಮಪದಗಳ ಮುಖ್ಯವಾದ  ಪ್ರಕಾರಗಳು ಈ ಕೆಳಗಿನಂತಿವೆ.


  1. ವಸ್ತುವಾಚಕಗಳು 
  2. ಗುಣವಾಚಕಗಳು 
  3. ಸಂಖ್ಯಾವಾಚಕಗಳು
  4. ಸಂಖ್ಯೇಯವಾಚಕಗಳು
  5. ಭಾವನಾಮಗಳು 
  6. ಪರಿಮಾಣವಾಚಕಗಳು 
  7. ಪ್ರಕಾರವಾಚಕಗಳು 
  8. ದಿಗ್ವಾಚಕಗಳು    
  9. ಸರ್ವನಾಮಗಳು     
ವಸ್ತುವಾಚಕಗಳು : 
 ವಸ್ತುಗಳ ಹೆಸರುಗಳನ್ನು ಸೂಚಿಸುವ ಪದಗಳನ್ನು ವಸ್ತುವಾಚಕ ನಾಮಪದಗಳೆನ್ನುತ್ತಾರೆ.  ಇವುಗಳಲ್ಲಿ ಮೂರು ಪ್ರಕಾರಗಳು ಅವು ರೂಢನಾಮ, ಅಂಕಿತನಾಮ ಮತ್ತು ಅನ್ವರ್ಥನಾಮ. 

ರೂಢನಾಮ : ರೂಢಿಯಿಂದ  ಬಂದ ಹೆಸರುಗಳನ್ನು ರೂಢನಾಮ ಎನ್ನುವರು. 

ಉದಾ :  ಹೂವು, ಮನೆ, ಊರು, ರಸ್ತೆ, ಸಮುದ್ರ, ಪಕ್ಷಿ, ಶಾಲೆ  ಇತ್ಯಾದಿ. 

ಅಂಕಿತನಾಮ : ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡ ಹೆಸರುಗಳನ್ನೆಲ್ಲ ಅಂಕಿತನಾಮಗಳು ಎನ್ನುತ್ತಾರೆ.

 ಉದಾ: ವಿಧಾನಸೌಧ, ಕಾವೇರಿ, ಹಿಮಾಲಯ ಪರ್ವತ, ಅರಬ್ಬೀ ಸಮುದ್ರ  ಇತ್ಯಾದಿ. 

ಅನ್ವರ್ಥ ನಾಮಗಳು :  ಅರ್ಥಕ್ಕೆ  ಅನುಗುಣವಾದ ಹೆಸರುಗಳನ್ನು ಅನ್ವರ್ಥನಾಮ  ಎನ್ನುವರು. 

ಉದಾ: ರೈತ, ವ್ಯಾಪಾರಿ , ಕಮ್ಮಾರ, ಜಾಣ  ಇತ್ಯಾದಿ. 

ಗುಣವಾಚಕಗಳು : ವ್ಯಕ್ತಿ ಅಥವಾ ವಸ್ತುಗಳ ಗುಣ,  ಸ್ವಭಾವಗಳನ್ನು  ತಿಳಿಸುವ ಪದಗಳನ್ನು ಗುಣವಾಚಕಗಳೆನ್ನುವರು. 

ಉದಾ:    ಒಳ್ಳೆಯ, ಬಿಳಿಯ,  ಹಳೆಯ , ಹೊಸದಾದ ಇತ್ಯಾದಿ. 


ಸಂಖ್ಯಾವಾಚಕಗಳು :
ಸಂಖ್ಯೆಯನ್ನು ಸೂಚಿಸುವ ಪದಗಳನ್ನು ಸಂಖ್ಯಾವಾಚಕಗಳ  ಎಂದು ಕರೆಯುತ್ತಾರೆ. 
ಉದಾ : ಒಂದು , ಹತ್ತು, ಸಾವಿರ, ಇಪ್ಪತ್ತು , ಒಂದು ಕೋಟಿ  ಇತ್ಯಾದಿ. 

ಸಂಖ್ಯೇಯವಾಚಕಗಳು : ಸಂಖ್ಯೆಗಳಿಂದ ಕೂಡಿದ ಶಬ್ದಗಳನ್ನು ಸಂಖ್ಯೇಯವಾಚಕಗಳು ಎನ್ನುವರು. 

