SSLC ಕನ್ನಡ ವ್ಯಾಕರಣ - 1

1. ಕನ್ನಡ ವರ್ಣಮಾಲೆಯ ಒಟ್ಟು ಅಕ್ಷರಗಳು ___________
a. 49

2. ಕನ್ನಡ ವರ್ಣಮಾಲೆಯಲ್ಲಿರುವಅನುನಾಸಿಕಗಳ ಸಂಖ್ಯೆ _________ 
a. 5

3. ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ _______
a. 10

4. ಎರಡು ಮಾತ್ರಾ ಕಾಲಾವಧಿಗಿಂತ ಹೆಚ್ಚು ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವ ಸ್ವರಗಳು
a. ಪ್ಲುತಸ್ವರ

5. ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಆಗುವ ಅಕ್ಷರ 
a. ಗುಣಿತಾಕ್ಷರ

6. ಅಸ್ತ್ರ, ಸರ್ಕಾರ, ದೇವಸ್ಥಾನ, ಸಿಬ್ಬಂದಿ ಇವುಗಳಲ್ಲಿ ಸಜಾತೀಯ ಸಂಯುಕ್ತಾಕ್ಷರ ಪದ ಯಾವುದು?
ಸಿಬ್ಬಂದಿ 

7. ಅಂತಃಪುರ, ಕುಂಕುಮ, ಲೆಕ್ಕಾಚಾರ, ಶಿಕ್ಷಣ ಇವುಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರ ಪದ ಯಾವುದು – 
a. ಶಿಕ್ಷಣ 

8. ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಾಕ್ಷರಗಳಿಗೆ ಒಂದು ಸ್ವರಾಕ್ಷರ  ಸೇರುವುದು
a. ಸಂಯುಕ್ತಾಕ್ಷರ 

9. ಭೂಮಿ, ಮೈಲು, ರಸ್ತೆ, ಮೇಜು ಇವುಗಳಲ್ಲಿ ಪೋರ್ಚುಗೀಸ್ ಭಾಷೆಯಿಂದ ಕನ್ನಡಕ್ಕೆ ಬಂದ ಶಬ್ದ
a. ಮೇಜು 

