Showing posts with label Model Question Paper. Show all posts
Showing posts with label Model Question Paper. Show all posts

SSLC ಕನ್ನಡ ವ್ಯಾಕರಣ - 2

 1. ‘ಮಕ್ಕಳು ಚಿಟಚಿಟನೆ ಚೀರಿದರು’ ಈ ವಾಕ್ಯದಲ್ಲಿ ಗೆರೆ ಎಳೆದ ಪದ – 

a. ಅನುಕರಣಾವ್ಯಯ 

2. ‘ನೋಡಿ ನೋಡಿ’ ಈ ಪದ ಈ ವ್ಯಾಕರಣಾಂಶಕ್ಕೆ ಸೇರಿದೆ –

a. ದ್ವಿರುಕ್ತಿ 

3. ಗುಂಪಿಗೆ ಸೇರದ ಪದ ಯಾವುದು ಆಟಪಾಠ, ನಡೆನಡೆ, ಹೌದು ಹೌದು, ಸಾಕುಸಾಕು –

a. ಆಟಪಾಠ (ಏಕೆಂದರೆ ಆಟಪಾಠ ಜೋಡು ನುಡಿ ಉಳಿದವುಗಳೆಲ್ಲಾ ದ್ವಿರುಕ್ತಿಗಳು) 

4. ‘ಬೇಗ ಬೇಗ’ ಇದು ಈ ವ್ಯಾಕರಣಾಂಶಕ್ಕೆ ಉದಾಹರಣೆ – 

a. ದ್ವಿರುಕ್ತಿ 

5. ‘ಕಪ್ಪಕಾಣಿಕೆ’ ಪದದಲ್ಲಿರುವ ವ್ಯಾಕರಣಾಂಶ – 

a. ಜೋಡುನುಡಿ 

6. ‘ಪಟಪಟ, ಧರಣಿಮಂಡಲ, ನಡೆನಡೆ, ರೀತಿನೀತಿ’ ಪದಗಳಲ್ಲಿ ಅನುಕರಣಾವ್ಯಯ ಪದ ಯಾವುದು – 

a. ಪಟಪಟ 

7. ‘ಬಿಟ್ಟು ಬಿಡದೆ ಪಟಪಟನೆ ಸುರಿಯುವ ಮಳೆಯಲ್ಲಿ ಮಕ್ಕಳು ಹಿಂದೆ ಹಿಂದೆ ನೋಡದೆ ಆಡಿದರು’ ಈ ವ್ಯಾಕರಣ ವಾಕ್ಯದಲ್ಲಿರುವ ಅನುಕರಣಾವ್ಯಯ ಪದ 

a. ಪಟಪಟನೆ 

8. ‘ಕಾಡಿನ ದಾರಿಯಲ್ಲಿ ಹಾವು ಸರಸರನೆ ಹೋಯಿತು’ ಗೆರೆ ಎಳೆದ ಪದ 

a. ಅನುಕರಣಾವ್ಯಯ 

9. ‘ಪ್ರವಾಹದಲ್ಲಿ ಜನ ಮನೆ ಮಠಗಳನ್ನು ಕಳೆದುಕೊಂಡು ಊರೂರು ತಿರುಗಾಡಿದರು’ ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದ -  

a. ಊರೂರು 

10. ‘ಕಾಡಿಗೆ ಮತ್ತೆ ಮತ್ತೆ ಬೆಂಕಿ ಬಿದ್ದು ಧಗಧಗನೆ ಉರಿದು ಮರಗಳೆಲ್ಲ ನಾಶವಾದವು’ ಈ ವಾಕ್ಯದಲ್ಲಿರುವ ಅನುಕರಣಾವ್ಯಯ ಪದ –

a. ಧಗಧಗ 

11. ಅಭಿಪ್ರಾಯದ ವಿವರಣೆ ಇಂತಿದೆ ಎನ್ನುವುದನ್ನು ತಿಳಿಸುವಾಗ ಬಳಸುವ ಚಿಹ್ನೆ –

a. ವಿವರಣಾತ್ಮಕ ಚಿಹ್ನೆ 

12. ಪ್ರಶ್ನೆಗಳನ್ನು ಬರೆಯುವ ಸಂದರ್ಭದಲ್ಲಿ ಪದ ಅಥವಾ ವಾಕ್ಯದ ಅಂತ್ಯದಲ್ಲಿ ಬಳಸುವ ಚಿಹ್ನೆ –

a. ಪ್ರಶ್ನಾರ್ಥಕ ಚಿಹ್ನೆ 

13. ವಾಕ್ಯದ ಪೂರ್ಣಾರ್ಥ ಕ್ರಿಯೆಯನ್ನು ಸೂಚಿಸುವ ಚಿಹ್ನೆ – 

a. ಪೂರ್ಣವಿರಾಮ 

14. ‘ಒಂದು ದಿನ ನರಿಯು ಕೊಕ್ಕರೆ (ನೀರು ಹಕ್ಕಿ) ಯನ್ನು ಊಟಕ್ಕೆ ಕರೆಯಿತು’ ಈ ವಾಕ್ಯದಲ್ಲಿರುವ ವಿವರಣಾತ್ಮಕ ಚಿಹ್ನೆ 