ಉದಾ : ಮೂರನೆಯ, ದುಪ್ಪಟ್ಟು ಇತ್ಯಾದಿ. 


ಭಾವನಾಮಗಳು : ಭಾವನೆಗಳನ್ನು ವ್ಯಕ್ತ ಪಡಿಸುವ ಪದಗಳನ್ನು ಭಾವನಾಮಗಳು ಎನ್ನುವರು. 

ಉದಾ : ಅರೆ, ಅಬ್ಬ , ಆಹಾ ಇತ್ಯಾದಿ. 


ಪರಿಮಾಣವಾಚಕಗಳು :
ಯಾವುದೇ ವಸ್ತುವಿನ ಪರಿಮಾಣಗಳಾದ ಗಾತ್ರ, ಅಳತೆ ಮುಂತಾದವುಗಳನ್ನು ಹೇಳುವ ಶಬ್ದಗಳನ್ನು ಪರಿಣಾಮವಾಚಕಗಳು ಎನ್ನುವರು . 

ಉದಾ: ಇನ್ನಷ್ಟು, ಅಷ್ಟು, ಕೆಲವು, ಹಲವಾರು ಇತ್ಯಾದಿ 


ಪ್ರಕಾರವಾಚಕಗಳು :
ವಸ್ತುಗಳ  ರೀತಿ ಅಥವಾ ಸ್ಥಿತಿಯನ್ನು ವಿವರಿಸುವ ಪದಗಳನ್ನು ಪ್ರಕಾರವಾಚಕಗಳು ಎನ್ನುವರು. 
ಉದಾ: ಇಂತಹ , ಅಂತಹ ಇತ್ಯಾದಿ 


ದಿಗ್ವಾಚಕಗಳು  : ದಿಕ್ಕುಗಳನ್ನು ಸೂಚಿಸುವ ಪದಗಳು ದಿಗ್ವಾಚಕಗಳಾಗಿವೆ. 

ಉದಾ : ಉತ್ತರ , ದಕ್ಷಿಣ, ಪೂರ್ವ, ಪಶ್ಚಿಮ, ನೈಋತ್ಯ, ಈಶಾನ್ಯ ಇತ್ಯಾದಿ.  


ಸರ್ವನಾಮಗಳು :  ನಾಮಪದಗಳ ಬದಲು   ಬಳಸಲ್ಪಡುವ ಶಬ್ದಗಳಿಗೆ ಸರ್ವನಾಮಗಳೆನ್ನುವರು. 

ಉದಾ : ಅವನು, ಅವಳು, ನಾನು, ನೀನು ಇತ್ಯಾದಿ. 


ನಾಮಪದ (Noun)

ಯಾವುದೇ   ವ್ಯಕ್ತಿಯ, ವಸ್ತುವಿನ , ಸ್ಥಳದ, ಸಂಖ್ಯೆಯ  ಅಥವಾ ಪ್ರಾಣಿಯ ಇತ್ಯಾದಿಗಳ  ಹೆಸರನ್ನು ತಿಳಿಸುವ ಶಬ್ದಗಳಿಗೆ ನಾಮಪದ (Noun) ಎನ್ನುವರು.

 ಉದಾಹರಣೆ:

  • ಕಮಲಳು  ಊಟ ಮಾಡುತ್ತಿದ್ದಾಳೆ. 
  • ಕೆಂಪುಕೋಟೆ ದೆಹಲಿಯಲ್ಲಿದೆ . 
  • ಆಕಳು ಒಂದು ಸಾಕುಪ್ರಾಣಿ. 
  • ಮಾವಿನ ಹಣ್ಣು ತುಂಬಾ ರುಚಿಯಾಗಿದೆ. 
ಇಲ್ಲಿ ಕಮಲ, ಕೆಂಪುಕೋಟೆ, ದೆಹಲಿ. ಆಕಳು ಮಾವಿನಹಣ್ಣು ಇವೆಲ್ಲ ನಾಮಪದಗಳಾಗಿವೆ. 

ನಾಮಪದಗಳ ಪ್ರಕಾರಗಳು ( Types of Noun)

ನಾಮಪದಗಳಲ್ಲಿ ಪ್ರಕಾರಗಳು  ಈ ಕೆಳಗಿನಂತಿವೆ.

