ಕ್ರಿಯಾಪದಗಳು

ನಾವು ಆಡುವಂತಹ ದಿನನಿತ್ಯದ ಮಾತುಗಳನ್ನು ಗಮನಿಸಿ. ಒಂದು ವಾಕ್ಯದಲ್ಲಿ ಕರ್ತೃಪದ, ಕರ್ಮಪದ ಹಾಗೂ ಕ್ರಿಯಾಪದಗಳಿರುತ್ತವೆ. ನಾವು ಮಾತನಾಡುವಾಗ ಪದಗಳ ಗುಂಪುಗಳನ್ನು ಒಂದು ನಿರ್ದಿಷ್ಟ ಸರಣಿಯಲ್ಲಿ ಬಳಸುತ್ತೇವೆ. ಆಗ ಮಾತ್ರ ನಾವು ಆಡುವ ಮಾತುಗಳಿಗೆ ಅರ್ಥ ಬರುತ್ತದೆ. ನಿರ್ದಿಷ್ಟ ಅರ್ಥ ಕೊಡುವಂತಹ ಒಂದು ಸರಣಿಯಲ್ಲಿ ಜೋಡಿಸಿದ ಪದಗಳ ಗುಂಪನ್ನು 'ವಾಕ್ಯ' ಎನ್ನುತ್ತೇವೆ. ವಾಕ್ಯದಲ್ಲಿ ಯಾವ ಯಾವ ರೀತಿಯ ಪದಗಳಿರುತ್ತವೆ ಎಂಬುದನ್ನು ಕೆಳಗಿನ ಉದಾಹರಣೆಗಳಿಂದ ತಿಳಿಯೋಣ:

ವೀಣಾ ಆಟ ಆಡಿದಳು

ರವಿ ಹಣ್ಣನ್ನು ತಿಂದನು

ಮೇಲಿನ ವಾಕ್ಯಗಳಲ್ಲಿ 'ಆಡಿದಳು', 'ತಿಂದನು' ಎಂಬ ಪದಗಳು 'ವೀಣಾ' ಮತ್ತು 'ರವಿ' ಮಾಡಿದ ಕೆಲಸವನ್ನು ಅಥವಾ ಕ್ರಿಯೆಯನ್ನು ಸೂಚಿಸುತ್ತವೆ. ಹೀಗೆ ಕ್ರಿಯೆಯನ್ನು ಸೂಚಿಸುವ ಪದಗಳನ್ನು 'ಕ್ರಿಯಾಪದಗಳು' ಎನ್ನುತ್ತೇವೆ. ಕ್ರಿಯೆಯನ್ನು ಮಾಡಿದವರನ್ನು ಕರ್ತೃ ಎನ್ನಲಾಗುತ್ತದೆ. ಹಾಗಾಗಿ ಕೆಲಸವನ್ನು ಅಥವಾ ಕ್ರಿಯೆಯನ್ನು ಮಾಡಿದವರನ್ನು ಸೂಚಿಸುವ ಪದಗಳನ್ನು 'ಕರ್ತೃಪದ' ಎನ್ನುತ್ತೇವೆ. ಅವರು ಮಾಡಿದ ಕೆಲಸವನ್ನು ಕುರಿತು ವಿವರ ನೀಡುವ ಪದಗಳಿರುತ್ತವೆ. 'ಏನು ಆಡಿದಳು?', 'ಏನು ತಿಂದನು?' ಹೀಗೆ 'ಏನನ್ನು' ಎಂಬ ಪ್ರಶ್ನೆಗೆ ಉತ್ತರ ಕೊಡುವ ಪದಗಳನ್ನು 'ಕರ್ಮಪದ'ಗಳೆಂದು ಕರೆಯುತ್ತೇವೆ.

 

ಕ್ರ.ಸಂ.

