ಕರ್ನಾಟಕದ ರಾಜಮನೆತನಗಳು

 

ರಾಜಮನೆತನ : ಕದಂಬರು

ರಾಜಧಾನಿ : ಬನವಾಸಿ

ಸ್ಥಾಪಕರು : ಮಯೂರ ವರ್ಮ

ಅವಧಿ : ಕ್ರಿ.ಶ. 325 - ಕ್ರಿ.ಶ 540

ಪ್ರಮುಖ ಆಡಳಿತಗಾರರು : ಮಯೂರ ವರ್ಮ, ಕಾಕುಸ್ಥವರ್ಮ 

ಸಾಮ್ರಾಜ್ಯದ ವ್ಯಾಪ್ತಿ : ಮಧ್ಯ ಮತ್ತು ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ

 

ರಾಜಮನೆತನ : ಗಂಗರು

ರಾಜಧಾನಿ : ತಲಕಾಡು

ಸ್ಥಾಪಕರು : ಕೊಂಗುಣೀವರ್ಮ

ಅವಧಿ : ಕ್ರಿ.ಶ 325 - ಕ್ರಿ.ಶ.999

ಪ್ರಮುಖ ಆಡಳಿತಗಾರರು : ಅವಿನೀತ  ದುರ್ವಿನೀತ, ರಾಚಮಲ್ಲ

ಸಾಮ್ರಾಜ್ಯದ ವ್ಯಾಪ್ತಿ : ದಕ್ಷಿಣ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳು

 

ರಾಜಮನೆತನ : ಚಾಲುಕ್ಯರು

ರಾಜಧಾನಿ : ವಾತಾಪಿ (ಬಾದಾಮಿ)

ಸ್ಥಾಪಕರು : ಪುಲಿಕೇಶೀ

ಅವಧಿ : ಕ್ರಿ.ಶ 500 - ಕ್ರಿ.ಶ.757

ಪ್ರಮುಖ ಆಡಳಿತಗಾರರು : ಎರಡನೇ ಪುಲಿಕೇಶೀ, ಎರಡನೇ ವಿಕ್ರಮಾದಿತ್ಯ

ಸಾಮ್ರಾಜ್ಯದ ವ್ಯಾಪ್ತಿ : ಕರ್ನಾಟಕ, ಮಹಾರಾಷ್ಟ್ರದ ಬಹು ಭಾಗ. 

ಮಧ್ಯಪ್ರದೇಶ, ಗುಜರಾತ್ ಮತ್ತು ಒರಿಸ್ಸಾದ ಕೆಲವು ಭಾಗಗಳು

 

ರಾಜಮನೆತನ : ರಾಷ್ಟ್ರಕೂಟರು

ರಾಜಧಾನಿ : ಮಾನ್ಯಖೇಟ (ಮಳಖೇಡ)

ಸ್ಥಾಪಕರು : ದಂತಿದುರ್ಗ

ಅವಧಿ : ಕ್ರಿ.ಶ 757 - ಕ್ರಿ.ಶ.973

ಪ್ರಮುಖ ಆಡಳಿತಗಾರರು : ಧ್ರುವ ಧಾರಾವರ್ಷ, ಮೊದಲನೇ ಕೃಷ್ಣಮುಮ್ಮಡಿ ಗೋವಿಂದ 

ಅಮೋಘವರ್ಷ ನೃಪತುಂಗ, ನಾಲ್ವಡಿ ಇಂದ್ರ, ಮುಮ್ಮಡಿ ಕೃಷ್ಣ,

ಸಾಮ್ರಾಜ್ಯದ ವ್ಯಾಪ್ತಿ : ಸಂಪೂರ್ಣ ಕರ್ನಾಟಕ ಮತ್ತು ಮಹಾರಾಷ್ಟ್ರ.ಮತ್ತು ಆಂಧ್ರಪ್ರದೇಶ,

 ತಮಿಳುನಾಡು ಮಧ್ಯಪ್ರದೇಶದ ಭಾಗಗಳು

 

