ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಎಲ್ಲರ ಜೀವನವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ತುಂಬಾ ಮಹತ್ವದ್ದಾಗಿರುತ್ತದೆ. ಮಹಾನ್ ಸಾಧಕರ ಹಿಂದೆ ಒಬ್ಬ ಪ್ರಭಾವಿ ಗುರು ಇರುತ್ತಾನೆ. ನಾವು ದೇವರೆಂದು ಪೂಜಿಸುವವರಿಗೂ ಗುರುಗಳು ಇದ್ದಾರೆ ಎಂದರೆ ಗುರುವಿನ ಸ್ಥಾನ ಎಷ್ಟು ದೊಡ್ಡದು, ಅಲ್ಲವೇ ? ಬನ್ನಿ ಈ ಮಹಾನಾಯಕರ ಗುರುಗಳು ಯಾರು ತಿಳಿದು ಕೊಳ್ಳೋಣ.
- ಶ್ರೀ ರಾಮನ ಗುರು = ಮಹರ್ಷಿ ವಶಿಷ್ಠ
- ಶ್ರೀ ಕೃಷ್ಣನ ಗುರು = ಸಾಂದೀಪನಿ ಮಹರ್ಷಿಗಳು
- ಕೌರವರು ಹಾಗೂ ಪಾಂಡವರು = ಕೃಪಾಚಾರ್ಯರು ಹಾಗೂ ದ್ರೋಣಾಚಾರ್ಯರು
- ಭೀಷ್ಮ = ಪರಶುರಾಮ
- ಏಕಲವ್ಯ = ದ್ರೋಣಾಚಾರ್ಯರು (ಅಪ್ರತ್ಯಕ್ಷವಾಗಿ)
- ಕರ್ಣ = ಪರಶುರಾಮ
- ಶಿವಾಜಿ ಮಹಾರಾಜ = ದಾದೋಜೀ ಕೊಂಡದೇವ್ , ಸಮರ್ಥ್ ರಾಮದಾಸರು
- ಸ್ವಾಮಿ ವಿವೇಕಾನಂದ = ರಾಮಕೃಷ್ಣ ಪರಮಹಂಸರು
- ಶಂಕರಾಚಾರ್ಯರು = ಗೋವಿಂದ ಭಗವತ್ಪಾದರು
- ಬ್ರಹ್ಮ ಚೈತನ್ಯ ಮಹಾರಾಜರು = ತುಕಮಾಯಿ
- ಪರಮಹಂಸ ಯೋಗಾನಂದ = ಸ್ವಾಮಿ ಯುಕ್ತೇಶ್ವರ ಮಹಾರಾಜ
- ಸಂತ ಶಿಶುನಾಳ ಷರೀಫ್ = ಗೋವಿಂದ ಭಟ್ಟರು
- ಚಂದ್ರಗುಪ್ತ ಮೌರ್ಯ = ಚಾಣಕ್ಯ
- ಹರಿಹರ ಬುಕ್ಕರು = ವಿದ್ಯಾರಣ್ಯರು
- ಹೊಯ್ಸಳ ದೊರೆ ವಿಷ್ಣುವರ್ಧನ = ರಾಮಾನುಜಾಚಾರ್ಯರು
- ಶ್ರೀನಿವಾಸ್ ರಾಮಾನುಜನ್ ಅವರ ಮಾರ್ಗದರ್ಶಕರು = ಜಿ ಎಚ್ ಹಾರ್ಡಿ
- ಅಲೆಕ್ಸಾಂಡರ್ ನ ಗುರು = ಅರಿಸ್ಟಾಟಲ್
- ಅರಿಸ್ಟಾಟಲ್ ನ ಗುರು = ಪ್ಲೇಟೋ
- ಹೆಲೆನ್ ಕೆಲ್ಲೆರ್ = ಆನ್ ಸುಲಿವನ್
- ಪಿ ಟಿ ಉಷಾ = ಎಂ ನಂಬಿಯಾರ್
- ಸಚಿನ್ ತೆಂಡುಲ್ಕರ್ ಅವರ ತರಬೇತುದಾರರು = ರಮಾಕಾಂತ ಅಚ್ರೆಕರ್
- ಎಂ ಎಸ್ ಧೋನಿ = ಕೇಶವ ರಾಜನ್ ಬ್ಯಾನರ್ಜಿ
- ಪಿ ವಿ ಸಿಂಧು ಅವರ ತರಬೇತುದಾರರು= ಪುಲ್ಲೇಲ ಗೋಪಿಚಂದ
- ಸೈನಾ ನೆಹವಾಲ್ ಅವರ ತರಬೇತುದಾರರು = ಪುಲ್ಲೇಲ ಗೋಪಿಚಂದ
- ಗೀತಾ ಫೋಘಾಟ್ ಮತ್ತು ಬಬಿತಾ ಫೋಘಾಟ್ = ಮಹಾವೀರ ಸಿಂಗ್ ಫೋಘಾಟ್
No comments:
Post a Comment