  1. ವಸ್ತುವಾಚಕಗಳು 
  2. ಗುಣವಾಚಕಗಳು 
  3. ಸಂಖ್ಯಾವಾಚಕಗಳು
  4. ಸಂಖ್ಯೆಯವಾಚಕಗಳು 
  5. ಭಾವನಾಮಗಳು 
  6. ಪರಿಮಾಣವಾಚಕಗಳು 
  7. ಪ್ರಕಾರವಾಚಕಗಳು 
  8. ದಿಗ್ವಾಚಕಗಳು    
  9. ಸರ್ವನಾಮಗಳು     


ಬಣ್ಣದ ಬುಗುರಿ

ನನ್ನಯ ಬುಗುರಿ ಬಣ್ಣದ ಬುಗುರಿ
‘ಗುರು ಗುರು’ ಸದ್ದನು ಮಾಡುವ ಬುಗುರಿ  
ಜಾಳಿಗೆ ಸುತ್ತಿ ಕೈಯನು ಎತ್ತಿ
ಬೀಸಲು ಭರದಿ ಸುತ್ತುವ ಬುಗುರಿ
ಕಚಗುಳಿಯಿಕ್ಕುವ ಮೋಜಿನ ಬುಗುರಿ  
ಕಾಮನ ಬಿಲ್ಲನು ಭೂಮಿಗೆ ಇಳಿಸಿ 
‘ಗರ ಗರ’ ಸುತ್ತುವ ಬಣ್ಣದ ಬುಗುರಿ.

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ


ಒಬ್ಬ ಕುಂಬಾರ ಮಡಿಕೆ ಮಾಡಬೇಕೆಂದರೆ ಬಹಳ ಕಷ್ಟ ಪಡಬೇಕಾಗುತ್ತದೆ. ಮಡಕೆ ಮಾಡಲು ಬೇಕಾದ ಮಣ್ಣನ್ನು ಸರಿಯಾದ ಕಡೆಯಿಂದ ಹೊತ್ತು ತರಬೇಕು. ಅದಕ್ಕೆ ನೀರು ಹಾಕಿ ಚೆನ್ನಾಗಿ ತುಳಿದು ಹಸನು ಮಾಡಬೇಕು. ನಂತರ ಮಡಕೆ ಮಾಡುವ ಚಕ್ರದಲ್ಲಿ ಹಸನಾದ ಮಣ್ಣನ್ನು ಇಟ್ಟು ಚಕ್ರ ತಿರುಗಿಸಿ ಮಡಕೆ ಆಕಾರ ಕೊಡಬೇಕು. ಅದನ್ನೂ ಬಲು ಜಾಗರೂಕತೆಯಿಂದ, ತಾಳ್ಮೆಯಿಂದ ಗಮನವಿಟ್ಟು ಮಾಡಬೇಕು. ಇಲ್ಲವಾದಲ್ಲಿ ಮಡಕೆಯ ಆಕಾರ ಹಾಳಾಗಬಹುದು ಅಥವಾ ಮಡಕೆಗೆ ಸಣ್ಣ ತೂತು ಬಿದ್ದರೂ ಅಷ್ಟು ಮಣ್ಣು ಹಾಳಾಗುತ್ತದೆ. ನಂತರ ಆಕಾರ ಪಡೆದ ಹಸಿ ಮಡಕೆಯನ್ನು ಸ್ವಲ್ಪ ಒಣಗಿಸಿ, ಒಲೆಯಲ್ಲಿಟ್ಟು ಹದವಾಗಿ ಬೇಯಿಸಬೇಕು. ನಂತರವೇ ಒಂದು ಒಳ್ಳೆಯ ಮಡಕೆ ತಯಾರಾಗುತ್ತದೆ. ನಂತರ ಅದನ್ನು ಒಡೆಯದಂತೆ ಜೋಪಾನ ಮಾಡಬೇಕು. ಗ್ರಾಹಕರಿಗೆ ಆಕರ್ಷಿಸುವಂತೆ ಒಪ್ಪವಾಗಿ ಜೋಡಿಸಬೇಕು. ಇಷ್ಟೆಲ್ಲಾ ಕಷ್ಟ ಪಟ್ಟ ನಂತರವೇ ಕುಂಬಾರನಿಗೆ ಮಡಿಕೆಯ ವ್ಯಾಪಾರವಾಗಿ ಲಾಭವಾಗಲು ವರುಷವಾದರೂ ಬೇಕಾಗುತ್ತದೆ. ಆದರೆ ದೊಣ್ಣೆಯಿಂದ ಅದೇ ಮಡಿಕೆಯನ್ನು ಒಂದು ನಿಮಿಷದಲ್ಲಿ ಹೊಡೆದು ನಾಶ ಮಾಡಬಹುದು. 

