ಸಾಮಾನ್ಯ ಜ್ಞಾನ - ಮಾದರಿ ಪ್ರಶ್ನೆಗಳು

 

1.       ಭಾರತ ಬಯೋಟೆಕ್ ಅಭಿವೃದ್ಧಿ ಪಡಿಸಿದ ಕೊರೋನ ಲಸಿಕೆಯ ಹೆಸರೇನು ?

ಕೋವಾಕ್ಸಿನ್

2.       ಪ್ರಮುಖ ಕೊವಿಡ್ ಲಸಿಕೆ ಉತ್ಪಾದಕ  ಸಂಸ್ಥೆ “ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ” ಎಲ್ಲಿದೆ?

ಪುಣೆ, ಮಹಾರಾಷ್ಟ್ರ

3.       ಇತ್ತೀಚಿಗೆ ಆಯ್ಕೆ ಆದ ಅಮೇರಿಕಾದ ಅಧ್ಯಕ್ಷರಾದ ಜೋ ಬಿಡೆನ್ ಯಾವ  ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದಾರೆ ?

ಡೆಮೋಕ್ರಾಟ್

4.       ಆಫ್ಘಾನಿಸ್ಥಾನದ ಅದ್ಯಕ್ಷರು ಯಾರು ?

ಅಶ್ರಫ್ ಘನಿ

5.       ಸಿಂಧೂ ಕಣಿವೆ ನಾಗರಿಕತೆಯ ಕಾಲ ಯಾವುದು?

ಕ್ರಿ ಪೂ 2500 ರಿಂದ ಕ್ರಿ ಪೂ 1750

6.       ಹರಪ್ಪ ನಾಗರಿಕತೆಯ ಜನರು ಯಾರ ಜೊತೆ ವ್ಯಾಪಾರ ಸಂಬಂಧ ಹೊಂದಿದ್ದರು ?

ಮೆಸಪಟೋಮಿಯ

7.       ಸಿಂಧೂ ಕಣಿವೆಯಲ್ಲಿ ಮಾನವ ನಿರ್ಮಿತ ಹಡಗು ಕಟ್ಟೆ ಎಲ್ಲಿ ಕಂಡು ಬಂದಿದೆ ?

ಲೋಥಾಲ್

8.       ಹೊಯ್ಸಳರ ರಾಜಧಾನಿಯಾಗಿದ್ದ ಹಳೆಬೀಡನ್ನು ಯಾವ ಹೆಸರಿನಿಂದ ಕರೆಯುತ್ತಿದ್ದರು ?

ದ್ವಾರಸಮುದ್ರ

9.       ವಿಶ್ವದ ಅತಿ ಉದ್ದದ ಮಹಾಕಾವ್ಯ ಯಾವುದು?

ಮಹಾಭಾರತ

10.   ಕಿರತಾರ್ಜುನಿಯವನ್ನು ರಚಿಸಿದವರು ಯಾರು?

ಭಾರವಿ

11.   “ಹರ್ಷ ಚರಿತ” ಯಾರ ಕೃತಿ ?

ಬಾಣಭಟ್ಟ

12.   “ಅಕ್ಬರ್ ನಾಮಾ” ರಚಿಸಿದವರು ಯಾರು ?

ಅಬು ಫಜಲ್

13.   ಗುಪ್ತರ  ರಾಜಧಾನಿ ಯಾವುದು?

ಪಾಟಲಿಪುತ್ರ

14.   ಬಂಗಾಳ ವಿಭಜನೆಯಾದ  ವರ್ಷ ಯಾವುದು ?

1905 ರಲ್ಲಿ

15.   ಯಾವ ವರ್ಷದಲ್ಲಿ ಮುಸ್ಲಿಂ ಲೀಗ್ ರಚನೆಯಾಯಿತು ?

1906 ರಲ್ಲಿ

16.   ಚೌರಿ ಚೌರ ಘಟನೆ ಯಾವಾಗ ನಡೆಯಿತು ?

5 ಫೆಬ್ರುವೆರಿ 1920 ರಂದು

17.   ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಯಾವಾಗ ನಡೆಯಿತು ?

13 ಏಪ್ರಿಲ್ 1919

18.   ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದವರು ಯಾರು ?

ರಾಮಾನುಜಾಚಾರ್ಯರು

19.   ಹುಮಾಯೂನನ ಗೋರಿ ಎಲ್ಲಿದೆ ?

ದೆಹಲಿ

20.   ಹವಾಮಹಲ್ ಎಲ್ಲಿದೆ ?

ಜೈಪುರ್, ರಾಜಸ್ಥಾನ್  

21.   ದರಿಯಾ ದೌಲತ್ ಬಾಗ್ ಎಲ್ಲಿದೆ ?

ಶ್ರೀರಂಗಪಟ್ಟಣ

22.   ದಕ್ಷಿಣ ಗೋಳಾರ್ಧದ ಸಣ್ಣದಾದ ದಿನ ಯಾವುದು ?

ಜೂನ್ 21

23.   ಉತ್ತರ ಗೋಳಾರ್ಧದ ಸಣ್ಣದಾದ ದಿನ ಯಾವುದು ?

ಡಿಸೆಂಬರ್ 21

24.   ಆರ್ಯ ಸಮಾಜದ ಸ್ಥಾಪಕರು ಯಾರು ?

ಸ್ವಾಮಿ ದಯಾನಂದ ಸರಸ್ವತಿ

25.   ಬ್ರಹ್ಮ ಸಮಾಜದ ಸ್ಥಾಪಕರು ಯಾರು ?

ರಾಜಾ ರಾಮ್ ಮೊಹನ ರಾಯ

26.   ಪ್ರಾರ್ಥನಾ ಸಮಾಜದ ಸಂಸ್ಥಾಪಕರು ಯಾರು ?

ಆತ್ಮರಾಮ್ ಪಾಂಡುರಂಗ

27.    ಸ್ವರಾಜ್ ಪಾರ್ಟಿಯನ್ನು ಯಾರು ಸ್ಥಾಪಿಸಿದರು?

ಮೋತಿಲಾಲ್ ನೆಹರು , ಸಿ ಆರ್ ದಾಸ್

28.   ಭಾರತದಲ್ಲಿ ಅತಿ ಹೆಚ್ಚು ಚಹಾ ಉತ್ಪಾದಿಸುವ ರಾಜ್ಯ ಯಾವುದು ?

ಅಸ್ಸಾಂ

29.   ಭಾರತದಲ್ಲಿ ಅತಿ ಹೆಚ್ಚು ಕಬ್ಬು  ಬೆಳೆಯುವ  ರಾಜ್ಯ ಯಾವುದು ?

ಉತ್ತರ ಪ್ರದೇಶ

30.   ಭಾರತದ ರಾಷ್ಟ್ರಧ್ವಜವನ್ನು ಯಾವಾಗ ಅಂಗಿಕರಿಸಲಾಯಿತು ?

22 ಜುಲೈ 1947 ರಂದು

31.   ರಾಷ್ಟ್ರೀಯ ಲಾಂಛನವನ್ನು ಯಾವಾಗ ಅಂಗಿಕರಿಸಲಾಯಿತು ?

26, ಜನೇವರಿ  1950 ರಂದು

32.   ಹೇಮಾವತಿ ನದಿ ಯಾವ ನದಿಯ ಉಪನದಿ ?

ಕಾವೇರಿ

33.   ಅಲಮಟ್ಟಿ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ ?

