Showing posts with label Kannada Grammar. Show all posts
Showing posts with label Kannada Grammar. Show all posts

SSLC ಕನ್ನಡ ವ್ಯಾಕರಣ - 2

 1. ‘ಮಕ್ಕಳು ಚಿಟಚಿಟನೆ ಚೀರಿದರು’ ಈ ವಾಕ್ಯದಲ್ಲಿ ಗೆರೆ ಎಳೆದ ಪದ – 

a. ಅನುಕರಣಾವ್ಯಯ 

2. ‘ನೋಡಿ ನೋಡಿ’ ಈ ಪದ ಈ ವ್ಯಾಕರಣಾಂಶಕ್ಕೆ ಸೇರಿದೆ –

a. ದ್ವಿರುಕ್ತಿ 

3. ಗುಂಪಿಗೆ ಸೇರದ ಪದ ಯಾವುದು ಆಟಪಾಠ, ನಡೆನಡೆ, ಹೌದು ಹೌದು, ಸಾಕುಸಾಕು –

a. ಆಟಪಾಠ (ಏಕೆಂದರೆ ಆಟಪಾಠ ಜೋಡು ನುಡಿ ಉಳಿದವುಗಳೆಲ್ಲಾ ದ್ವಿರುಕ್ತಿಗಳು) 

4. ‘ಬೇಗ ಬೇಗ’ ಇದು ಈ ವ್ಯಾಕರಣಾಂಶಕ್ಕೆ ಉದಾಹರಣೆ – 

a. ದ್ವಿರುಕ್ತಿ 

5. ‘ಕಪ್ಪಕಾಣಿಕೆ’ ಪದದಲ್ಲಿರುವ ವ್ಯಾಕರಣಾಂಶ – 

a. ಜೋಡುನುಡಿ 

6. ‘ಪಟಪಟ, ಧರಣಿಮಂಡಲ, ನಡೆನಡೆ, ರೀತಿನೀತಿ’ ಪದಗಳಲ್ಲಿ ಅನುಕರಣಾವ್ಯಯ ಪದ ಯಾವುದು – 

a. ಪಟಪಟ 

7. ‘ಬಿಟ್ಟು ಬಿಡದೆ ಪಟಪಟನೆ ಸುರಿಯುವ ಮಳೆಯಲ್ಲಿ ಮಕ್ಕಳು ಹಿಂದೆ ಹಿಂದೆ ನೋಡದೆ ಆಡಿದರು’ ಈ ವ್ಯಾಕರಣ ವಾಕ್ಯದಲ್ಲಿರುವ ಅನುಕರಣಾವ್ಯಯ ಪದ 

a. ಪಟಪಟನೆ 

8. ‘ಕಾಡಿನ ದಾರಿಯಲ್ಲಿ ಹಾವು ಸರಸರನೆ ಹೋಯಿತು’ ಗೆರೆ ಎಳೆದ ಪದ 

a. ಅನುಕರಣಾವ್ಯಯ 

9. ‘ಪ್ರವಾಹದಲ್ಲಿ ಜನ ಮನೆ ಮಠಗಳನ್ನು ಕಳೆದುಕೊಂಡು ಊರೂರು ತಿರುಗಾಡಿದರು’ ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದ -  

a. ಊರೂರು 

10. ‘ಕಾಡಿಗೆ ಮತ್ತೆ ಮತ್ತೆ ಬೆಂಕಿ ಬಿದ್ದು ಧಗಧಗನೆ ಉರಿದು ಮರಗಳೆಲ್ಲ ನಾಶವಾದವು’ ಈ ವಾಕ್ಯದಲ್ಲಿರುವ ಅನುಕರಣಾವ್ಯಯ ಪದ –

a. ಧಗಧಗ 

11. ಅಭಿಪ್ರಾಯದ ವಿವರಣೆ ಇಂತಿದೆ ಎನ್ನುವುದನ್ನು ತಿಳಿಸುವಾಗ ಬಳಸುವ ಚಿಹ್ನೆ –

a. ವಿವರಣಾತ್ಮಕ ಚಿಹ್ನೆ 

12. ಪ್ರಶ್ನೆಗಳನ್ನು ಬರೆಯುವ ಸಂದರ್ಭದಲ್ಲಿ ಪದ ಅಥವಾ ವಾಕ್ಯದ ಅಂತ್ಯದಲ್ಲಿ ಬಳಸುವ ಚಿಹ್ನೆ –

a. ಪ್ರಶ್ನಾರ್ಥಕ ಚಿಹ್ನೆ 

13. ವಾಕ್ಯದ ಪೂರ್ಣಾರ್ಥ ಕ್ರಿಯೆಯನ್ನು ಸೂಚಿಸುವ ಚಿಹ್ನೆ – 

a. ಪೂರ್ಣವಿರಾಮ 

14. ‘ಒಂದು ದಿನ ನರಿಯು ಕೊಕ್ಕರೆ (ನೀರು ಹಕ್ಕಿ) ಯನ್ನು ಊಟಕ್ಕೆ ಕರೆಯಿತು’ ಈ ವಾಕ್ಯದಲ್ಲಿರುವ ವಿವರಣಾತ್ಮಕ ಚಿಹ್ನೆ 

a. ಆವರಣ ಚಿಹ್ನೆ 

15. ಬರವಣಿಗೆಯಲ್ಲಿ ಹರ್ಷ, ಅಚ್ಚರಿ, ದುಃಖ, ಕೋಪ ಇತ್ಯಾದಿ ಭಾವನೆಗಳನ್ನು ವ್ಯಕ್ತಪಡಿಸಲು ಬಳಸುವ ಲೇಖನ ಚಿಹ್ನೆಗಳನ್ನು ಹೀಗೆಂದು ಕರೆಯುತ್ತಾರೆ – 