10. ಸಾಬೂನು ಪದವು _________ ಭಾಷೆಯಿಂದ ಬಂದ ಶಬ್ದ ವಾಗಿದೆ – 
a. ಪೋರ್ಚುಗೀಸ್  

11. ನೇಸರ, ಹಾಲು, ತೆಂಕಣ, ಸ್ಟೇಷನ್ ಈ ಪದಗಳಲ್ಲಿ ಅನ್ಯದೇಶೀಯ ಪದ ಯಾವುದು –
a. ಸ್ಟೇಷನ್ 

12. ಟ್ರಾಫಿಕ್, ಶಾಲೆ, ವಾಹನ, ಯೋಧ ಇವುಗಳಲ್ಲಿ ಅನ್ಯದೇಶೀಯ ಪದ ಯಾವುದು – 
a. ಟ್ರಾಫಿಕ್  

13. ಮನೆ, ಶಿಕ್ಷಣ, ಲಸಿಕೆ, ಲಾಕಪ್ ಇವುಗಳಲ್ಲಿ ಅನ್ಯದೇಶೀಯ ಪದ ಯಾವುದು – 
a. ಲಾಕಪ್ 

14. ಕಾಗದ ಪದವು ಯಾವ ಭಾಷೆಯ ಪದವಾಗಿದೆ – 
a. ಹಿಂದೂಸ್ತಾನಿ 

15. ಅಲಮಾರು ಪದವು__________ ಭಾಷೆಯ ಪದ –
a. ಪೋರ್ಚುಗೀಸ್ 

16. ಕವಿ ಪದದ ಅನ್ಯಲಿಂಗ ರೂಪ – 
a. ಕವಿಯಿತ್ರಿ
 
17. ಗಂಗೆ, ನಾಯಿ, ರಾಮ, ಅಧ್ಯಾಪಕ ಇವುಗಳಲ್ಲಿ ನಪುಂಸಕಲಿಂಗಕ್ಕೆ ಉದಾಹರಣೆ – 
a. ನಾಯಿ 

18. ಮಗ ಪದದ ಬಹುವಚನ ರೂಪ – 
a. ಮಕ್ಕಳು 

19. ಅಣ್ಣ ಪದದ ಬಹುವಚನ ರೂಪ – 
a. ಅಣ್ಣಂದಿರು 

20. ಪ್ರಾಣಿ ಪದದ ಬಹುವಚನ ರೂಪ – 
a. ಪ್ರಾಣಿಗಳು 

21. ಕುಡಿಗಳೆಂದು ಪದವನ್ನು ಬಿಡಿಸಿದಾಗ ಆಗುವ ರೂಪ –
a. ಕುಡಿಗಳು+ಎಂದು 

22. ಸುರೇಂದ್ರ ಇದು ಈ ಸಂಧಿಗೆ ಉದಾಹರಣೆ – 
a. ಗುಣಸಂಧಿ 

23. ಅತ್ಯಂತ, ಮನೆಯನ್ನು, ಮನಶ್ಯಾಂತಿ, ಊರನ್ನು ಈ ಪದಗಳಲ್ಲಿ ಯಣ್ ಸಂಧಿಗೆ ಉದಾಹರಣೆ ಯಾವುದು – 
a. ಅತ್ಯಂತ 

24. ಪೂರ್ವೋತ್ತರ ________ ಸಂಧಿಗೆ ಉದಾಹರಣೆ –
a. ಗುಣಸಂಧಿ 

25. ರಕ್ತಗಾಲಿನ ___________ ಸಂಧಿಗೆ ಉದಾಹರಣೆ –
a. ಆದೇಶ ಸಂಧಿ

26. ಮನ್ವಂತರ, ಹಾಲನ್ನು, ಬೇಕಷ್ಟೇ, ಶಾಲೆಯಿಂದ ಈ ಪದಗಳಲ್ಲಿ ಲೋಪಸಂಧಿಗೆ ಉದಾಹರಣೆ
a. ಬೇಕಷ್ಟೇ 

27. ನವೋದಯ ಈ ಸಂಧಿಗೆ ಉದಾಹರಣೆ – 
a. ಗುಣಸಂಧಿ 

28. ಏಕೈಕ ಪದವು ಈ ಸಂಧಿಗೆ ಉದಾಹರಣೆ – 
a. ವೃದ್ಧಿಸಂಧಿ 

29. ಮನ್ವಂತರ ಪದವು ಈ ಸಂಧಿಗೆ ಉದಾಹರಣೆ – 
a. ಯಣ್ ಸಂಧಿ 

30. ಉತ್ತರಪದದ ಅರ್ಥವು ಪ್ರಧಾನವಾಗಿರುವ ಸಮಾಸ ಯಾವುದು –
a. ತತ್ಪುರುಷ  

31. ‘ಹಳಗನ್ನಡ’  ಪದವು ಈ ಸಮಾಸಕ್ಕೆ ಉದಾಹರಣೆ – 
a. ಕರ್ಮಧಾರಯ

32. ‘ಹೆಮ್ಮರ’ ಪದವು ಈ ಸಮಾಸಕ್ಕೆ ಉದಾಹರಣೆ 
a. ಕರ್ಮಧಾರಯ

33. ‘ಮುಮ್ಮಡಿ’ ಈ ಸಮಾಸಕ್ಕೆ ಉದಾಹರಣೆ – 
a. ದ್ವಿಗು 

34. ‘ಮೈದಡವಿ’ ಎಂಬುದು ಈ ಸಮಾಸಕ್ಕೆ ಉದಾಹರಣೆ - 
a. ಕ್ರಿಯಾ 

35. ‘ಹಿಂದೆಲೆ’ ಪದವು ಈ ಸಮಾಸಕ್ಕೆ ಉದಾಹರಣೆ – 
a. ಅಂಶಿ 

36. ‘ಈ ಹುಡುಗಿ’ ಪದವು ಈ ಸಮಾಸಕ್ಕೆ ಉದಾಹರಣೆ –
a. ಗಮಕ 

37. ರೂಢಿಯಿಂದ ಬಂದ ಸಾಮಾನ್ಯ ವಾಚಕಗಳು – 
a. ರೂಢನಾಮ 

38. ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳು – 
a. ಅನ್ವರ್ಥಕ ನಾಮ 

39. ‘ಗೌರಿ ಒಳ್ಳೆಯ ಹುಡುಗಿ’ ಇಲ್ಲಿರುವ ಗುಣವಾಚಕ ಪದ – 
a. ಒಳ್ಳೆಯ 

40. ಸಂಖ್ಯೆಯಿಂದ ಕೂಡಿದ ಶಬ್ದಗಳು – 
a. ಸಂಖ್ಯಾವಾಚಕಗಳು
 
41. ‘ವಿಜ್ಞಾನಿ’ ಇದು ಈ ನಾಮಪದಕ್ಕೆ ಉದಾಹರಣೆ – 
a. ಅನ್ವರ್ಥಕನಾಮ 

42. ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡ ಹೆಸರುಗಳು 
a. ಅಂಕಿತನಾಮ 

43. ‘ಗೌರಿಯು ಶಾಲೆಯಲ್ಲಿ ಪದ್ಯವನ್ನು ವಾಚನ ಮಾಡಿದಳು’ ಈ ವಾಕ್ಯದಲ್ಲಿ ದ್ವಿತೀಯ ವಿಭಕ್ತಿ ಪ್ರತ್ಯಯದಿಂದ ಕೂಡಿದ ಪದ – 
a. ಪದ್ಯವನ್ನು 