a. ಆವರಣ ಚಿಹ್ನೆ 

15. ಬರವಣಿಗೆಯಲ್ಲಿ ಹರ್ಷ, ಅಚ್ಚರಿ, ದುಃಖ, ಕೋಪ ಇತ್ಯಾದಿ ಭಾವನೆಗಳನ್ನು ವ್ಯಕ್ತಪಡಿಸಲು ಬಳಸುವ ಲೇಖನ ಚಿಹ್ನೆಗಳನ್ನು ಹೀಗೆಂದು ಕರೆಯುತ್ತಾರೆ – 

a. ಭಾವಸೂಚಕ ಚಿಹ್ನೆ 

16. ‘ನಿನ್ನ ಹೆಸರೇನು?’ ಇಲ್ಲಿ ಬಳಸಿರುವ ಲೇಖನ ಚಿಹ್ನೆ – 

a. ಪ್ರಶ್ನಾರ್ಥಕ ಚಿಹ್ನೆ 

17. ‘ದ. ರಾ. ಬೇಂದ್ರೆ ಅವರ ಭಾವಗೀತೆಗಳನ್ನು ಕೇಳಿ ವಿದ್ಯಾರ್ಥಿಗಳು ಮೈಮರೆಯುವರು’ ಈ ವಾಕ್ಯವು –

a. ಮಿಶ್ರವಾಕ್ಯ

18. ಒಂದೇ ಪೂರ್ಣಕ್ರಿಯಾಪದದೊಡನೆ ಸ್ವತಂತ್ರ ಮತ್ತು ಖಚಿತ ಅರ್ಥ ಕೊಡುವ ವಾಕ್ಯಗಳೇ ಈ ವಾಕ್ಯ –

a. ಸಾಮಾನ್ಯ ವಾಕ್ಯ 

19. ‘ಮಕ್ಕಳು ಹಾಲನ್ನು ಕುಡಿಯುತ್ತಾರೆ ಮತ್ತು ಹಣ್ಣನ್ನು ತಿನ್ನುತ್ತಾರೆ’ ಈ ವಾಕ್ಯವು – 

a. ಸಂಯೋಜಿತವಾಕ್ಯ 

20. ಉಪಮೇಯಕ್ಕಿರುವ ಹೆಸರು – 

a. ವರ್ಣ್ಯ 

21. ಯಾವ ವಸ್ತುವನ್ನು ಆಧಾರವಾಗಿಟ್ಟುಕೊಂಡು ಉಪಮೆಯನ್ನು ವರ್ಣಿಸಲಾಗಿದೆಯೋ ಅದನ್ನು _________ ಎನ್ನುತ್ತಾರೆ – 

a. ಉಪಮಾನ (ವರ್ಣಕ)

22. ‘ಗೌರಿಯ ಮುಖ ಕಮಲದಂತೆ ಅರಳಿತ್ತು’ ಈ ವಾಕ್ಯದಲ್ಲಿರುವ ಸಮಾನಧರ್ಮ – 

a. ಅರಳಿತ್ತು 

23. ‘ಹೂವಿನ ಹಾಗೆ ಸುಂದರ’ ಈ ಉಪಮಾಲಂಕಾರದಲ್ಲಿ ಉಪಮಾನ –

a. ಹೂ 

24. ಉಪಮಾನವೇ ಉಪಮೇಯವೆಂದು ರೂಪಿಸಿ ಅಭೇದತೆಯನ್ನು ಹೇಳುವ ಅಲಂಕಾರ – 

a. ರೂಪಕ 

25. ಪದ್ಯ ರಚನೆಯ ನಿಯಮಗಳನ್ನು ವಿವರಿಸುವ ಶಾಸ್ತ್ರ –

a. ಛಂದಸ್ಸು 

26. ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಆದಿ ಮದ್ಯ ಅಂತ್ಯದಲ್ಲಿ ನಿಯತವಾಗಿ ಬಂದರೆ ________ ಎನ್ನುತ್ತಾರೆ – 

a. ಪ್ರಾಸ 

27. ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ – 

a. ಯತಿ

28. ಗಣದಲ್ಲಿ ಎಷ್ಟು ವಿಧ – 

a.

