ಕನ್ನಡ ಸಂಧಿಗಳಲ್ಲಿ ಮೂರು ವಿಧಗಳಿವೆ
೧. ಲೋಪ ಸಂಧಿ
೨. ಆಗಮ ಸಂಧಿ
೩. ಆದೇಶ ಸಂಧಿ
೧. ಲೋಪ ಸಂಧಿ:-
ಪೂರ್ವ ಪದದ ಕೊನೆಯ ಸ್ವರದ ಮುಂದೆ ಉತ್ತರ ಪದದ ಮೊದಲ ಸ್ವರ ಬಂದು ಸಂಧಿಕಾರ್ಯ ನಡೆದಾಗ ಪೂರ್ವ ಪದದ ಒಂದಕ್ಷರ ಲೋಪವಾಗುವುದಕ್ಕೆ "ಲೋಪಸಂಧಿ" ಎನ್ನುವರು.
ಉದಾಹರಣೆಗೆ:-
೧. ಮೇಲೆ+ಇಟ್ಟು = ಮೇಲಿಟ್ಟು
ಮೇಲಿನ ಸಂಧಿಕಾರ್ಯದಲ್ಲಿ ಮೇಲೆ ಎಂಬ ಪೂರ್ವಪದದ ಕೊನೆಯ ಸ್ವರ ಎ ಎಂಬುದು ಇಲ್ಲಿ ಲೋಪವಾಗಿದೆ.
೨. ಮಾತು+ಇಲ್ಲ = ಮಾತಿಲ್ಲ
ಇಲ್ಲಿ ಮಾತು ಎಂಬ ಪೂರ್ವಪದದ ಕೊನೆಯ ಸ್ವರ ಉ ಎಂಬುದು ಲೋಪವಾಗಿದೆ.
ಇನ್ನು ಕೆಲವು ಉದಾಹರಣೆಗಳು
ನಾನು+ಒಬ್ಬ = ನಾನೊಬ್ಬ. : ಉ ಸ್ವರ ಲೋಪವಾಗಿದೆ.
ಹುಡುಗರು+ಎಲ್ಲ = ಹುಡುಗರೆಲ್ಲ. : ಉ ಸ್ವರ ಲೋಪವಾಗಿದೆ.
ನಿನಗೆ +ಅಲ್ಲದೆ = ನಿನಗಲ್ಲದೆ. : ಎ ಸ್ವರ ಲೋಪವಾಗಿದೆ.
೨. ಆಗಮ ಸಂಧಿ:-
ಸ್ವರದ ಮುಂದೆ ಸ್ವರವು ಬಂದು ಸಂಧಿಕಾರ್ಯಾ ನಡೆಯುವಾಗ ಒಂದು ಅಕ್ಷರ ಆಗಮವಾದರೆ ಅದನ್ನು ಆಗಮ ಸಂಧಿ ಎನ್ನುವರು. ಸಾಮಾನ್ಯವಾಗಿ ವ (ವ್+ಅ) ಇಲ್ಲವೇ ಯ (+ಅ) ಅಕ್ಷರಗಳು ಆಗಮವಾಗಿ ಬರುತ್ತವೆ.
ಉದಾಹರಣೆಗೆ:-
೧. ಮನೆ+ಅನ್ನು = ಮನೆಯನ್ನು
ಈ ಪದದಲ್ಲಿ ಉತ್ತರ ಪದದ ಅ ಸ್ವರದ ಬದಲು ಸಂಧಿಕಾರ್ಯದ ನಂತರ ಯ ಎಂಬ ಅಕ್ಷರ ಸೇರಿಕೊಂಡಿದೆ.
೨. ಪತ್ರ+ಅನ್ನು = ಪತ್ರವನ್ನು
ಈ ಪದದಲ್ಲಿ ಅ ಸ್ವರದ ಬದಲು ವ ಎಂಬ ಅಕ್ಷರ ಬಂದು ಸೇರಿಕೊಂಡಿದೆ.
ಇನ್ನು ಕೆಲವು ಉದಾಹರಣೆಗಳು
ಮಗು+ಅನ್ನು = ಮಗುವನ್ನು : ವ ಆಗಮವಾಗಿದೆ.
ಮಳೆ+ಅಲ್ಲಿ = ಮಳೆಯಲ್ಲಿ : ಯ ಆಗಮವಾಗಿದೆ.
೩. ಆದೇಶ ಸಂಧಿ:-
ಇಲ್ಲಿ ಸಂಧಿ ಕಾರ್ಯ ನಡೆದಾಗ ಉತ್ತರ ಪದದ ಮೊದಲನೆಯ ಅಕ್ಷರವು ಬದಲಾಗುತ್ತದೆ. ಸಾಮಾನ್ಯವಾಗಿ ಕ, ತ,ಪ ವ್ಯಂಜನಾಕ್ಷರಗಳಿಗೆ ಬದಲಾಗಿ ಕ್ರಮವಾಗಿ ಗ,ದ,ಬ ವ್ಯಂಜನಾಕ್ಷರಗಳು ಆದೇಶವಾಗಿ ಬರುವುದಕ್ಕೆ "ಆದೇಶ ಸಂಧಿ" ಎನ್ನುವರು.
ಉದಾಹರಣೆಗೆ:-
೧. ಕೋಪ+ಕೊಂಡು = ಕೋಪಗೊಂಡು
ಮೇಲಿನ ಸಂಧಿ ಕಾರ್ಯದಲ್ಲಿ ಕೊಂಡು ಎಂಬ ಕ (ಕೊ) ಅಕ್ಷರದ ಬದಲಿಗೆ ಕೋಪಗೊಂಡು ಎಂಬ ಪದದಲ್ಲಿ ಗ(ಗೊ) ಎಂಬ ಅಕ್ಷರ ಬಂದಿದೆ.
೨. ಬೆಟ್ಟ+ತಾವರೆ = ಬೆಟ್ಟದಾವರೆ
ಇಲ್ಲಿ ಸಂಧಿ ಕಾರ್ಯ ನಡೆಯುವಾಗ ತ(ತಾ) ಅಕ್ಷರದ ಬದಲಿಗೆ ದ(ದಾ) ಅಕ್ಷರ ಬಂದಿದೆ.
ಇನ್ನು ಕೆಲವು ಉದಾಹರಣೆಗಳು
ಕಣ್+ಪನಿ = ಕಂಬನಿ : ಪ ಬದಲು ಬ ಆದೇಶವಾಗಿ ಬಂದಿದೆ.
ಹೂ+ತೋಟ = ಹೂದೋಟ : ತ ಬದಲು ದ ಆದೇಶವಾಗಿ ಬಂದಿದೆ.
thanks good expiations
ReplyDeleteThanks for responding
Delete