ಬೇಸಿಗೆ ರಜೆಯ ಸದ್ವಿನಿಯೋಗ

     

        ಬೇಸಿಗೆ ರಜೆ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಅವರಿಗೆ ಪರೀಕ್ಷೆ ಮುಗಿದು ರಜೆ ಬಂತೆಂದರೆ ಸಾಕು ಬಿಸಿಲಿನ ಬೇಗೆ ಸೆಕೆ ಇದ್ಯಾವುದೂ ಲೆಕ್ಕಕ್ಕಿಲ್ಲ. ಓದಬೇಕು ಹೋಂವರ್ಕ್ ಮಾಡಬೇಕು, ಅಥವಾ ಶಾಲೆಗೆ ಹೋಗಬೇಕು ಅನ್ನುವ ಒತ್ತಡ ಇರುದಿಲ್ಲ ಅಲ್ಲವೇ? ಅವರು ಬೇಸಿಗೆ ರಜೆಗೆ ಅಂತಲೇ ತಮ್ಮ ಕಾರ್ಯಕ್ರಮ ಗಳ ಪಟ್ಟಿ ಮಾಡಿ ಇಟ್ಟುಕೊಂಡಿರುತ್ತಾರೆ. ವರ್ಷ ಪೂರ್ತಿ ಕಷ್ಟಪಟ್ಟು ಓದಿದ ಎಳೆಯ ಮಕ್ಕಳ   ಮಾನಸಿಕ ಹಾಗೂ ದೈಹಿಕ ವಿಕಸನಕ್ಕೆ ಬೇಸಿಗೆಯ ಈ ವಿರಾಮ ಅಗತ್ಯವೂ ಹೌದು.

ಮಕ್ಕಳ ಕಲಿಕೆಗೆ ಪೂರಕ. ಐತಿಹಾಸಿಕ ಸ್ಥಳಗಳ ಭೇಟಿ
   ಈ ರಜೆಯಲ್ಲಿ ಸಾಮಾನ್ಯವಾಗಿ ದೊಡ್ಡ ನಗರಗಳಲ್ಲಿ ವಾಸಿಸುವ  ಕುಟುಂಬಗಳು ತಮ್ಮ ಪಟ್ಟಣ ಹಳ್ಳಿಗಳಿಗೆ ಹೋಗುವುದು ಇದೆ. ಅಲ್ಲಿ ಮಕ್ಕಳು ತಮ್ಮ ತಂದೆ ಅಥವಾ ತಾಯಿಯ ಮನೆ ಅವರು ಕಲಿತ ಶಾಲೆ ಇದನ್ನೆಲ್ಲ ನೋಡಿ ನಲಿವುವುದು ಉಂಟು. ಬಂಧು ಬಳಗ ಅಜ್ಜಿ ಅಜ್ಜನ ಸಾನಿಧ್ಯದಲ್ಲಿ ಮಕ್ಕಳು ಶಾಲೆಯಲ್ಲಿ ಕಲಿಯುವ ಪಾಠಗಳನ್ನು ಕಲಿಯುತ್ತಾರೆ. ಪರಸ್ಪರ ಹೊಂದಾಣಿಕೆ, ಹಂಚಿಕೊಳ್ಳುವ ಗುಣ ಮತ್ತು  ಹಿರಿ ಕಿರಿಯರ ಜೊತೆ ನಡುವಳಿಕೆ ಮುಂತಾದ ಗುಣಗಳನ್ನು ಮಕ್ಕಳು ನೋಡಿಯೇ ಕಲಿಯುತ್ತಾರೆ.

   ಹೊಸ ಜಾಗಗಳಿಗೆ ಪ್ರವಾಸ ಹೋಗುವುದು ಈ ನಡುವೆ ಜಾಸ್ತಿಯಾಗಿದೆ. ದೇಶ ಸುತ್ತು ಅಥವಾ ಕೋಶ ಓಡು ಎನ್ನುವಂತೆ ಮಕ್ಕಳ ಸಮಗ್ರ. ಬೆಳವಣಿಗೆಗೆ ಇಂತಹ ಪ್ರವಾಸಗಳು ತುಂಬಾ ಸಹಕಾರಿ. ಸಾಮಾನ್ಯವಾಗಿ ಜನರು ಮಕ್ಕಳ ಜೊತೆ  ಐತಿಹಾಸಿಕ ತಾಣಗಳು,  ಗಿರಿಧಾಮಗಳು , ಸಮುದ್ರ ತೀರಗಳು ಅಥವಾ ಅಭಯಾರಣ್ಯ ಗಳಿಗೆ ಭೇಟಿ ಕೊಡುತ್ತಾರೆ.   ನಮ್ಮ ಇತಿಹಾಸ, ಪ್ರಾಕೃತಿಕ ಹಾಗೂ ಜೈವಿಕ  ವೈವಧ್ಯತೆಯನ್ನು ತಿಳಿಸಿಕೊಡಲು ಇದಕ್ಕಿಂತ ಬೇರೆ ಪ್ರಯೋಗಶಾಲೆ ಬೇಕೆ?

    ಬೇಸಿಗೆ ರಜೆ ಮಕ್ಕಳ ಕೌಶಲಾಭಿವೃದ್ಧಿಪಡಿಸಲು ಒಂದು ಅವಕಾಶವಾಗಿದೆ. ಶಾಲಾ ದಿನಗಳ ಒತ್ತಡದಲ್ಲಿ ಮಕ್ಕಳಲ್ಲಿ ಇರುವ ಆಸಕ್ತಿ ಹವ್ಯಾಸಗಳಿಗೆ ಸಮಯ ಸಿಗಲಿಕ್ಕಿಲ್ಲ. ಈ ಸಮಯದಲ್ಲಿ ಈಜು ಮುಂತಾದ ಅವರ ನೆಚ್ಚಿನ ಆಟೋಟ ಗಳಲ್ಲಿ ತೊಡಗಿಸಿಕೊಳ್ಳಬಹುದು. ಇದರಿಂದ ಅವರಲ್ಲಿ ಅಡಗಿರುವ ಕೌಶಲ್ಯ ಬೆಳಕಿಗೆ ಬರಲು ಅವಕಾಶ ಸಿಗುತ್ತದೆ. ಇನ್ನೂ,  ಮಕ್ಕಳು ಕಲಿಕೆ ಯಾವುದಾದರೂ ವಿಷಯದಲ್ಲಿ ಕಷ್ಟ ಅನುಭವಿಸುತ್ತಿದ್ದರೆ ಅದನ್ನು ಪರಿಹರಿಸಿ ಅವರ ಮುಂದಿನ ವರ್ಷದ ಓದನ್ನು ಸರಳವಾಗಿಸಬಹುದು.

    ಹೀಗೆ ಮಕ್ಕಳನ್ನು ಮೊಬೈಲ್ ಅಥವಾ ಟೀವಿ ಆಧಿನ ಮಾಡದಂತೆ ಮಾಲ್ ಮಿಲ್ಟಿಪ್ಲೆಕ್ಸ್ ಗಳ ಆಮಿಷಗಳಿಗೆ ಬೀಳದಂತೆ ಬೇಸಿಗೆಯ ಕಾಲಾವಕಾಶ ವನ್ನು ಸದ್ವಿನಿಯೋಗ ಮಾಡಿಕೊಳ್ಳುವುದು ತಂದೆ ತಾಯಿಯರ ಕೈಲಿಯಲ್ಲಿದೆ

No comments:

Post a Comment