ಪೂರ್ವ ಹಾಗೂ ಉತ್ತರ ಪದಗಳಲ್ಲಿ ಎರಡೂ ಸಂಸ್ಕೃತ ಪದಗಳು ಪರಸ್ಪರ ಪರವಾದಾಗ ಆಗುವ ಸಂಧಿಗಳಿಗೆ ಸಂಸ್ಕೃತ ಸಂಧಿಗಳು ಎನ್ನುವರು.
ಸಂಸ್ಕೃತ ಸಂಧಿಯಲ್ಲಿ ಎರಡು ಪ್ರಕಾರಗಳು
ಸಂಸ್ಕೃತ ಸ್ವರ ಸಂಧಿಗಳು
ಸಂಸ್ಕೃತ ವ್ಯಂಜನ ಸಂಧಿಗಳು.
1. ಸವರ್ಣ ದೀರ್ಘ ಸಂಧಿ :-
ಪೂರ್ವ ಪದದ ಕೊನೆಯ ಅಕ್ಷರ ಹಾಗೂ ಉತ್ತರ ಪದದ ಮೊದಲನೆಯ ಅಕ್ಷರಗಳು ಒಂದೇ ಜಾತಿಯ ಸ್ವರಾಕ್ಷರಗಳಾಗಿದ್ದು ಪರಸ್ಪರ ಸೇರಿ ದೀರ್ಘರೂಪ ಪಡೆಯುವುದಕ್ಕೆ ಸವರ್ಣ ದೀರ್ಘ ಸಂಧಿ ಎನ್ನುವರು.
ಪೂರ್ವ ಪದದ ಕೊನೆಯ ಅಕ್ಷರ ಅಥವಾ ಉತ್ತರ ಪದದ ಮೊದಲ ಅಕ್ಷರ ದೀರ್ಘವಾಗಿದ್ದರೂ ಸಂಧಿ ಕಾರ್ಯ ನಡೆಯಬಹುದು. ಆದರೆ ಎರಡೂ ಪದಗಳು ಸಂಸ್ಕೃತ ಪದಗಳಾಗಿರಬೇಕು.
ಉದಾ:-
1) ಮಹಾ + ಆತ್ಮ = ಮಹಾತ್ಮ (ಆ+ಆ=ಆ)
2) ದೇವ + ಆಲಯ = ದೇವಾಲಯ (ಅ+ಆ=ಆ)
3) ಗಿರಿ + ಈಶ = ಗಿರೀಶ (ಇ+ಈ= ಈ)
4) ಗುರು + ಉಪದೇಶ = ಗುರೂಪದೇಶ (ಉ+ಉ=ಊ)
5) ರವಿ + ಇಂದ್ರ = ರವೀಂದ್ರ (ಇ+ಇ=ಈ)
2. ಗುಣ ಸಂಧಿ :-
ಪೂರ್ವ ಪದದ ಕೊನೆಯಲ್ಲಿ 'ಅ' ಅಥವಾ 'ಆ' -ಕಾರಗಳ ಮುಂದೆ ಉತ್ತರ ಪದದ ಮೊದಲಿಗೆ 'ಇ' ಕಾರವು ಬಂದಾಗ 'ಏ' -ಕಾರವು,
ಹಾಗೆಯೇ 'ಉ' ಅಥವಾ 'ಊ' -ಕಾರವು ಬಂದಾಗ 'ಓ' -ಕಾರವು ಮತ್ತು 'ಋ' -ಕಾರವು ಬಂದಾಗ 'ಅರ್' -ಕಾರವು ಸೇರಿದರೆ ಗುಣಸಂಧಿ ಎನ್ನುವರು.
