ಪರಿಸರ ಎಂದರೆ ನಮ್ಮ ಸುತ್ತಮುತ್ತಲು ಕಾಣುವ ಕಾಡು, ಗುಡ್ಡಬೆಟ್ಟಗಳು, ಭೂಮಿ, ಆಕಾಶ. ಮಾನವ ಸೇರಿ ಉಳಿದ ಎಲ್ಲ ಜೀವಿಗಳೂ ಇಡೀ ಪರಿಸರದ ಒಂದು ಭಾಗ. ಆದರೆ ಮಾನವ ಬೇರೆಲ್ಲ ಪ್ರಾಣಿಗಳಿಗಿಂತ ಬುದ್ಧಿವಂತ ಪ್ರಾಣಿ ಎನಿಸಿಕೊಂಡಿದ್ದಾನೆ. ಇವನ ಅತಿಯಾದ ಬುದ್ಧಿವಂತಿಕೆ ಈಗ ಪರಿಸರಕ್ಕೆ ಮಾರಕವಾಗಿದೆ. ಹೇಗೆಂದು ನೋಡೋಣ.
ಮಾಲಿನ್ಯ ಎಂದರೆ ಅಪಾಯಕಾರಿ ಹಾಗೂ ವಿಷಕಾರಕವಾದ ವಸ್ತುಗಳು ಪರಿಸರಕ್ಕೆ ಸೇರುವುದು. ಈ ವಸ್ತುಗಳು ಭೂಮಿಯ ಮೇಲಿನ ಎಲ್ಲ ಜೀವಿಗಳ ಮೇಲೂ ಪರಿಣಾಮ ಉಂಟು ಮಾಡುತ್ತವೆ ಹಾಗೂ ನೈಸರ್ಗಿಕವಾಗಿ ನಡೆಯುವ ಜೈವಿಕ ಚಕ್ರದ ಮೇಲೂ ಪರಿಣಾಮ ಉಂಟು ಮಾಡುತ್ತದೆ.
ಮಾಲಿನ್ಯದಲ್ಲಿ ನಾಲ್ಕು ವಿಧಗಳಿವೆ - ಭೂ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ.
ಮಾನವನ ದುರಾಸೆ, ಸ್ವಾರ್ಥ, ಆಧುನಿಕ ತಂತ್ರಜ್ಞಾನ, ಕೈಗಾರಿಕೀಕರಣ, ನಗರೀಕರಣ ಹಾಗೂ ಆಧುನೀಕರಣದಿಂದ ಇಡೀ ಭೂಮಿಯೇ ನಾಶವಾಗುತ್ತಿದೆ. ಇದು ಬರೀ ನಮ್ಮ ದೇಶದ ಸಮಸ್ಯೆಯೊಂದೇ ಅಲ್ಲ ಎಲ್ಲಾ ದೇಶಗಳ ಜ್ವಲಂತ ಸಮಸ್ಯೆಯಾಗಿದೆ. ಹಾಗೂ ಇದೆಲ್ಲ ಅನರ್ಥಗಳಿಗೂ ಮಾನವನೆ ನೇರ ಹೊಣೆ.
ಮಾನವ ಬುದ್ಧಿಜೀವಿ. ಆದರೆ ತನ್ನ ಅತಿಯಾದ ಕುತೂಹಲ ಹಾಗೂ ಪ್ರಕೃತಿಯ ಸಹಜ ಪ್ರಕ್ರಿಯೆಯಲ್ಲಿ ತನ್ನ ಹಸ್ತಕ್ಷೇಪ ಮಾಡಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದಾನೆ. ಇದರಿಂದ ಬರೀ ಮಾನವ ಕುಲ ಮಾತ್ರವಲ್ಲ ಇಡೀ ಜೀವ ಸಂಕುಲವೇ ಅಸ್ವಸ್ಥವಾಗಿದೆ. ಮಾಲಿನ್ಯವು ಸಾಮಾಜಿಕ , ಆರ್ಥಿಕ, ದೈಹಿಕ, ಮಾನಸಿಕ ಹಾಗೂ ದೈನಂದಿನ ಕ್ರಿಯೆ ಹೀಗೆ ಪ್ರತಿಯೊಂದು ವಿಷಯಗಳಲ್ಲೂ ತನ್ನ ಪ್ರಭಾವ ಬೀರಿದೆ. ಇದರಿಂದಾಗಿ ಹೊಸ ಹೊಸ ಖಾಯಿಲೆ ಹುಟ್ಟಿಕೊಳ್ಳುತ್ತಿವೆ.