a. ಭಾವಸೂಚಕ ಚಿಹ್ನೆ 

16. ‘ನಿನ್ನ ಹೆಸರೇನು?’ ಇಲ್ಲಿ ಬಳಸಿರುವ ಲೇಖನ ಚಿಹ್ನೆ – 

a. ಪ್ರಶ್ನಾರ್ಥಕ ಚಿಹ್ನೆ 

17. ‘ದ. ರಾ. ಬೇಂದ್ರೆ ಅವರ ಭಾವಗೀತೆಗಳನ್ನು ಕೇಳಿ ವಿದ್ಯಾರ್ಥಿಗಳು ಮೈಮರೆಯುವರು’ ಈ ವಾಕ್ಯವು –

a. ಮಿಶ್ರವಾಕ್ಯ

18. ಒಂದೇ ಪೂರ್ಣಕ್ರಿಯಾಪದದೊಡನೆ ಸ್ವತಂತ್ರ ಮತ್ತು ಖಚಿತ ಅರ್ಥ ಕೊಡುವ ವಾಕ್ಯಗಳೇ ಈ ವಾಕ್ಯ –

a. ಸಾಮಾನ್ಯ ವಾಕ್ಯ 

19. ‘ಮಕ್ಕಳು ಹಾಲನ್ನು ಕುಡಿಯುತ್ತಾರೆ ಮತ್ತು ಹಣ್ಣನ್ನು ತಿನ್ನುತ್ತಾರೆ’ ಈ ವಾಕ್ಯವು – 

a. ಸಂಯೋಜಿತವಾಕ್ಯ 

20. ಉಪಮೇಯಕ್ಕಿರುವ ಹೆಸರು – 

a. ವರ್ಣ್ಯ 

21. ಯಾವ ವಸ್ತುವನ್ನು ಆಧಾರವಾಗಿಟ್ಟುಕೊಂಡು ಉಪಮೆಯನ್ನು ವರ್ಣಿಸಲಾಗಿದೆಯೋ ಅದನ್ನು _________ ಎನ್ನುತ್ತಾರೆ – 

a. ಉಪಮಾನ (ವರ್ಣಕ)

22. ‘ಗೌರಿಯ ಮುಖ ಕಮಲದಂತೆ ಅರಳಿತ್ತು’ ಈ ವಾಕ್ಯದಲ್ಲಿರುವ ಸಮಾನಧರ್ಮ – 

a. ಅರಳಿತ್ತು 

23. ‘ಹೂವಿನ ಹಾಗೆ ಸುಂದರ’ ಈ ಉಪಮಾಲಂಕಾರದಲ್ಲಿ ಉಪಮಾನ –

a. ಹೂ 

24. ಉಪಮಾನವೇ ಉಪಮೇಯವೆಂದು ರೂಪಿಸಿ ಅಭೇದತೆಯನ್ನು ಹೇಳುವ ಅಲಂಕಾರ – 

a. ರೂಪಕ 

25. ಪದ್ಯ ರಚನೆಯ ನಿಯಮಗಳನ್ನು ವಿವರಿಸುವ ಶಾಸ್ತ್ರ –

a. ಛಂದಸ್ಸು 

26. ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಆದಿ ಮದ್ಯ ಅಂತ್ಯದಲ್ಲಿ ನಿಯತವಾಗಿ ಬಂದರೆ ________ ಎನ್ನುತ್ತಾರೆ – 

a. ಪ್ರಾಸ 

27. ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ – 

a. ಯತಿ

28. ಗಣದಲ್ಲಿ ಎಷ್ಟು ವಿಧ – 

a.

29. ಎರಡು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುವವರು – 

a. ಗುರು 

30. ಅಕ್ಷರವನ್ನು ಉಚ್ಚರಿಸಲು ಬೇಕಾಗುವ ಕಾಲವನ್ನು ಹೀಗೆ ಕರೆಯುವರು – 

a. ಮಾತ್ರೆ 

31. ಮೂರು ಸಾಲಿನ ಪದ್ಯಕ್ಕೆ ಹೀಗೆನ್ನುವವರು –

a. ತ್ರಿಪದಿ 

32. ಇದು ಅಚ್ಚ ಕನ್ನಡದ ದೇಶಿ ಛಂದಸ್ಸು – 

a. ತ್ರಿಪದಿ  

33. ಮುಕುತಿ, ಬಕುತಾ, ಜನುಮ, ವ್ಯವಸಾಯ ಈ ಪದಗಳಲ್ಲಿ ತತ್ಸಮ ರೂಪಕ್ಕೆ ಉದಾಹರಣೆಯಾಗಿರುವ ಪದ – 

a. ವ್ಯವಸಾಯ 

34. ‘ವಿದ್ಯೆ’ ಈ ಪದದ ತದ್ಭವ ರೂಪ – 

a. ಬಿಜ್ಜೆ 

35. ‘ಜೀವವೊಂದು’ ಈ ಪದದಲ್ಲಿರುವ ಸಂಧಿ –

a. ಆಗಮ ಸಂಧಿ 

36. ತತ್ತ್ವಪದ, ಕಾವ್ಯವಾಚನ, ಹೆಗ್ಗುರಿ, ಮೈಮರೆತು ಈ ಪದಗಳಲ್ಲಿ ಕರ್ಮಧಾರೆಯ ಸಮಾಸಕ್ಕೆ ಉದಾಹರಣೆಯಾಗಿರುವ ಪದ – 

