ನುಡಿಗಟ್ಟುಗಳ ಸಂಗ್ರಹ

 ನಮ್ಮ ಹಿಂದಿನ ಪೋಸ್ಟಿನಲ್ಲಿ ದ್ವಿರುಕ್ತಿ, ನುಡಿಗಟ್ಟು ಮುಂತಾದ ಶಬ್ದ ಪ್ರಕಾರಗಳನ್ನು ತಿಳಿದುಕೊಂಡೆವು, ಈ ಸಾರಿ ನುಡಿಗಟ್ಟುಗಳ ಇನ್ನಷ್ಟು ಉದಾಹರಣೆಗಳನ್ನು ನೋಡೋಣ.

ನಿಮಗೆ ಗೊತ್ತಿರುವ ನುಡಿಗಟ್ಟುಗಳನ್ನು ಕಾಮೆಂಟಿನಲ್ಲಿ ಎಲ್ಲರೊಂದಿಗೆ ಹಂಚಿಕೊಳ್ಳಬಹುದು.

  1. ಮೂಗು ತೂರಿಸು - ಬೇರೆಯವರ ವಿಷಯದಲ್ಲಿ ಮಧ್ಯಪ್ರವೇಶಿಸು
  2. ಆಷಾಢಭೂತಿ - ಕಪಟಿ, ನಯವಂಚಕ
  3. ಗಾಳಿ ಬಂದಾಗ ತೂರು - ಅವಕಾಶ ಉಪಯೋಗಿಸಿಕೊಳ್ಳುವುದು   
  4. ದಾರಿ ನೋಡು -  ಕಾಯುವಿಕೆ  
  5. ಬಂಗಾರದ ಪಂಜರ - ಸ್ವಾತಂತ್ರ್ಯ ಇಲ್ಲದಿರುವಿಕೆ  
  6. ಗಾಳಿಗೋಪುರ - ಸುಳ್ಳು ಭರವಸೆ  
  7. ಕಣ್ಣೀರಿನಲ್ಲಿ ಕೈತೊಳೆ - ಕಷ್ಟ ಅನುಭವಿಸು  
  8. ಮಂತ್ರಮುಗ್ಧ - ಆಶ್ಚರ್ಯ ಚಕಿತ  
  9. ಹೊಟ್ಟೆಉರಿ - ಅಸೂಯೆಪಡು  
  10. ಹೊಟ್ಟೆಗೆ ತಣ್ಣೀರು ಬಟ್ಟೆ - ಹಸಿವಿನಿಂದ ಉಪವಾಸವಿರುವುದು  
  11. ಹೊಟ್ಟೆಯ ಮೇಲೆ ಹೊಡೆ - ಪರರ ಕೆಲಸ ಕಿತ್ತುಕೊಳ್ಳುವುದು  
  12. ಮೊಸಳೆ ಕಣ್ಣೀರು - ತೋರಿಕೆಯ ಕಣ್ಣೀರು  
  13. ಗಾಯದ ಮೇಲೆ ಬರೆ - ನೋವಿನ ಜೊತೆ ಮತ್ತೊಂದು ನೋವು  
  14. ಗಾಯದ ಮೇಲೆ ಉಪ್ಪು ಸವರು - ನೋವಿನಲ್ಲಿರುವವರಿಗೆ ಮತ್ತೆ ನೋವು ಕೊಡುವುದು  
  15. ಹಿತ್ತಾಳೆ ಕಿವಿ - ಚಾಡಿಮಾತು ನಂಬುವುದು
  16. ಕೆಸರೆರಚು - ಅಪವಾದ ಮಾಡು  
  17. ಕಿವಿಮಾತು - ಬುದ್ಧಿವಾದ ಹೇಳು
  18. ಮನಸಲ್ಲೇ ಮಂಡಿಗೆ ಸವಿ -ಕಲ್ಪನೆಯಲ್ಲೇ ಸಂತೋಷ ಪಡು  
  19. ಕಾಲುಕೀಳು - ಪಲಾಯನ ಮಾಡು  
  20. ಕನ್ನಡಿಯೊಳಗಿನ ಗಂಟು -ಕೈಯಲ್ಲಿ ಇರದ ಅಥವಾ ಸದ್ಯಕ್ಕೆ ಇಲ್ಲದ ಅವಕಾಶ 
  21. ಕೈಕೊಡು - ಮೋಸ ಮಾಡು  
  22. ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ - ವ್ಯರ್ಥ ಕಾರ್ಯ 