ರಾಜಮನೆತನಚಾಲುಕ್ಯರು

ರಾಜಧಾನಿ : ಕಲ್ಯಾಣಿ

ಸ್ಥಾಪಕರು : ಎರಡನೆಯ ತೈಲಪ

ಅವಧಿ : ಕ್ರಿ.ಶ 973 - ಕ್ರಿ.ಶ.1198

ಪ್ರಮುಖ ಆಡಳಿತಗಾರರು : ಆರನೆಯ ವಿಕ್ರಮಾದಿತ್ಯ

ಸಾಮ್ರಾಜ್ಯದ ವ್ಯಾಪ್ತಿ : ಸಂಪೂರ್ಣ ಕರ್ನಾಟಕ ಮತ್ತು ಮಹಾರಾಷ್ಟ್ರ ಮತ್ತು

ಆಂಧ್ರಪ್ರದೇಶ ತಮಿಳುನಾಡು , ಮಧ್ಯಪ್ರದೇಶದ ಭಾಗಗಳು

 

ರಾಜಮನೆತನ : ಸೇವುಣರು

ರಾಜಧಾನಿ : ದೇವಗಿರಿ

ಸ್ಥಾಪಕರು : ದೃಢಪ್ರಹಾರ

ಅವಧಿ : ಕ್ರಿ.ಶ 1198 - ಕ್ರಿ.ಶ.1312

ಪ್ರಮುಖ ಆಡಳಿತಗಾರರು : ಇಮ್ಮಡಿ  ಶ್ರೀರಂಗ

ಸಾಮ್ರಾಜ್ಯದ ವ್ಯಾಪ್ತಿ : ಉತ್ತರ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ

 

ರಾಜಮನೆತನ :ಹೊಯ್ಸಳರು

ರಾಜಧಾನಿ :ದ್ವಾರಸಮುದ್ರ (ಹಳೇಬೀಡು)

ಸ್ಥಾಪಕರು : ಸಳ

ಅವಧಿ :ಕ್ರಿ.ಶ 1000 - ಕ್ರಿ.ಶ.1346

ಪ್ರಮುಖ ಆಡಳಿತಗಾರರು : ವಿಷ್ಣುವರ್ಧನ, ಇಮ್ಮಡಿ ಬಲ್ಲಾಳ

ಸಾಮ್ರಾಜ್ಯದ ವ್ಯಾಪ್ತಿ : ಕರಾವಳಿ ಮತ್ತು ದಕ್ಷಿಣ ಕರ್ನಾಟಕ,

ಆಂಧ್ರಪ್ರದೇಶ, ತಮಿಳುನಾಡು

 

ರಾಜಮನೆತನ: ವಿಜಯನಗರ ಸಾಮ್ರಾಜ್ಯ

ರಾಜಧಾನಿ :ಹಂಪೆ

ಸ್ಥಾಪಕರು : ಹರಿಹರ  ಬುಕ್ಕರು

ಅವಧಿ :ಕ್ರಿ.ಶ 1336 - ಕ್ರಿ.ಶ.1565

ಪ್ರಮುಖ ಆಡಳಿತಗಾರರು : ಇಮ್ಮಡಿ ದೇವರಾಯ, ಕೃಷ್ಣದೇವರಾಯ

ಸಾಮ್ರಾಜ್ಯದ ವ್ಯಾಪ್ತಿ : ಸಂಪೂರ್ಣ ಕರ್ನಾಟಕ ಮತ್ತು

ಆಂಧ್ರಪ್ರದೇಶ, ತಮಿಳುನಾಡು

ಕೇರಳ

 

ರಾಜಮನೆತನ: ಬಹಮನಿ ಸಾಮ್ರಾಜ್ಯ

ರಾಜಧಾನಿ :ಕಲಬುರ್ಗಿ

ಬೀದರ್

ಸ್ಥಾಪಕರು : ಅಲ್ಲಾವುದ್ದೀನ್ ಬಹಮನ್ ಶಾಹ್ 

ಅವಧಿ :ಕ್ರಿ.ಶ 1347 - ಕ್ರಿ.ಶ 1527

ಪ್ರಮುಖ ಆಡಳಿತಗಾರರು : ಒಂದನೆಯ ಮೊಹಮ್ಮದ್ ಶಾಹ್ I

ಸಾಮ್ರಾಜ್ಯದ ವ್ಯಾಪ್ತಿ : ದಕ್ಷಿಣ ಭಾರತದ ಪ್ರದೇಶಗಳು

 

