1. ‘ಮಕ್ಕಳು ಚಿಟಚಿಟನೆ ಚೀರಿದರು’ ಈ ವಾಕ್ಯದಲ್ಲಿ ಗೆರೆ ಎಳೆದ ಪದ –
a. ಅನುಕರಣಾವ್ಯಯ
2. ‘ನೋಡಿ ನೋಡಿ’ ಈ ಪದ ಈ ವ್ಯಾಕರಣಾಂಶಕ್ಕೆ ಸೇರಿದೆ –
a. ದ್ವಿರುಕ್ತಿ
3. ಗುಂಪಿಗೆ ಸೇರದ ಪದ ಯಾವುದು ಆಟಪಾಠ, ನಡೆನಡೆ, ಹೌದು ಹೌದು, ಸಾಕುಸಾಕು –
a. ಆಟಪಾಠ (ಏಕೆಂದರೆ ಆಟಪಾಠ ಜೋಡು ನುಡಿ ಉಳಿದವುಗಳೆಲ್ಲಾ ದ್ವಿರುಕ್ತಿಗಳು)
4. ‘ಬೇಗ ಬೇಗ’ ಇದು ಈ ವ್ಯಾಕರಣಾಂಶಕ್ಕೆ ಉದಾಹರಣೆ –
a. ದ್ವಿರುಕ್ತಿ
5. ‘ಕಪ್ಪಕಾಣಿಕೆ’ ಪದದಲ್ಲಿರುವ ವ್ಯಾಕರಣಾಂಶ –
a. ಜೋಡುನುಡಿ
6. ‘ಪಟಪಟ, ಧರಣಿಮಂಡಲ, ನಡೆನಡೆ, ರೀತಿನೀತಿ’ ಪದಗಳಲ್ಲಿ ಅನುಕರಣಾವ್ಯಯ ಪದ ಯಾವುದು –
a. ಪಟಪಟ
7. ‘ಬಿಟ್ಟು ಬಿಡದೆ ಪಟಪಟನೆ ಸುರಿಯುವ ಮಳೆಯಲ್ಲಿ ಮಕ್ಕಳು ಹಿಂದೆ ಹಿಂದೆ ನೋಡದೆ ಆಡಿದರು’ ಈ ವ್ಯಾಕರಣ ವಾಕ್ಯದಲ್ಲಿರುವ ಅನುಕರಣಾವ್ಯಯ ಪದ
a. ಪಟಪಟನೆ
8. ‘ಕಾಡಿನ ದಾರಿಯಲ್ಲಿ ಹಾವು ಸರಸರನೆ ಹೋಯಿತು’ ಗೆರೆ ಎಳೆದ ಪದ
a. ಅನುಕರಣಾವ್ಯಯ
9. ‘ಪ್ರವಾಹದಲ್ಲಿ ಜನ ಮನೆ ಮಠಗಳನ್ನು ಕಳೆದುಕೊಂಡು ಊರೂರು ತಿರುಗಾಡಿದರು’ ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದ -
a. ಊರೂರು
10. ‘ಕಾಡಿಗೆ ಮತ್ತೆ ಮತ್ತೆ ಬೆಂಕಿ ಬಿದ್ದು ಧಗಧಗನೆ ಉರಿದು ಮರಗಳೆಲ್ಲ ನಾಶವಾದವು’ ಈ ವಾಕ್ಯದಲ್ಲಿರುವ ಅನುಕರಣಾವ್ಯಯ ಪದ –
a. ಧಗಧಗ
11. ಅಭಿಪ್ರಾಯದ ವಿವರಣೆ ಇಂತಿದೆ ಎನ್ನುವುದನ್ನು ತಿಳಿಸುವಾಗ ಬಳಸುವ ಚಿಹ್ನೆ –
a. ವಿವರಣಾತ್ಮಕ ಚಿಹ್ನೆ
12. ಪ್ರಶ್ನೆಗಳನ್ನು ಬರೆಯುವ ಸಂದರ್ಭದಲ್ಲಿ ಪದ ಅಥವಾ ವಾಕ್ಯದ ಅಂತ್ಯದಲ್ಲಿ ಬಳಸುವ ಚಿಹ್ನೆ –
a. ಪ್ರಶ್ನಾರ್ಥಕ ಚಿಹ್ನೆ
13. ವಾಕ್ಯದ ಪೂರ್ಣಾರ್ಥ ಕ್ರಿಯೆಯನ್ನು ಸೂಚಿಸುವ ಚಿಹ್ನೆ –
a. ಪೂರ್ಣವಿರಾಮ
14. ‘ಒಂದು ದಿನ ನರಿಯು ಕೊಕ್ಕರೆ (ನೀರು ಹಕ್ಕಿ) ಯನ್ನು ಊಟಕ್ಕೆ ಕರೆಯಿತು’ ಈ ವಾಕ್ಯದಲ್ಲಿರುವ ವಿವರಣಾತ್ಮಕ ಚಿಹ್ನೆ