ಕೃಷ್ಣಾ ನದಿ 

34.   ಅತಿ ಹೆಚ್ಚು ವರ್ಷ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು ಯಾರು ?

 ದೇವರಾಜ್ ಅರಸ್

35.   ಶ್ರೀ ರಾಮಾಯಣ ದರ್ಶನಂ ಕೃತಿಗೆ, ಕುವೆಂಪು ಅವರಿಗೆ ಯಾವ ವರ್ಷದಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿತು ?

1967 ರಲ್ಲಿ

36.   ಕಡಲ ತೀರ ಭಾರ್ಗವ ಯಾರು ?

ಕೆ. ಶಿವರಾಂ ಕಾರಂತ್

37.   ಕೆ. ಶಿವರಾಂ ಕಾರಂತ್ ಅವರಿಗೆ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದಿತು ?

ಮೂಕಜ್ಜಿಯ ಕನಸುಗಳು

38.   ಬಂಡಿಪುರ ರಾಷ್ಟ್ರೀಯ ಉದ್ಯಾನವನ್ನು ಸ್ಥಾಪಿಸಿದ್ದು ಯಾವ ವರ್ಷದಲ್ಲಿ ?

1974 ರಲ್ಲಿ

39.   ಭದ್ರಾ ವನ್ಯಜೀವಿ ಅಭಯಾರಣ್ಯ ಯಾವ ಜಿಲ್ಲೆಯಲ್ಲಿ ಇದೆ ?

ಚಿಕ್ಕಮಗಳೂರು

40.   ಕೊನೆಯ ಆಂಗ್ಲೋ  ಮೈಸೂರು ಯುದ್ಧ ನಡೆದ ವರ್ಷ ಯಾವುದು ?

1798 ರಲ್ಲಿ

41.   ಭಾರತರತ್ನ ಪಡೆದ ಮೊದಲ ಕನ್ನಡಿಗ ಯಾರು ?

ಸರ್ ಎಂ ವಿಶ್ವೇಶ್ವರಯ್ಯ

42.   ಕರ್ನಾಟಕ ಸಂಗಿತದ ಪಿತಾಮಹ ಯಾರು? 

ಪುರಂದರದಾಸರು

43.   ಮಾನವ ದೇಹದ ಅತಿದೊಡ್ಡ ಮೂಳೆ ಯಾವುದು?

ತೊಡೆ ಮೂಳೆ (ಫೀಮರ್)

44.   ಮಾನವ ದೇಹದ ಅತಿಚಿಕ್ಕ  ಮೂಳೆ ಯಾವುದು?

ಸ್ಟೆಪಿಸ್ (ಮದ್ಯಕಿವಿಯ ಮೂಳೆ )

45.   ಖೈಬರ್ ಕಣಿವೆ  ಎಲ್ಲಿದೆ?

ಪಾಕಿಸ್ತಾನ್

46.   ಯಮುನಾ ಎಕ್ಸ್ಪ್ರೆಸ್ ವೆ ಯಾವ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ ?

ನೊಯಿಡಾ ಮತ್ತು ಆಗ್ರಾ

47.   ನಾಗಾಲ್ಯಾಂಡಿನ ಅಧಿಕೃತ ಭಾಷೆ ಯಾವುದು ?

ಇಂಗ್ಲಿಷ್

48.    “ಫ್ರೀಡಂ ಅಟ್ ಮಿಡ್ ನೈಟ್” ಪುಸ್ತಕದ ಲೇಖಕರು ಯಾರು ?

ಡೊಮಿನಿಕ್ ಲ್ಯಾಪಿಯರ್ ಮತ್ತು ಲ್ಯಾರಿ ಕೊಲಿನ್ಸ್

49.   “ಮೈ ಡೇಸ್” ಯಾರ ಕೃತಿ ?

ಆರ್ ಕೆ ನಾರಾಯಣ್

50.   “ಗರಿ: , ಸಖಿಗೀತ ಯಾರ ಕವನ ಸಂಕಲನಗಳು ?

ದ ರಾ ಬೇಂದ್ರೆ

ಸಾಮಾನ್ಯ ಜ್ಞಾನ - ಕರ್ನಾಟಕ

 

1.       ಗಂಗ ಸಾಮ್ರಾಜ್ಯದ  ಸ್ಥಾಪಕ ಯಾರು ?

        ಕೊಂಗುಣೀವರ್ಮ

2.       ಅಮೋಘವರ್ಷ ಯಾವ ರಾಜವಂಶಕ್ಕೆ ಸೇರಿದವನು ?

    ರಾಷ್ಟ್ರಕೂಟರು

3.       ಚಾಲುಕ್ಯರ  ರಾಜಧಾನಿಯಾಗಿದ್ದ  ಬಾದಾಮಿಯ ಮೊದಲ ಹೆಸರು ಏನು ?

        ವಾತಾಪಿ

4.       ಬನವಾಸಿಯ ಕದಂಬ ವಂಶದ ಸ್ಥಾಪಕ ಯಾರು ?

        ಮಯೂರ ವರ್ಮ ‘

5.       ಶ್ರೀರಂಗ ಯಾರ ಕಾವ್ಯ ನಾಮ ?

        ಆದ್ಯ ರಂಗಾಚಾರ್

6.       ಶರಪಂಜರದಂತಹ ಪ್ರಸಿದ್ದ ಕಾದಂಬರಿಗಳನ್ನು ರಚಿಸಿದ ತ್ರಿವೇಣಿಯವರ ನಿಜ ನಾಮಧೇಯ ಏನು ?

        ಅನಸೂಯಾ ಶಂಕರ್

7.       ಜಿ ಬಿ ಜೋಷಿಯವರ ಕಾವ್ಯನಾಮ ಏನು ?

        ಜಡಭರತ

8.       ಕನ್ನಡದ ಮೊದಲ ಉಪಲಬ್ಧ ಗದ್ಯಕೃತಿ ಯಾವುದು?

        ವಡ್ಡರಾದನೆ.

9.       ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟು ರಚಿಸಿದವರು ಯಾರು?

        ಆರ್.ಎಫ್.ಕಿಟೆಲ್

10.   ದ ರಾ ಬೇಂದ್ರೆಯವರ “ನಾಲ್ಕು ತಂತಿ “ ಗೆ ಯಾವ ವರ್ಷದಲ್ಲಿ ಜ್ಞಾನ ಪೀಠ ಪ್ರಶಸ್ತಿ ದೊರೆಯಿತು ?

1973 ರಲ್ಲಿ

11.   ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?

ಲಿಂಗನಮಕ್ಕಿ ಅಣೆಕಟ್ಟು.

12.   ಕನ್ನಡದ ಮೊದಲ ವ್ಯಾಕರಣ ಗ್ರಂಥ ಶಬ್ದ ಮಣಿ ದರ್ಪಣ ಯಾರ ಕೃತಿ ?

ಕೇಶಿರಾಜ

13.   ಭರಚುಕ್ಕಿ,ಗಗನಚುಕ್ಕಿ ಜಲಪಾತ ಯಾವ ನದಿಯ ಜಲಪಾತಗಳು ?

ಕಾವೇರಿ

14.   ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ಆಗುಂಬೆ ಯಾವ ಜಿಲ್ಲೆಯಲ್ಲಿದೆ ?

ಶಿವಮೊಗ್ಗ

15.   ಇತ್ತೀಚಿಗೆ ರಚನೆಯಾದ “ವಿಜಯನಗರ” ಜಿಲ್ಲೆಯ ಕೇಂದ್ರ ಯಾವುದು ?