ರಾಜಮನೆತನ : ವಿಜಯಪುರದ ಸುಲ್ತಾನರು

ರಾಜಧಾನಿ :ವಿಜಯಪುರ

ಸ್ಥಾಪಕರು : ಯೂಸುಫ್ ಆದಿಲ್ ಖಾನ್

ಅವಧಿ :ಕ್ರಿ.ಶ 1490 - ಕ್ರಿ.ಶ.1686

ಪ್ರಮುಖ ಆಡಳಿತಗಾರರು : ಯೂಸುಫ್ ಆದಿಲ್ ಖಾನ್, ಇಬ್ರಾಹಿಂ ಆದಿಲ್ ಶಾಹ್ II

ಸಾಮ್ರಾಜ್ಯದ ವ್ಯಾಪ್ತಿ : ಬಿಜಾಪುರದ ಸುತ್ತಲಿನ ಪ್ರದೇಶಗಳು

 

ರಾಜಮನೆತನ : ನಾಯಕರು

ರಾಜಧಾನಿ :ಕೆಳದಿ

ಸ್ಥಾಪಕರು : ಚೌಡಗೌಡ ಮತ್ತು ಭದ್ರಪ್ಪ

ಅವಧಿ :ಕ್ರಿ.ಶ 1500 - ಕ್ರಿ.ಶ.1763

ಪ್ರಮುಖ ಆಡಳಿತಗಾರರು : ಶಿವಪ್ಪ ನಾಯಕ, ರಾಣಿ ಚೆನ್ನಮ್ಮ

ಸಾಮ್ರಾಜ್ಯದ ವ್ಯಾಪ್ತಿ : ಕರಾವಳಿ ಮತ್ತು ಮಧ್ಯ  ಕರ್ನಾಟಕ

 

ರಾಜಮನೆತನ: ಒಡೆಯರ್ ರಾಜವಂಶ

ರಾಜಧಾನಿ :ಮೈಸೂರು 

ಸ್ಥಾಪಕರು : ಯದುರಾಯ ಮತ್ತು  ಕೃಷ್ಣರಾಯ

ಅವಧಿ :ಕ್ರಿ.ಶ 1399 - ಕ್ರಿ.ಶ 1831

ಪ್ರಮುಖ ಆಡಳಿತಗಾರರು : ರಾಜ ಒಡೆಯರ್, ರಣಧೀರ ಕಂಠೀರವ,

ಸಾಮ್ರಾಜ್ಯದ ವ್ಯಾಪ್ತಿ : ಚಿಕ್ಕದೇವರಾಜ ಒಡೆಯರ್, ಮುಮ್ಮಡಿ ಕೃಷ್ಣದೇವರಾಜ ಒಡೆಯರ್

ಹಳೆಯ ಮೈಸೂರಿನ ಪ್ರದೇಶಗಳು




ಹೂವಾಡಗಿತ್ತಿ




ಹೂವನು ಮಾರುತ ಹೂವಾಡಗಿತ್ತಿ
ಹಾಡುತ ಬರುತಿಹಳು
ಘಮಘಮ ಹೂಗಳು ಬೇಕೇಎನ್ನುತ
ಹಾಡುತ ಬರುತಿಹಳು
ಬಿಳುಪಿನ ಮಲ್ಲಿಗೆ ಹಳದಿಯ ಸಂಪಿಗೆ
ಹಸುರಿನ ಹೊಸ ಮರುಗ;
ಹಾಕಿ ಕಟ್ಟಿರುವೆ ಬೇಕೇ ಎನುತ
ಹಾಡುತ ಬರುತಿಹಳು
ಹೊಸ ಸೇವಂತಿಗೆ ಹೊಸ ಇರುವಂತಿಗೆ
ಅರಸಿನ ತಾಳೆಯಿದೆ;
ಅಚ್ಚ ಮಲ್ಲೆಯಲಿ ಪಚ್ಚ ತೆನೆಗಳು
ಸೇರಿದ ಮಾಲೆಯಿದೆ
ಕಂಪನು ಚೆಲ್ಲುವ ಕೆಂಪು ಗುಲಾಬಿ
ಅರಳಿದ ಹೊಸ ಕಮಲ;
ಬಿಳುಪಿನ ಜಾಜಿ ಅರಳಿದ ಬಿಳಿ ಕಮಲ
ಬಗೆ ಬಗೆ ಹೂಗಳು ಬೇಕೇ ಎನುತ
ಹಾಡುತ ಬರುತಿಹಳು