a. ಆವರಣ ಚಿಹ್ನೆ
15. ಬರವಣಿಗೆಯಲ್ಲಿ ಹರ್ಷ, ಅಚ್ಚರಿ, ದುಃಖ, ಕೋಪ ಇತ್ಯಾದಿ ಭಾವನೆಗಳನ್ನು ವ್ಯಕ್ತಪಡಿಸಲು ಬಳಸುವ ಲೇಖನ ಚಿಹ್ನೆಗಳನ್ನು ಹೀಗೆಂದು ಕರೆಯುತ್ತಾರೆ –
a. ಭಾವಸೂಚಕ ಚಿಹ್ನೆ
16. ‘ನಿನ್ನ ಹೆಸರೇನು?’ ಇಲ್ಲಿ ಬಳಸಿರುವ ಲೇಖನ ಚಿಹ್ನೆ –
a. ಪ್ರಶ್ನಾರ್ಥಕ ಚಿಹ್ನೆ
17. ‘ದ. ರಾ. ಬೇಂದ್ರೆ ಅವರ ಭಾವಗೀತೆಗಳನ್ನು ಕೇಳಿ ವಿದ್ಯಾರ್ಥಿಗಳು ಮೈಮರೆಯುವರು’ ಈ ವಾಕ್ಯವು –
a. ಮಿಶ್ರವಾಕ್ಯ
18. ಒಂದೇ ಪೂರ್ಣಕ್ರಿಯಾಪದದೊಡನೆ ಸ್ವತಂತ್ರ ಮತ್ತು ಖಚಿತ ಅರ್ಥ ಕೊಡುವ ವಾಕ್ಯಗಳೇ ಈ ವಾಕ್ಯ –
a. ಸಾಮಾನ್ಯ ವಾಕ್ಯ
19. ‘ಮಕ್ಕಳು ಹಾಲನ್ನು ಕುಡಿಯುತ್ತಾರೆ ಮತ್ತು ಹಣ್ಣನ್ನು ತಿನ್ನುತ್ತಾರೆ’ ಈ ವಾಕ್ಯವು –
a. ಸಂಯೋಜಿತವಾಕ್ಯ
20. ಉಪಮೇಯಕ್ಕಿರುವ ಹೆಸರು –
a. ವರ್ಣ್ಯ
21. ಯಾವ ವಸ್ತುವನ್ನು ಆಧಾರವಾಗಿಟ್ಟುಕೊಂಡು ಉಪಮೆಯನ್ನು ವರ್ಣಿಸಲಾಗಿದೆಯೋ ಅದನ್ನು _________ ಎನ್ನುತ್ತಾರೆ –
a. ಉಪಮಾನ (ವರ್ಣಕ)
22. ‘ಗೌರಿಯ ಮುಖ ಕಮಲದಂತೆ ಅರಳಿತ್ತು’ ಈ ವಾಕ್ಯದಲ್ಲಿರುವ ಸಮಾನಧರ್ಮ –
a. ಅರಳಿತ್ತು
23. ‘ಹೂವಿನ ಹಾಗೆ ಸುಂದರ’ ಈ ಉಪಮಾಲಂಕಾರದಲ್ಲಿ ಉಪಮಾನ –
a. ಹೂ
24. ಉಪಮಾನವೇ ಉಪಮೇಯವೆಂದು ರೂಪಿಸಿ ಅಭೇದತೆಯನ್ನು ಹೇಳುವ ಅಲಂಕಾರ –
a. ರೂಪಕ
25. ಪದ್ಯ ರಚನೆಯ ನಿಯಮಗಳನ್ನು ವಿವರಿಸುವ ಶಾಸ್ತ್ರ –
a. ಛಂದಸ್ಸು
26. ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಆದಿ ಮದ್ಯ ಅಂತ್ಯದಲ್ಲಿ ನಿಯತವಾಗಿ ಬಂದರೆ ________ ಎನ್ನುತ್ತಾರೆ –
a. ಪ್ರಾಸ
27. ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ –
a. ಯತಿ
28. ಗಣದಲ್ಲಿ ಎಷ್ಟು ವಿಧ –
a. 3
29. ಎರಡು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುವವರು –
a. ಗುರು