29. ಎರಡು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುವವರು – 

a. ಗುರು 

30. ಅಕ್ಷರವನ್ನು ಉಚ್ಚರಿಸಲು ಬೇಕಾಗುವ ಕಾಲವನ್ನು ಹೀಗೆ ಕರೆಯುವರು – 

a. ಮಾತ್ರೆ 

31. ಮೂರು ಸಾಲಿನ ಪದ್ಯಕ್ಕೆ ಹೀಗೆನ್ನುವವರು –

a. ತ್ರಿಪದಿ 

32. ಇದು ಅಚ್ಚ ಕನ್ನಡದ ದೇಶಿ ಛಂದಸ್ಸು – 

a. ತ್ರಿಪದಿ  

33. ಮುಕುತಿ, ಬಕುತಾ, ಜನುಮ, ವ್ಯವಸಾಯ ಈ ಪದಗಳಲ್ಲಿ ತತ್ಸಮ ರೂಪಕ್ಕೆ ಉದಾಹರಣೆಯಾಗಿರುವ ಪದ – 

a. ವ್ಯವಸಾಯ 

34. ‘ವಿದ್ಯೆ’ ಈ ಪದದ ತದ್ಭವ ರೂಪ – 

a. ಬಿಜ್ಜೆ 

35. ‘ಜೀವವೊಂದು’ ಈ ಪದದಲ್ಲಿರುವ ಸಂಧಿ –

a. ಆಗಮ ಸಂಧಿ 

36. ತತ್ತ್ವಪದ, ಕಾವ್ಯವಾಚನ, ಹೆಗ್ಗುರಿ, ಮೈಮರೆತು ಈ ಪದಗಳಲ್ಲಿ ಕರ್ಮಧಾರೆಯ ಸಮಾಸಕ್ಕೆ ಉದಾಹರಣೆಯಾಗಿರುವ ಪದ – 

a. ಹೆಗ್ಗುರಿ 

37. ಪ್ರಧಾನ ವಾಕ್ಯದಲ್ಲಿಯ ಅನೇಕ ಉಪವಾಕ್ಯಗಳು ಅಂತ್ಯದಲ್ಲಿ ಬಳಸುವ ಲೇಖನ ಚಿಹ್ನೆ – 

a. ಅರ್ಧವಿರಾಮ 

38. ‘ಅಬ್ಬಾ! ಈ ವನ ಎಷ್ಟು ಸುಂದರವಾಗಿದೆ’ ಈ ವಾಕ್ಯದಲ್ಲಿ ಬಳಸಿರುವ ಲೇಖನ ಚಿಹ್ನೆ – 

a. ಭಾವಸೂಚಕ 

39. ‘ಬ್ರಹ್ಮ’ ಈ ಪದದ ತದ್ಭವ ರೂಪ – 

a. ಬೊಮ್ಮ 

40. ಎರಡೂ ಮಾತ್ರ ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ______ ಎಂದು ಕರೆಯುತ್ತಾರೆ – 

a. ದೀರ್ಘಸ್ವರ 

41. ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಗಳ ಸಂಖ್ಯೆ –

a. 34 

42. ಬರವಣಿಗೆಯಲ್ಲಿ ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ತಿಳಿಸಲು ಬಳಚು ಬಳಸುವ ಚಿಹ್ನೆ – 

a. ಉದ್ಧರಣ 

43. ‘ಅವನು’ ಈ ಪದವು ಈ ಸರ್ವನಾಮಕ್ಕೆ ಉದಾಹರಣೆಯಾಗಿದೆ – 

a. ಪ್ರಥಮ ಪುರುಷ 

44. ‘ಗೌರಿಯ ಮುಖ ಕಮಲದಂತೆ ಅರಳಿತ್ತು’ ಈ ವಾಕ್ಯದಲ್ಲಿ ಬಂದಿರುವ ಉಪಮೇಯ – 

a. ಕಮಲ 

45. ತಂದೆ ತಾಯಿ ಹಿರಿಯರಿಗೆ ಪತ್ರ ಬರೆಯುವಾಗ ಬಳಸುವ ಮುಕ್ತಾಯದ ಗೌರವ ಸಂಬೋಧನೆ – 

a. ನಮಸ್ಕಾರಗಳು 

46. ‘ಸತ್ಪುರುಷರ ಸಹವಾಸದಲ್ಲಿ ಶರೀಫರು ಬಾಳಿಬದುಕಿದರು’ ಇಲ್ಲಿ ಸಪ್ತಮೀ ವಿಭಕ್ತಿಪ್ರತ್ಯಯದಿಂದ ಕೂಡಿರುವ ಪದ – 