ನಾವು ಈಗಲೇ ಎಚ್ಚೆತ್ತುಕೊಳ್ಳದೆ ಹೋದರೆ ಭಾರಿ ಅನಾಹುತವೇ ಸಂಭವಿಸಬಹುದು. ಆದ್ದರಿಂದ ಈಗಲಾದರೂ ನಾವು ನಮ್ಮ ಸ್ವಾರ್ಥ ಬಿಟ್ಟು ಪರಿಸರದ ಕಡೆ ಗಮನ ಹರಿಸಬೇಕಾಗಿದೆ.
- ನಮ್ಮ ಮನೆಯ ಆಸುಪಾಸು ಗಿಡ ಮರಗಳನ್ನು ನೆಡಬೇಕು.
- ರಾಸಾಯನಿಕ ವಸ್ತುಗಳ ಹಾಗೂ ಬಳಕೆ ಕಡಿಮೆ ಮಾಡಬೇಕು.
- ಮಳೆನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು.
- ಮುಖ್ಯವಾಗಿ ಈಗ ಸಾಕಷ್ಟು ಸಮಸ್ಯೆ ಉಂಟು ಮಾಡಿರುವ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು.
- ಅದರ ಬದಲಿಗೆ ಬಟ್ಟೆಯ ಚೀಲ, ಸೆಣಬಿನ ನಾರಿನಿಂದ ತಯಾರಾದ ಚೀಲ ಇತ್ಯಾದಿ ನೈಸರ್ಗಿಕವಾಗಿ ಕರಗುವಂತಹ ವಸ್ತುಗಳನ್ನು ಬಳಸಬೇಕು.
ಈ ನಮ್ಮ ಭೂಮಿ ಮುಂದಿನ ಪೀಳಿಗೆಗೆ ಹಸಿರಾಗಿ, ಶುದ್ಧವಾದ ಗಾಳಿ, ನೀರು ಹೊಂದಿರಬೇಕೆಂದರೆ ಈಗಲೇ ನಾವು ಎಚ್ಚೆತ್ತುಕೊಂಡು ನಮ್ಮ ಸುತ್ತ ಮುತ್ತಲಿನವರಲ್ಲೂ ಜಾಗೃತಿ ಮೂಡಿಸುವುದು ಅನಿವಾರ್ಯ. ನಮ್ಮ ನಡಿಗೆ ಸ್ವಚ್ಛ ಪರಿಸರದೆಡೆಗೆ.
ರಚನೆ : ಸೀಮಾ ಕಂಚೀಬೈಲು
ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು
too long
ReplyDeletethanks for responding
DeleteThank you mam it is so usefull and meaningfull thank you sooo much .put more essays on more topics .....
ReplyDeleteThank you for your compliments. Please refer this blog to your friends too. we will post more and more topics.
Deletegood essay 'bless me for exam please
ReplyDeleteOooo thanks
ReplyDeleteToo Good It Helped Me So Much For My Exams Respond To Me Telling All The Best 😊
ReplyDeleteIt is so helpful and meaningful. Can just please give essays on other topics also.
ReplyDeleteSure, we will
DeletePlease write like subject, all
ReplyDeleteSure
DeleteThanksmiss because yesterday easy on this topic I am daughter
DeleteTq mam it helped me lot for my exam
ReplyDelete