ಈ ಗಾದೆಯಿಂದ ನಾವು ತಿಳಿದುಕೊಳ್ಳುವ ಅಂಶವೆಂದರೆ ತಾಳ್ಮೆಯಿಂದ ಎಂತಹ ಕೆಲಸವನ್ನು ಬೇಕಾದರೂ ಸಾಧಿಸಬಹುದು. ಆದರೆ ಅದೇ ಬುದ್ಧಿಯನ್ನು ಸಿಟ್ಟಿನ ಕೈಗೆ ಕೊಟ್ಟರೆ ಪಟ್ಟ ಶ್ರಮವೆಲ್ಲ ವ್ಯರ್ಥವಾಗಿ ಹೋಗುತ್ತದೆ. ಆದ್ದರಿಂದ ಯಾವುದೇ ಕೆಲಸವನ್ನು ಗಮನವಿಟ್ಟು, ತಾಳ್ಮೆವಹಿಸಿ, ಗೌರವಿಸಿ ಮಾಡಬೇಕು. ಹಾಗಾದಾಗ ಮಾತ್ರ ಅದರ ಫಲವನ್ನು ನಾವು ಅನುಭವಿಸಬಹುದು.

- ಸೀಮಾ ಕಂಚಿಬೈಲು

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚಣೆಗಳು

ಜನವರಿ
01 – ವಿಶ್ವ ಶಾಂತಿ ದಿನ.
02 – ವಿಶ್ವ ನಗುವಿನ ದಿನ.
10 - ವಿಶ್ವ ಹಿಂದಿ ದಿವಸ
12 – ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ)
15 – ಭೂ ಸೇನಾ ದಿನಾಚರಣೆ.
25 – ಅಂತರರಾಷ್ಟ್ರೀಯ ತೆರಿಗೆ ದಿನ.
26 - ಭಾರತದ ಗಣರಾಜ್ಯೋತ್ಸವ.
28 – ಸರ್ವೋಚ್ಛ ನ್ಯಾಯಾಲಯ ದಿನ.
30 – ಹುತಾತ್ಮರ ದಿನ(ಗಾಂಧಿಜೀ ಪುಣ್ಯತಿಥಿ)
ಜನೆವರಿ ಕೊನೆಯ ರವಿವಾರ - ಕುಷ್ಟರೋಗ ನಿವಾರಣಾ ದಿನ

ಫೆಬ್ರುವರಿ
4 - ವಿಶ್ವ ಕ್ಯಾನ್ಸರ್ ದಿನ.
14 - ವ್ಯಾಲೆಂಟೈನ್ ದಿನ.
20 — ಅಂತರಾಷ್ಟ್ರೀಯ.  ಸಾಮಾಜಿಕ ನ್ಯಾಯ ದಿನ
21- ವಿಶ್ವ ಮಾತೃಭಾಷಾ ದಿನ.
22 – ಸ್ಕೌಟ್ & ಗೈಡ್ಸ್ ದಿನ.
23 – ವಿಶ್ವ ಹವಾಮಾನ ದಿನ.
24 - ಕೇಂದ್ರ ಅಬಕಾರಿ ದಿನ.
28 – ರಾಷ್ಟ್ರೀಯ ವಿಜ್ಞಾನ ದಿನಾಚರಣೆ.

ಮಾರ್ಚ
03 - ವಿಶ್ವ ವನ್ಯಜೀವಿ ದಿನ.
04 - ರಾಷ್ಟ್ರೀಯ ಸುರಕ್ಷಾ ದಿವಸ.
08 – ಅಂತರಾಷ್ಟ್ರೀಯ ಮಹಿಳಾ ದಿನ.
12 – ದಂಡಿ ಸತ್ಯಾಗ್ರಹ ದಿನ.
13 - ವಿಶ್ವ ಧೂಮಪಾನ ರಹಿತ ದಿನ
15 – ವಿಶ್ವ ಬಳಕೆದಾರರ ದಿನ.
20 - ವಿಶ್ವ ಗುಬ್ಬಚ್ಚಿಗಳ ದಿನ
21 – ವಿಶ್ವ ಅರಣ್ಯ ದಿನ.
22 – ವಿಶ್ವ ಜಲ ದಿನ.

