Showing posts with label SSLC social study. Show all posts
Showing posts with label SSLC social study. Show all posts

SSLC ಸಮಾಜ ವಿಜ್ಞಾನ ವಸ್ತುನಿಷ್ಠ ಪ್ರಶ್ನೆಗಳು - 2

 

ಈ ವರ್ಷ 2021 ರ SSLC ಪರೀಕ್ಷೆಯನ್ನು MCQ ಮಾದರಿಯಲ್ಲಿ ನಡೆಸಲು ಸರಕಾರವು ನಿರ್ಧರಿಸಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಸ್ತುನಿಷ್ಠ ಪ್ರಶ್ನೋತ್ತರಗಳನ್ನು ನೀಡಲಾಗಿದೆ. 


1.       ಮೊದಲನೇ ಆಂಗ್ಲೋ ಮರಾಠ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?

a.       ಸಾಲ್ ಬಾಯ್ ಒಪ್ಪಂದ

2.       ಪೇಶ್ವೆ ನಾರಾಯಣ್ ರಾವನನ್ನು ಕೊಲೆ ಮಾಡಿದವನು ________

a.       ರಘುನಾಥರಾವ್ ಅಥವಾ ರಘೋಬಾ

3.       ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವರು __________

a.       ಲಾರ್ಡ್ ವೆಲ್ಲೆಸ್ಲಿ

4.       ದತ್ತುಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದವರು _________

a.       ಲಾರ್ಡ್ ಡೌಲ್ ಹೌಸಿ

5.       ಮೈಸೂರು, ಔಧ್, ತಂಜಾವೂರುಗಳು ಬ್ರಿಟಿಷರ ________ ನಿಬಂಧನೆಗೆ ಒಳಪಟ್ಟಿದ್ದವು.  

a.       ಸಹಾಯಕ ಸೈನ್ಯ ಪದ್ದತಿಯ

6.       ಝಾನ್ಸಿ  ಬ್ರಿಟಿಷರ ________ನೀತಿಗೆ ಒಳಪಟ್ಟಿತ್ತು

a.       ದತ್ತುಮಕ್ಕಳಿಗೆ ಹಕ್ಕಿಲ್ಲ

7.       ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು ?

a.       ಲಾರ್ಡ್ ಕಾರ್ನವಾಲಿಸ್

8.       ರೆಗ್ಯುಲೇಟಿಂಗ್ ಕಾಯ್ದೆಯನ್ನು ಜಾರಿಗೆಗೊಳಿಸಿದ ವರ್ಷ ಯಾವುದು ?

a.       1773

9.        ರೆಗ್ಯುಲೇಟಿಂಗ್ ಕಾಯ್ದೆಯ ಅನ್ವಯ ___________ ದಲ್ಲಿ ಸುಪ್ರೀಂ ಕೋರ್ಟ್ ನ್ನು ಸ್ಥಾಪಿಸಲಾಯಿತು.

a.       ಕಲ್ಕತ್ತಾ

10.   ಭಾರತದ ಪ್ರಥಮ ವೈಸ್ ರಾಯ್ ಯಾರು ?

a.       ಲಾರ್ಡ್ ಕ್ಯಾನಿಂಗ್

SSLC ಸಮಾಜ ವಿಜ್ಞಾನ ವಸ್ತುನಿಷ್ಠ ಪ್ರಶ್ನೆಗಳು -1

ಈ ವರ್ಷ 2021 ರ SSLC ಪರೀಕ್ಷೆಯನ್ನು MCQ ಮಾದರಿಯಲ್ಲಿ ನಡೆಸಲು ಸರಕಾರವು ನಿರ್ಧರಿಸಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಸ್ತುನಿಷ್ಠ ಪ್ರಶ್ನೋತ್ತರಗಳನ್ನು ನೀಡಲಾಗಿದೆ. 


1.       ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ದತಿಯನ್ನು ಜಾರಿಗೆ ತಂದವರು ಯಾರು ?

a.       ರಾಬರ್ಟ್ ಕ್ಲೈವ್

2.       ಪ್ಲಾಸಿ ಕದನ ನಡೆದ ವರ್ಷ_____

a.       1757 ರಲ್ಲಿ

3.       ಪ್ಲಾಸಿ ಕದನವು ಯಾರ ನಡುವೆ ನಡೆಯಿತು ?

a.       ಬ್ರಿಟಿಷರು ಮತ್ತು ಬಂಗಾಳದ ನವಾಬನಾದ ಸಿರಾಜ್ ಉದ್ ದೌಲ್

4.       ಎಕ್ಸ್ ಲಾ ಚಾಪೆಲ್ ಒಪ್ಪಂದದೊಂದಿಗೆ ಕೊನೆಗೊಂಡ ಯುದ್ಧ ಯಾವುದು ?

a.       ಮೊದಲ ಕಾರ್ನಾಟಿಕ್ ಯುದ್ಧ

5.       ಫ್ರೆಂಚ್ ಈಸ್ಟ್ ಇಂಡಿಯ ಕಂಪನಿ ಪ್ರಾರಂಭವಾದ ವರ್ಷ ಯಾವುದು ?

a.       1664 ರಲ್ಲಿ

6.       ಇಂಗ್ಲಿಷ್ ಈಸ್ಟ್ ಇಂಡಿಯ ಕಂಪನಿ ಪ್ರಾರಂಭವಾದ ವರ್ಷ ಯಾವುದು ?

a.       1600 ರಲ್ಲಿ

7.       1463 ರಲ್ಲಿ ಆಟೋಮನ್ ಟರ್ಕ್ ರು ಯಾವ ನಗರವನ್ನು ವಶಪಡಿಸಿಕೊಂಡರು ?

a.       ಕಾನ್ಸ್ಟಾಂಟಿನೋಪಲ್

8.       ವಾಸ್ಕೊ ಡಿ ಗಾಮನು 1498 ರಲ್ಲಿ ಭಾರತದ ಪಶ್ಚಿಮ ತೀರದ ___________ಎಂಬಲ್ಲಿ ಬಂದು ತಲುಪಿದನು

a.       ಕಲ್ಲಿಕೋಟೆಯ ಸಮೀಪದ ಕಾಪ್ಪಡ

9.       ________ ನು ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು ಪ್ರಸಿದ್ಧನಾಗಿದ್ದಾನೆ

a.       ಅಲ್ಫೋನ್ಸೋ ಡಿ ಅಲ್ಬುಕರ್ಕ್

10.   ಬ್ರಿಟಿಷರು ತಮ್ಮ ಮೊದಲ ಫಾಕ್ಟರಿಯನ್ನು _______ ನಲ್ಲಿ ಸ್ಥಾಪಿಸಿದರು

a.       ಸೂರತ್