ಹೊಸಪೇಟೆ

16.   “ಭಾರತದ ಸ್ಕಾಟ್ಲೆಂಡ್” ಎಂದು ಯಾವ ಸ್ಥಳ ಪ್ರಸಿದ್ಧವಾಗಿದೆ ?

ಕೊಡಗು

17.   ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?

ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.

18.    ಯಾವ ವರ್ಷದಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು ?

1973 ರಲ್ಲಿ

19.   ಭೀಮ ನದಿ ಯಾವ ನದಿಯ ಉಪನದಿ ?

ಕೃಷ್ಣ ನದಿ

20.   ಬಂಡಿಪುರ ರಾಷ್ಟ್ರೀಯ ಉದ್ಯಾನ ಯಾವ ಜಿಲ್ಲೆಯಲ್ಲಿದೆ ?

ಚಾಮರಾಜನಗರ


ಸಾಮಾನ್ಯ ಜ್ಞಾನ - ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

 

1.       ರಾಜತರಂಗಿಣಿಯನ್ನು ಬರೆದವರು ಯಾರು ?

ಕಲ್ಹಣ

2.       ಎಲ್ಲೋರದ ಜಗತ್ಪ್ರಸಿದ್ದ ಕೈಲಾಸ ದೇವಾಲಯವನ್ನು ಕಟ್ಟಿಸಿದವರು ಯಾರು ?

ಒಂದನೇ ಕೃಷ್ಣ (ರಾಷ್ಟ್ರಕೂಟ)

3.       ಹೃದಯದಿಂದ ದೇಹದ ಇತರ ಭಾಗಗಳಿಗೆ ರಕ್ತವನ್ನು ಸಾಗಿಸುವ ದೊಡ್ಡ ರಕ್ತನಾಳಗಳು ಯಾವವು ?

ಅಪಧಮನಿಗಳು  

4.      ಶೀಲಿಂದ್ರಗಳಲ್ಲಿ  ಯಾವ ಅಂಶದ ಕೊರತೆ ಇರುತ್ತದೆ ?

ಪತ್ರ ಹರಿತ್ತು

5.       ಯಾವ ರಕ್ತನಾಳಗಳು ಚಿಕ್ಕ ಸುತ್ತಳತೆಯನ್ನು  ಹೊಂದಿವೆ?

ಲೋಮನಾಳಗಳು

6.       ದೇಹದ ಯಾವ ಅಂಗವು ಪಿತ್ತರಸ ಎಂದು ಕರೆಯಲ್ಪಡುವ ದ್ರವವನ್ನು ಉತ್ಪಾದಿಸುತ್ತದೆ?

ಯಕೃತ್ತು

7.       ಯಾವ ಹಾರ್ಮೋನುಗಳು ಸ್ಟೀರಾಯ್ಡ್ ಆಗಿದೆ?

ಈಸ್ಟ್ರೊಜೆನ್

8.       ಸೂರ್ಯನಿಂದ ಭೂಮಿಯ ಮೇಲ್ಮೈಯನ್ನು ತಲುಪಲು ಬೆಳಕು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

8 ನಿಮಿಷಗಳು

9.       ನಕ್ಷತ್ರಗಳು  ಪೂರ್ವದಿಂದ ಪಶ್ಚಿಮಕ್ಕೆ ಏಕೆ ಚಲಿಸುತ್ತದೆ ಎಂದು ತೋರುತ್ತವೆ ?

ಏಕೆಂದರೆ ಭೂಮಿಯು ಪಶ್ಚಿಮದಿಂದ ಪೂರ್ವಕ್ಕೆ ತಿರುಗುತ್ತದೆ

10.   LPGಯ ಮುಖ್ಯ ಘಟಕಗಳು ಯಾವುವು?

ಮೀಥೇನ್, ಬ್ಯುಟೇನ್, ಪ್ರೋಪೇನ್

11.   ಅಡುಗೆ ಸೋಡಾದ ರಾಸಾಯನಿಕ ಹೆಸರು ಏನು ?

ಸೋಡಿಯಂ ಬೈ ಕ್ರಾರ್ಬೋನೆಟ್

12.   ವಿದ್ಯುತ್ಕಾಂತವನ್ನು ತಯಾರಿಸಲು ಯಾವ ಲೋಹವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ?

ಕಬ್ಬಿಣ

13.   ಕಲ್ಲಿದ್ದಲು ಅನಿಲದ ಮುಖ್ಯ ಘಟಕ ಯಾವುದು?

ಮೀಥೇನ್

14.   ಭಾರತದ ಪೂರ್ವದ ಕೊನೆಯ  ರೇಖಾಂಶ ಯಾವುದು?

68° 7' E

15.   ಯಾವ ದೇಶವು ಭಾರತೀಯ ರಾಜ್ಯವಾದ ಉತ್ತರಾಖಂಡ್, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನೊಂದಿಗೆ ಸಾಮಾನ್ಯ ಗಡಿಯನ್ನು ಹೊಂದಿದೆ?

ನೇಪಾಳ

16.   ನೀವು ಕವರತ್ತಿ  ಭೇಟಿ ನೀಡಲು ಬಯಸಿದರೆ  ಯಾವ ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನಿಡುತ್ತಿರಿ?

ಲಕ್ಷದ್ವೀಪ

17.   ಸಹ್ಯಾದ್ರಿ ಪರ್ವತಗಳ  ಇನ್ನೊಂದು ಹೆಸರು ಏನು?

ಪಶ್ಚಿಮ ಘಟ್ಟಗಳು

18.   ಪಾಕ್ ಜಲಸಂಧಿ ಎಲ್ಲಿದೆ?

ಭಾರತ ಮತ್ತು ಶ್ರೀಲಂಕಾದ ನಡುವೆ

19.   ಭಾರತದ ಅತ್ಯಂತ ಹಳೆಯ ಪರ್ವತ ಶ್ರೇಣಿ ಯಾವುದು?

ಅರಾವಳಿ ಪರ್ವತ ಶ್ರೇಣಿ

20.   ವಿಶ್ವದ ಅತಿದೊಡ್ಡ ಪರ್ಯಾಯ ದ್ವೀಪ ಯಾವುದು?

ಅರೇಬಿಯಾ

ಸಾಮಾನ್ಯ ಜ್ಞಾನ - ಭಾರತದ ಇತಿಹಾಸ

1.       ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ ಯಾವುದು ?

ಕ್ರಿ ಶ 1600

2.       ಫ್ಲಾಸಿ ಕದನವು ನಡೆದ ವರ್ಷ ಯಾವುದು ?

ಕ್ರಿ ಶ 1757

3.       ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವರು ಯಾರು ?

 ಲಾರ್ಡ್ ವೆಲ್ಲೆಸ್ಲಿ

4.       ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದವರು ಯಾರು ?

ಲಾರ್ಡ್ ಡೌಲ್ ಹೌಸಿ

5.       ಮೊಘಲ್ ಸಾಮ್ರಾಜ್ಯದ ಜಹಂಗಿರನ ಆಸ್ಥಾನಕ್ಕೆ ಭೇಟಿ ನೀಡಿದ ಆಂಗ್ಲ ಅಧಿಕಾರಿ ಯಾರು ?

ಸರ್ ಥಾಮಸ್ ರೋ

6.       ರೈತವಾರಿ ಪದ್ದತಿಯನ್ನು ಜಾರಿಗೆ ತಂದವರು ಯಾರು ?