ಸಾಹಿತ್ಯ: ಪ್ರೊ।। ಎಂ.ವಿ. ಸೀತಾರಾಮಯ್ಯ

ಜಲ ಮಾಲಿನ್ಯ



Ganga In Varanasi , PC: Sudarshan Desai
ಭೂಮಿಯ ಮೇಲಿನ ಶುಧ್ಧ ನೀರನ್ನು ಮಾನವ ತನ್ನ ದುರಾಸೆ ಫಲವಾಗಿ ಮಾಲಿನ್ಯಗೊಳಿಲುತ್ತಿದ್ದಾನೆ. ಮಾಲಿನ್ಯಕ್ಕೆ ಮುಖ್ಯ ಕಾರಣಗಳೆಂದರೆ, ಕೈಗಾರಿಕಾ ಕೊಳೆ ನದಿ, ಸರೋವರಗಳ ನೀರಿನಲ್ಲಿ ಸೇರಿದಾಗ ಅದರಲ್ಲಿ ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಅಂಶ ಅಧಿಕವಾಗಿ ನೀರು ಗಡುಸಾಗುತ್ತದೆ. ಇಂಥ ನೀರು ಕುಡಿಯಲು, ಕೈಗಾರಿಕೆಗಳಲ್ಲಿ ಬಳಸಲು ಬರುವುದಿಲ್ಲ. ಕರ್ನಾಟಕದ ಅನೇಕ ಕಾರ್ಖಾನೆಗಳು ಕೊಳೆಯನ್ನು ಸಾಗಿಸಲು ತುಂಗಭದ್ರಾ, ಕಾವೇರಿ ಇತ್ಯಾದಿ ನದಿಗಳನ್ನು ಉಪಯೋಗಿಸುತ್ತವೆ. ದುರ್ಗಾಪುರದ ಕೈಗಾರಿಕಾ ಕೊಳೆ ದಾಮೋದರ ನದಿಯ ನೀರನ್ನು ಮಲಿನಗೊಳಿಸುತ್ತದೆ. ೧೯೬೯ರಲ್ಲಿ ಗಂಗಾ ನದಿಯ ನೀರಿಗೆ ಹರಿದ ತೈಲಾಂಶ ಹೆಚ್ಚಾ ನೀರಿನ ಮೇಲೆ ಎಣ್ಣೆ ಹೊತ್ತಿಕೊಂಡು ಅನೇಕ ದಿನಗಳವರೆಗೆ ಉರಿಯಿತು. ಸಂಸ್ಕರಿಸದ ಯಮುನಾ ನದಿಯ ನೀರು ಕುಡಿದು ದೆಹಲಿಯ ನಾಗರಿಕರು ಕಾಮಾಲೆ ರೋಗದಿಂದ ನರಳಿದರು. ಟನ್ ಗಟ್ಟಲೆ ಮೀನುಗಳು ಸತ್ತು ನೀರಿನ ಮೇಲೆ ತೇಲಿದವು. ಇಂತಹ ಹಲವಾರು ಉದಾಹರಣೆಗಳು ನಮಗೆ ಕಾಣಸಿಗುತ್ತವೆ.

