ಒಂದು ಶಬ್ದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥಗಳಿದ್ದರೆ ಅಂಥಹ ಶಬ್ದಗಳನ್ನು ನಾನಾರ್ಥಕ ಪದಗಳು ಎನ್ನುತ್ತಾರೆ. ಆ ಪದಕ್ಕೆ ಇರುವ ವಿವಿಧ ಅರ್ಥಗಳು ನಾಮಪದಗಳೇ ಇರಬಹುದು ಅಥವಾ ನಾಮಪದ ಮತ್ತು ಕ್ರಿಯಾಪದ ಹೀಗೆ ಎರಡೂ ರೂಪಗಳಲ್ಲೇ ಬಳಕೆಯಾಗುವುದುಂಟು.
ಉದಾಹರಣೆ: ಕರಿ ಎಂದರೆ “ಆನೆ”,” ಕಪ್ಪು ಬಣ್ಣ” ಎಂಬ ಅರ್ಥ ನಾಮಪದವಾಗಿ ಬಳಕೆಯಲ್ಲಿದೆ ಅಲ್ಲದೆ “ಕೂಗು” ಎಂಬ ಕ್ರಿಯಾಪದ ರೂಪದ ಅರ್ಥವೂ ಇದೆ
ಇನ್ನಷ್ಟು ನಾನಾರ್ಥಕ ಪದಗಳನ್ನು ತಿಳಿದುಕೊಳ್ಳೋಣ
- ಅರ್ಕ = ಸೂರ್ಯ, ಎಕ್ಕೆಗಿಡ
- ಹುಟ್ಟು= ಜನಿಸು, ದೋಣಿ ನಡೆಸುವ ಕೋಲು
- ದ್ವಿಜ = ಬ್ರಾಹ್ಮಣ, ಪಕ್ಷಿ
- ಗುಡಿ = ದೇವಸ್ಥಾನ, ಬಾವುಟ
- ಗುರು= ಶಿಕ್ಷಕ, ಒಂದು ಗ್ರಹ
- ವರ್ಣ = ಬಣ್ಣ, ಅಕ್ಷರ, ಜಾತಿ
- ಪಾಷಾಣ = ಕಲ್ಲು, ವಿಷ
- ಅಂಕ = ನಾಟಕದ ಭಾಗ, ಪರೀಕ್ಷೆಯಲ್ಲಿ ನೀಡುವ ಗುಣಗಳು
- ಹತ್ತು = ಒಂದು ಸಂಖ್ಯೆ (10), ಏರು, ಅಂಟು
- ಅರಿ = ತಿಳಿ, ಶತ್ರು
- ಕರ = ಕೈ, ತೆರಿಗೆ
- ಅಗಿ = ಕಚ್ಚಿ ತಿನ್ನು , ಅಗೆ
- ಏಳು = ಸಂಖ್ಯೆ (7), ಎಚ್ಚರಗೊಳ್ಳು
- ತೆರೆ = ಪರದೆ, ಅಲೆ
- ಮರೆ = ಮುಚ್ಚಿಡು, ನೆನಪು ಹೋಗು
- ಮಹಿಷಿ = ಕೋಣ, ಪಟ್ಟದ ರಾಣಿ
- ಲುಲಾಯ = ಕೋಣ, ಮಹಿಳೆ
- ಎತ್ತು = ಹೋರಿ, ಮೇಲೆ ಏರಿಸು
- ಅಂಬರ = ಆಕಾಶ, ಬಟ್ಟೆ
- ಕರಿ = ಆನೆ, ಕಪ್ಪು ಬಣ್ಣ, ಕೂಗು
- ಕೇಸರಿ = ಸಿಂಹ, ಒಂದು ಬಣ್ಣ
- ಅಂಚೆ = ಟಪಾಲು , ಹಂಸ
- ಕಿತ್ತಳೆ = ಒಂದು ಬಣ್ಣ, ಒಂದು ಜಾತಿಯ ಹಣ್ಣು