a. ಹೆಗ್ಗುರಿ 

37. ಪ್ರಧಾನ ವಾಕ್ಯದಲ್ಲಿಯ ಅನೇಕ ಉಪವಾಕ್ಯಗಳು ಅಂತ್ಯದಲ್ಲಿ ಬಳಸುವ ಲೇಖನ ಚಿಹ್ನೆ – 

a. ಅರ್ಧವಿರಾಮ 

38. ‘ಅಬ್ಬಾ! ಈ ವನ ಎಷ್ಟು ಸುಂದರವಾಗಿದೆ’ ಈ ವಾಕ್ಯದಲ್ಲಿ ಬಳಸಿರುವ ಲೇಖನ ಚಿಹ್ನೆ – 

a. ಭಾವಸೂಚಕ 

39. ‘ಬ್ರಹ್ಮ’ ಈ ಪದದ ತದ್ಭವ ರೂಪ – 

a. ಬೊಮ್ಮ 

40. ಎರಡೂ ಮಾತ್ರ ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ______ ಎಂದು ಕರೆಯುತ್ತಾರೆ – 

a. ದೀರ್ಘಸ್ವರ 

41. ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಗಳ ಸಂಖ್ಯೆ –

a. 34 

42. ಬರವಣಿಗೆಯಲ್ಲಿ ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ತಿಳಿಸಲು ಬಳಚು ಬಳಸುವ ಚಿಹ್ನೆ – 

a. ಉದ್ಧರಣ 

43. ‘ಅವನು’ ಈ ಪದವು ಈ ಸರ್ವನಾಮಕ್ಕೆ ಉದಾಹರಣೆಯಾಗಿದೆ – 

a. ಪ್ರಥಮ ಪುರುಷ 

44. ‘ಗೌರಿಯ ಮುಖ ಕಮಲದಂತೆ ಅರಳಿತ್ತು’ ಈ ವಾಕ್ಯದಲ್ಲಿ ಬಂದಿರುವ ಉಪಮೇಯ – 

a. ಕಮಲ 

45. ತಂದೆ ತಾಯಿ ಹಿರಿಯರಿಗೆ ಪತ್ರ ಬರೆಯುವಾಗ ಬಳಸುವ ಮುಕ್ತಾಯದ ಗೌರವ ಸಂಬೋಧನೆ – 

a. ನಮಸ್ಕಾರಗಳು 

46. ‘ಸತ್ಪುರುಷರ ಸಹವಾಸದಲ್ಲಿ ಶರೀಫರು ಬಾಳಿಬದುಕಿದರು’ ಇಲ್ಲಿ ಸಪ್ತಮೀ ವಿಭಕ್ತಿಪ್ರತ್ಯಯದಿಂದ ಕೂಡಿರುವ ಪದ – 

a. ಸಹವಾಸದಲ್ಲಿ 

47. ‘ಕಲಶ’ ಈ ಪದದ ತದ್ಭವ ರೂಪ – 

a. ಕಳಸ 

48. ‘ಅರಮನೆ’ ಪದವು ಈ ಸಮಾಸಕ್ಕೆ ಉದಾಹರಣೆ – 

a. ತತ್ಪುರುಷ 

49. ರೋಗರುಜಿನ, ಕಣಕಣ, ಧಮನಿ ಧಮನಿ, ಕಿಡಿಕಿಡಿ ಈ ಪದಗಳಲ್ಲಿ ಜೋಡುನುಡಿಗೆ ಉದಾಹರಣೆಯಾಗಿರುವ ಪದ – 

a. ರೋಗರುಜಿನ 

50. ‘ಹಿಮಾಲಯ’ ಇದು ಈ ನಾಮಪದಕ್ಕೆ ಉದಾಹರಣೆಯಾಗಿದೆ –

a. ಅಂಕಿತನಾಮ 

51. ‘ಕೈಮುಗಿ’ ಈ ಪದದಲ್ಲಿರುವ ಸಮಾಸ – 

a. ಕ್ರಿಯಾಸಮಾಸ 

52. ನೀನು, ತಾನು, ನಾನು, ಇವನು ಈ ಪದಗಳಲ್ಲಿ ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ – 

a. ತಾನು 

53. ‘ಭಾಗವತರು ಬಯಲಾಟಗಳಲ್ಲಿ ಪಾತ್ರ ವಹಿಸಿ ಪ್ರೇಕ್ಷಕರ ಕಣ್ಮನಗಳನ್ನು ತಣಿಸುತ್ತಿದ್ದರು’ ಇಲ್ಲಿ ದ್ವಿತೀಯ ವಿಭಕ್ತಿಯಿಂದ ಕೂಡಿರುವ ಪದ – 

a. ಕಣ್ಮನಗಳನ್ನು 

54. ‘ಚೆನ್ನಮ್ಮನು ಮಹಿಳೆ ಮತ್ತು ಮಕ್ಕಳನ್ನು ಅಕ್ಕರೆಯಿಂದ ಕಂಡ ಕರುಣಾಮಯಿ’ ಇದು _____ ವಾಕ್ಯಕ್ಕೆ ಉದಾಹರಣೆ– 

a. ಸಂಯೋಜಿತ ವಾಕ್ಯ 

55. ರಕ್ತಗಾಲಿನ, ಗೋಳಿಲ್ಲದ, ಕುಲವೆನ್ನದ, ಗುಂಡಿಲ್ಲದ ಈ ಪದಗಳಲ್ಲಿ _______ ಆದೇಶಸಂಧಿಗೆ ಉದಾಹರಣೆ – 

a. ರಕ್ತಗಾಲಿನ 

56. ‘ಕಾವ್ಯ’ ಪದದ ತದ್ಭವ ರೂಪ –

a. ಕಬ್ಬ 

57. ಆಕ್ಸಿಜನ್ ಇದು ಈ ಭಾಷೆಯಿಂದ ಬಂದ ಪದವಾಗಿದೆ –

a. ಇಂಗ್ಲೀಷ್ 

58. ________ ಇದು ಪ್ರಧಾನ ವಾಕ್ಯಗಳಲ್ಲಿನ ಉಪವಾಕ್ಯಗಳ ಅಂತ್ಯದಲ್ಲಿ ಬಳಕೆಯಾಗುತ್ತದೆ – 

a. ಅರ್ಧವಿರಾಮ ಚಿಹ್ನೆ (;)