ಜಲಮಾಲಿನ್ಯವನ್ನು ತಡೆಗಟ್ಟುವುದು ಈಗಿನ ಅಗತ್ಯಗಳಲ್ಲಿ ಒಂದಾಗಿದೆ. ವಿಷಯುಕ್ತ ನೀರು ಜಲಮೂಲ ಸೇರದಂತೆ  ಸಂರಕ್ಷಿಸಬೇಕು. ಜಲ ಮೂಲಗಳ ಬಳಿ ಮಲ ಮೂತ್ರ ವಿಸರ್ಜಿಸುವುದು, ದನಕರುಗಳ ಮೈ ತೊಳೆಯುವುದು, ಬಟ್ಟೆ ಮತ್ತು ಪಾತ್ರೆ ಸ್ವಚ್ಛ ಮಾಡುವುದು, ಶೌಚ ಗೃಹಗಳನ್ನು ನಿರ್ಮಿಸುವುದು, ಇವುಗಳಿಂದ ನೀರು ಅಶುದ್ಧವಾಗುತ್ತದೆ. ಆದ್ದರಿಂದ ಇವುಗಳನ್ನು ತಡೆಗಟ್ಟಬೇಕು. ಸಾಮಾನ್ಯವಾಗಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ರೋಗಾಣುಗಳ ಮೂಲಸ್ಥಾನವಾಗುತ್ತದೆ. ಇದರಿಂದ ಅನೇಕ ಕಾಯಿಲೆಗಳು ಹರಡುತ್ತವೆ. ಬಚ್ಚಲ ನೀರು, ಮೋರಿಯ ನೀರು, ಸುಗಮವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಬೇಕು. ಹೀರುಗುಂಡಿಗಳನ್ನು ನಿರ್ಮಿಸಿ ಕಲುಷಿತ ನೀರು ಭೂಮಿಗೆ ಸೇರುವಂತೆ ಮಾಡಬೇಕು.

ನಮಗೆ ನೀರು ದೊರೆಯುವ ಮೂಲಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಬೇಕು. ಕೆರೆ ಕಟ್ಟೆಗಳಲ್ಲಿನ ನೀರನ್ನು ಕೊಳಕು ಮಾಡಬಾರದು. ಬಾವಿಯನ್ನು ಸುತ್ತಲೂ ಕಟ್ಟೆ ಕಟ್ಟುವುದರ ಮೂಲಕ ರಕ್ಷಿಸಬೇಕು. ಆದಷ್ಟು ಕೊಳವೆ ಬಾವಿಯನ್ನು ತೋಡಿಸಬೇಕು. ನೀರನ್ನು ಶುದ್ಧ ಮಾಡಲು ಅನೇಕ ಮಾರ್ಗಗಳಿವೆ. ಕುದಿಸುವುದು, ಬ್ಲೀಚಿಂಗ್ ಪೌಡರ್ ಸೇರಿಸುವುದು, ಶೋಧಿಸುವುದು ಇತ್ಯಾದಿ ಕೆಲವು ಕ್ರಮಗಳಿಂದ ನೀರು ಶುದ್ಧವಾಗುತ್ತದೆ. ಮನೆಗಳಲ್ಲಿ ನೀರು ತುಂಬಿರುವ ಪಾತ್ರೆಯನ್ನು ಮುಚ್ಚಿರಬೇಕು. ಕುಡಿಯುವ ನೀರನ್ನು ಶುದ್ಧವಾಗಿಡುವುದು ಇಡೀ ಸಮುದಾಯದ ಜವಾಬ್ದಾರಿ.

ಮನೆಯ ಹಿಂದೆ ಮುಂದೆ ಜಾಗವಿದ್ದರೆ ಕೈ ತೋಟ ಮಾಡುವುದುಉತ್ತಮ. ಸೂಕ್ತ ರೀತಿಯಲ್ಲಿ ಗೊಬ್ಬರದ ಗುಂಡಿಗಳನ್ನು ನಿರ್ಮಿಸಿ ಸಗಣಿ ಮತ್ತು ಇತರ ಅನುಪಯುಕ್ತ ವಸ್ತುಗಳನ್ನು ಅದರಲ್ಲಿ ಹಾಕಬೇಕು. ಶೌಚಾಲಯಗಳ ಪಾತ್ರ ಅತಿ ಮುಖ್ಯ. ನೈರ್ಮಲ್ಯದಿಂದ ಕೂಡಿದ ಶೌಚಗೃಹಗಳಿಂದ ಅನೇಕ ರೋಗ ರುಜಿನಗಳು ಹರಡುವುದನ್ನು ತಡೆಗಟ್ಟಬಹುದು.