a. ಸಹವಾಸದಲ್ಲಿ 

47. ‘ಕಲಶ’ ಈ ಪದದ ತದ್ಭವ ರೂಪ – 

a. ಕಳಸ 

48. ‘ಅರಮನೆ’ ಪದವು ಈ ಸಮಾಸಕ್ಕೆ ಉದಾಹರಣೆ – 

a. ತತ್ಪುರುಷ 

49. ರೋಗರುಜಿನ, ಕಣಕಣ, ಧಮನಿ ಧಮನಿ, ಕಿಡಿಕಿಡಿ ಈ ಪದಗಳಲ್ಲಿ ಜೋಡುನುಡಿಗೆ ಉದಾಹರಣೆಯಾಗಿರುವ ಪದ – 

a. ರೋಗರುಜಿನ 

50. ‘ಹಿಮಾಲಯ’ ಇದು ಈ ನಾಮಪದಕ್ಕೆ ಉದಾಹರಣೆಯಾಗಿದೆ –

a. ಅಂಕಿತನಾಮ 

51. ‘ಕೈಮುಗಿ’ ಈ ಪದದಲ್ಲಿರುವ ಸಮಾಸ – 

a. ಕ್ರಿಯಾಸಮಾಸ 

52. ನೀನು, ತಾನು, ನಾನು, ಇವನು ಈ ಪದಗಳಲ್ಲಿ ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ – 

a. ತಾನು 

53. ‘ಭಾಗವತರು ಬಯಲಾಟಗಳಲ್ಲಿ ಪಾತ್ರ ವಹಿಸಿ ಪ್ರೇಕ್ಷಕರ ಕಣ್ಮನಗಳನ್ನು ತಣಿಸುತ್ತಿದ್ದರು’ ಇಲ್ಲಿ ದ್ವಿತೀಯ ವಿಭಕ್ತಿಯಿಂದ ಕೂಡಿರುವ ಪದ – 

a. ಕಣ್ಮನಗಳನ್ನು 

54. ‘ಚೆನ್ನಮ್ಮನು ಮಹಿಳೆ ಮತ್ತು ಮಕ್ಕಳನ್ನು ಅಕ್ಕರೆಯಿಂದ ಕಂಡ ಕರುಣಾಮಯಿ’ ಇದು _____ ವಾಕ್ಯಕ್ಕೆ ಉದಾಹರಣೆ– 

a. ಸಂಯೋಜಿತ ವಾಕ್ಯ 

55. ರಕ್ತಗಾಲಿನ, ಗೋಳಿಲ್ಲದ, ಕುಲವೆನ್ನದ, ಗುಂಡಿಲ್ಲದ ಈ ಪದಗಳಲ್ಲಿ _______ ಆದೇಶಸಂಧಿಗೆ ಉದಾಹರಣೆ – 

a. ರಕ್ತಗಾಲಿನ 

56. ‘ಕಾವ್ಯ’ ಪದದ ತದ್ಭವ ರೂಪ –

a. ಕಬ್ಬ 

57. ಆಕ್ಸಿಜನ್ ಇದು ಈ ಭಾಷೆಯಿಂದ ಬಂದ ಪದವಾಗಿದೆ –

a. ಇಂಗ್ಲೀಷ್ 

58. ________ ಇದು ಪ್ರಧಾನ ವಾಕ್ಯಗಳಲ್ಲಿನ ಉಪವಾಕ್ಯಗಳ ಅಂತ್ಯದಲ್ಲಿ ಬಳಕೆಯಾಗುತ್ತದೆ – 

a. ಅರ್ಧವಿರಾಮ ಚಿಹ್ನೆ (;)

59. ವಿಷಯಕ್ಕೆ ವಿವರಣೆ ನೀಡಲು _______ ವಿರಾಮ ಬಳಕೆಯಾಗುತ್ತದೆ – 

a. ವಿವರಣ ವಿರಾಮ (:) 

60. ಬರವಣಿಗೆಯಲ್ಲಿ ಯಾವುದಾದರೂ ಭಾಗವೊಂದನ್ನು ಅಳವಡಿಸಿದಾಗ ಅದರ ಪ್ರತ್ಯೇಕತೆ ಸೂಚಿಸಲು ಆ ಭಾಗವನ್ನು _______ ಚಿಹ್ನೆಯೊಳಗೆ ಬರೆಯಬೇಕು –

a. ವಾಕ್ಯವೇಷ್ಟನ (ಒಂಟಿ ಉದ್ಧರಣ)

SSLC ವಿಜ್ಞಾನ (ರಸಾಯನಶಾಸ್ತ್ರ) ವಸ್ತುನಿಷ್ಠ ಪ್ರಶ್ನೆಗಳು -1

ಈ ವರ್ಷ 2021 ರ SSLC ಪರೀಕ್ಷೆಯನ್ನು MCQ ಮಾದರಿಯಲ್ಲಿ ನಡೆಸಲು ಸರಕಾರವು ನಿರ್ಧರಿಸಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಸ್ತುನಿಷ್ಠ ಪ್ರಶ್ನೋತ್ತರಗಳನ್ನು ನೀಡಲಾಗಿದೆ. 