59. ವಿಷಯಕ್ಕೆ ವಿವರಣೆ ನೀಡಲು _______ ವಿರಾಮ ಬಳಕೆಯಾಗುತ್ತದೆ – 

a. ವಿವರಣ ವಿರಾಮ (:) 

60. ಬರವಣಿಗೆಯಲ್ಲಿ ಯಾವುದಾದರೂ ಭಾಗವೊಂದನ್ನು ಅಳವಡಿಸಿದಾಗ ಅದರ ಪ್ರತ್ಯೇಕತೆ ಸೂಚಿಸಲು ಆ ಭಾಗವನ್ನು _______ ಚಿಹ್ನೆಯೊಳಗೆ ಬರೆಯಬೇಕು –

a. ವಾಕ್ಯವೇಷ್ಟನ (ಒಂಟಿ ಉದ್ಧರಣ)

ನಾನಾರ್ಥಕ ಪದಗಳು

ಒಂದು ಶಬ್ದಕ್ಕೆ  ಒಂದಕ್ಕಿಂತ ಹೆಚ್ಚು ಅರ್ಥಗಳಿದ್ದರೆ ಅಂಥಹ ಶಬ್ದಗಳನ್ನು  ನಾನಾರ್ಥಕ ಪದಗಳು ಎನ್ನುತ್ತಾರೆ. ಆ ಪದಕ್ಕೆ ಇರುವ ವಿವಿಧ ಅರ್ಥಗಳು ನಾಮಪದಗಳೇ ಇರಬಹುದು ಅಥವಾ ನಾಮಪದ ಮತ್ತು ಕ್ರಿಯಾಪದ ಹೀಗೆ ಎರಡೂ ರೂಪಗಳಲ್ಲೇ  ಬಳಕೆಯಾಗುವುದುಂಟು.

ಉದಾಹರಣೆ: ಕರಿ ಎಂದರೆ “ಆನೆ”, ಕಪ್ಪು ಬಣ್ಣ” ಎಂಬ ಅರ್ಥ ನಾಮಪದವಾಗಿ ಬಳಕೆಯಲ್ಲಿದೆ  ಅಲ್ಲದೆ “ಕೂಗು” ಎಂಬ ಕ್ರಿಯಾಪದ ರೂಪದ ಅರ್ಥವೂ ಇದೆ

 