- ಸೀಮಾ ಕಂಚಿಬೈಲು



ಇತರ ಸಂಬಂಧಿತ ಪ್ರಬಂಧಗಳು
ಪರಿಸರ ಮಾಲಿನ್ಯ,
 ವಾಯುಮಾಲಿನ್ಯ

ಸಾಹಿತಿಗಳು ಮತ್ತು ಅವರ ಕಾವ್ಯನಾಮಗಳು





1 ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ     ಕುವೆಂಪು

2
ದತ್ತಾತ್ರೇಯ ರಾಮಚಂದ್ರ ಬೇಂದ್ರೆ      ಅಂಬಿಕಾತನಯದತ್ತ
3 ಮಾಸ್ತಿ ವೆಂಕಟೇಶ್ ಅಯ್ಯಂಗಾರ್       ಶ್ರೀನಿವಾಸ
4 ವಿನಾಯಕ ಕೃಷ್ಣ ಗೋಕಾಕ್             ವಿ.ಕೃ.ಗೋಕಾಕ್
5 ಡಾ. ಎಂ. ಶಿವರಾಮ                    ರಾಶಿ.
6 ಅನಸೂಯಶಂಕರ                     ತ್ರಿವೇಣಿ
7 ಭೀಮಸೇನರಾವ್ ಚಿದಂಬರರಾವ್       ಬೀಚಿ
8 ಅರಕಲಗೂಡು ನರಸಿಂಗರಾವ್ ಕೃಷ್ಣರಾವ್   ಅ.ನ.ಕೃ
9 ಪಾಟೀಲ ಪುಟ್ಟಪ್ಪ       ಪಾಪು
10 ಎನ್ ಕೆ ಕುಲಕರ್ಣಿ  ಎನ್ಕೆ
11 ಆದ್ಯ ರಂಗಚಾರ್ಯ                ಶ್ರೀರಂಗ
12 ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ   ತೀ.ನಂ.ಶ್ರೀ
13 ನಂದಳಿಕೆ ಲಕ್ಷೀ ನಾರಣಪ್ಪ         ಮುದ್ದಣ
14 ಸಿದ್ದಯ್ಯ ಪುರಾಣಿಕ     ಕಾವ್ಯಾನಂದ
15 ತ.ರಾ. ಸುಬ್ಬರಾಯ             ತರಾಸು
16 ದೇವನಹಳ‍್ಳಿ ವೆಂಕಟರಮಣಪ್ಪ ಗುಂಡಪ್ಪ     ಡಿವಿಜಿ
17 ಅರಗ ಲಕ್ಷ್ಮಣರಾವ್               ಹೊಯಿಸಳ
18 ಜಿ. ವೆಂಕಟಸುಬ್ಬಯ್ಯ             ಪ್ರೊ. ಜಿ.ವಿ
19 ಎಸ್.ಆರ್. ನಾರಾಯಣರಾವ್            ಭಾರತೀಸುತ
20 ತ್ಯಾಗರಾಜ ಪರಮಶಿವ ಕೈಲಾಸಂ           ಟಿ.ಪಿ.ಕೈಲಾಸಂ
21 ಪಂಜೇ ಮಂಗೇಶರಾಯರು        ಕವಿಶಿಷ್ಯ
22 ಗದುಗಿನ ನಾರಣಪ್ಪ      ಕುಮಾರವ್ಯಾಸ
23 ಶಂಭಾ ಜೋಶಿ                   ಶಂಬಾ
24 ದೇ.ಜವರೇಗೌಡ        ದೇ.ಜ.ಗೌ
25 ಕುಳಕುಂದ ಶಿವರಾಯ   ನಿರಂಜನ
26 ತಿರುಮಲೆ ತಾತಚಾರ್ಯ ಶರ್ಮ   ತಿ.ತಾ.ಶರ್ಮ