ಸರ್ ಥಾಮಸ್ ಮನ್ರೋ

7.       1857 ದಂಗೆಯ ಸಂದರ್ಭದಲ್ಲಿ ಗವರ್ನರ್ ಜನರಲ್ ಯಾರಾಗಿದ್ದರು?

ಲಾರ್ಡ್ ಕ್ಯಾನಿಂಗ್

8.        1857 ರ ದಂಗೆಯ ಸಮಯದಲ್ಲಿ ಲಕ್ನೋದಲ್ಲಿ ಪ್ರಮುಖ ನಾಯಕ ಯಾರಾಗಿದ್ದರು?

ಬೇಗಂ ಹಜ್ರತ್ ಮಹಲ್

9.       ಯಾವ ಬ್ರಿಟಿಷ್ ಅಧಿಕಾರಿ ಯಾರು ಜಾನ್ಸಿ ದಂಗೆಯನ್ನು ನಿಗ್ರಹಿಸಿದರು?

ಹೆನ್ರಿ ಲಾರೆನ್ಸ್

10.   1857 ರ ಬಂಡಾಯದ ಸಮಯದಲ್ಲಿ ಭಾರತದ ಚಕ್ರವರ್ತಿಯಾಗಿ ಯಾರು ಘೋಷಿಸಲ್ಪಟ್ಟರು?

ಬಹಾದ್ದೂರ್ ಷಹ II

 

  

ಸಾಮಾನ್ಯ ಜ್ಞಾನ - ಸೌರಮಂಡಲ

 


ಆಕಾಶವು ಒಂದು ವಿಸ್ಮಯಕಾರಿ ವಿದ್ಯಮಾನಗಳ ಗೂಡು. ಅಸಂಖ್ಯ ನಕ್ಷತ್ರಗಳು, ಸೌರವ್ಯೂಹದ ಗ್ರಹಗಳು ಕ್ಷುದ್ರಗ್ರಹಗಳು ಹೀಗೆ ಇನ್ನೂ ಎಷ್ಟೋ ಆಕಾಶಕಾಯಗಳು ಈ ಆಗಸವೆಂಬ ಪರದೆಯ ಮೇಲೆ ಹರಡಿಕೊಂಡಿವೆ. ಚಿಕ್ಕ ಮಕ್ಕಳಿಂದ ಹಿಡಿದು ಖಗೋಳ ವಿಜ್ಞಾನಿಗಳವರೆಗೂ ಎಲ್ಲರನ್ನೂ ಈ ವಿಸ್ಮಯ ಆಕರ್ಷಿಸುತ್ತದೆ. ಬೆಳಕಿನ ಮಾಲಿನ್ಯ ಹಾಗೂ ವಾಯುಮಾಲಿನ್ಯಗಳ ಪರಿಣಾಮವಾಗಿ ಈ ಅದ್ಭುತ ನಮ್ಮ ದೃಷ್ಟಿಯಿಂದ ಮಸುಕಾಗುತ್ತಿದೆ.


 ನಮ್ಮ ಸೌರವ್ಯೂಹವು, ಸೂರ್ಯ ಆತನನ್ನು ಸುತ್ತುವ ಗ್ರಹಗಳು, ಅವುಗಳ ಉಪಗ್ರಹಗಳು, ಕುಬ್ಜ ಗ್ರಹಗಳು, ಧೂಮಕೇತುಗಳು ಅಲ್ಲದೆ ಅನೇಕ ನಿಗೂಢ ಕಾಯಗಳನ್ನೊಳಗೊಂಡ ಪರಿವಾರವಾಗಿದೆ. ಬನ್ನಿ ನಮ್ಮ ಸೌರಮಂಡಲದ ಬಗ್ಗೆ ಕೆಲವು ಸೋಜಿಗದ ವಿಷಯಗಳನ್ನು ತಿಳಿದುಕೊಳ್ಳೋಣ.

1. ಇಷ್ಟು ದೊಡ್ಡ ಸೌರಮಂಡಲದ ಶೇ 99.8 ರಷ್ಟು ದ್ರವ್ಯರಾಶಿ ನಮ್ಮ ನಕ್ಷತ್ರವಾದ ಸೂರ್ಯನೊಬ್ಬನಲ್ಲಿಯೇ ಇದೆ. ಅಂದರೆ ಉಳಿದ ಕಾಯಗಳು ಸೂರ್ಯನ ಲೆಕ್ಕಕ್ಕೆ ನಗಣ್ಯ.

2. ಗುರುಗ್ರಹದ ದ್ರವ್ಯರಾಶಿಯು ಉಳಿದ ಎಲ್ಲ ಗ್ರಹಗಳ ಒಟ್ಟು ದ್ರವ್ಯರಾಶಿಯ ಎರಡು ಪಟ್ಟು ಇದೆ.

3. ಗುರುಗ್ರಹದಲ್ಲಿ 1,300 ಕ್ಕೂ ಹೆಚ್ಚು ಭೂಮಿಗಳನ್ನು ಸೇರಿಸಬಹುದು ಅಷ್ಟು ಬೃಹದಾಕಾರ ವಾಗಿದೆ ಈ ಗ್ರಹ.

4. ಬುಧ ಸೂರ್ಯನಿಗೆ ಅತಿ ಸಮೀಪದ ಗ್ರಹವಾದರೂ, ಶುಕ್ರವು ಅತ್ಯಂತ ಹೆಚ್ಚು ತಾಪಮಾನವುಳ್ಳ ಗ್ರಹವಾಗಿದೆ. ಗ್ರಹದ ಸುತ್ತ ಇರುವ ದಟ್ಟ ವಾಯುಮಂಡಲ ಹಾಗೂ ಮೋಡಗಳ ದಪ್ಪ ಪದರವು ಉಷ್ಣವನ್ನು ಅಂತರಿಕ್ಷಕ್ಕೆ ಬಿಡದೇ ಹಸಿರುಮನೆ ಪರಿಣಾಮವನ್ನು ಉಂಟು ಮಾಡುತ್ತವೆ, ಆದ್ದರಿಂದ ಇದರ ವಾತಾವರಣದ ಉಷ್ಣತೆಯು ಸುಮಾರು 465 ಡಿಗ್ರಿ ಸೆ. ಇರುತ್ತದೆ.

5. ಶುಕ್ರವು ತನ್ನ ಅಕ್ಷದ ಸುತ್ತ 243 ಭೂ ದಿನಗಳಿಗೊಮ್ಮೆ ಸುತ್ತುತ್ತದೆ. ಹಾಗೂ ಸೂರ್ಯನ ಸುತ್ತಲು ತೆಗೆದುಕೊಳ್ಳುವ ಕಾಲ 224.7 ಭೂ ದಿನಗಳುು, ಅಂದರೆ ಶುಕ್ರನ ಒಂದು ವರ್ಷವು ಒಂದು ದಿನಕ್ಕಿಂತ ಚಿಕ್ಕದಾಗಿರುತ್ತದೆ.

6. ಶುಕ್ರವು ಸೂರ್ಯನನ್ನು ಪ್ರದಕ್ಷಿಣಾಕಾರವಾಗಿ ಸುತ್ತುವುದರಿಂದ, ಇಲ್ಲಿ ಸೂರ್ಯ ಪಶ್ಚಿಮದಲ್ಲಿ ಹುಟ್ಟಿ ಪೂರ್ವದಲ್ಲಿ ಮುಳುಗುವಂತೆ ಕಾಣುತ್ತದೆ. 