 ಇನ್ನಷ್ಟು ನಾನಾರ್ಥಕ ಪದಗಳನ್ನು ತಿಳಿದುಕೊಳ್ಳೋಣ 


  1. ಅರ್ಕ = ಸೂರ್ಯ, ಎಕ್ಕೆಗಿಡ
  2. ಹುಟ್ಟು= ಜನಿಸು, ದೋಣಿ ನಡೆಸುವ ಕೋಲು
  3. ದ್ವಿಜ = ಬ್ರಾಹ್ಮಣ, ಪಕ್ಷಿ
  4. ಗುಡಿ = ದೇವಸ್ಥಾನ, ಬಾವುಟ
  5. ಗುರು= ಶಿಕ್ಷಕ, ಒಂದು ಗ್ರಹ
  6. ವರ್ಣ = ಬಣ್ಣ, ಅಕ್ಷರ, ಜಾತಿ
  7. ಪಾಷಾಣ = ಕಲ್ಲು, ವಿಷ
  8. ಅಂಕ = ನಾಟಕದ ಭಾಗ, ಪರೀಕ್ಷೆಯಲ್ಲಿ ನೀಡುವ ಗುಣಗಳು
  9. ಹತ್ತು = ಒಂದು ಸಂಖ್ಯೆ (10), ಏರು, ಅಂಟು
  10. ಅರಿ = ತಿಳಿ, ಶತ್ರು
  11. ಕರ = ಕೈ, ತೆರಿಗೆ
  12. ಅಗಿ = ಕಚ್ಚಿ ತಿನ್ನು , ಅಗೆ
  13. ಏಳು = ಸಂಖ್ಯೆ (7), ಎಚ್ಚರಗೊಳ್ಳು
  14. ತೆರೆ = ಪರದೆ, ಅಲೆ
  15. ಮರೆ = ಮುಚ್ಚಿಡು, ನೆನಪು ಹೋಗು
  16. ಮಹಿಷಿ = ಕೋಣ, ಪಟ್ಟದ ರಾಣಿ
  17. ಲುಲಾಯ = ಕೋಣ, ಮಹಿಳೆ
  18. ಎತ್ತು = ಹೋರಿ, ಮೇಲೆ ಏರಿಸು
  19. ಅಂಬರ = ಆಕಾಶ, ಬಟ್ಟೆ
  20. ಕರಿ = ಆನೆ, ಕಪ್ಪು ಬಣ್ಣ, ಕೂಗು
  21. ಕೇಸರಿ = ಸಿಂಹ, ಒಂದು ಬಣ್ಣ
  22. ಅಂಚೆ = ಟಪಾಲು , ಹಂಸ
  23. ಕಿತ್ತಳೆ = ಒಂದು ಬಣ್ಣ, ಒಂದು ಜಾತಿಯ ಹಣ್ಣು
  24. ನೇರಳೆ = ಒಂದು ಬಣ್ಣ, ಒಂದು ಜಾತಿಯ ಹಣ್ಣು
  25. ಕಲೆ = ಕೊಳೆ, ಕೌಶಲ್ಯ 
  26. ನಡು = ಮಧ್ಯ, ಸೊಂಟ
  27. ಎರಗು = ಮೇಲೆ ಬೀಳು, ನಮಸ್ಕರಿಸು
  28. ಕಲ್ಯಾಣ = ಮಂಗಳ, ಮದುವೆ
  29. ಕರ್ಣ = ರಾಧೇಯ , ಕಿವಿ
  30. ಕಾಡು = ಅರಣ್ಯ, ತೊಂದರೆ ಮಾಡು
  31. ಆಳು = ಸೇವಕ, ಆಳ್ವಿಕೆ
  32. ಸುಳಿ = ಸನಿಹದಲ್ಲೇ ಸುತ್ತಾಡು, ನೀರಿನ ಸುತ್ತುವಿಕೆ
  33. ದೊರೆ = ಸಿಗುವುದು, ಅರಸ
  34. ತೊಡೆ = ನಿವಾರಣೆ, ಕಾಲಿನ ಮೇಲ್ಭಾಗ
  35. ದಳ = ಸೈನ್ಯ, ಹೂವಿನ ಎಸಳು
  36. ನರ = ಮಾನವ, ರಕ್ತನಾಳ, ಅರ್ಜುನ
  37. ಪಡೆ = ಸೈನ್ಯದ ಭಾಗ, ಸ್ವೀಕರಿಸು
  38. ಕಾಲ = ಯಮ, ಸಮಯ
  39. ಕುಡಿ = ಸೇವಿಸು, ಚಿಗುರು
  40. ನೆರೆ = ಬಿಳಿ ಕೂದಲು, ಪ್ರವಾಹ, ಒಂದು ಕಡೆ ಸೇರು
  41. ಬೇಡ = ಬೇಟೆಗಾರ, ತಿರಸ್ಕಾರ
  42. ಹರಿ = ವಿಷ್ಣು, ಹರಿದು ಹಾಕು
  43. ಕೀಳು = ಕಿತ್ತು ಹಾಕು, ಕೆಳಮಟ್ಟದ ಭಾವನೆ
  44. ಕಾಲು = ನಾಲ್ಕನೇ ಒಂದು ಭಾಗ, ಚರಣ
  45. ಸಾಕು = ಸಲಹು, ಸಾಕುಮಾಡು
  46. ತಂಗಿ = ನಿಲ್ಲಿ, ಚಿಕ್ಕ ಸಹೋದರಿ
  47. ರಾಗ = ಸ್ವರ, ಪ್ರೀತಿ
  48. ಹಗೆ = ತೆಗ್ಗು, ದ್ವೇಷ
  49. ಮಡಿ = ಸ್ವಚ್ಛ, ಸಾವು, ಮಡಚು, ರೇಷ್ಮೆ ವಸ್ತ್ರ
  50. ಆರು = ಸಂಖ್ಯೆ (6),  ತಣ್ಣಗಾಗು, ಯಾರು
  51. ಮಂಗಳ =ಒಂದು ಗ್ರಹ,  ಶುಭ
  52. ಮುತ್ತು = ಆವರಿಸು, ಮಣಿ, ಚುಂಬನ
  53. ಹಳಿ = ಕಂಬಿ, ಜರೆಯುವುದು
  54. ಸಾರು= ರಸಂ, ಪ್ರಚಾರ ಮಾಡು
  55. ಹೊತ್ತು= ಸಮಯ, ಎತ್ತು
  56. ಒತ್ತು = ತಳ್ಳು, ಸಂಯುಕ್ತಾಕ್ಷರ
  57. ಮೃಗ = ಪ್ರಾಣಿ, ಜಿಂಕೆ
  58. ಗುಂಡಿ = ತೆಗ್ಗು, ಬಟನ್
  59. ತಂದೆ = ತರುವುದು, ಅಪ್ಪ
  60. ನೆನೆ = ಸ್ಮರಿಸು, ಹಸಿಯಾಗು


100 ಸಮಾನಾರ್ಥಕ ಪದಗಳು

 ಒಂದೇ ಅರ್ಥವನ್ನು ಹೊಂದಿರುವ ಪದಗಳನ್ನು 'ಸಮಾನಾರ್ಥಕ ಪದಗಳು' ಎಂದು ಕರೆಯಲಾಗುತ್ತದೆ. ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯವೆಂದರೆ, ಈ ಪದಗಳಲ್ಲಿ ಅರ್ಥದ ಸಾಮ್ಯತೆಯ ಹೊರತಾಗಿಯೂ, ಅವುಗಳ ಬಳಕೆಯಲ್ಲಿ ವ್ಯತ್ಯಾಸವಿರುವ ಸಾಧ್ಯತೆ ಇದೆ. ಪ್ರತಿಯೊಂದು ಪದದ ಬಳಕೆಯು ಸಂದರ್ಭ ಮತ್ತು ಸ್ಥಳಕ್ಕೆ ಅನುಗುಣವಾಗಿ ಬದಲಾಗುತ್ತದೆ.

ಕೆಲವು ನಿರ್ದಿಷ್ಟ ಸಮಾನಾರ್ಥಕ ಪದಗಳನ್ನು ಕೆಳಗೆ ನೀಡಲಾಗಿದೆ.