27 ಪುರೋಹಿತ ತಿರುನಾರಾಯಣ ನರಸಿಂಹಚಾರ್ಯ     ಪು.ತಿ.ನ
28 ಜಾನಕಿ.ಎಸ್.ಮೂರ್ತಿ   ವೈದೇಹಿ
29 ಹಳಿಯೂರು ಶ್ರೀನಿವಾಸ ಅಯ್ಯಂಗಾರ್ ಕೃಷ್ಣಸ್ವಾಮಿ       ಎಚ್ಚೆಸ್ಕೆ
30 ಎ.ಆರ್. ಕೃಷ್ಣಶಾಸ್ತ್ರಿ             ಶ್ರೀಪತಿ
31 ಸುಬ್ರಮಣ್ಯರಾಜೇ ಅರಸ್                 ಚದುರಂಗ
32 ಬೇಟಗೇರಿ ಕೃಷ್ಣ ಶರ್ಮ  ಆನಂದ ಕಂದ
33 ಜಿ.ಬಿ. ಜೋಶಿ           ಜಡಭರತ.
34 ಆರ್.ಬಿ. ಕುಲಕರ್ಣಿ               ರಾವ್ ಬಹದ್ದೂರ್.
35 ರಂ.ಶ್ರೀ.ಮುಗಳಿ         ರಸಿಕರ ರಂಗ
36 ಸುಬ್ಬಣ್ಣ ರಂಗನಾಥ ಎಕ್ಕುಂಡಿ      ಸು.ರಂ.ಎಕ್ಕುಂಡಿ
37 ಬಿ.ಎಂ.ಶ‍್ರೀಕಂಠಯ್ಯ     ಬಿಎಂಶ್ರೀ
38 ಕೆ.ಎಸ್.ನರಸಿಂಹ ಸ್ವಾಮಿ         ಕೆ.ಎಸ್.ನ
39 ಸಿ.ಪಿ.ಕೃಷ್ಣಕುಮಾರ್      ಸಿ.ಪಿ.ಕೆ
40 ಅಜ್ಜಂಪುರ ಸೀತಾರಾಂ   ಆನಂದ
41 ಪಿ.ನರಸಿಂಗರಾವ್       ಪರ್ವತವಾಣಿ
42 ಚೆನ್ನಮಲ್ಲಪ್ಪಗಲಗಲಿ     ಮಧುರಚೆನ್ನ
43 ಎಂ ಎನ್ ಸುಬ್ಬಮ್ಮ     ವಾಣಿ
44 ತಿರುಮಲೆ ರಾಜಮ್ಮ     ಭಾರತಿ
45 ದೊಡ್ಡರಂಗೇಗೌಡ       ಮನುಜ
46 ದೊಡ್ಡಬೆಲೆ ಲಕ್ಷ್ಮೀನರಸಂಹಚಾರ್ಯ         ಡಿ.ಎಲ್.ಎನ್
47 ಮಲ್ಲಾಡಹಲ್ಲಿ ರಾಘವೇಂದ್ರಸ್ವಾಮಿ  ತಿರುಕ
48 ಎಂ.ಆರ್.ಶ‍್ರೀನಿವಾಸಮೂರ್ತಿ     ಎಂ.ಆರ್.ಶ‍್ರೀ
49 ಎಂ.ವಿ.ಸೀತಾರಾಮಯ್ಯ          ರಾಘವ
50 ವೀ. ಸೀತಾರಾಮಯ್ಯ            ವಿಸೀ
51 ಕೈಯಾರ ಕಿಯಣ್ಣರೈ             ದುರ್ಗಾದಾಸ
52 ಹಂ.ಪ. ನಾಗರಾಜಯ್ಯ           ಹಂಪಾನಾ
53 ಹಾ. ಮಾನಪ್ಪ ನಾಯಕ್                   ಹಾಮಾನಾ
54 ಅಣ್ಣಪ್ಪ ಅಪ್ಪಣ್ಣ ಮಿರ್ಜಿ                         ಮಿರ್ಜಿ ಅಪ್ಪಾರಾಯ
55 ಅನಂತ ಕೃಷ್ಣ ಶಹಾಪೂರ                        ಸತ್ಯಕಾಮ