  23. ನೀರಿನಲ್ಲಿ ಹೋಮ ಮಾಡಿದಂತೆ - ವ್ಯರ್ಥ ಕಾರ್ಯ 
  24. ಕೋಣನ ಮುಂದೆ ಕಿನ್ನರಿ ನುಡಿಸಿದಂತೆ - ಪ್ರಯೋಜನವಿಲ್ಲದ ಕೆಲಸ
  25. ದಾರಿದೀಪ - ಮಾರ್ಗದರ್ಶನ ಮಾಡು
  26. ತಲೆಕಾಯು - ರಕ್ಷಿಸು
  27. ಗಾಳಿಗೆ ತೂರು - ನಿರ್ಲಕ್ಷ್ಯಿಸು
  28. ಆನೆಬಲ - ಒತ್ತಾಸೆಯಾಗಿ ನಿಲ್ಲು
  29. ಕೈ ಒಡ್ಡು - ಬೇಡುವುದು
  30. ಕಣ್ಣು ಕೆಂಪಗಾಗು - ಸಿಟ್ಟಾಗು
  31. ಕಾಲಿಗೆ ಬುದ್ಧಿ ಹೇಳು - ಓಡಿ ಹೋಗು
  32. ಮುಖವಾಡ -ನಿಜವಾದ ಅಸ್ತಿತ್ವ ಮುಚ್ಚಿಡು
  33. ಬೆನ್ನುತಟ್ಟು - ಪ್ರೋತ್ಸಾಹಿಸು
  34. ತಲೆದೂಗು - ಮೆಚ್ಚಿಕೊಳ್ಳುವುದು
  35. ಆಕಾಶಕ್ಕೆ ಏಣಿ ಹಾಕು - ಸಿಗದುದಕ್ಕೆ ಆಸೆ ಪಡು
  36. ತಾಳಕ್ಕೆ ತಕ್ಕಂತೆ ಕುಣಿ - ಹೇಳಿದಂತೆ ಕೇಳು
  37. ನೀರ ಮೇಲಿನ ಗುಳ್ಳೆ - ಕ್ಷಣಿಕ
  38. ಕಣ್ ತೆರೆ - ಸತ್ಯ ತಿಳಿ
  39. ಕಡ್ಡಿಯನ್ನು ಗುಡ್ಡ ಮಾಡು - ಸಣ್ಣ ವಿಷಯವನ್ನು ದೊಡ್ಡದು ಮಾಡು 
  40. ವಿಷಕಾರು - ದ್ವೇಷಿಸು
  41. ಮುಖ ನೋಡಿ ಮಣೆ ಹಾಕು - ತಾರತಮ್ಯ ಮಾಡು
  42. ಕೈ ಮೇಲಾಗು - ವಿಜಯ ಸಾಧಿಸು
  43. ತಲೆ ಕೆಳಗಾಗು - ಯೋಜನೆ ಫಲಿಸದಿರುವುದು
  44. ಕಾಮಾಲೆ ಕಣ್ಣು - ಸಂಶಯ ಪಡು
  45. ಹೊಟ್ಟೆಗೆ ಹಾಕಿಕೋ - ಕ್ಷಮಿಸು
  46. ಹುಳಿ ಹಿಂಡು - ವಿಷಯ ಕೆಡಿಸು
  47. ಉರಿಯುವ ಬೆಂಕಿಗೆ ತುಪ್ಪ ಸುರಿ - ಪರಿಸ್ಥಿತಿ ಮತ್ತಷ್ಟು ವಿಷಮಗೊಳಿಸು
  48. ಗಾಯಕ್ಕೆ ಉಪ್ಪು ಸವರು - ನೋವಿನಲ್ಲಿರುವವರಿಗೆ ಮತ್ತಷ್ಟು ನೋವು ಕೊಡು
  49. ಹೊಟ್ಟೆ ತಣ್ಣಗಿರಲಿ - ಸುಖವಾಗಿರು
  50. ಎದೆ ಒಡಿ - ಆಘಾತಗೊಳ್ಳು
  51. ಎದೆಗುಂದು - ಧೈರ್ಯಗೆಡು
  52. ತಲೆ ತಗ್ಗಿಸು - ಅವಮಾನಗೊಳ್ಳು
  53. ಬಣ್ಣಗೆಡು - ಸತ್ಯಅನಾವರಣಗೊಳ್ಳು
  54. ಕಣ್ಣು ತೆರೆಸು - ಬುದ್ಧಿ ಕಲಿ