  1. .         ತಟಸ್ಥಿಕರಣ ಕ್ರಿಯೆಯ ಉತ್ಪನ್ನಗಳು ಯಾವವು ?

    a.       ನೀರು ಮತ್ತು ಲವಣ

    2.       ಜೇನು ಹುಳುವಿನ ಮುಳ್ಳಿನಲ್ಲಿರುವ ಆಮ್ಲ ಯಾವುದು ?

    a.       ಮೆಥನೋಯಿಕ್ ಆಮ್ಲ

    3.       ಕ್ರಿಯೆಯಲ್ಲಿ ವಸ್ತುವೊಂದು ಆಕ್ಸಿಜನ್ ಪಡೆದುಕೊಂಡರೆ, ಅದು  __________ ಗೊಂಡಿದೆ  ಎನ್ನುತ್ತಾರೆ.

    a.       ಉತ್ಕರ್ಷಣ

    4.       ಕ್ರಿಯೆಯಲ್ಲಿ ವಸ್ತುವೊಂದು ಆಕ್ಸಿಜನ್ ಕಳೆದುಕೊಂಡರೆ, ಅದು  __________ ಗೊಂಡಿದೆ  ಎನ್ನುತ್ತಾರೆ.

    a.       ಅಪಕರ್ಷಣ

    5.       ಚಿಪ್ಸ್ ತಯಾರಕರು, ಚಿಪ್ಸ್ ಉತ್ಕರ್ಷಣಗೊಳ್ಳುವುದನ್ನು ತಡೆಗಟ್ಟಲು ___________ ಅನಿಲವನ್ನು ಹಾಯಿಸುತ್ತಾರೆ. \

    a.       ನೈಟ್ರೋಜನ್

    6.       ಒಂದು ಧಾತುವು ಸಂಯುಕ್ತದಲ್ಲಿನ ಇನ್ನೊಂದು ಧಾತುವನ್ನು ಪಲ್ಲಟಗೊಳಿಸಿದಾಗ _________ ಕ್ರಿಯೆ ನಡೆಯುತ್ತದೆ.

    a.       ಸ್ಥಾನಪಲ್ಲಟ

    7.       ಉತ್ಪನ್ನಗಳೊಂದಿಗೆ ಉಷ್ಣ  ಬಿಡುಗಡೆಯಾಗುವ ಕ್ರಿಯೆಗಳನ್ನು ___________ ಕ್ರಿಯೆಗಳು ಎನ್ನುವರು.

    a.       ಬಹಿರುಷ್ಣಕ

    8.       ಮೊಸರಿನಲ್ಲಿರುವ ಆಮ್ಲ ಯಾವುದು?

    a.       ಲ್ಯಾಕ್ಟಿಕ್ ಆಮ್ಲ

    9.       ಲೋಹಗಳು ನೀರಿನ ಜೊತೆ ಪ್ರತಿವರ್ತಿಸಿದಾಗ ಲೋಹದ ಆಕ್ಸೈಡ್ ಮತ್ತು __________ ಅನಿಲವನ್ನು ಬಿಡುಗಡೆ ಮಾಡುತ್ತವೆ.

    a.       ಹೈಡ್ರೋಜನ್

    10.   ___________ ವು ಎರಡು ಅಥವಾ ಹೆಚ್ಚು ಲೋಹ ಅಥವಾ ಅಲೋಹಗಳ ಏಕರೂಪದ ಮಿಶ್ರಣವಾಗಿದೆ.

    a.       ಮಿಶ್ರಲೋಹ 

SSLC ಸಮಾಜ ವಿಜ್ಞಾನ ವಸ್ತುನಿಷ್ಠ ಪ್ರಶ್ನೆಗಳು - 2

 

ಈ ವರ್ಷ 2021 ರ SSLC ಪರೀಕ್ಷೆಯನ್ನು MCQ ಮಾದರಿಯಲ್ಲಿ ನಡೆಸಲು ಸರಕಾರವು ನಿರ್ಧರಿಸಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಸ್ತುನಿಷ್ಠ ಪ್ರಶ್ನೋತ್ತರಗಳನ್ನು ನೀಡಲಾಗಿದೆ. 