ವಾಕ್ಯಗಳು

ಕರ್ತೃ ಪದ

ಕರ್ಮಪದ

ಕ್ರಿಯಾಪದ

ಕಾಲಸೂಚಕ

ಗೀತಾ ಊಟ ಮಾಡುವಳು

ಗೀತಾ

ಊಟ

ಮಾಡುವಳು

ಭವಿಷ್ಯತ್ ಕಾಲ

ಶರೀಫ ಚೆಂಡು ಹಿಡಿದನು

ಶರೀಫ

ಚೆಂಡು

ಹಿಡಿದನು

ಭೂತ ಕಾಲ

ರೋಸಿ ಉಡುಪನ್ನು ಹೊಲೆಯುತ್ತಿದ್ದಾಳೆ

ರೋಸಿ

ಉಡುಪನ್ನು

ಹೊಲೆಯುತ್ತಿದ್ದಾಳೆ

ವರ್ತಮಾನ ಕಾಲ

ಕಮಲ ಪಾಠ ಓದಿದಳು

ಕಮಲ

ಪಾಠ

ಓದಿದಳು

ಭೂತ ಕಾಲ

ರಜನಿ ಸಿನಿಮಾ ನೋಡಿದಳು

ರಜನಿ

ಸಿನಿಮಾ

ನೋಡಿದಳು

ಭೂತ ಕಾಲ

ಬೆಕ್ಕು ಹಾಲನ್ನು ಕುಡಿಯಿತು

ಬೆಕ್ಕು

ಹಾಲನ್ನು

ಕುಡಿಯಿತು

ಭೂತ ಕಾಲ

ನಾಯಿ ಮೂಳೆಯನ್ನು ಕಡಿಯಿತು

ನಾಯಿ

ಮೂಳೆಯನ್ನು

ಕಡಿಯಿತು

ಭೂತ ಕಾಲ

ಗೆಳೆಯರು ಆಟವನ್ನು ಆಡುತ್ತಿದ್ದಾರೆ

ಗೆಳೆಯರು

ಆಟವನ್ನು

ಆಡುತ್ತಿದ್ದಾರೆ

ವರ್ತಮಾನ ಕಾಲ

ರೈತರು ಬೆಳೆಯನ್ನು ಬೆಳೆಯುತ್ತಾರೆ

ರೈತರು

ಬೆಳೆಯನ್ನು

ಬೆಳೆಯುತ್ತಾರೆ

ಭವಿಷ್ಯತ್ ಕಾಲ

೧೦

ಮಕ್ಕಳು ಮೈದಾನವನ್ನು ಸ್ವಚ್ಛಗೊಳಿಸಿದರು

ಮಕ್ಕಳು

ಮೈದಾನವನ್ನು

ಸ್ವಚ್ಛಗೊಳಿಸಿದರು

ಭೂತ ಕಾಲ

   ಕಾಲಸೂಚಕ ಕ್ರಿಯಾಪದ

ಕ್ರಿಯೆಯ ಅರ್ಥವನ್ನು ಕೊಡುವ ಪದಗಳೆಲ್ಲವೂ ಕ್ರಿಯಾ ಪದಗಳು. ಕ್ರಿಯಾಪದದ ಮೂಲರೂಪವೇ ಕ್ರಿಯಾಪ್ರಕೃತಿ. ಕ್ರಿಯಾಪ್ರಕೃತಿಯನ್ನು ಧಾತು ಎನ್ನುವರು. ಧಾತುವಿಗೆ ಖ್ಯಾತ ಪ್ರತ್ಯಯಗಳು ಸೇರಿ ಕ್ರಿಯಾಪದಗಳಾಗುತ್ತವೆ. ಎರಡರ ನಡುವೆ ಕ್ರಮವಾಗಿ '', 'ಉತ್ತ', '' ಎಂಬ ಕಾಲಸೂಚಕ ಪ್ರತ್ಯಯಗಳು ಸೇರಿ ಕೆಲಸ ನಡೆಯುವ ಕಾಲವನ್ನು ತಿಳಿಸುತ್ತವೆ. ಇದರಲ್ಲಿ ಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯತ್ ಕಾಲ ಎಂಬ ಮೂರು ಬಗೆಗಳಿವೆ.

 

ಭೂತಕಾಲ: ಧಾತುಗಳಿಗೆ ಭೂತಕಾಲದಲ್ಲಿ ಖ್ಯಾತ ಪ್ರತ್ಯಯಗಳು ಸೇರಿ ಭೂತಕಾಲದ ಕ್ರಿಯಾಪದಗಳು ಎನಿಸುವುವು. ಭೂತಕಾಲದಲ್ಲಿ '' ಎಂಬ ಕಾಲಸೂಚಕ ಪ್ರತ್ಯಯವು ಸಾಮಾನ್ಯವಾಗಿ ಬರುವುದು.

ಉದಾ: ಓದಿದನು, ತಿಂದಳು, ಬಂದಿತು, ಹಾಡಿದರು, ಬಂದೆನು ಇತ್ಯಾದಿ.

 

ವರ್ತಮಾನಕಾಲ: ಧಾತುಗಳಿಗೆ ವರ್ತಮಾನ ಕಾಲದಲ್ಲಿ ಖ್ಯಾತ ಪ್ರತ್ಯಯಗಳು ಸೇರಿ ವರ್ತಮಾನಕಾಲದ ಕ್ರಿಯಾಪದಗಳು ಎನಿಸುವುವು. ವರ್ತಮಾನ ಕಾಲದಲ್ಲಿ 'ಉತ್ತ' ಎಂಬ ಕಾಲಸೂಚಕ ಪ್ರತ್ಯಯವು ಸಾಮಾನ್ಯವಾಗಿ ಬರುವುದು.

ಉದಾ: ತಿನ್ನುತ್ತಾನೆ, ಓದುತ್ತಾಳೆ, ಬರುತ್ತದೆ, ಹಾಡುತ್ತಾರೆ, ಬರೆಯುತ್ತಾರೆ ಇತ್ಯಾದಿ.

 

ಭವಿಷ್ಯತ್ ಕಾಲ: ಧಾತುಗಳಿಗೆ ಭವಿಷ್ಯತ್ ಕಾಲದಲ್ಲಿ ಆಖ್ಯಾತ ಪ್ರತ್ಯಯಗಳು ಸೇರಿ ಭವಿಷ್ಯತ್ ಕಾಲದ ಕ್ರಿಯಾಪದಗಳು ಎನಿಸುವುವು. ಭವಿಷ್ಯತ್ ಕಾಲದಲ್ಲಿ '' ಎಂಬ ಕಾಲಸೂಚಕ ಪ್ರತ್ಯಯವು ಸಾಮಾನ್ಯವಾಗಿ ಬರುವುದು.

ಉದಾ: ಬರುವನು, ಬರುವರು, ಹಾಡುವರು, ಬರೆಯುವರು, ತಿನ್ನುವರು ಇತ್ಯಾದಿ.

 


No comments:

Post a Comment