ಈ ವರ್ಷ 2021 ರ SSLC ಪರೀಕ್ಷೆಯನ್ನು MCQ ಮಾದರಿಯಲ್ಲಿ ನಡೆಸಲು ಸರಕಾರವು ನಿರ್ಧರಿಸಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಸ್ತುನಿಷ್ಠ ಪ್ರಶ್ನೋತ್ತರಗಳನ್ನು ನೀಡಲಾಗಿದೆ.
. ತಟಸ್ಥಿಕರಣ ಕ್ರಿಯೆಯ ಉತ್ಪನ್ನಗಳು ಯಾವವು ?
a. ನೀರು ಮತ್ತು ಲವಣ
2. ಜೇನು ಹುಳುವಿನ ಮುಳ್ಳಿನಲ್ಲಿರುವ ಆಮ್ಲ ಯಾವುದು ?
a. ಮೆಥನೋಯಿಕ್ ಆಮ್ಲ
3. ಕ್ರಿಯೆಯಲ್ಲಿ ವಸ್ತುವೊಂದು ಆಕ್ಸಿಜನ್ ಪಡೆದುಕೊಂಡರೆ, ಅದು __________ ಗೊಂಡಿದೆ ಎನ್ನುತ್ತಾರೆ.
a. ಉತ್ಕರ್ಷಣ
4. ಕ್ರಿಯೆಯಲ್ಲಿ ವಸ್ತುವೊಂದು ಆಕ್ಸಿಜನ್ ಕಳೆದುಕೊಂಡರೆ, ಅದು __________ ಗೊಂಡಿದೆ ಎನ್ನುತ್ತಾರೆ.
a. ಅಪಕರ್ಷಣ
5. ಚಿಪ್ಸ್ ತಯಾರಕರು, ಚಿಪ್ಸ್ ಉತ್ಕರ್ಷಣಗೊಳ್ಳುವುದನ್ನು ತಡೆಗಟ್ಟಲು ___________ ಅನಿಲವನ್ನು ಹಾಯಿಸುತ್ತಾರೆ. \
a. ನೈಟ್ರೋಜನ್
6. ಒಂದು ಧಾತುವು ಸಂಯುಕ್ತದಲ್ಲಿನ ಇನ್ನೊಂದು ಧಾತುವನ್ನು ಪಲ್ಲಟಗೊಳಿಸಿದಾಗ _________ ಕ್ರಿಯೆ ನಡೆಯುತ್ತದೆ.
a. ಸ್ಥಾನಪಲ್ಲಟ
7. ಉತ್ಪನ್ನಗಳೊಂದಿಗೆ ಉಷ್ಣ ಬಿಡುಗಡೆಯಾಗುವ ಕ್ರಿಯೆಗಳನ್ನು ___________ ಕ್ರಿಯೆಗಳು ಎನ್ನುವರು.
a. ಬಹಿರುಷ್ಣಕ
8. ಮೊಸರಿನಲ್ಲಿರುವ ಆಮ್ಲ ಯಾವುದು?
a. ಲ್ಯಾಕ್ಟಿಕ್ ಆಮ್ಲ
9. ಲೋಹಗಳು ನೀರಿನ ಜೊತೆ ಪ್ರತಿವರ್ತಿಸಿದಾಗ ಲೋಹದ ಆಕ್ಸೈಡ್ ಮತ್ತು __________ ಅನಿಲವನ್ನು ಬಿಡುಗಡೆ ಮಾಡುತ್ತವೆ.
a. ಹೈಡ್ರೋಜನ್
10. ___________ ವು ಎರಡು ಅಥವಾ ಹೆಚ್ಚು ಲೋಹ ಅಥವಾ ಅಲೋಹಗಳ ಏಕರೂಪದ ಮಿಶ್ರಣವಾಗಿದೆ.
a. ಮಿಶ್ರಲೋಹ
No comments:
Post a Comment