- ನೇರಳೆ = ಒಂದು ಬಣ್ಣ, ಒಂದು ಜಾತಿಯ ಹಣ್ಣು
- ಕಲೆ = ಕೊಳೆ, ಕೌಶಲ್ಯ
- ನಡು = ಮಧ್ಯ, ಸೊಂಟ
- ಎರಗು = ಮೇಲೆ ಬೀಳು, ನಮಸ್ಕರಿಸು
- ಕಲ್ಯಾಣ = ಮಂಗಳ, ಮದುವೆ
- ಕರ್ಣ = ರಾಧೇಯ , ಕಿವಿ
- ಕಾಡು = ಅರಣ್ಯ, ತೊಂದರೆ ಮಾಡು
- ಆಳು = ಸೇವಕ, ಆಳ್ವಿಕೆ
- ಸುಳಿ = ಸನಿಹದಲ್ಲೇ ಸುತ್ತಾಡು, ನೀರಿನ ಸುತ್ತುವಿಕೆ
- ದೊರೆ = ಸಿಗುವುದು, ಅರಸ
- ತೊಡೆ = ನಿವಾರಣೆ, ಕಾಲಿನ ಮೇಲ್ಭಾಗ
- ದಳ = ಸೈನ್ಯ, ಹೂವಿನ ಎಸಳು
- ನರ = ಮಾನವ, ರಕ್ತನಾಳ, ಅರ್ಜುನ
- ಪಡೆ = ಸೈನ್ಯದ ಭಾಗ, ಸ್ವೀಕರಿಸು
- ಕಾಲ = ಯಮ, ಸಮಯ
- ಕುಡಿ = ಸೇವಿಸು, ಚಿಗುರು
- ನೆರೆ = ಬಿಳಿ ಕೂದಲು, ಪ್ರವಾಹ, ಒಂದು ಕಡೆ ಸೇರು
- ಬೇಡ = ಬೇಟೆಗಾರ, ತಿರಸ್ಕಾರ
- ಹರಿ = ವಿಷ್ಣು, ಹರಿದು ಹಾಕು
- ಕೀಳು = ಕಿತ್ತು ಹಾಕು, ಕೆಳಮಟ್ಟದ ಭಾವನೆ
- ಕಾಲು = ನಾಲ್ಕನೇ ಒಂದು ಭಾಗ, ಚರಣ
- ಸಾಕು = ಸಲಹು, ಸಾಕುಮಾಡು
- ತಂಗಿ = ನಿಲ್ಲಿ, ಚಿಕ್ಕ ಸಹೋದರಿ
- ರಾಗ = ಸ್ವರ, ಪ್ರೀತಿ
- ಹಗೆ = ತೆಗ್ಗು, ದ್ವೇಷ
- ಮಡಿ = ಸ್ವಚ್ಛ, ಸಾವು, ಮಡಚು, ರೇಷ್ಮೆ ವಸ್ತ್ರ
- ಆರು = ಸಂಖ್ಯೆ (6), ತಣ್ಣಗಾಗು, ಯಾರು
- ಮಂಗಳ =ಒಂದು ಗ್ರಹ, ಶುಭ
- ಮುತ್ತು = ಆವರಿಸು, ಮಣಿ, ಚುಂಬನ
- ಹಳಿ = ಕಂಬಿ, ಜರೆಯುವುದು
- ಸಾರು= ರಸಂ, ಪ್ರಚಾರ ಮಾಡು
- ಹೊತ್ತು= ಸಮಯ, ಎತ್ತು
- ಒತ್ತು = ತಳ್ಳು, ಸಂಯುಕ್ತಾಕ್ಷರ
- ಮೃಗ = ಪ್ರಾಣಿ, ಜಿಂಕೆ
- ಗುಂಡಿ = ತೆಗ್ಗು, ಬಟನ್
- ತಂದೆ = ತರುವುದು, ಅಪ್ಪ
- ನೆನೆ = ಸ್ಮರಿಸು, ಹಸಿಯಾಗು
No comments:
Post a Comment