30. ಅಕ್ಷರವನ್ನು ಉಚ್ಚರಿಸಲು ಬೇಕಾಗುವ ಕಾಲವನ್ನು ಹೀಗೆ ಕರೆಯುವರು –
a. ಮಾತ್ರೆ
31. ಮೂರು ಸಾಲಿನ ಪದ್ಯಕ್ಕೆ ಹೀಗೆನ್ನುವವರು –
a. ತ್ರಿಪದಿ
32. ಇದು ಅಚ್ಚ ಕನ್ನಡದ ದೇಶಿ ಛಂದಸ್ಸು –
a. ತ್ರಿಪದಿ
33. ಮುಕುತಿ, ಬಕುತಾ, ಜನುಮ, ವ್ಯವಸಾಯ ಈ ಪದಗಳಲ್ಲಿ ತತ್ಸಮ ರೂಪಕ್ಕೆ ಉದಾಹರಣೆಯಾಗಿರುವ ಪದ –
a. ವ್ಯವಸಾಯ
34. ‘ವಿದ್ಯೆ’ ಈ ಪದದ ತದ್ಭವ ರೂಪ –
a. ಬಿಜ್ಜೆ
35. ‘ಜೀವವೊಂದು’ ಈ ಪದದಲ್ಲಿರುವ ಸಂಧಿ –
a. ಆಗಮ ಸಂಧಿ
36. ತತ್ತ್ವಪದ, ಕಾವ್ಯವಾಚನ, ಹೆಗ್ಗುರಿ, ಮೈಮರೆತು ಈ ಪದಗಳಲ್ಲಿ ಕರ್ಮಧಾರೆಯ ಸಮಾಸಕ್ಕೆ ಉದಾಹರಣೆಯಾಗಿರುವ ಪದ –
a. ಹೆಗ್ಗುರಿ
37. ಪ್ರಧಾನ ವಾಕ್ಯದಲ್ಲಿಯ ಅನೇಕ ಉಪವಾಕ್ಯಗಳು ಅಂತ್ಯದಲ್ಲಿ ಬಳಸುವ ಲೇಖನ ಚಿಹ್ನೆ –
a. ಅರ್ಧವಿರಾಮ
38. ‘ಅಬ್ಬಾ! ಈ ವನ ಎಷ್ಟು ಸುಂದರವಾಗಿದೆ’ ಈ ವಾಕ್ಯದಲ್ಲಿ ಬಳಸಿರುವ ಲೇಖನ ಚಿಹ್ನೆ –
a. ಭಾವಸೂಚಕ
39. ‘ಬ್ರಹ್ಮ’ ಈ ಪದದ ತದ್ಭವ ರೂಪ –
a. ಬೊಮ್ಮ
40. ಎರಡೂ ಮಾತ್ರ ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ______ ಎಂದು ಕರೆಯುತ್ತಾರೆ –
a. ದೀರ್ಘಸ್ವರ
41. ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಗಳ ಸಂಖ್ಯೆ –
a. 34
42. ಬರವಣಿಗೆಯಲ್ಲಿ ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ತಿಳಿಸಲು ಬಳಚು ಬಳಸುವ ಚಿಹ್ನೆ –
a. ಉದ್ಧರಣ
43. ‘ಅವನು’ ಈ ಪದವು ಈ ಸರ್ವನಾಮಕ್ಕೆ ಉದಾಹರಣೆಯಾಗಿದೆ –
a. ಪ್ರಥಮ ಪುರುಷ
44. ‘ಗೌರಿಯ ಮುಖ ಕಮಲದಂತೆ ಅರಳಿತ್ತು’ ಈ ವಾಕ್ಯದಲ್ಲಿ ಬಂದಿರುವ ಉಪಮೇಯ –
a. ಕಮಲ
45. ತಂದೆ ತಾಯಿ ಹಿರಿಯರಿಗೆ ಪತ್ರ ಬರೆಯುವಾಗ ಬಳಸುವ ಮುಕ್ತಾಯದ ಗೌರವ ಸಂಬೋಧನೆ –
a. ನಮಸ್ಕಾರಗಳು
46. ‘ಸತ್ಪುರುಷರ ಸಹವಾಸದಲ್ಲಿ ಶರೀಫರು ಬಾಳಿಬದುಕಿದರು’ ಇಲ್ಲಿ ಸಪ್ತಮೀ ವಿಭಕ್ತಿಪ್ರತ್ಯಯದಿಂದ ಕೂಡಿರುವ ಪದ –