7. ನಮ್ಮ ಭೂಮಿಗೆ ಚಂದ್ರನಿರುವಂತೆ, ಬುಧ ಗ್ರಹ ಮತ್ತು ಶುಕ್ರ ಗ್ರಹಗಳನ್ನು ಹೊರತುಪಡಿಸ  ಉಳಿದ ಎಲ್ಲ ಗ್ರಹಗಳಿಗೂ ನೈಸರ್ಗಿಕ ಉಪಗ್ರಹಗಳಿವೆ. ಸೌರಮಂಡಲದಲ್ಲಿ ಇವುಗಳ ಒಟ್ಟು ಸಂಖ್ಯೆ 200 ಕ್ಕೂ ಹೆಚ್ಚು.

8. ಶನಿ ತನ್ನ ಅಕ್ಷದ ಮೇಲೆ ಬಹಳ ವೇಗವಾಗಿ ತಿರುಗುತ್ತದೆ. ಶನಿಯ ಒಂದು ದಿನ 10 ಗಂಟೆ 14 ನಿಮಿಷಗಳು. ಇದು ಸೂರ್ಯನ ಸುತ್ತಲು ತುಂಬಾ ನಿಧಾನವಾಗಿ ಸುತ್ತುತ್ತದೆ ಶನಿಯ ಮೇಲೆ ಒಂದು ವರ್ಷವು 29 ಭೂ ವರ್ಷಗಳಿಗಿಂತ ಹೆಚ್ಚು.

9. ಯುರೇನಸ್ ತನ್ನ ಅಕ್ಷದ ಮೇಲೆ ವಿಶಿಷ್ಟವಾಗಿ ಓರೆಯಾಗಿದ್ದು, ಇದು ಸೂರ್ಯನ ಸುತ್ತಲೂ ಚೆಂಡಿನಂತೆ ಉರುಳುವಂತೆ ಭಾಸವಾಗುತ್ತದೆ ಆದ್ದರಿಂದ ಇದನ್ನು "ಉರುಳುವ ಗ್ರಹ" ಎನ್ನಲಾಗುತ್ತದೆ. 

10. ಟೆಲಿಸ್ಕೋಪ್ ಸಹಾಯದಿಂದ ಕಂಡುಹಿಡಿಯಲಾದ ಮೊದಲನೇ ಗ್ರಹ ಯುರೇನಸ್ ಆಗಿದೆ (1781 ರಲ್ಲಿ). 

11. 1930ರಲ್ಲಿ ಪ್ಲುಟೊವನ್ನು ಪತ್ತೆಮಾಡಿ, ಸೌರವ್ಯೂಹದ ಒಂಬತ್ತನೇ ಗ್ರಹ ಎಂದು ಪರಿಗಣಿಸಲಾಯಿತು.

12. ನಂತರ ಪ್ಲುಟೊವನ್ನು ಗ್ರಹ ಎಂದು ಒಪ್ಪುವಲ್ಲಿ ಒಮ್ಮತವಿರಲಿಲ್ಲ ಆದ್ದರಿಂದ 2006ರಲ್ಲಿ ಇದನ್ನು ಕುಬ್ಜ ಗ್ರಹ ಮರುವಿಂಗಡಿಸಲಾಯಿತು. 

ನುಡಿಗಟ್ಟುಗಳ ಸಂಗ್ರಹ

 ನಮ್ಮ ಹಿಂದಿನ ಪೋಸ್ಟಿನಲ್ಲಿ ದ್ವಿರುಕ್ತಿ, ನುಡಿಗಟ್ಟು ಮುಂತಾದ ಶಬ್ದ ಪ್ರಕಾರಗಳನ್ನು ತಿಳಿದುಕೊಂಡೆವು, ಈ ಸಾರಿ ನುಡಿಗಟ್ಟುಗಳ ಇನ್ನಷ್ಟು ಉದಾಹರಣೆಗಳನ್ನು ನೋಡೋಣ.

ನಿಮಗೆ ಗೊತ್ತಿರುವ ನುಡಿಗಟ್ಟುಗಳನ್ನು ಕಾಮೆಂಟಿನಲ್ಲಿ ಎಲ್ಲರೊಂದಿಗೆ ಹಂಚಿಕೊಳ್ಳಬಹುದು.