1.       ಮೊದಲನೇ ಆಂಗ್ಲೋ ಮರಾಠ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?

a.       ಸಾಲ್ ಬಾಯ್ ಒಪ್ಪಂದ

2.       ಪೇಶ್ವೆ ನಾರಾಯಣ್ ರಾವನನ್ನು ಕೊಲೆ ಮಾಡಿದವನು ________

a.       ರಘುನಾಥರಾವ್ ಅಥವಾ ರಘೋಬಾ

3.       ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವರು __________

a.       ಲಾರ್ಡ್ ವೆಲ್ಲೆಸ್ಲಿ

4.       ದತ್ತುಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದವರು _________

a.       ಲಾರ್ಡ್ ಡೌಲ್ ಹೌಸಿ

5.       ಮೈಸೂರು, ಔಧ್, ತಂಜಾವೂರುಗಳು ಬ್ರಿಟಿಷರ ________ ನಿಬಂಧನೆಗೆ ಒಳಪಟ್ಟಿದ್ದವು.  

a.       ಸಹಾಯಕ ಸೈನ್ಯ ಪದ್ದತಿಯ

6.       ಝಾನ್ಸಿ  ಬ್ರಿಟಿಷರ ________ನೀತಿಗೆ ಒಳಪಟ್ಟಿತ್ತು

a.       ದತ್ತುಮಕ್ಕಳಿಗೆ ಹಕ್ಕಿಲ್ಲ

7.       ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು ?

a.       ಲಾರ್ಡ್ ಕಾರ್ನವಾಲಿಸ್

8.       ರೆಗ್ಯುಲೇಟಿಂಗ್ ಕಾಯ್ದೆಯನ್ನು ಜಾರಿಗೆಗೊಳಿಸಿದ ವರ್ಷ ಯಾವುದು ?

a.       1773

9.        ರೆಗ್ಯುಲೇಟಿಂಗ್ ಕಾಯ್ದೆಯ ಅನ್ವಯ ___________ ದಲ್ಲಿ ಸುಪ್ರೀಂ ಕೋರ್ಟ್ ನ್ನು ಸ್ಥಾಪಿಸಲಾಯಿತು.

a.       ಕಲ್ಕತ್ತಾ

10.   ಭಾರತದ ಪ್ರಥಮ ವೈಸ್ ರಾಯ್ ಯಾರು ?

a.       ಲಾರ್ಡ್ ಕ್ಯಾನಿಂಗ್

ಸಾಮಾನ್ಯ ಜ್ಞಾನ - ಮಾದರಿ ಪ್ರಶ್ನೆಗಳು

 

1.       ಭಾರತ ಬಯೋಟೆಕ್ ಅಭಿವೃದ್ಧಿ ಪಡಿಸಿದ ಕೊರೋನ ಲಸಿಕೆಯ ಹೆಸರೇನು ?

ಕೋವಾಕ್ಸಿನ್

2.       ಪ್ರಮುಖ ಕೊವಿಡ್ ಲಸಿಕೆ ಉತ್ಪಾದಕ  ಸಂಸ್ಥೆ “ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ” ಎಲ್ಲಿದೆ?

ಪುಣೆ, ಮಹಾರಾಷ್ಟ್ರ

3.       ಇತ್ತೀಚಿಗೆ ಆಯ್ಕೆ ಆದ ಅಮೇರಿಕಾದ ಅಧ್ಯಕ್ಷರಾದ ಜೋ ಬಿಡೆನ್ ಯಾವ  ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದಾರೆ ?

ಡೆಮೋಕ್ರಾಟ್

4.       ಆಫ್ಘಾನಿಸ್ಥಾನದ ಅದ್ಯಕ್ಷರು ಯಾರು ?

ಅಶ್ರಫ್ ಘನಿ

5.       ಸಿಂಧೂ ಕಣಿವೆ ನಾಗರಿಕತೆಯ ಕಾಲ ಯಾವುದು?

ಕ್ರಿ ಪೂ 2500 ರಿಂದ ಕ್ರಿ ಪೂ 1750

6.       ಹರಪ್ಪ ನಾಗರಿಕತೆಯ ಜನರು ಯಾರ ಜೊತೆ ವ್ಯಾಪಾರ ಸಂಬಂಧ ಹೊಂದಿದ್ದರು ?

ಮೆಸಪಟೋಮಿಯ

7.       ಸಿಂಧೂ ಕಣಿವೆಯಲ್ಲಿ ಮಾನವ ನಿರ್ಮಿತ ಹಡಗು ಕಟ್ಟೆ ಎಲ್ಲಿ ಕಂಡು ಬಂದಿದೆ ?