 

1

ನೀರು

ಜಲ, ಅಂಬು, ಪಯ, ಉದಕ 

2

ಸಮುದ್ರ

ಜಲಧಿ, ಅಂಬುಧಿಶರಧಿ, ಕಡಲು, ವಾರಿಧಿ, ರತ್ನಾಕರ , ಅಬ್ದಿ

3

ಮೋಡ

ಮೇಘ, ಅಂಬುದ, ಮುಗಿಲು, ವಾರಿದ, ಘನ, ಅಬ್ದ   

4

ಕಮಲ

ಜಲಜ, ಅಂಬುಜ, ನೀರಜ, ಪಂಕಜ, ವಾರಿಜ, ತಾವರೆ, ಅರವಿಂದ, ಪದ್ಮ, ನಳಿನ, ಇಂದಿವರ, ರಾಜೀವ, ಪುಷ್ಕರ  

5

ಕೈ

ಹಸ್ತ, ಕರ, ಪಾಣಿ

6

ಆನೆ

ಹಸ್ತಿ , ಕರಿ , ಗಜ, ಕುಂಜರ

7

ದುಂಬಿ

ಮಿಲಿಂದ, ಭ್ರಮರ, ಮಧುಪ, ಮಧುಕರ, ಭೃಂಗ  

8

ಕಣ್ಣು

ನಯನ, ಅಕ್ಷಿ , ಚಕ್ಷು, ಲೋಚನ, ನೇತ್ರ

9

ಗೆಳೆಯ

ಮಿತ್ರ, ಸಖ, ಸ್ನೇಹಿತ,ಸಹಪಾಠಿ, ಸಹಚರ

10

ಸೂರ್ಯ

ನೇಸರ , ರವಿ, ದಿನಕರ, ಭಾನು, ಭಾಸ್ಕರ, ಪ್ರಭಾಕರ, ದೀನೇಶ, ಮಾರ್ತಾಂಡ, ಅರ್ಕ, ಛಾಯಾಪತಿ, ದಿವಾಕರ   

11

ರಾಜ

ಅರಸ, ದೊರೆ, ಭೂಪತಿ , ಮಹಿಮತಿ , ನರೇಶ, ನೃಪತಿ, ಭೂಪಾಲ, ಅಧಿಪತಿ

12

ದೇವರು

ಭಗವಂತ, ಈಶ್ವರ, ಪರಮಾತ್ಮ, ಪ್ರಭ, ದೈವ, ಪರಮೇಶ್ವರ, ವಿಧಾತಾ 

13

ಮನೆ

ಆಲಯ, ಗೃಹ, ನಿಕೇತನ, ಸದನ

14

ಗಣೇಶ

ಗಜಾನನ, ಲಂಬೋದರ, ವಿನಾಯಕ, ಏಕದಂತ, ಗೌರಿಸುತ,  ಗಣಪತಿ, ಕಪಿಲ, ಭಾಲಚಂದ್ರ, ಹೇರಂಭ 

15

ಮಗ

ಪುತ್ರ, ಕುವರ, ಸುತ, ಅತ್ಮಜ, ತನಯ, ತನುಜ, ಸೂನು

16

ಮಗಳು

ಪುತ್ರಿ, ಸುತೆ, ಕುಮಾರಿ, ಅತ್ಮಜೆ, ತನಯೇ, ತನುಜೆ  

17

ತಂದೆ

ಪಿತ, ಅಪ್ಪ , ಅಯ್ಯ , ಜನಕ

18

ತಾಯಿ

ಅಮ್ಮ, ಅಬ್ಬೆ, ಜನನಿ, ಮಾತೆ, ಅವ್ವ

19

ಆಕಾಶ

ಆಗಸ, ಗಗನ, ಬಾನು, ಅಂತರಿಕ್ಷ , ನಭ, ವ್ಯೋಮ, ಮಹಾನೀಲ, ಅಂಬರ, ಖಗೋಳ, ನಭಮಂಡಲ   

20

ಭೂಮಿ

ಮಹಿ, ಪೃಥ್ವಿ, ಭೂ, ನೆಲ, ಧರಣಿ, ಧರೆ, ಧರಿತ್ರಿ, ವಸುಂಧರೆ, ಇಳೆ, ವಸುಧೆ

21

ಚಂದ್ರ

ಚಂದಿರ, ಹಿಮಕರ, ಶಶಿ, ಹಿಮಾಂಶು, ರಾಕೇಶ, ತಿಂಗಳು, ನಿಶಾಕರ, ರಜನೀಶ, ಮಾಯಾಂಕ, ಮೃಗಾಂಕ

22

ರಾತ್ರಿ

ನಿಶಾ, ರಜನಿ, ಶರ್ವರಿ, ಯಾಮಿನಿ 