  1. ಮೂಗು ತೂರಿಸು - ಬೇರೆಯವರ ವಿಷಯದಲ್ಲಿ ಮಧ್ಯಪ್ರವೇಶಿಸು
  2. ಆಷಾಢಭೂತಿ - ಕಪಟಿ, ನಯವಂಚಕ
  3. ಗಾಳಿ ಬಂದಾಗ ತೂರು - ಅವಕಾಶ ಉಪಯೋಗಿಸಿಕೊಳ್ಳುವುದು   
  4. ದಾರಿ ನೋಡು -  ಕಾಯುವಿಕೆ  
  5. ಬಂಗಾರದ ಪಂಜರ - ಸ್ವಾತಂತ್ರ್ಯ ಇಲ್ಲದಿರುವಿಕೆ  
  6. ಗಾಳಿಗೋಪುರ - ಸುಳ್ಳು ಭರವಸೆ  
  7. ಕಣ್ಣೀರಿನಲ್ಲಿ ಕೈತೊಳೆ - ಕಷ್ಟ ಅನುಭವಿಸು  
  8. ಮಂತ್ರಮುಗ್ಧ - ಆಶ್ಚರ್ಯ ಚಕಿತ  
  9. ಹೊಟ್ಟೆಉರಿ - ಅಸೂಯೆಪಡು  
  10. ಹೊಟ್ಟೆಗೆ ತಣ್ಣೀರು ಬಟ್ಟೆ - ಹಸಿವಿನಿಂದ ಉಪವಾಸವಿರುವುದು  
  11. ಹೊಟ್ಟೆಯ ಮೇಲೆ ಹೊಡೆ - ಪರರ ಕೆಲಸ ಕಿತ್ತುಕೊಳ್ಳುವುದು  
  12. ಮೊಸಳೆ ಕಣ್ಣೀರು - ತೋರಿಕೆಯ ಕಣ್ಣೀರು  
  13. ಗಾಯದ ಮೇಲೆ ಬರೆ - ನೋವಿನ ಜೊತೆ ಮತ್ತೊಂದು ನೋವು  
  14. ಗಾಯದ ಮೇಲೆ ಉಪ್ಪು ಸವರು - ನೋವಿನಲ್ಲಿರುವವರಿಗೆ ಮತ್ತೆ ನೋವು ಕೊಡುವುದು  
  15. ಹಿತ್ತಾಳೆ ಕಿವಿ - ಚಾಡಿಮಾತು ನಂಬುವುದು
  16. ಕೆಸರೆರಚು - ಅಪವಾದ ಮಾಡು  
  17. ಕಿವಿಮಾತು - ಬುದ್ಧಿವಾದ ಹೇಳು
  18. ಮನಸಲ್ಲೇ ಮಂಡಿಗೆ ಸವಿ -ಕಲ್ಪನೆಯಲ್ಲೇ ಸಂತೋಷ ಪಡು  
  19. ಕಾಲುಕೀಳು - ಪಲಾಯನ ಮಾಡು  
  20. ಕನ್ನಡಿಯೊಳಗಿನ ಗಂಟು -ಕೈಯಲ್ಲಿ ಇರದ ಅಥವಾ ಸದ್ಯಕ್ಕೆ ಇಲ್ಲದ ಅವಕಾಶ 
  21. ಕೈಕೊಡು - ಮೋಸ ಮಾಡು  
  22. ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ - ವ್ಯರ್ಥ ಕಾರ್ಯ 
  23. ನೀರಿನಲ್ಲಿ ಹೋಮ ಮಾಡಿದಂತೆ - ವ್ಯರ್ಥ ಕಾರ್ಯ 
  24. ಕೋಣನ ಮುಂದೆ ಕಿನ್ನರಿ ನುಡಿಸಿದಂತೆ - ಪ್ರಯೋಜನವಿಲ್ಲದ ಕೆಲಸ
  25. ದಾರಿದೀಪ - ಮಾರ್ಗದರ್ಶನ ಮಾಡು
  26. ತಲೆಕಾಯು - ರಕ್ಷಿಸು
  27. ಗಾಳಿಗೆ ತೂರು - ನಿರ್ಲಕ್ಷ್ಯಿಸು
  28. ಆನೆಬಲ - ಒತ್ತಾಸೆಯಾಗಿ ನಿಲ್ಲು
  29. ಕೈ ಒಡ್ಡು - ಬೇಡುವುದು
  30. ಕಣ್ಣು ಕೆಂಪಗಾಗು - ಸಿಟ್ಟಾಗು
  31. ಕಾಲಿಗೆ ಬುದ್ಧಿ ಹೇಳು - ಓಡಿ ಹೋಗು
  32. ಮುಖವಾಡ -ನಿಜವಾದ ಅಸ್ತಿತ್ವ ಮುಚ್ಚಿಡು
  33. ಬೆನ್ನುತಟ್ಟು - ಪ್ರೋತ್ಸಾಹಿಸು
  34. ತಲೆದೂಗು - ಮೆಚ್ಚಿಕೊಳ್ಳುವುದು
  35. ಆಕಾಶಕ್ಕೆ ಏಣಿ ಹಾಕು - ಸಿಗದುದಕ್ಕೆ ಆಸೆ ಪಡು
  36. ತಾಳಕ್ಕೆ ತಕ್ಕಂತೆ ಕುಣಿ - ಹೇಳಿದಂತೆ ಕೇಳು
  37. ನೀರ ಮೇಲಿನ ಗುಳ್ಳೆ - ಕ್ಷಣಿಕ
  38. ಕಣ್ ತೆರೆ - ಸತ್ಯ ತಿಳಿ
  39. ಕಡ್ಡಿಯನ್ನು ಗುಡ್ಡ ಮಾಡು - ಸಣ್ಣ ವಿಷಯವನ್ನು ದೊಡ್ಡದು ಮಾಡು 
  40. ವಿಷಕಾರು - ದ್ವೇಷಿಸು
  41. ಮುಖ ನೋಡಿ ಮಣೆ ಹಾಕು - ತಾರತಮ್ಯ ಮಾಡು
  42. ಕೈ ಮೇಲಾಗು - ವಿಜಯ ಸಾಧಿಸು
  43. ತಲೆ ಕೆಳಗಾಗು - ಯೋಜನೆ ಫಲಿಸದಿರುವುದು
  44. ಕಾಮಾಲೆ ಕಣ್ಣು - ಸಂಶಯ ಪಡು
  45. ಹೊಟ್ಟೆಗೆ ಹಾಕಿಕೋ - ಕ್ಷಮಿಸು
  46. ಹುಳಿ ಹಿಂಡು - ವಿಷಯ ಕೆಡಿಸು
  47. ಉರಿಯುವ ಬೆಂಕಿಗೆ ತುಪ್ಪ ಸುರಿ - ಪರಿಸ್ಥಿತಿ ಮತ್ತಷ್ಟು ವಿಷಮಗೊಳಿಸು
  48. ಗಾಯಕ್ಕೆ ಉಪ್ಪು ಸವರು - ನೋವಿನಲ್ಲಿರುವವರಿಗೆ ಮತ್ತಷ್ಟು ನೋವು ಕೊಡು
  49. ಹೊಟ್ಟೆ ತಣ್ಣಗಿರಲಿ - ಸುಖವಾಗಿರು
  50. ಎದೆ ಒಡಿ - ಆಘಾತಗೊಳ್ಳು
  51. ಎದೆಗುಂದು - ಧೈರ್ಯಗೆಡು
  52. ತಲೆ ತಗ್ಗಿಸು - ಅವಮಾನಗೊಳ್ಳು
  53. ಬಣ್ಣಗೆಡು - ಸತ್ಯಅನಾವರಣಗೊಳ್ಳು
  54. ಕಣ್ಣು ತೆರೆಸು - ಬುದ್ಧಿ ಕಲಿ
  55. ಕಾಲು ಕೆರಿದು ಜಗಳ ಮಾಡು - ವಿನಾ ಕಾರಣ ಜಗಳ ಮಾಡು
  56. ಗೋರಿ ಕಟ್ಟು - ವಿಷಯವನ್ನು ಮುಚ್ಚಿಹಾಕು
  57. ಕೈ ಹಾಕು - ಮಧ್ಯಸ್ಥಿಕೆ ವಹಿಸು