44. ‘ಆಗಸ’ ಪದವು ನಾಮಪದದ ಈ ಪ್ರಕಾರಕ್ಕೆ ಸೇರಿದೆ – 
a. ರೂಢನಾಮ 

45. ವಸ್ತುಗಳನ್ನು ಸೂಚಿಸುವ ಪದಗಳು – 
a. ವಸ್ತುವಾಚಕ 

46. ಸಾಮಾನ್ಯ ಅಳತೆ, ಪರಿಮಾಣ, ಗಾತ್ರ ಹೇಳುವ ಶಬ್ಧಗಳು – 
a. ಪರಿಮಾಣವಾಚಕ 

47. ನಾಮಪದದ ಮೂಲರೂಪ – 
a. ನಾಮಪ್ರಕೃತಿ 

48. ‘ಸಂಬಂಧದಲ್ಲಿ’ ಈ ಪದದಲ್ಲಿರುವ ವಿಭಕ್ತಿಪ್ರತ್ಯಯ -  
a. ಅಲ್ಲಿ 

49. ‘ವಿದ್ಯಾರ್ಥಿಗಳು ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಿದರು’ ಈ ವಾಕ್ಯದಲ್ಲಿ ದ್ವಿತೀಯ ವಿಭಕ್ತಿಯಿಂದ ಕೂಡಿದ ಪದ – 
a. ದಿನಾಚರಣೆಯನ್ನು 

50. ತೃತೀಯ ವಿಭಕ್ತಿ ಪ್ರತ್ಯಯ – 
a. ಇಂದ 

51. ಚತುರ್ಥಿ ವಿಭಕ್ತಿ ಪ್ರತ್ಯಯ –
a. ಗೆ/ಕೆ/ಇಗೆ/ಕ್ಕೆ 

52. ವಿಭಕ್ತಿಪ್ರತ್ಯಯಗಳು ಎಷ್ಟು?
a.

53. ಕ್ರಿಯಾಪದದ ಮೂಲರೂಪಕ್ಕ _________ ಎನ್ನುವರು –
a. ಧಾತು 

54. ‘ವಿದ್ಯಾರ್ಥಿಗಳು ಶಾಲೆಗೆ ಶಿಸ್ತಿನಿಂದ ಬರುತ್ತಿದ್ದಾರೆ’ ಎಂಬ ವಾಕ್ಯವು ಯಾವ ಕಾಲ ರೂಪದಲ್ಲಿದೆ –
a. ವರ್ತಮಾನಕಾಲ 

55. ಕರ್ತೃವಿನ ಕಾರ್ಯವನ್ನು ಹೇಳುವುದು ಈ ಪದ – 
a. ಕ್ರಿಯಾಪದ 

56. ‘ಕಮಲ ಊಟ ಮಾಡಿದಳು’ ಈ ವಾಕ್ಯದಲ್ಲಿರುವ ಕಾಲ – 
a. ಭೂತಕಾಲ 

57. ‘ಸಲೀಂ ಆಟ ಆಡುತ್ತಾನೆ’  ಗೆರೆ ಎಳೆದ ಪದದ ಭವಿಷ್ಯತ್ಕಾಲ ರೂಪ –
a. ಆಡುವನು 

58. ನಡೆದುಹೋದ ಕಾಲವನ್ನು ತಿಳಿಸುವ ಕ್ರಿಯಾಪದದ ರೂಪ – 
a. ಭೂತಕಾಲ 

59. ಭವಿಷ್ಯತ್ ಕಾಲ ಸೂಚಕ ಪ್ರತ್ಯಯ –
a. ವ (ಉದ)

60. ಮುಂದೆ ನಡೆಯುವ ಕ್ರಿಯೆಯ ಕಾಲಸೂಚಕ ಕ್ರಿಯಾರೂಪ –
a. ಭವಿಷ್ಯತ್ ಕಾಲ

No comments:

Post a Comment