ಲೋಥಾಲ್

8.       ಹೊಯ್ಸಳರ ರಾಜಧಾನಿಯಾಗಿದ್ದ ಹಳೆಬೀಡನ್ನು ಯಾವ ಹೆಸರಿನಿಂದ ಕರೆಯುತ್ತಿದ್ದರು ?

ದ್ವಾರಸಮುದ್ರ

9.       ವಿಶ್ವದ ಅತಿ ಉದ್ದದ ಮಹಾಕಾವ್ಯ ಯಾವುದು?

ಮಹಾಭಾರತ

10.   ಕಿರತಾರ್ಜುನಿಯವನ್ನು ರಚಿಸಿದವರು ಯಾರು?

ಭಾರವಿ

11.   “ಹರ್ಷ ಚರಿತ” ಯಾರ ಕೃತಿ ?

ಬಾಣಭಟ್ಟ

12.   “ಅಕ್ಬರ್ ನಾಮಾ” ರಚಿಸಿದವರು ಯಾರು ?

ಅಬು ಫಜಲ್

13.   ಗುಪ್ತರ  ರಾಜಧಾನಿ ಯಾವುದು?

ಪಾಟಲಿಪುತ್ರ

14.   ಬಂಗಾಳ ವಿಭಜನೆಯಾದ  ವರ್ಷ ಯಾವುದು ?

1905 ರಲ್ಲಿ

15.   ಯಾವ ವರ್ಷದಲ್ಲಿ ಮುಸ್ಲಿಂ ಲೀಗ್ ರಚನೆಯಾಯಿತು ?

1906 ರಲ್ಲಿ

16.   ಚೌರಿ ಚೌರ ಘಟನೆ ಯಾವಾಗ ನಡೆಯಿತು ?

5 ಫೆಬ್ರುವೆರಿ 1920 ರಂದು

17.   ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಯಾವಾಗ ನಡೆಯಿತು ?

13 ಏಪ್ರಿಲ್ 1919

18.   ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದವರು ಯಾರು ?

ರಾಮಾನುಜಾಚಾರ್ಯರು

19.   ಹುಮಾಯೂನನ ಗೋರಿ ಎಲ್ಲಿದೆ ?

ದೆಹಲಿ

20.   ಹವಾಮಹಲ್ ಎಲ್ಲಿದೆ ?

ಜೈಪುರ್, ರಾಜಸ್ಥಾನ್  

21.   ದರಿಯಾ ದೌಲತ್ ಬಾಗ್ ಎಲ್ಲಿದೆ ?

ಶ್ರೀರಂಗಪಟ್ಟಣ

22.   ದಕ್ಷಿಣ ಗೋಳಾರ್ಧದ ಸಣ್ಣದಾದ ದಿನ ಯಾವುದು ?

ಜೂನ್ 21

23.   ಉತ್ತರ ಗೋಳಾರ್ಧದ ಸಣ್ಣದಾದ ದಿನ ಯಾವುದು ?

ಡಿಸೆಂಬರ್ 21

24.   ಆರ್ಯ ಸಮಾಜದ ಸ್ಥಾಪಕರು ಯಾರು ?

ಸ್ವಾಮಿ ದಯಾನಂದ ಸರಸ್ವತಿ

25.   ಬ್ರಹ್ಮ ಸಮಾಜದ ಸ್ಥಾಪಕರು ಯಾರು ?

ರಾಜಾ ರಾಮ್ ಮೊಹನ ರಾಯ

26.   ಪ್ರಾರ್ಥನಾ ಸಮಾಜದ ಸಂಸ್ಥಾಪಕರು ಯಾರು ?

ಆತ್ಮರಾಮ್ ಪಾಂಡುರಂಗ

27.    ಸ್ವರಾಜ್ ಪಾರ್ಟಿಯನ್ನು ಯಾರು ಸ್ಥಾಪಿಸಿದರು?

ಮೋತಿಲಾಲ್ ನೆಹರು , ಸಿ ಆರ್ ದಾಸ್

28.   ಭಾರತದಲ್ಲಿ ಅತಿ ಹೆಚ್ಚು ಚಹಾ ಉತ್ಪಾದಿಸುವ ರಾಜ್ಯ ಯಾವುದು ?

ಅಸ್ಸಾಂ

29.   ಭಾರತದಲ್ಲಿ ಅತಿ ಹೆಚ್ಚು ಕಬ್ಬು  ಬೆಳೆಯುವ  ರಾಜ್ಯ ಯಾವುದು ?

ಉತ್ತರ ಪ್ರದೇಶ

30.   ಭಾರತದ ರಾಷ್ಟ್ರಧ್ವಜವನ್ನು ಯಾವಾಗ ಅಂಗಿಕರಿಸಲಾಯಿತು ?