  55. ಕಾಲು ಕೆರಿದು ಜಗಳ ಮಾಡು - ವಿನಾ ಕಾರಣ ಜಗಳ ಮಾಡು
  56. ಗೋರಿ ಕಟ್ಟು - ವಿಷಯವನ್ನು ಮುಚ್ಚಿಹಾಕು
  57. ಕೈ ಹಾಕು - ಮಧ್ಯಸ್ಥಿಕೆ ವಹಿಸು
  58. ಕುತ್ತಿಗೆ ಕೊಯ್ಯಿ - ನಂಬಿಕೆದ್ರೋಹ
  59. ಬೆನ್ನಿಗೆ ಚೂರಿ ಹಾಕು - ನಂಬಿಕೆ ದ್ರೋಹ
  60. ಕೈ ಬಿಡು - ಮೋಸ ಮಾಡು
  61. ಅಜ್ಜನ ಕಾಲದ್ದು - ಪುರಾತನ
  62. ಅಪ್ಪ ನೆಟ್ಟ ಆಲದ ಮರ - ಹಳೆಯ ಶಾಸ್ತ್ರ ಸಂಪ್ರದಾಯಗಳು
  63. ಬಿಚ್ಚೋಲೆ ಗೌರಮ್ಮ - ನಿರಾಭರಣೆ
  64. ಮೊರೆ ಹೋಗು - ಶರಣಾಗು
  65. ಮುಗಿಲು ಹರಿದು ಬೀಳು - ದುರಂತ ಎದುರಿಸು
  66. ಬಾಯಿ ಮೇಲೆ ಬೆರಳು ಇಡು - ಆಶ್ಚರ್ಯ ಪಡು
  67. ಕಣ್ಣರಳಿಸು - ಅಚ್ಚರಿಪಡು
  68. ಬೆಲೆ ತೆರು - ಪಶ್ಚಾತ್ತಾಪ ಪಡು
  69. ಕಿವಿ ತುಂಬು - ಚಾಡಿ ಹೇಳು
  70. ಪಿಸುಮಾತು - ಮೆಲುದನಿಯ ಮಾತು
  71. ಗಾಳಿಮಾತು - ಸುಳ್ಳುಸುದ್ದಿ ಹರಡು
  72. ಮೊರೆ ಯಿಡು - ಬೇಡಿಕೊಳ್ಳು
  73. ಮುಗಿಬೀಳು - ದಾಳಿ ಮಾಡು
  74. ಸಂಬಂಧ ಹಳಸು - ಮನಸ್ತಾಪ
  75. ಕಡ್ಡಿ ತುಂಡು ಮಾಡು - ನೇರ ದಿಟ್ಟ ನುಡಿ
  76. ಬೆಂಕಿ ಹಚ್ಚು - ಚಾಡಿ ಹೇಳು
  77. ನಾಯಿ ಪಾಡು - ಗತಿ ಇಲ್ಲದಿರುವಿಕೆ
  78. ಮುಖಕ್ಕೆ ಮಂಗಳಾರತಿ - ಬೈಯ್ಯುವುದು 
  79. ಟೋಪಿ ಹಾಕು - ಮೋಸಮಾಡು
  80. ಅಂಗೈಯಲ್ಲಿ ಆಕಾಶ - ಹುಸಿ ನಿರೀಕ್ಷೆ ತೋರಿಸು
  81. ನೀರು ಕುಡಿದಂತೆ - ಸುಲಭವಾಗಿ ಸಾಧಿಸು
  82. ಬಲಗೈ ಬಂಟ - ನೆಚ್ಚಿನ ಕೆಲಸಗಾರ
  83. ತಾಳ ತಪ್ಪು -ಕೆಲಸ ಕೆಡುವುದು
  84. ಸೆರಗಿನ ಕೆಂಡ - ಅಪಾಯವನ್ನು ಜೊತೆಗಿಟ್ಟುಕೊಳ್ಳು
  85. ಹಾವಿಗೆ ಹಾಲೆರೆದಂತೆ - ಅಪಾಯವನ್ನು ಪೋಷಿಸು
  86. ಅನ್ನಕ್ಕೆ ದಾರಿ - ದುಡಿಮೆಗೆ ಮಾರ್ಗ
  87. ಕಣ್ಣಿದ್ದೂ ಕುರುಡರಂತೆ - ತಿಳಿದೂ ನಿರ್ಲಕ್ಷ್ಯ ವಹಿಸು
  88. ಕಾಲಿಗೆ ಚಕ್ರ - ಒಂದು ಕಡೆ ನಿಲ್ಲದಿರುವಿಕೆ