ಏಪ್ರಿಲ್
02 – ವಿಶ್ವ ಆಟಿಸಂ ಜಾಗೃತಿ ದಿನ.
07 – ವಿಶ್ವ ಆರೋಗ್ಯ ದಿನ.
10 - ವಿಶ್ವ ಹೋಮಿಯೋಪಥಿ ದಿನ.
14 – ಡಾ. ಅಂಬೇಡ್ಕರ್ ಜಯಂತಿ.
22 – ವಿಶ್ವ ಭೂದಿನ.
23 – ವಿಶ್ವ ಪುಸ್ತಕ ದಿನ.
24 -   ರಾಷ್ಟ್ರೀಯ ಪಂಚಾಯತ್ ರಾಜ್ ದಿನ
30 - ಆಯುಷ್ಮಾಮಾನ್ ಭಾರತ ದಿನ

ಮೇ
01 – ಕಾರ್ಮಿಕರ ದಿನ.
02 – ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ.
05 – ರಾಷ್ಟ್ರೀಯ ಶ್ರಮಿಕರ ದಿನ.
ಮೊದಲನೇ ರವಿವಾರ - ವಿಶ್ವ ನಗುವಿನ ದಿನ
ಮೊದಲನೇ ಮಂಗಳವಾರ - ವಿಶ್ವ ಅಸ್ತಮಾ ದಿನ
08 – ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ
15 – ಅಂತರಾಷ್ಟ್ರೀಯ ಕುಟುಂಬ ದಿನ.
ಎರಡನೇ ರವಿವಾರ - ವಿಶ್ವ ಅಮ್ಮಂದಿರ ದಿನ
21 - ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ದಿನ.
24 - ಕಾಮನ್ವೆಲ್ತ್ ದಿನ.
31 - ವಿಶ್ವ ತಂಬಾಕು ರಹಿತ ದಿನ.

ಜೂನ್ 
02 - ವಿಶ್ವ ಹಾಲು ದಿನ.
03 - ವಿಶ್ವ ಸೈಕಲ್ ದಿನ
05 – ವಿಶ್ವ ಪರಿಸರ ದಿನ.
08 - ವಿಶ್ವ ಸಾಗರ ದಿನ.
12 - ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನ
14 – ವಿಶ್ವ ರಕ್ತ ದಾನಿಗಳ ದಿನ
ಮೂರನೇ ರವಿವಾರ - ವಿಶ್ವ ಅಪ್ಪಂದಿರ ದಿನ
20 - ವಿಶ್ವ ನಿರಾಶ್ರಿತರ ದಿನ
21 - ಅಂತಾರಾಷ್ಟ್ರೀಯ ಯೋಗ ದಿವಸ.
26 – ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ.

ಜುಲೈ
01 – ರಾಷ್ಟ್ರೀಯ ವೈದ್ಯರ ದಿನ.
11 – ವಿಶ್ವ ಜನಸಂಖ್ಯಾ ದಿನ.
19 - ಬ್ಯಾಂಕ್ ರಾಷ್ಟ್ರೀಕರಣ ದಿನ.
28 - ವಿಶ್ವ ಹೆಪಟೈಟಿಸ್ ದಿನ.

ಅಗಷ್ಟ್ 
ಮೊದಲನೇ ರವಿವಾರ — ಸ್ನೇಹಿತರ ದಿನಾಚರಣೆ
06 – ಹಿರೋಶಿಮಾ ದಿನ.
09 – ನಾಗಾಸಾಕಿ ದಿನ/ಕ್ವಿಟ್ ಇಂಡಿಯಾ ದಿನಾಚರಣೆ. 
12 — ಅಂತಾರಾಷ್ಟ್ರೀಯ ಯುವ ದಿನ.
15 – ಭಾರತದ ಸ್ವಾತಂತ್ರ್ಯ ದಿನಾಚರಣೆ.
19 — ವಿಶ್ವ ಛಾಯಾಗ್ರಾಹಣ ದಿನಾಚರಣೆ.
29 – ರಾಷ್ಟ್ರೀಯ ಕ್ರೀಡಾ ದಿನಾಚರಣೆ.

