ಇದೊಂದು ಬಹು ಜನಪ್ರಿಯ ಗಾದೆ. ಹಾಸಿಗೆ ಇದ್ದಷ್ಟೇ ಏಕೆಕಾಲು ಚಾಚಬೇಕೆಂದರೆ ಕಾಲು ನೆಲಕ್ಕೆ ತಾಗಿ ತಣ್ಣನೆ ಅನುಭವ ಆಗಿ ನಿದ್ದೆ ಬರದಿರಬಹುದು. ಇದೊಂದು ಉಪಮೇಯವಷ್ಟೇ. ಈ ಗಾದೆಯ ಒಳಾರ್ಥವೇನೆಂದರೆ, ನಮ್ಮ ದುಡಿಮೆಯಷ್ಟೇ ನಮ್ಮ ಖರ್ಚು ಇರಬೇಕೆಂಬುದು. ಇಲ್ಲದೇ ಹೋದಲ್ಲಿ ಚಿಂತೆಯಿಂದ ನಿದ್ದೆ ಬರದೇ ಇರಬಹುದು. ನಮ್ಮಲ್ಲಿ ಇರುವಷ್ಟರಲ್ಲೇ ತೃಪ್ತಿಕರ ಜೀವನ ನಡೆಸಬೇಕು. ಸುಂದರವಾಗಿ, ಸರಾಗವಾಗಿ ನಡೆಯುತ್ತಿರುವ ನಮ್ಮ ಜೀವನ ಹಳಿ ತಪ್ಪಿದ ಗಾಡಿಯಂತಾಗುತ್ತದೆ.
ಈ ಗಾದೆಯಲ್ಲಿ ಕೊಟ್ಟಿರುವ ಹಾಸಿಗೆ ಎಂದರೆ ನಮ್ಮ ಸಂಪಾದನೆಯೇ ಆಗಿರಬಹುದು ಅಥವಾ ನಮ್ಮ ಬಳಿ ಇರುವಂತಹ ಸವಲತ್ತುಗಳೇ ಆಗಿರಬಹುದು. ಇದ್ದುದರಲ್ಲೇ ತೃಪ್ತಿಪಟ್ಟುಕೊಳ್ಳುವುದನ್ನೇ ಕಾಲುಚಾಚು ಎಂದು ನಮ್ಮ ಹಿರಿಯರು ಸಾಂಕೇತಿಕವಾಗಿ ಗಾದೆಯ ಮೂಲಕ ತಿಳಿಸಿದ್ದಾರೆ.
- ಸೀಮಾ ಕಂಚೀಬೈಲು
ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು
Need more explanation
ReplyDeleteCan give only 3 for 5
Thank you for the comments. We will definitely consider your suggestion in future posts, and will try to edit current post too.
Delete