  89. ಬೇಳೆ ಬೇಯಿಸಿಕೊ - ತನ್ನ ಕೆಲಸ ಮಾತ್ರ ನೋಡಿಕೊ
  90. ಬಾಯಿ ಕಟ್ಟು - ಆಹಾರದಲ್ಲಿ ಹಿಡಿತ
  91. ಕಣ್ಣಲ್ಲಿ ಎಣ್ಣೆ - ಏಕಾಗ್ರತೆಯಿಂದ
  92. ಕುರುಡು ಕಾಂಚಾಣ - ಧನದಾಹ
  93. ಮೈ ಮರೆ - ಅಲಕ್ಷ್ಯ
  94. ಕಣ್ಣು ಹತ್ತು - ನಿದ್ದೆ ಮಾಡು
  95. ತೋಳೆರಿಸು - ಜಗಳಕ್ಕೆ ಹೋಗು
  96. ಟೊಂಕ ಕಟ್ಟಿ ನಿಲ್ಲು - ಕೆಲಸಕ್ಕೆ ಸಜ್ಜಾಗು
  97. ಕೈಗೂಡು - ನೆರವೇರು
  98. ಸೊಂಟ ಮುರಿ - ನಿಗ್ರಹಿಸು
  99. ಮೈಮುರಿದು ದುಡಿ - ಕಷ್ಟಪಟ್ಟು ದುಡಿ
  100. ಬೆವರಿಳಿಸು - ಬೈಯ್ಯುವುದು
  101. ಕೈ ಜೋಡಿಸು - ಸಹಕರಿಸು
  102. ಸೆರ ಗೊಡ್ಡು - ಬೇಡಿಕೋ
  103. ಮಾನ ಹರಾಜು ಹಾಕು - ಅವಮಾನ ಮಾಡು
  104. ನೀರು ಕುಡಿಸು - ಬುದ್ಧಿ ಕಲಿಸು
  105. ಏಳು ಕೆರೆ ನೀರು ಕುಡಿ - ಚೆನ್ನಾಗಿ ಪಳಗು
  106. ಕಂಬಿ ಕೀಳು - ಪಲಾಯನ ಮಾಡು
  107. ಕಣ್ಣಿಗೆ ಮಣ್ಣರಚು - ಮೋಸ ಮಾಡು 
  108. ಗತಿ ಕಾಣಿಸು - ಬುದ್ಧಿ ಕಲಿಸು
  109. ಗಗನ ಕುಸುಮ - ಕೈಗೆ ನಿಲುಕದ್ದು
  110. ಕಣ್ಣಳತೆ - ಕೈಗೆ ಸಿಗುವುದು/ಹತ್ತಿರದ 
  111. ಒರೆ ಹಚ್ಚು - ಪರೀಕ್ಷಿಸು
  112. ಕೈಮುರಿದಂತಾಗು - ಬಲಹೀನನಾಗು
  113. ಗಟ್ಟಿಕುಳ - ಶ್ರೀಮಂತ 
  114. ಪಳಗಿದ ಕೈ - ಅನುಭವಿ
  115. ಇಂಗಿ ಹೋಗು - ಒಣಗಿ ಹೋಗು
  116. ತಣ್ಣೀರೆರಚು - ನಿರಾಶೆ ಮಾಡು
  117. ಬೆನ್ನೆಲುಬು - ಆಧಾರ
  118. ತಲೆ ತಿನ್ನು - ಅನವಶ್ಯಕ ಮಾತಾಡು
  119. ತಲೆ ಬಿಸಿ ಮಾಡು - ಸಿಟ್ಟು ಬರಿಸು
  120. ತವಡು ಕುಟ್ಟು - ಅನಾವಶ್ಯಕ ಮಾತು
  121. ಮೊಳಕೆಒಡಿ - ಹೊಸ ವಿಷಯದ ಪ್ರಾರಂಭ
  122. ಅಳಿಲು ಸೇವೆ - ಸಣ್ಣ ಸಹಾಯ
  123. ತಲೆ ಮರೆಸು - ಬಚ್ಚಿಟ್ಟುಕೊಳ್ಳು
  124. ಕಣ್ಣು ತಪ್ಪಿಸು - ಸಿಗದೇ ತಪ್ಪಿಸಿಕೊಳ್ಳು