ಸೆಪ್ಟೆಂಬರ್
05 – ಶಿಕ್ಷಕರ ದಿನಾಚರಣೆ(ರಾಧಾಕೃಷ್ಣನ್ ಜನ್ಮ ದಿನ)
08 – ವಿಶ್ವ ಸಾಕ್ಷರತಾ ದಿನ
14 – ಹಿಂದಿ ದಿನ(ಹಿಂದಿ ದಿವಸ್)
15 – ಇಂಜಿನಿಯರ್ ದಿನ, (ಸರ್ ಎಮ್ ವಿಶ್ವೇಶ್ವರಯ್ಯ ಜನ್ಮ ದಿನ).
16 – ವಿಶ್ವ ಓಝೋನ್ ದಿನ.
21— ಅಲ್ಜಮೈರ್ ದಿನ
26 — ವಿಶ್ವ ಕಿವುಡರ ದಿನ
27 — ವಿಶ್ವ ಪ್ರವಾಸೋದ್ಯಮ ದಿನ
28 – ವಿಶ್ವ ಹೃದಯ ದಿನ.

ಅಕ್ಟೋಬರ್
01 — ವಿಶ್ವ ಹಿರಿಯ ನಾಗರಿಕರ ದಿನ
02 – ವಿಶ್ವ ಅಹಿಂಸಾ ದಿನ/ಗಾಂಧೀ ಜಯಂತಿ/ಲಾಲ್ ಬಹದ್ದೂರ್ ಜಯಂತಿ
04 — ವಿಶ್ವ ಪ್ರಾಣಿ ಸಂರಕ್ಷಣಾ ದಿನ
05 – ವಿಶ್ವ ಶಿಕ್ಷಕರ ದಿನ.
08 – ವಾಯು ಸೇನಾ ದಿನ
09 – ವಿಶ್ವ ಅಂಚೆ ದಿನ.
10 – ವಿಶ್ವ ಮಾನಸಿಕ ಆರೋಗ್ಯ ದಿನ.
11 — ವಿಶ್ವ ಹೆಣ್ಣು ಮಗುವಿನ ದಿನ
16 – ವಿಶ್ವ ಆಹಾರ ದಿನ.
24 – ವಿಶ್ವ ಸಂಸ್ಥೆಯ ದಿನ.
31 – ರಾಷ್ಟ್ರೀಯ ಏಕತಾ ದಿನ(ಸರ್ದಾರ್ ವಲ್ಲಭಭಾಯಿ ಪಟೇಲ ಜನ್ಮ ದಿನ)

ನವೆಂಬರ್
01 – ಕನ್ನಡ ರಾಜ್ಯೋತ್ಸವ ದಿನ
07 — ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ
14 – ಮಕ್ಕಳ ದಿನಾಚರಣೆ/ಜವಾಹರ್ ಲಾಲ್ ನೆಹರೂ ಜನ್ಮ ದಿನ/ ವಿಶ್ವ ಮಧುಮೇಹ ದಿನಾಚರಣೆ.
21 — ವಿಶ್ವ ದೂರದರ್ಶನ ದಿನ
29 – ಅಂತರರಾಷ್ಟ್ರೀಯ ಸಾಮರಸ್ಯ ದಿನ.

ಡಿಸೆಂಬರ್
01 – ವಿಶ್ವ ಏಡ್ಸ್ ದಿನ.
02- ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ.
03 – ವಿಶ್ವ ಅಂಗವಿಕಲರ ದಿನ.
04 – ನೌಕಾ ಸೇನಾ ದಿನ.
07 – ಧ್ವಜ ದಿನಾಚರಣೆ.
10 – ವಿಶ್ವ  ಮಾನವ ಹಕ್ಕುಗಳ ದಿನ
11 — ಅಂತಾರಾಷ್ಟ್ರೀಯ ಪರ್ವತಗಳ ದಿನ
16 — ವಿಜಯ ದಿವಸ
22 — ರಾಷ್ಟ್ರೀಯ ಗಣಿತ ದಿನ ( ಶ್ರೀನಿವಾಸ್ ರಾಮಾನುಜನ್ ಜನ್ಮದಿನ)
23 – ರೈತರ ದಿನ (ಚರಣಸಿಂಗ್ ಜನ್ಮ ದಿನ)
25 — ಕ್ರಿಸ್ಮಸ್