22 ಜುಲೈ 1947 ರಂದು

31.   ರಾಷ್ಟ್ರೀಯ ಲಾಂಛನವನ್ನು ಯಾವಾಗ ಅಂಗಿಕರಿಸಲಾಯಿತು ?

26, ಜನೇವರಿ  1950 ರಂದು

32.   ಹೇಮಾವತಿ ನದಿ ಯಾವ ನದಿಯ ಉಪನದಿ ?

ಕಾವೇರಿ

33.   ಅಲಮಟ್ಟಿ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ ?

ಕೃಷ್ಣಾ ನದಿ 

34.   ಅತಿ ಹೆಚ್ಚು ವರ್ಷ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು ಯಾರು ?

 ದೇವರಾಜ್ ಅರಸ್

35.   ಶ್ರೀ ರಾಮಾಯಣ ದರ್ಶನಂ ಕೃತಿಗೆ, ಕುವೆಂಪು ಅವರಿಗೆ ಯಾವ ವರ್ಷದಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿತು ?

1967 ರಲ್ಲಿ

36.   ಕಡಲ ತೀರ ಭಾರ್ಗವ ಯಾರು ?

ಕೆ. ಶಿವರಾಂ ಕಾರಂತ್

37.   ಕೆ. ಶಿವರಾಂ ಕಾರಂತ್ ಅವರಿಗೆ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದಿತು ?

ಮೂಕಜ್ಜಿಯ ಕನಸುಗಳು

38.   ಬಂಡಿಪುರ ರಾಷ್ಟ್ರೀಯ ಉದ್ಯಾನವನ್ನು ಸ್ಥಾಪಿಸಿದ್ದು ಯಾವ ವರ್ಷದಲ್ಲಿ ?

1974 ರಲ್ಲಿ

39.   ಭದ್ರಾ ವನ್ಯಜೀವಿ ಅಭಯಾರಣ್ಯ ಯಾವ ಜಿಲ್ಲೆಯಲ್ಲಿ ಇದೆ ?

ಚಿಕ್ಕಮಗಳೂರು

40.   ಕೊನೆಯ ಆಂಗ್ಲೋ  ಮೈಸೂರು ಯುದ್ಧ ನಡೆದ ವರ್ಷ ಯಾವುದು ?

1798 ರಲ್ಲಿ

41.   ಭಾರತರತ್ನ ಪಡೆದ ಮೊದಲ ಕನ್ನಡಿಗ ಯಾರು ?

ಸರ್ ಎಂ ವಿಶ್ವೇಶ್ವರಯ್ಯ

42.   ಕರ್ನಾಟಕ ಸಂಗಿತದ ಪಿತಾಮಹ ಯಾರು? 

ಪುರಂದರದಾಸರು

43.   ಮಾನವ ದೇಹದ ಅತಿದೊಡ್ಡ ಮೂಳೆ ಯಾವುದು?

ತೊಡೆ ಮೂಳೆ (ಫೀಮರ್)

44.   ಮಾನವ ದೇಹದ ಅತಿಚಿಕ್ಕ  ಮೂಳೆ ಯಾವುದು?

ಸ್ಟೆಪಿಸ್ (ಮದ್ಯಕಿವಿಯ ಮೂಳೆ )

45.   ಖೈಬರ್ ಕಣಿವೆ  ಎಲ್ಲಿದೆ?

ಪಾಕಿಸ್ತಾನ್

46.   ಯಮುನಾ ಎಕ್ಸ್ಪ್ರೆಸ್ ವೆ ಯಾವ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ ?

ನೊಯಿಡಾ ಮತ್ತು ಆಗ್ರಾ

47.   ನಾಗಾಲ್ಯಾಂಡಿನ ಅಧಿಕೃತ ಭಾಷೆ ಯಾವುದು ?

ಇಂಗ್ಲಿಷ್

48.    “ಫ್ರೀಡಂ ಅಟ್ ಮಿಡ್ ನೈಟ್” ಪುಸ್ತಕದ ಲೇಖಕರು ಯಾರು ?

ಡೊಮಿನಿಕ್ ಲ್ಯಾಪಿಯರ್ ಮತ್ತು ಲ್ಯಾರಿ ಕೊಲಿನ್ಸ್

49.   “ಮೈ ಡೇಸ್” ಯಾರ ಕೃತಿ ?

ಆರ್ ಕೆ ನಾರಾಯಣ್

50.   “ಗರಿ: , ಸಖಿಗೀತ ಯಾರ ಕವನ ಸಂಕಲನಗಳು ?

ದ ರಾ ಬೇಂದ್ರೆ