23

ನದಿ

ಹೊಳೆ, ಸರಿತಾ, ಹೊನಲು, ವಾಹಿನಿ, ತರಂಗಿಣಿ, ಪ್ರವಾಹಿನಿ

24

ಪರ್ವತ

ಗಿರಿ, ಗುಡ್ಡ, ಬೆಟ್ಟ, ಅಚಲ, ಶೈಲ, ತುಂಗ, ಮಲೆ

25

ಬೆಂಕಿ

ಅಗ್ನಿ, ಅನಲ, ಜ್ವಾಲಾ, ಪಾವಕ

26

ಕಲ್ಲು

ಶಿಲೆ, ಪಾಷಾಣ, ಶೈಲ, ಶಿಲ್ಪ

27

ಕಾಡು

ಅರಣ್ಯ, ಅಡವಿ, ವನ, ಕಾನನ, ಅಟವಿ

28

ಹಾಲು

ಕ್ಷೀರ, ಪಯ, ದುಗ್ಧ

29

ಸ್ಮಶಾನ

ಮಸಣ, ರುದ್ರಭೂಮಿ

30

ಪಾರ್ವತಿ

ಶೈಲಜಾ, ಗೌರಿ, ಗಿರಿಜಾ, ದಾಕ್ಷಾಯಿಣಿ 

31

ಅಮೃತ

ಅಮರ್ದು, ಸುಧೆ, ಪಿಯೂಷ, ಸೋಮ

32

ರಾಕ್ಷಸ

ಅಸುರ, ದಾನವ, ರಕ್ಕಸ, ನಿಶಾಚರ

33

ಕತ್ತಲು

ತಮ, ಅಂಧಕಾರ, ತಿಮಿರ, ತಮಸ್

34

ಪಂಡಿತ

ಕೋವಿದ, ಜ್ಞಾನಿ, ಬಲ್ಲವ, ಪ್ರಾಜ್ಞ, ವಿದ್ವಾನ

35

ಪರೋಪಕಾರ

ಹಿತ, ಉಪಕಾರ, ಸಹಾಯ, ಪರಹಿತ

36

ಬ್ರಾಹ್ಮಣ

ಹಾರವ, ದ್ವಿಜ, ವಿಪ್ರ

37

ಕೊಳಲು

ವೇಣು, ವಂಶಿ , ಮುರಳಿ

38

ಗಂಗೆ  

ಭಾಗೀರಥಿ, ಜಾಹ್ನವಿ, ಮಂದಾಕಿನಿ, ಸುರನದಿ, ದೇವನದಿ, ತ್ರಿಪಥಗಾ, ವಿಶ್ನುಪಗಾ  

39

ಯಮುನೆ

ಕಾಲಿಂದಿನಿ,  ಸುರ್ಯಸುತೆ, ತರಣಿಜಾ, ಅರ್ಕಜಾ , ಜಮುನಾ  ನೀಲಂಬರಾ

40

ಶಿವ

ಶಂಕರ, ಅಶುತೋಶ, ಈಶಾನ, ವಾಮದೇವ, ಹರ, ನೀಲಕಂಠ, ಚಂದ್ರಮೌಳಿ, ರುದ್ರ, ನಟರಾಜ, ಮಹೇಶ, ಗಂಗಾಧರ 

41

ಲಕ್ಷ್ಮೀ

ಶ್ರೀ, ಲಕುಮಿ, ರಮಾ, ಇಂದಿರಾ, ಹರಿಪ್ರಿಯಾ, ಪದ್ಮಜಾ,

42

ವಿಷ್ಣು

ಹರಿ, ನಾರಾಯಣ, ಜನಾರ್ದನ , ಲಕ್ಷ್ಮಿಕಾಂತ, ಪದ್ಮನಾಭ, ಮುಕುಂದ, ಲಕ್ಷ್ಮೀಶ , ಶ್ರೀಕಾಂತ, ರಮಾಕಾಂತ, ಅನಂತ, ಅಚ್ಯುತ, ವನಮಾಲಿ

43

ಹಕ್ಕಿ

ಪಕ್ಷಿ, ಖಗ, ವಿಹಂಗ, ನಭಚರ  

44

ಮಳೆ

ವರ್ಷಾ, ವೃಷ್ಟಿ

45

ಗಾಳಿ

ವಾಯು, ಸಮೀರ, ಅನಿಲ, ಪವನ, ಪವಮಾನ

46

ಕೃಷ್ಣ

ಮುರಾರಿ, ಗೋಪಾಲ, ಗೋವಿಂದ, ಪಾರ್ಥಸಾರಥಿ, ಮುರಳಿಧರ, ಮಧುಸೂದನ, ಮೋಹನ, ಗೋಪಿವಲ್ಲಭ, ಗಿರಿಧರ, ಚಕ್ರಪಾಣಿ