a. ಸಹವಾಸದಲ್ಲಿ
47. ‘ಕಲಶ’ ಈ ಪದದ ತದ್ಭವ ರೂಪ –
a. ಕಳಸ
48. ‘ಅರಮನೆ’ ಪದವು ಈ ಸಮಾಸಕ್ಕೆ ಉದಾಹರಣೆ –
a. ತತ್ಪುರುಷ
49. ರೋಗರುಜಿನ, ಕಣಕಣ, ಧಮನಿ ಧಮನಿ, ಕಿಡಿಕಿಡಿ ಈ ಪದಗಳಲ್ಲಿ ಜೋಡುನುಡಿಗೆ ಉದಾಹರಣೆಯಾಗಿರುವ ಪದ –
a. ರೋಗರುಜಿನ
50. ‘ಹಿಮಾಲಯ’ ಇದು ಈ ನಾಮಪದಕ್ಕೆ ಉದಾಹರಣೆಯಾಗಿದೆ –
a. ಅಂಕಿತನಾಮ
51. ‘ಕೈಮುಗಿ’ ಈ ಪದದಲ್ಲಿರುವ ಸಮಾಸ –
a. ಕ್ರಿಯಾಸಮಾಸ
52. ನೀನು, ತಾನು, ನಾನು, ಇವನು ಈ ಪದಗಳಲ್ಲಿ ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ –
a. ತಾನು
53. ‘ಭಾಗವತರು ಬಯಲಾಟಗಳಲ್ಲಿ ಪಾತ್ರ ವಹಿಸಿ ಪ್ರೇಕ್ಷಕರ ಕಣ್ಮನಗಳನ್ನು ತಣಿಸುತ್ತಿದ್ದರು’ ಇಲ್ಲಿ ದ್ವಿತೀಯ ವಿಭಕ್ತಿಯಿಂದ ಕೂಡಿರುವ ಪದ –
a. ಕಣ್ಮನಗಳನ್ನು
54. ‘ಚೆನ್ನಮ್ಮನು ಮಹಿಳೆ ಮತ್ತು ಮಕ್ಕಳನ್ನು ಅಕ್ಕರೆಯಿಂದ ಕಂಡ ಕರುಣಾಮಯಿ’ ಇದು _____ ವಾಕ್ಯಕ್ಕೆ ಉದಾಹರಣೆ–
a. ಸಂಯೋಜಿತ ವಾಕ್ಯ
55. ರಕ್ತಗಾಲಿನ, ಗೋಳಿಲ್ಲದ, ಕುಲವೆನ್ನದ, ಗುಂಡಿಲ್ಲದ ಈ ಪದಗಳಲ್ಲಿ _______ ಆದೇಶಸಂಧಿಗೆ ಉದಾಹರಣೆ –
a. ರಕ್ತಗಾಲಿನ
56. ‘ಕಾವ್ಯ’ ಪದದ ತದ್ಭವ ರೂಪ –
a. ಕಬ್ಬ
57. ಆಕ್ಸಿಜನ್ ಇದು ಈ ಭಾಷೆಯಿಂದ ಬಂದ ಪದವಾಗಿದೆ –
a. ಇಂಗ್ಲೀಷ್
58. ________ ಇದು ಪ್ರಧಾನ ವಾಕ್ಯಗಳಲ್ಲಿನ ಉಪವಾಕ್ಯಗಳ ಅಂತ್ಯದಲ್ಲಿ ಬಳಕೆಯಾಗುತ್ತದೆ –
a. ಅರ್ಧವಿರಾಮ ಚಿಹ್ನೆ (;)
59. ವಿಷಯಕ್ಕೆ ವಿವರಣೆ ನೀಡಲು _______ ವಿರಾಮ ಬಳಕೆಯಾಗುತ್ತದೆ –
a. ವಿವರಣ ವಿರಾಮ (:)
60. ಬರವಣಿಗೆಯಲ್ಲಿ ಯಾವುದಾದರೂ ಭಾಗವೊಂದನ್ನು ಅಳವಡಿಸಿದಾಗ ಅದರ ಪ್ರತ್ಯೇಕತೆ ಸೂಚಿಸಲು ಆ ಭಾಗವನ್ನು _______ ಚಿಹ್ನೆಯೊಳಗೆ ಬರೆಯಬೇಕು –
a. ವಾಕ್ಯವೇಷ್ಟನ (ಒಂಟಿ ಉದ್ಧರಣ)
No comments:
Post a Comment