ಬೇಸಿಗೆ ರಜೆಯ ಸದ್ವಿನಿಯೋಗ

     

        ಬೇಸಿಗೆ ರಜೆ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಅವರಿಗೆ ಪರೀಕ್ಷೆ ಮುಗಿದು ರಜೆ ಬಂತೆಂದರೆ ಸಾಕು ಬಿಸಿಲಿನ ಬೇಗೆ ಸೆಕೆ ಇದ್ಯಾವುದೂ ಲೆಕ್ಕಕ್ಕಿಲ್ಲ. ಓದಬೇಕು ಹೋಂವರ್ಕ್ ಮಾಡಬೇಕು, ಅಥವಾ ಶಾಲೆಗೆ ಹೋಗಬೇಕು ಅನ್ನುವ ಒತ್ತಡ ಇರುದಿಲ್ಲ ಅಲ್ಲವೇ? ಅವರು ಬೇಸಿಗೆ ರಜೆಗೆ ಅಂತಲೇ ತಮ್ಮ ಕಾರ್ಯಕ್ರಮ ಗಳ ಪಟ್ಟಿ ಮಾಡಿ ಇಟ್ಟುಕೊಂಡಿರುತ್ತಾರೆ. ವರ್ಷ ಪೂರ್ತಿ ಕಷ್ಟಪಟ್ಟು ಓದಿದ ಎಳೆಯ ಮಕ್ಕಳ   ಮಾನಸಿಕ ಹಾಗೂ ದೈಹಿಕ ವಿಕಸನಕ್ಕೆ ಬೇಸಿಗೆಯ ಈ ವಿರಾಮ ಅಗತ್ಯವೂ ಹೌದು.

ಮಕ್ಕಳ ಕಲಿಕೆಗೆ ಪೂರಕ. ಐತಿಹಾಸಿಕ ಸ್ಥಳಗಳ ಭೇಟಿ
   ಈ ರಜೆಯಲ್ಲಿ ಸಾಮಾನ್ಯವಾಗಿ ದೊಡ್ಡ ನಗರಗಳಲ್ಲಿ ವಾಸಿಸುವ  ಕುಟುಂಬಗಳು ತಮ್ಮ ಪಟ್ಟಣ ಹಳ್ಳಿಗಳಿಗೆ ಹೋಗುವುದು ಇದೆ. ಅಲ್ಲಿ ಮಕ್ಕಳು ತಮ್ಮ ತಂದೆ ಅಥವಾ ತಾಯಿಯ ಮನೆ ಅವರು ಕಲಿತ ಶಾಲೆ ಇದನ್ನೆಲ್ಲ ನೋಡಿ ನಲಿವುವುದು ಉಂಟು. ಬಂಧು ಬಳಗ ಅಜ್ಜಿ ಅಜ್ಜನ ಸಾನಿಧ್ಯದಲ್ಲಿ ಮಕ್ಕಳು ಶಾಲೆಯಲ್ಲಿ ಕಲಿಯುವ ಪಾಠಗಳನ್ನು ಕಲಿಯುತ್ತಾರೆ. ಪರಸ್ಪರ ಹೊಂದಾಣಿಕೆ, ಹಂಚಿಕೊಳ್ಳುವ ಗುಣ ಮತ್ತು  ಹಿರಿ ಕಿರಿಯರ ಜೊತೆ ನಡುವಳಿಕೆ ಮುಂತಾದ ಗುಣಗಳನ್ನು ಮಕ್ಕಳು ನೋಡಿಯೇ ಕಲಿಯುತ್ತಾರೆ.