47

ರಾಮ

ಪುರುಷೋತ್ತಮ , ರಾಘವ, ಸೀತಾಪತಿ, ರಘುಪತಿ, ರಘುನಾಥ

48

ಸೀತೆ

ವೈದೇಹಿ, ಜಾನಕಿ, ಮೈಥಿಲಿ

49

ಕುದುರೆ

ಅಶ್ವ , ತುರುಗ, ಹಯ

50

ಅಧ್ಯಾಪಕ

ಶಿಕ್ಷಕ, ಗುರು, ಆಚಾರ್ಯ, ಉಪಾಧ್ಯಾಯ

51

ಕವನ

 ಪದ್ಯ, ಕಾವ್ಯ , ಹಾಡು, ಕವಿತೆ

52

ಹೂವು

ಪುಷ್ಪ, ಕುಸುಮ, ಸುಮನ, ಪ್ರಸೂನ  

53

ಗುಡಿ

ದೇವಾಲಯ, ಮಂದಿರ, ಧಾಮ

54

ಕತ್ತಿ

ಖಡ್ಗ, ಅಲಗು, ಅಸಿ

55

ಅಣ್ಣ

ಅಗ್ರಜ, ಭ್ರಾತೃ , ಹಿರಿಯಣ್ಣ

56

ಅಕ್ಕ

ಅಗ್ರಜೆ, ಹಿರಿಯಕ್ಕ

57

ಸ್ತ್ರೀ

ಮಾನಿನಿ, ಮಹಿಳೆ, ಹೆಣ್ಣು, ಅಂಗನೆ, ಲಲನೆ

58

ಹಾವು

ಸರ್ಪ, ಭುಜಂಗ, ನಾಗ, ಪನ್ನಗ, ಶೇಷ, ಅಹಿ, ಉರಗ , ಫಣಿ

59

ಮದುವೆ

ಲಗ್ನ , ವಿವಾಹ, ಕಲ್ಯಾಣ

60

ಮಂಗ

ಕೋತಿ, ಕಪಿ, ವಾನರ, ಮರ್ಕಟ, ಕೋಡಗ 

61

ಗಂಡ

ರಮಣ , ಪತಿ, ವಲ್ಲಭ , ಕಾಂತ, ಪ್ರಿಯ

62

ಹೆಂಡತಿ

ಪತ್ನಿ , ವಲ್ಲಭೆ , ಕಾಂತೆ , ಭಾರ್ಯ, ಅರ್ಧಾಂಗಿನಿ, ಪ್ರಿಯೆ

63

ಧನ

ಹಣ, ನಗದು,  ಕಾಂಚಾಣ , ಸಿರಿ, ದುಡ್ಡು , ಕಾಸು

64

ಧನಿಕ

ಶ್ರೀಮಂತ, ಬಲ್ಲಿದ , ಸಿರಿವಂತ

65

ಕಾಮ

ಮಾರ, ಮನ್ಮಥ , ಮದನ , ಅನಂಗ, ಕಂದರ್ಪ, ರತಿಪತಿ, ಮನಸಿಜ  

66

ದಾರಿ

ಪಥ , ಮಾರ್ಗ

67

ಮರ

ವೃಕ್ಷ , ತರು , ಪಾದಪ

68

ಸುವಾಸನೆ

ಪರಿಮಳ, ಸಂಪದ , ಸುಗಂಧ, ಕಂಪು, ಸೌರಭ      

69

ಮಗು

ಕೂಸು, ಕಂದ, ಪಾಪ, ಶಿಶು, ಹಸುಳೆ

70

ಬಂಗಾರ

ಚಿನ್ನ , ಹೇಮ, ಸುವರ್ಣ

71

ಬಾಯಾರಿಕೆ

ತೃಷೆ, ತೃಷ್ಣಾ, ದಾಹ

72

ನಕ್ಷತ್ರ

ತಾರೆ , ಚುಕ್ಕೆ

73

ಯುದ್ಧ 

ಸಮರ, ಕದನ, ಕಾಳಗ, ರಣ, ಧುರ

74

ದ್ರೌಪದಿ

ಪಾಂಚಾಲಿ, ಕೃಷ್ಣೆ, ಯಾಜ್ಞಸೇನಿ

75

ಅರ್ಜುನ

ಪಾರ್ಥ, ಕಿರೀಟಿ, ಸವ್ಯಸಾಚಿ, ಗಾಂಢೀವಿ, ಧನಂಜಯ 

76

ಬಾವುಟ

ಧ್ವಜ, ಕೇತನ, ಗುಡಿ, ಪತಾಕ

77

ಹುಲಿ

ವ್ಯಾಘ್ರ, ಪುಲಿ, ಪುಂಡರೀಕ

78

ಸಿಂಹ

ವನರಾಜ. ಕೇಸರಿ, ಮೃಗರಾಜ

79

ಆಕಳು

ಗೋವು, ದನ, ತುರು , ರಾಸು, ಧೇನು 

80

ಹಣೆ

ಲಲಾಟ , ನೊಸಲು, ಭಾಲ, ಪಾಲ, ನಿಟಿಲ

81

ತಲೆ

ಮಂಡೆ , ಮಸ್ತಕ, ಶಿರ, ಕಪಾಲ 

82

ಮುಖ

ವದನ, ಮೊಗ, ವಕ್ತ್ರ, ಮೋರೆ, ಆನನ

83

ರಕ್ತ

ರುಧಿರ, ನೆತ್ತರು

84

ದೇಹ

ಶರೀರ, ಕಾಯ , ತನು, ಒಡಲು

85

ಸಾವು

ಮರಣ, ಜವ , ನಿಧನ , ಮಡಿ ,

86

ತೊಂದರೆ

ಉಪಟಳ ,ಉಪದ್ರವ, ಪೀಡನೆ

87

ವಿನಂತಿ

ಬಿನ್ನಹ , ವಿಜ್ಞಾಪನೆ, ಪ್ರಾರ್ಥನೆ

88

ಬುದ್ಧಿ

ಚಿತ್ತ, ಮನಸ್ಸು ,ಮನ, ಅಂತರಂಗ

89

ಚೆಂದ

ಸೊಗಸು, ಸುಂದರ, ಚೆನ್ನ

90

ಸಂತೋಷ

ಸಂತಸ , ಆನಂದ, ಖುಷಿ, ಪ್ರಮೋದ, ಹರ್ಷ, ಮೋದ   

91

ಅನುಪಮ

ಅನನ್ಯ , ಅಪೂರ್ವ

92

ಅವಮಾನ

ಅಪಮಾನ, ತಿರಸ್ಕಾರ,ನಿರಾದರ

93

ಅಪ್ಸರೆ

ದೇವಾಂಗನೆ , ಸುರಾಂಗನೆ, ದೇವಕನ್ಯೆ

94

ಕಣ್ಣೀರು

ಕಂಬನಿ, ಅಶ್ರು

95

ಆತ್ಮ

ಚೇತನ, ಚೈತನ್ಯ, ಜೀವ, ವಿಭು

96

ಮೊದಲು

ಆರಂಭ , ಶುರು, ಆದಿ, ಪ್ರಥಮ, ಮುಂಚೂಣಿ

97

ಇಂದ್ರ

ಸುರೇಶ, ದೇವರಾಜ, ಪುರಂಧರ, ವಜ್ರಿ, ದೇವೇಶ, ಸುರಪತಿ, ಶಚಿಪತಿ, ಸಹಸ್ರಾಕ್ಷ

98

ಆಸೆ

ಅಭಿಲಾಷೆ, ಇಷ್ಟ, ಇಚ್ಛೆ, ಆಕಾಂಕ್ಷೆ, ಕಾಮನೆ, ಮನೋರಥ, ವಾಂಛೆ

99

ಪುರಸ್ಕಾರ

ಬಹುಮಾನ , ಪಾರಿತೋಷಕ, ಇನಾಮು, ಕಾಣಿಕೆ

100

ಹಬ್ಬ

ಉತ್ಸವ, ಪರ್ವ, ಸಮಾರೋಹ, ಪರ್ಬ