  58. ಕುತ್ತಿಗೆ ಕೊಯ್ಯಿ - ನಂಬಿಕೆದ್ರೋಹ
  59. ಬೆನ್ನಿಗೆ ಚೂರಿ ಹಾಕು - ನಂಬಿಕೆ ದ್ರೋಹ
  60. ಕೈ ಬಿಡು - ಮೋಸ ಮಾಡು
  61. ಅಜ್ಜನ ಕಾಲದ್ದು - ಪುರಾತನ
  62. ಅಪ್ಪ ನೆಟ್ಟ ಆಲದ ಮರ - ಹಳೆಯ ಶಾಸ್ತ್ರ ಸಂಪ್ರದಾಯಗಳು
  63. ಬಿಚ್ಚೋಲೆ ಗೌರಮ್ಮ - ನಿರಾಭರಣೆ
  64. ಮೊರೆ ಹೋಗು - ಶರಣಾಗು
  65. ಮುಗಿಲು ಹರಿದು ಬೀಳು - ದುರಂತ ಎದುರಿಸು
  66. ಬಾಯಿ ಮೇಲೆ ಬೆರಳು ಇಡು - ಆಶ್ಚರ್ಯ ಪಡು
  67. ಕಣ್ಣರಳಿಸು - ಅಚ್ಚರಿಪಡು
  68. ಬೆಲೆ ತೆರು - ಪಶ್ಚಾತ್ತಾಪ ಪಡು
  69. ಕಿವಿ ತುಂಬು - ಚಾಡಿ ಹೇಳು
  70. ಪಿಸುಮಾತು - ಮೆಲುದನಿಯ ಮಾತು
  71. ಗಾಳಿಮಾತು - ಸುಳ್ಳುಸುದ್ದಿ ಹರಡು
  72. ಮೊರೆ ಯಿಡು - ಬೇಡಿಕೊಳ್ಳು
  73. ಮುಗಿಬೀಳು - ದಾಳಿ ಮಾಡು
  74. ಸಂಬಂಧ ಹಳಸು - ಮನಸ್ತಾಪ
  75. ಕಡ್ಡಿ ತುಂಡು ಮಾಡು - ನೇರ ದಿಟ್ಟ ನುಡಿ
  76. ಬೆಂಕಿ ಹಚ್ಚು - ಚಾಡಿ ಹೇಳು
  77. ನಾಯಿ ಪಾಡು - ಗತಿ ಇಲ್ಲದಿರುವಿಕೆ
  78. ಮುಖಕ್ಕೆ ಮಂಗಳಾರತಿ - ಬೈಯ್ಯುವುದು 
  79. ಟೋಪಿ ಹಾಕು - ಮೋಸಮಾಡು
  80. ಅಂಗೈಯಲ್ಲಿ ಆಕಾಶ - ಹುಸಿ ನಿರೀಕ್ಷೆ ತೋರಿಸು
  81. ನೀರು ಕುಡಿದಂತೆ - ಸುಲಭವಾಗಿ ಸಾಧಿಸು
  82. ಬಲಗೈ ಬಂಟ - ನೆಚ್ಚಿನ ಕೆಲಸಗಾರ
  83. ತಾಳ ತಪ್ಪು -ಕೆಲಸ ಕೆಡುವುದು
  84. ಸೆರಗಿನ ಕೆಂಡ - ಅಪಾಯವನ್ನು ಜೊತೆಗಿಟ್ಟುಕೊಳ್ಳು
  85. ಹಾವಿಗೆ ಹಾಲೆರೆದಂತೆ - ಅಪಾಯವನ್ನು ಪೋಷಿಸು
  86. ಅನ್ನಕ್ಕೆ ದಾರಿ - ದುಡಿಮೆಗೆ ಮಾರ್ಗ
  87. ಕಣ್ಣಿದ್ದೂ ಕುರುಡರಂತೆ - ತಿಳಿದೂ ನಿರ್ಲಕ್ಷ್ಯ ವಹಿಸು
  88. ಕಾಲಿಗೆ ಚಕ್ರ - ಒಂದು ಕಡೆ ನಿಲ್ಲದಿರುವಿಕೆ
  89. ಬೇಳೆ ಬೇಯಿಸಿಕೊ - ತನ್ನ ಕೆಲಸ ಮಾತ್ರ ನೋಡಿಕೊ
  90. ಬಾಯಿ ಕಟ್ಟು - ಆಹಾರದಲ್ಲಿ ಹಿಡಿತ
  91. ಕಣ್ಣಲ್ಲಿ ಎಣ್ಣೆ - ಏಕಾಗ್ರತೆಯಿಂದ
  92. ಕುರುಡು ಕಾಂಚಾಣ - ಧನದಾಹ
  93. ಮೈ ಮರೆ - ಅಲಕ್ಷ್ಯ
  94. ಕಣ್ಣು ಹತ್ತು - ನಿದ್ದೆ ಮಾಡು
  95. ತೋಳೆರಿಸು - ಜಗಳಕ್ಕೆ ಹೋಗು
  96. ಟೊಂಕ ಕಟ್ಟಿ ನಿಲ್ಲು - ಕೆಲಸಕ್ಕೆ ಸಜ್ಜಾಗು
  97. ಕೈಗೂಡು - ನೆರವೇರು
  98. ಸೊಂಟ ಮುರಿ - ನಿಗ್ರಹಿಸು
  99. ಮೈಮುರಿದು ದುಡಿ - ಕಷ್ಟಪಟ್ಟು ದುಡಿ
  100. ಬೆವರಿಳಿಸು - ಬೈಯ್ಯುವುದು
  101. ಕೈ ಜೋಡಿಸು - ಸಹಕರಿಸು
  102. ಸೆರ ಗೊಡ್ಡು - ಬೇಡಿಕೋ
  103. ಮಾನ ಹರಾಜು ಹಾಕು - ಅವಮಾನ ಮಾಡು
  104. ನೀರು ಕುಡಿಸು - ಬುದ್ಧಿ ಕಲಿಸು
  105. ಏಳು ಕೆರೆ ನೀರು ಕುಡಿ - ಚೆನ್ನಾಗಿ ಪಳಗು
  106. ಕಂಬಿ ಕೀಳು - ಪಲಾಯನ ಮಾಡು
  107. ಕಣ್ಣಿಗೆ ಮಣ್ಣರಚು - ಮೋಸ ಮಾಡು 
  108. ಗತಿ ಕಾಣಿಸು - ಬುದ್ಧಿ ಕಲಿಸು
  109. ಗಗನ ಕುಸುಮ - ಕೈಗೆ ನಿಲುಕದ್ದು
  110. ಕಣ್ಣಳತೆ - ಕೈಗೆ ಸಿಗುವುದು/ಹತ್ತಿರದ 
  111. ಒರೆ ಹಚ್ಚು - ಪರೀಕ್ಷಿಸು
  112. ಕೈಮುರಿದಂತಾಗು - ಬಲಹೀನನಾಗು
  113. ಗಟ್ಟಿಕುಳ - ಶ್ರೀಮಂತ 
  114. ಪಳಗಿದ ಕೈ - ಅನುಭವಿ
  115. ಇಂಗಿ ಹೋಗು - ಒಣಗಿ ಹೋಗು
  116. ತಣ್ಣೀರೆರಚು - ನಿರಾಶೆ ಮಾಡು
  117. ಬೆನ್ನೆಲುಬು - ಆಧಾರ
  118. ತಲೆ ತಿನ್ನು - ಅನವಶ್ಯಕ ಮಾತಾಡು
  119. ತಲೆ ಬಿಸಿ ಮಾಡು - ಸಿಟ್ಟು ಬರಿಸು
  120. ತವಡು ಕುಟ್ಟು - ಅನಾವಶ್ಯಕ ಮಾತು
  121. ಮೊಳಕೆಒಡಿ - ಹೊಸ ವಿಷಯದ ಪ್ರಾರಂಭ
  122. ಅಳಿಲು ಸೇವೆ - ಸಣ್ಣ ಸಹಾಯ
  123. ತಲೆ ಮರೆಸು - ಬಚ್ಚಿಟ್ಟುಕೊಳ್ಳು
  124. ಕಣ್ಣು ತಪ್ಪಿಸು - ಸಿಗದೇ ತಪ್ಪಿಸಿಕೊಳ್ಳು