   ಹೊಸ ಜಾಗಗಳಿಗೆ ಪ್ರವಾಸ ಹೋಗುವುದು ಈ ನಡುವೆ ಜಾಸ್ತಿಯಾಗಿದೆ. ದೇಶ ಸುತ್ತು ಅಥವಾ ಕೋಶ ಓಡು ಎನ್ನುವಂತೆ ಮಕ್ಕಳ ಸಮಗ್ರ. ಬೆಳವಣಿಗೆಗೆ ಇಂತಹ ಪ್ರವಾಸಗಳು ತುಂಬಾ ಸಹಕಾರಿ. ಸಾಮಾನ್ಯವಾಗಿ ಜನರು ಮಕ್ಕಳ ಜೊತೆ  ಐತಿಹಾಸಿಕ ತಾಣಗಳು,  ಗಿರಿಧಾಮಗಳು , ಸಮುದ್ರ ತೀರಗಳು ಅಥವಾ ಅಭಯಾರಣ್ಯ ಗಳಿಗೆ ಭೇಟಿ ಕೊಡುತ್ತಾರೆ.   ನಮ್ಮ ಇತಿಹಾಸ, ಪ್ರಾಕೃತಿಕ ಹಾಗೂ ಜೈವಿಕ  ವೈವಧ್ಯತೆಯನ್ನು ತಿಳಿಸಿಕೊಡಲು ಇದಕ್ಕಿಂತ ಬೇರೆ ಪ್ರಯೋಗಶಾಲೆ ಬೇಕೆ?

    ಬೇಸಿಗೆ ರಜೆ ಮಕ್ಕಳ ಕೌಶಲಾಭಿವೃದ್ಧಿಪಡಿಸಲು ಒಂದು ಅವಕಾಶವಾಗಿದೆ. ಶಾಲಾ ದಿನಗಳ ಒತ್ತಡದಲ್ಲಿ ಮಕ್ಕಳಲ್ಲಿ ಇರುವ ಆಸಕ್ತಿ ಹವ್ಯಾಸಗಳಿಗೆ ಸಮಯ ಸಿಗಲಿಕ್ಕಿಲ್ಲ. ಈ ಸಮಯದಲ್ಲಿ ಈಜು ಮುಂತಾದ ಅವರ ನೆಚ್ಚಿನ ಆಟೋಟ ಗಳಲ್ಲಿ ತೊಡಗಿಸಿಕೊಳ್ಳಬಹುದು. ಇದರಿಂದ ಅವರಲ್ಲಿ ಅಡಗಿರುವ ಕೌಶಲ್ಯ ಬೆಳಕಿಗೆ ಬರಲು ಅವಕಾಶ ಸಿಗುತ್ತದೆ. ಇನ್ನೂ,  ಮಕ್ಕಳು ಕಲಿಕೆ ಯಾವುದಾದರೂ ವಿಷಯದಲ್ಲಿ ಕಷ್ಟ ಅನುಭವಿಸುತ್ತಿದ್ದರೆ ಅದನ್ನು ಪರಿಹರಿಸಿ ಅವರ ಮುಂದಿನ ವರ್ಷದ ಓದನ್ನು ಸರಳವಾಗಿಸಬಹುದು.

    ಹೀಗೆ ಮಕ್ಕಳನ್ನು ಮೊಬೈಲ್ ಅಥವಾ ಟೀವಿ ಆಧಿನ ಮಾಡದಂತೆ ಮಾಲ್ ಮಿಲ್ಟಿಪ್ಲೆಕ್ಸ್ ಗಳ ಆಮಿಷಗಳಿಗೆ ಬೀಳದಂತೆ ಬೇಸಿಗೆಯ ಕಾಲಾವಕಾಶ ವನ್ನು ಸದ್ವಿನಿಯೋಗ ಮಾಡಿಕೊಳ್ಳುವುದು ತಂದೆ ತಾಯಿಯರ ಕೈಲಿಯಲ್ಲಿದೆ

ಕರಡಿ ಬೆಟ್ಟಕೆ ಹೋಯಿತು

ಕರಡಿ ಬೆಟ್ಟಕೆ ಹೋಯಿತು
ಕರಡಿ ಬೆಟ್ಟಕೆ ಹೋಯಿತು
ಕರಡಿ ಬೆಟ್ಟಕೆ ಹೋಯಿತೂ
ನೋಟ ನೋಡಲು

ನೋಡಿತೇನದು ನೋಡಿತೇನದು
ಬೆಟ್ಟದ ಇನ್ನೊಂದು ಭಾಗಾ
ಬೆಟ್ಟದ ಇನ್ನೊಂದು ಭಾಗ
ಕರಡಿ ನೋಡಿತು

ಹಲಸು ತಂದಿತು...ಜೇನ ಕಲಸಿತು
ಮರಿಗಳಿಗೆ ತಿನ್ನಿಸಿ
ತಾನು ತಿಂದು ತೇಗಿತು!