ಉದಾ:-
1) ಮಹಾ + ಈಶ = ಮಹೇಶ (ಆ+ಈ=ಏ)
2) ಸೂರ್ಯ + ಉದಯ = ಸೂರ್ಯೋದಯ (ಅ+ಉ=ಓ)
3) ಬ್ರಹ್ಮ + ಋಷಿ = ಬ್ರಹ್ಮರ್ಷಿ (ಅ+ಋ=ಅರ್)
4) ಮಹಾ + ಉನ್ನತಿ = ಮಹೋನ್ನತಿ (ಆ+ಉ=ಓ)
5) ಸುರ + ಇಂದ್ರ = ಸುರೇಂದ್ರ (ಅ+ಇ=ಏ)
3. ವೃದ್ಧಿ ಸಂಧಿ :-
ಪೂರ್ವ ಪದದ ಕೊನೆಯಲ್ಲಿ 'ಅ' 'ಆ' -ಕಾರದ ಮುಂದೆ ಉತ್ತರ ಪದದ 'ಏ' 'ಐ' -ಕಾರವು ಪರವಾದರೆ ಅವೆರಡರ ಸ್ಥಾನದಲ್ಲಿ 'ಐ' -ಕಾರವೂ
ಹಾಗೆಯೇ 'ಓ' 'ಔ' -ಕಾರಗಳು ಪರವಾದರೆ 'ಔ' -ಕಾರವೂ ಅದೇಶವಾಗಿ ಬಂದರೆ ಅಂತಹ ಸಂಧಿಯನ್ನು ವೃದ್ಧಿ ಸಂಧಿ ಎನ್ನುವರು.
ಉದಾ:-
1) ಏಕ + ಏಕ = ಏಕೈಕ (ಅ+ಏ=ಐ)
2) ಶಿವ + ಐಕ್ಯ = ಶಿವೈಕ್ಯ (ಅ+ಐ=ಐ)
3) ಮಹಾ + ಔಚಿತ್ಯ = ಮಹೌಚಿತ್ಯ (ಅ+ಔ=ಔ)
4) ವನ + ಔಷಧ = ವನೌಷಧ (ಅ+ಔ=ಔ)
4. ಯಣ್ ಸಂಧಿ :-
ಪೂರ್ವ ಪದದ ಕೊನೆಯಲ್ಲಿ ಇ, ಈ, ಉ, ಊ, ಋ -ಕಾರಗಳಿಗೆ ಉತ್ತರ ಪದದ ಮೊದಲಿಗೆ ಸವರ್ಣವಲ್ಲದ ಸ್ವರ ಪರವಾದರೆ, 'ಇ' 'ಈ' -ಕಾರಗಳಿಗೆ 'ಯ್' -ಕಾರವು
ಹಾಗೆಯೇ 'ಉ' 'ಊ' -ಕಾರಗಳಿಗೆ 'ವ್' -ಕಾರವು ಮತ್ತು 'ಋ' -ಕಾರಕ್ಕೆ 'ರ್' -ಕಾರವೂ ಆದೇಶಗಳಾಗಿ ಬಂದರೆ ಅಂತಹ ಸಂಧಿಗಳಿಗೆ ಯಣ್ ಸಂಧಿಗಳು ಎನ್ನುತ್ತಾರೆ.
ಉದಾ:-
1) ಪ್ರತಿ + ಉಪಕಾರ = ಪ್ರತ್ಯುಪಕಾರ (ಇ+ಉ=ಯ)
2) ಇತಿ + ಆದಿ = ಇತ್ಯಾದಿ (ಇ+ಆ=ಯ)
3) ಮನು + ಅಂತರ = ಮನ್ವಂತರ (ಉ+ಅ=ವ)
4) ಗುರು + ಆಜ್ಞೆ = ಗುರ್ವಾಜ್ಞೆ (ಉ+ಆ=ವ)
5) ಪಿತೃ + ಆರ್ಜಿತ = ಪಿತ್ರಾರ್ಜಿತ (ಋ+ಆ=ರ)
Super
ReplyDeleteThank you
ReplyDeleteTq so much superb very useful 👌
ReplyDelete