ದ್ವಿರುಕ್ತಿ, ಜೋಡುನುಡಿ, ಅನುಕರಣಾವ್ಯಯ ಮತ್ತು ನುಡಿಗಟ್ಟುಗಳು

 ದ್ವಿರುಕ್ತಿ 
ದ್ವಿರುಕ್ತಿ  ಪದದ ಶಬ್ದಶಃ ಅರ್ಥ ತಿಳಿದುಕೊಳ್ಳೋಣ. ಇಲ್ಲಿ 'ದ್ವಿ' ಅಂದರೆ 'ಎರಡು', 'ಉಕ್ತಿ' ಎಂದರೆ 'ಮಾತು'.
ಒಂದು ಪದವನ್ನೋ ಅಥವಾ ಒಂದು ವಾಕ್ಯವನ್ನೋ ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಎರಡು  ಸಲ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ ಎನ್ನುತ್ತಾರೆ.
ಉದಾಹರಣೆ: ಓಡಿಓಡಿ, ಬಿದ್ದುಬಿದ್ದು , ಮನೆಮನೆ
ದ್ವಿರುಕ್ತಿಯನ್ನು ಸಂತೋಷ, ಅವಸರ, ಸಂಭ್ರಮ, ಕೋಪ, ಅಥವಾ  ಹತಾಶೆಯನ್ನು ವ್ಯಕ್ತಪಡಿಸಲು  ಬಳಸಲಾಗುತ್ತದೆ.  ಉದಾಹರಣೆಗೆ,
ಬೇಗ ಬೇಗ ಬಾ , ಹೊತ್ತಾಯಿಿತು. 
ಬನ್ನಿ ಬನ್ನಿ ! ನಿಮಗೆ ಸ್ವಾಗತ. 
ಅಬ್ಬಬ್ಬಾ! ಎಷ್ಟು ರಮಣೀಯ ದೃಶ್ಯ! 
 ಪ್ರತಿಯೊಂದು ಅಥವಾ ಅತಿ ಹೆಚ್ಚು , ಅತಿ ಕಡಿಮೆ ಎಂದು ಹೇಳಲೂ ಕೂಡ ದ್ವಿರುಕ್ತಿಯನ್ನು ಬಳಸುತ್ತಾರೆ. 
ಉದಾಹರಣೆಗೆ,
ಪುಟ್ಟಪುಟ್ಟ ಮಕ್ಕಳು ಆಟವಾಡುತಿದ್ದವು. 
ಊರೂರು ಅಲೆದರೂ ಅವನಿಗೆ ಕೆಲಸ ಸಿಗಲಿಲ್ಲ.
ಕೆಲವೊಂದು ದ್ವಿರುಕ್ತಿಗಳನ್ನು  ವಿಶೇಷ ರೂಪದಲ್ಲಿ, ಉದಾಹರಣೆಗೆ 'ಮೊದಲು ಮೊದಲು'  ಎಂದು ಹೇಳುವ ಬದಲು, 'ಮೊಟ್ಟಮೊದಲು' ಎಂದು ಹೇಳುತ್ತಾರೆ.
ದ್ವಿರುಕ್ತಿಯ ಇನ್ನಷ್ಟು ಉದಾಹರಣೆಗಳು:
  • ಮತ್ತೆ ಮತ್ತೆ
  • ಈಗೀಗ
  • ದೊಡ್ಡ ದೊಡ್ಡ
  • ಹಿಂದೆ ಹಿಂದೆ
  • ಮುಂದೆ ಮುಂದೆ
  • ಒಳಒಳಗೆ
  • ಬೇಡ ಬೇಡ
  • ಸಣ್ಣ ಸಣ್ಣ
  • ಮನೆ ಮನೆ
  • ಬಟ್ಟಬಯಲು
  • ನಟ್ಟನಡುವೆ
  • ನಿಲ್ಲು ನಿಲ್ಲು
  • ದೂರ ದೂರ
  • ಇರಲಿ ಇರಲಿ
  • ತುತ್ತತುದಿ
  • ಬಿಸಿ ಬಿಸಿ
  • ಅಬ್ಬಬ್ಬಾ
  • ಅಗೋ ಅಗೋ
  • ನಡೆ ನಡೆ
  • ಬೇರೆ ಬೇರೆ
  • ಬಣ್ಣಬಣ್ಣದ 
  • ಹೆಚ್ಹು ಹೆಚ್ಹು
  • ಹೌದು ಹೌದು
  • ಕಟ್ಟಕಡೆ

ಜೋಡು ನುಡಿಗಳು

ಜೋಡುನುಡಿಗಳು ದ್ವಿರುಕ್ತಿಯ ಹಾಗೆಯೇ ಕಾಣುತ್ತವೆ. ಇದರಲ್ಲೂ ಎರಡು ಪದಗಳಿದ್ದು ಅವುಗಳನ್ನು ಜೊತೆಯಾಗಿಯೇ ಉಚ್ಚರಿಸುತ್ತಾರೆ. ಆದರೆ, ಜೋಡುನುಡಿಗಳ ಪೂರ್ವಪದಕ್ಕೆ ಮಾತ್ರ ಅರ್ಥವಿರುತ್ತದೆ, ಉತ್ತರಪದಕ್ಕೆ ಅರ್ಥವಿರುವುದಿಲ್ಲ.

ಉದಾಹರಣೆಗೆ: ಬಟ್ಟೆಬರೆ, ದೇವರು ದಿಂಡರು, ಸಾಲಸೋಲ, ಸುತ್ತಮುತ್ತ, ಕೋಟೆಕೊತ್ತಲು, ಕೂಲಿನಾಲಿ, ಹುಳಹುಪ್ಪಡಿ, ಶಾಲೆಮೂಲೇ, ಹಾಳುಮೂಳು, ಸಂದಿಗೊಂದಿ, ಸೊಪ್ಪುಸದೆ , ಹಣ್ಣು ಹಂಪಲು, ಇತ್ಯಾದಿ.


ಅನುಕರಣಾವ್ಯಯಗಳು 
ಕೆಲವು ಅರ್ಥವಿಲ್ಲದ ಧ್ವನಿವಿಶೇಷಗಳನ್ನು, ಪುನ: ಉಚ್ಚರಣೆ ಮಾಡಿ ಹೇಳುತ್ತೇವೆ. ಇಂತಹ ಧ್ವನಿ ವಿಶೇಷಗಳನ್ನು ಅನುಕರಣಾವ್ಯಯ ಎಂದು ಕರೆಯಲಾಗುತ್ತದೆ. 
ಉದಾಹರಣೆಗೆ : ಪಟಪಟ, ಸರಸರ, ಜುಳುಜುಳು, ದಬದಬ, ಚುರುಚುರು,ಧಗಧಗ, ಗುಳುಗುಳು, ಥರಥರ, ಘಮಘಮ, ಚಟಚಟ, ಗುಡುಗುಡು, ಮಿಣಿಮಿಣಿ  ಇತ್ಯಾದಿ.


ನುಡಿಗಟ್ಟುಗಳು
ನಮ್ಮ ದಿನನಿತ್ಯದ ಮಾತಿನಲ್ಲಿ ನಾವು ಕೆಲವೊಂದು ಪದಪುಂಜಗಳನ್ನು ಬಳಸುತ್ತೇವೆ, ಮಾತಿನ ಸಂದರ್ಭದ ಮೇಲೆ ಅವುಗಳಿಗೆ ಹೊಸ ಅರ್ಥ ಬರುತ್ತದೆ. ಇಂತಹ ಪದಪುಂಜಗಳನ್ನು ನುಡಿಗಟ್ಟುಗಳು ಎನ್ನುತ್ತಾರೆ. 
ಉದಾಹರಣೆಗೆ, ಕೈಕೊಡು ಇದರ ಅರ್ಥ ಕೈಯನ್ನು ಕೊಡುವುದು ಎಂದು ಅಲ್ಲ, ಮೋಸಮಾಡು ಎಂದು ಆಗಿದೆ.
ಇದೆ ರೀತಿ ಮತ್ತಷ್ಟು ಉದಾಹರಣೆಗಳು: 
ಹೊಟ್ಟೆಗೆ ಹಾಕಿಕೋ – ಕ್ಷಮಿಸು 
ಗಾಳಿಸುದ್ದಿ – ಸುಳ್ಳು ಸುದ್ದಿ 
ತಲೆಗೆ ಕಟ್ಟು – ಜವಾಬ್ದಾರಿ ಹೊರಿಸು 
ಕತ್ತಿ  ಮಸೆ – ದ್ವೇಷ ಸಾಧಿಸು 
ಅಟ್ಟಕ್ಕೇರಿಸು – ಹೊಗಳು