13 comments:

  1. ಕೈ ಚಾಚು
    ಮೊಸಳೆ ಕಣ್ಣೀರು
    ಕಾಗೆ ಹಾರಿಸು

    ReplyDelete
  2. ಅಗ್ರ ತಾಂಬೂಲ = ಮೊದಲ ಮರ್ಯಾದೆ
    ಅರೆದು ಕುಡಿ = ಚೆನ್ನಾಗಿ ತಿಳಿದುಕೊ
    ಸಿಂಹ ಸ್ವಪ್ನ = ಭಯ

    ReplyDelete
    Replies
    1. ತುಂಬಾ ಧನ್ಯವಾದಗಳು

      Delete
  3. ತಲೇ ಬೋಳಿಸಿ ಬೀಡುತ್ತಾರೆಯೇ ನುಡಿಗಟ್ಟಿನ ಅರ್ಥ ವೇನು ?

    ReplyDelete
    Replies
    1. ತಲೆಬೋಳಿಸು ಎಂದರೆ ಮೋಸ ಮಾಡು

      Delete
  4. ದಂಗುಬಡಿ, ತಲೆದಂಡ ಪದದ ನುಡಿಗಟ್ಟಿನ ಅರ್ಥ ತಿಳಿಸಿ

    ReplyDelete
    Replies
    1. ದಂಗುಬಡಿ:- ಹಠಾತ್ತಾಗಿ ಅಚ್ಚರಿಗೊಳ್ಳು, ಆಕಸ್ಮಿಕವಾಗಿ ಆಂತಂಕಗೊಳ್ಳು
      ತಲೆದಂಡ :
      ಇನ್ನೊಬ್ಬರ ಜೀವವನ್ನು ಬೇಡುವುದು ಅಥವಾ ತೆಗೆದುಕೊಳ್ಳುವುದು (ಶಿಕ್ಷೆಯಾಗಿ)
      ಅಥವಾ ಒಬ್ಬರ ಅಧಿಕಾರ ಅಥವಾ ಹುದ್ದೆಯನ್ನು ಶಿಕ್ಷೆಯ ಸ್ವರೂಪವಾಗಿ ಕಸಿದುಕೊಳ್ಳುವುದು

      Delete
  5. ಕೈಗೆ ಎಟುಕದ್ದು‌‌ ಎಂಬರ್ಥದ ನುಡಿಗಟ್ಟು...?

    ReplyDelete
  6. ಕಂಠವು ಬಿಗಿದು ಬಂತು

    ReplyDelete
    Replies
    1. ಮಾತು ನಿಂತು ಹೋಗುವಿಕೆ

      Delete
  7. ಮುಖಊದಿಸು ನುಡಿಗಟ್ಟಿನ ಅರ್ಥ

    ReplyDelete
  8. ಸಿಡಿಲ ಮರಿ

    ReplyDelete